Saturday 31 October 2015

ಆಚರಣೆಯಲ್ಲೂ ಜಾತ್ಯಾತೀತತೆಯ ಹುಚ್ಚು....



ಹಾಗೇ ಕುಳಿತು ಹಳೆಯ ಪೇಪರ್ ಗಳನೆಲ್ಲ ಸರಿ ಮಾಡಿ ಅಟ್ಟಕ್ಕೆ ಹಾಕ್ತ ಇದ್ದಾಗ ಒಂದು ವಾರದ ಹಿಂದಿನ ಉದಯವಾಣಿಯಲ್ಲೊಂದು ಲೇಖನದ ಹೆಡ್ಡಿಂಗ್ ನನ್ನ ಗಮನ ಸೆಳೆಯಿತು..." ಹುಸಿ ಜಾತಿವಾದ, ಹಸಿ ಧಾರ್ಮಿಕತೆ " ಇದು ಟೈಟಲ್ಲು.. ನೋಡಿದರೆ ಅದು ವಿ.ಐ.ಪಿ ಕಾಲಂ... ಲೇಖನ ಬರೆದವರು " ರಾಹುಲ್ ಬೋಸ್ " ನಟ, ಸಾಮಾಜಿಕ ಕಾರ್ಯಕರ್ತ ( ಈ ನಟ ಅನ್ನೋದೇನೋ ಗೊತ್ತಾಯ್ತು ಸಾಮಾಜಿಕ ಕಾರ್ಯಕರ್ತ ಹೇಗೋ ಇನ್ನು ಗೊತ್ತಗ್ತಾ ಇಲ್ಲ.. ಅವರ ಸಿನಿಮಾಗಳಂತೆ ಸಂಖ್ಯೆಯಲ್ಲಿ ಇದು ಬಹಳ ಕಡಿಮೆಯೇನೋ...) ಅವರ ಲೇಖನದ ಮುಖ್ಯ ವಸ್ತು ಭಾರತದಲ್ಲಿನ ಕೆಲವು ಆಚರಣೆಗಳು... ತಮ್ಮ ಲೇಖನದಲ್ಲಿ ಅವರು ಇಲ್ಲಿನ ಕೆಲವು ಆಚರಣೆಯ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾರೆ.. ಾಅರತಿ ಎತ್ತಿ , ತಿಲಕ ಇಟ್ಟು ಅತಿಥಿಗಳನ್ನು ಸ್ವಾಗತಿಸುವುದು, ದೀಪ ಬೆಳಗಿ ಕಾರ್ಯಕ್ರಮದ ಶುಭಾರಂಭ ಮಾಡುವುದು ತೆಂಗಿನಕಾಯಿ ಒಡೆದು ಮುಹೂರ್ತ ನೆರವೇರಿಸುವುದು... ಕರ್ವಾ ಚೌತ್ ಆಚರಣೆಯನ್ನು ಜಾಹೀರಾತುಗಳಲ್ಲಿ ತೋರಿಸುವುದು... ಈ ತರ ಇದೆಲ್ಲಾ ಹುಸಿ ಜಾತೀಯತೆ ಅಂತೆ... ಭಾರತದಲ್ಲಿ ಜಾತ್ಯಾತೀತತೆ ಇಲ್ಲ ಇವೆಲ್ಲಾ ಹಿಂದೂ ಸಂಪ್ರದಾಯಗಳು ಇವನ್ನೆಲ್ಲಾ ಸರಕಾರಿ ಕಾರ್ಯಕ್ರಮದಲ್ಲಿ ಯಾಕೆ ಮಾಡುತ್ತಾರೆ ಅನ್ನೋದು ಅವರ ಆತಂಕ...ಹಿಂದೂ ಆಚರಣೆಗಳನ್ನೆ ಮುಖ್ಯವಾಗಿ ಬಳಸಿಕೊಳ್ಳುವ ಜಾಹೀರಾತುಗಳಿಂದ ೧೫ ಕೋಟಿ ಜನ ಪ್ರತಿದಿನ ಒಲ್ಲದ ಮನಸ್ಸಿನಿಂದ ಇವನ್ನೆಲ್ಲ ನೋಡುತ್ತಾರಂತೆ...
ಇವರ ಈ ಸಾಲುಗಳನ್ನು ಓದುತ್ತಾ ಹೋದಂತೆ ಮನಸ್ಸಿಗೇನೋ ಹಿಂಸೆ ಆಗತೊಡಗಿತು... ಜಾತ್ಯಾತೀತತೆಯ ಪಾಠ ಹೇಳಿಕೊಡುತ್ತಾ ಭಾರತೀಯತೆಯನ್ನು ಹಾಳುಮಾಡುತ್ತಿದ್ದಾರಲ್ಲ ಎಂದೆನಿಸಿತು... ಭಾರತ ಈಗ ಜಾತ್ಯಾತೀತ ರಾಷ್ಟ್ರ ಒಪ್ಪೋಣ .. ಆದರೆ ಈ ಆಚರಣೆಗಳೆಲ್ಲಾ ಅನಾದಿ ಕಾಲದಿಂದಲೂ ಭಾರತಕ್ಕೊಂದು ತನ್ನದೇ ಆದ ಮಹತ್ವವನ್ನು ಕೊಟ್ಟಿದೆ ಅದೆಷ್ಟೋ ಜನ ವಿದೇಶಿಯರು ಭಾರತಕ್ಕೆ ಬಂದೊಡನೆ ಹಣೆಯ ಮೇಲೆ ಹರಡಿಕೊಂಡಿರುವ ಕೂದಲನ್ನೆಲ್ಲಾ ಸರಿಸಿ ಕತ್ತನ್ನು ಮುಂದೆ ಬಾಗಿ ಹಣೆಯನ್ನು ತೋರಿಸುತ್ತಾರೆ... ಅದರೆಲ್ಲೇನೋ ಖುಷಿ ಸಿಗುತ್ತೆ ..ಅತಿಥಿಗೆ ಆರತಿ ಬೆಳಗೋದು ನಾವು ಅವರನ್ನ ದೇವರಂತೆ ಕಾಣುತ್ತೇವೆ ಅನ್ನೋದರ ಸೂಚಕ ತಾನೆ.. ಅತಿಥಿ ದೇವೋ ಭವ ಅನ್ನೋದು ಹಿಂದೂ ಧರ್ಮದ ವಾಕ್ಯವಾದರೂ ಭಾರತದಲ್ಲಿ ಅದು ಎಲ್ಲಾ ಧರ್ಮದವರು ಪರಿಪಾಲಿಸುತ್ತಿರುವ ಧ್ಯೇಯ ವಾಕ್ಯ... ಎಲ್ಲರೂ ಒಪ್ಪಿಕೊಂಡಿರುವ ಇಂತಾ ಆಚರಣೆಗಳಲ್ಲಿ ಅದು ಹಿಂದೂ ಧರ್ಮದ್ದು ಅದನ್ನು ಮಾಡಬಾರದು ಅನ್ನುತ್ತಾ ಯಾಕೆ ಇನ್ನಷ್ಟು ಧರ್ಮದ್ವೇಷ ಹರಡುತ್ತಿದ್ದಾರೆ... ಹಾಗೊಂದು ವೇಳೆ ಇವರ ಈ ವಿಕೃತ ಕಣ್ಣಿನಲ್ಲಿ ನೋಡಿ ಹುಡುಕೋದಾದ್ರೆ ಅದೆಷ್ಟೋ ಆಚರಣೆಗಳು ಕಾಣಿಸೋಲ್ಲ..ಪ್ರತಿಯೊಂದು ಹಿಂದೂ ಧರ್ಮದ ಆಚರಣೆಯನ್ನು ನಿಲ್ಲಿಸಲು ಹೇಳುತ್ತೀರಾ... ರಕ್ಷಾಬಂಧನ .. ಅದೆಷ್ಟೋ ಮುಸ್ಲಿಮ್ , ಕ್ರಿಶ್ಚಿಯನ್ರು ಅದನ್ನ ತಮ್ಮ ಆಚರಣೆಗಳನ್ನಗಿ ಮಾಡಿದ್ದಾರೆ ಅದೆಲ್ಲವೂ ನಿಲ್ಲಬೇಕೆ..?ಇದುವರೆಗೆ ಎಲ್ಲರೂ ಒಪ್ಪಿಕೊಂಡದ್ದನ್ನು ನಿಲ್ಲಿಸಿ ಧರ್ಮ ದ್ವೇಷ ಬೆಳೆಸೋದಾದರೂ ಯಾತಕ್ಕೆ...?ಹಿಂದೂ ಧರ್ಮದ ಆಚರಣೆಗಳಿಂದ ಇತರರಿಗೆ ನೋವಾಗುತ್ತೆ ಅನ್ನುತ್ತಾರಲ್ಲ .. ಹಿಂದೂ ದೇವಾಲಯದ ಮುಂದೆ ಹೂವು ಮಾರಿಕೊಂಡು... ಧಾರ್ಮಿಕ ಯಾತ್ರೆ ಗಳಲ್ಲಿ ಸಹಕರಿಸುತ್ತ ತಮ್ಮ ಉದರ ಪೋಷಣೆ ಮಾಡುವ ಅದೆಷ್ಟು ಕುಟುಂಬ ಗಳಿಲ್ಲ.ಅವೆಲ್ಲವೂ ಹಿಂದೂ ಕುಟುಂಬಗಳಲ್ಲ. ಅನ್ಯ ಕೋಮಿನವರೆಷ್ಟೋ ಜನ ಹಿಂದೂ ಆಚರಣೆಗಳಿಂದ ತಮ್ಮ ಜೀವನ ಸಾಗಿಸುತ್ತಾರೆ... ಇವೆಲ್ಲ ಅವರ ಮನಸ್ಸಿಗೆ ನೋವು ತರೋದಿಲ್ವ... ಇಂತಹಾ ದ್ವಂದ್ವ ಯಾಕೆ... ಉದರ ಪೋಷಣೆಗಾದಲ್ಲಿ ಸಹಿಸಬಹುದು ಹಾಗೆ ನೋಡೋವಾಗ ಸಹಿಸೋಕಾಗಲ್ಲ.. ಇದೆಲ್ಲಿಯ ಸಮಾನತೆ...
ಹಿಂದೂ ಧರ್ಮವೆನ್ನುವುದು ಭಾರತದ ಮೂಲಧರ್ಮ ಮತ್ತು ಉಳಿದ ಧರ್ಮಗಳೆಲ್ಲವೂ ಇಲ್ಲಿಗೆ ಮತ್ತೆ ಆಗಮಿಸಿದಂತವು ಹಾಗಿದ್ದು ಇಲ್ಲಿ ಉಳಿದವರ ಧರ್ಮಕ್ಕೆ ಅವರ ಆಚರಣೆಗೆ ಯಾವತ್ತೂ ಕಟ್ಟುಪಾಡು ಹಾಕಿಲ್ಲ. ಅವೆಲ್ಲವನ್ನೂ ಹಿಂದೂಗಳು ಗೌರವಿಸುತ್ತಾರೆ...
ಹಾಗಾಗಿ ಇಲ್ಲಿನ ಮೂಲಧರ್ಮದ ಆಚರಣೆಗಳು ಹೆಚ್ಚಗಿ ಪ್ರಚಾರವಾಗಿರುವುದು ತಪ್ಪು ಹೇಗಾದೀತು... ಇನ್ನು ಈ ಆಚರಣೆಗಳ ಹಿಂದಿರುವ ವೈಜ್ನಾನಿಕ ಮಹತ್ವದ ಬಗ್ಗೆ ಬರೆಯೋದಾದ್ರೆ ತುಂಬಾನೇ ಇದೆ... ನೀವೊಬ್ಬ ಜಾತ್ಯಾತೀತ ವ್ಯಕ್ತಿ ಅಂತ ತೋರಿಸಿಕೊಳ್ಳೋ ಹುಚ್ಚು ಆಸೆಗೆ ಭಾರತೀಯ ಜೀವನ ಶೈಲಿಯನ್ನು ಬಲಿಗೊಡಬೇಡಿ ೧೫ ಖೊತೀ ಝಾಣಾ ಒಲ್ಲದ ಮನಸ್ಸಿನಿಂದ ನೋಡುತ್ತಾರೆ ಎಂದಿರಲ್ಲಾ ಉಳಿದ ೧೦೫ ಕೋಟಿ ಜನರ ಸಂತಸಕ್ಕೆ ಬೆಲೆಯೇ ಇಲ್ಲವಾ...? ನೀವು ಹಾಕುವ ಕೋಟು, ಸೂಟು ಇವೆಲ್ಲ ಕ್ರಿಶ್ಚಿಯನ್ ಧರ್ಮದ್ದು... ಶೆರ್ವಾನಿ ಕುರ್ತಾ ಇವೆಲ್ಲಾ ಮುಸ್ಲಿಂ ಧರ್ಮದ್ದು ಅವೆಲ್ಲ ಹಾಕಿಕೊಂಡರೆ ೧೦೫ ಕೋಟಿ ಜನರಿಗೆ ನೋಡೋದು ಕಷ್ಟವಾಗುತ್ತೆ ಅಂದ್ರೆ ಅದನ್ನ ಬದಲಾಯಿಸೋಕೆ ಆಗುತ್ತದಾ... ಅಥವಾ ಇದರ ಕುರಿತು ಯಾಕೆ ಯೋಚಿಸಿ ಬರೆದಿಲ್ಲ... ಒಂದೊಂದು ಧರ್ಮದ ಆಚರಣೆಯನ್ನು ಆಚರಿಸದೇ ಇರುವುದು ಜಾತ್ಯಾತೀತತೆ ಅಲ್ಲ, ಎಲ್ಲ ಧರ್ಮಕ್ಕೂ ಬೆಲೆ ಕೊಡೋದು ಜಾತ್ಯಾತೀತತೆ...
ಇನ್ನು ಟೀವಿಯಲ್ಲಿ ಹಿಂದೂ ಆಚರಣೆಗಳನ್ನಷ್ಟೇ ತೋರಿಸುತ್ತಾರೆ ಅಂತ ಕಳವಳ ವ್ಯಕ್ತ ಪಡಿಸಿದರಲ್ಲ ... ಈ ಟೀ ವಿಯವರು ಬಿಸಿನೆಸ್ ಮ್ಯಾನ್ ಗಳು.. ನಮ್ಮ ರಾಜಕೀಯ ವ್ಯಕ್ತಿಗಳಂತಲ್ಲ ಬಹುಸಂಖ್ಯಾತರನ್ನು ಒಲಿಸಿಕೊಂಡಾಗಲೇ ನಮಗೆ ಲಾಭ ಜಾಸ್ತಿ ಅಂತ ಅವರಿಗೆ ಗೊತ್ತಿದೆ.. ಜಾತ್ಯಾತೀತತೆ ಸೋಗು ಹಾಕಿ ಅಲ್ಪ ಸಂಖ್ಯಾತರ ಓಲೈಕೆ ಮಡೋದರಿಂದ ಅವರಿಗೇ ನಷ್ಟ... ಇನ್ನಾದರೂ ಭಾರತದಲ್ಲಿನ ಆಚರಣೆ ಹಿಂದೂ ಧರ್ಮದ್ದು ಅನ್ನೋದನ್ನ ಬಿಟ್ಟು ಅದು ಭಾರತೀಯರದ್ದು ಅನ್ನಿ ಆಗಲೇ ಭಾರತ ಜಗತ್ತಿನಲ್ಲೇ ಎತ್ತರದ ಸ್ಥಾನಕ್ಕೇರಲು ಸಾಧ್ಯವಾಗೋದು.

No comments:

Post a Comment