Saturday 31 October 2015

ಇದು ಕನ್ನಡ ಪ್ರೇಮವೋ ಅಥವಾ ಅನ್ಯ ಮತ ದ್ವೇಷವೋ...



ವಾರ್ತಾಭಾರತಿಯ ಸಂಪಾದಕರಾದ ಬಶೀರ್ ಬಿ. ಎಮ್ ಅವರು ಹೇಳಿಕೊಂಡದ್ದು... " ದಸರಾ ನಾಡಹಬ್ಬವಾಗುವುದನ್ನು ಮತ್ತು ಸರ್ಕಾರ ಅದಕ್ಕಾಗಿ ಕೋಟಿ ಕೋಟಿ ಹಣ ಸುರಿಯೋದನ್ನು ನಾನು ವಿರೋದಿಸುತ್ತೇನೆ. ಯಾಕೆಂದರೆ ಅಲ್ಲಿ ನಡೆಯುವುದು ನಾಡು ನುಡಿಯ ಹಬ್ಬ ಅಲ್ಲ.. ಬದಲಿಗೆ ವೈದಿಕರ ವೈಭವೀಕರಣ ಮತ್ತು ರಾಜ ಪ್ರಭುತ್ವದ ವೈಭವೀಕರಣ...ನಾಡ ಹಬ್ಬ ಅಂದರೆ ಕನ್ನಡದ ಕುರಿತಾಗಿ ಇರಬೇಕು.......... ನಾನು ಇದುವರೆಗೂ ದಸರಾಕ್ಕೆ ಹೋಗಿಲ್ಲ ಇನ್ನೂ ಹೋಗಲ್ಲ ಯಾಕೆಂದರೆ ಅದು ಯಾವ ರೀತಿಯಲ್ಲೂ ನನ್ನ ಬದುಕಿಗೆ ಮಾದರಿಯಲ್ಲ. "
ಇವರ ಈ ಮಾತನ್ನು ನೋಡುವಾಗ ಇವರ ಈ ನಿಲುವಿಗೆ ಎರಡು ಕಾರಣಗಳಿರಬಹುದು ಅಂತನ್ನಿಸುತ್ತದೆ.
೧. ಕನ್ನಡದ ಮೇಲಿನ ಅಪ್ಪಟ ಪ್ರೇಮ.
೨. ವೈದಿಕ ಧರ್ಮದ ಮೇಲಿನ ದ್ವೇಷ.
ಈಗ ಮೊದಲ ಕಾರಣವನ್ನು ನೋಡೋಣ... ಕನ್ನಡದ ಮೇಲಿನ ಅಪ್ಪಟ ಪ್ರೇಮ. ದಸರಾದಲ್ಲಿ ಕನ್ನಡದ ಬಗೆಗೇನೂ ವಿಶೇಷ ಗಮನ ಇರೋದಿಲ್ಲ ಅನ್ನೋರು ಸ್ವತಃ ಇವರ ಸಮುದಾಯದಲ್ಲಿ ಕನ್ನಡಕ್ಕೆ ಎಷ್ಟು ಮಹತ್ವ ಕೊಡುತ್ತಾರೆ....? ಇವರ ಯಾವ ಧಾರ್ಮಿಕ ಆಚರಣೆಗಳಲ್ಲಿ, ಅಥವಾ ಸಂಸ್ಥೆಗಳ ಆಚರಣೆಗಳಲ್ಲಿ ಕನ್ನಡ ಬಳಸಲಾಗುತ್ತದೆ....? ಇವರು ಬಳಸೋದು ಉರ್ದು ಭಾಷೆ ಅಥವಾ ಮಲೆಯಾಳಿ ಅಥವಾ ಅರೆಬಿಕ್ ಇದೇ ಭಾಷೆಗಳು ತಾನೇ... ಅಲ್ಲಿ ಕಾಣಿಸದ ಕನ್ನಡದ ಕಾಳಜಿ... ದಸರಾ ಬಗೆಗಾಗುವಾಗ ಯಾಕೆ ಇವರ ಮನಸಿನೊಳಗಿನಿಂದ ಚಿಮ್ಮಿ ಬರುತ್ತದೆ... ಅಥವಾ ಇವರ ಬಳಿಯೇ ಕೇಳೋಣ ನೀವು ನಿಮ್ಮ ಸಮುದಾಯದಲ್ಲಿ ಕನ್ನಡತನ ತರಲು ಏನೆಲ್ಲಾ ಪ್ರಯತ್ನ ಮಾಡಿದ್ದೀರಿ...? ಈಗಲೂ ಕೂಡ ಹೆಚ್ಚಿನವರು ಮಾತನಾಡುವುದು ನಮ್ದೂಕೆ... ನಿಮ್ದೂಕೆ... ಬಂದು ಬಿಟ್ಟಿ....ಮಾಡಿಬಿಟ್ಟಿ.. ಅನ್ನೋ ವ್ಯಾಕರಣ ರಹಿತ ಉರ್ದು ಮಿಶ್ರಿತ ಕನ್ನಡವೇ ತಾನೇ...( ಕೆಲವೊಂದು ಪ್ರದೇಶಗಳ ಮಟ್ಟಿನಲ್ಲಿ ಭಾಷೆ ಬದಲಾವಣೆ ಆಗೋದು ಸಹಜ ಆದರೆ ಅಲ್ಲಿ ನೆಲೆಸಿರುವ ಎಲ್ಲಾ ಸಮುದಾಯಗಳವರ ಪಾಲಿಗೂ ಅದೇ ಆಗಿರುತ್ತದೆ ಆದರೆ ಇಲ್ಲಿ ಹಾಗಿಲ್ಲ ಅನ್ನೋದು ಗಮನಿಸತಕ್ಕ ವಿಷಯ ಅಂತ ನನಗನಿಸುತ್ತದೆ...) ಇವನ್ನೆಲ್ಲಾ ಸರಿಪಡಿಸೋದು ಯಾವಾಗ...? ಬಹುಶ ಉತ್ತರ ಸಿಗೋದು ಕಷ್ಟವೇ.... ಹಾಗಾಗಿ ಇವರು ಈ ರೀತಿ ಮಾತನಾಡೋಕೆ ಕನ್ನಡದ ಬಗೆಗಿನ ಅಪ್ಪಟ ಪ್ರೇಮ ಕಾರಣ ಅಲ್ಲ ಅನ್ನೋದು ಸ್ಪಷ್ಟವಾಗುತ್ತೆ.
ಇನ್ನು ಎರಡನೇ ಕಾರಣ ನೋಡೋಣ...ವೈದಿಕ ಧರ್ಮದ ಮೇಲಿನ ದ್ವೇಷ.... ಇದಾದರೂ ಒಂದು ರೀತಿಯಲ್ಲಿ ಒಪ್ಪತಕ್ಕುದಾದ ಮಾತು. ಯಾಕೆಂದರೆ ತಲೆತಲಾಂತರಗಳಿಂದ ಇದನ್ನು ಕಾಣುತ್ತಲಿದ್ದೇವೆ... ಯಾವ ರಾಜ ಪ್ರಭುತ್ವದ ಮಾತನ್ನು ಇವರಾಡಿದರೋ ಅದೇ ರಾಜರ ಕಾಲದಿಂದ ಅರ್ಥಾತ್ ಮುಸ್ಲಿಂ ದೊರೆಗಳ ಕಾಲದಿಂದ ಈ ವೈದಿಕ ಧರ್ಮದ ಬಗೆಗಿನ ದ್ವೇಷ ಇದ್ದಿದ್ದೇ... ಅದಕ್ಕೆ ಭಾರತದ ನಿಜ ಇತಿಹಾಸವನ್ನೊಮ್ಮೆ ಓದಿದರಾಯಿತು.
ಇವರಿಗೆ ನಾಡಹಬ್ಬವನ್ನು ವಿರೋದಿಸೋಕೆ ಇದೇ ಮೂಲ ಕಾರಣವಾಗಿದ್ದಲ್ಲಿ ಯಾಕೆ ಅದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ... ಕಾರಣ.... ಒಂದು ಪತ್ರಿಕೆಯ ಸಂಪಾದಕನಾಗಿ ಜಾತ್ಯಾತೀತನಾಗಿರಬೇಕಾಗಿರೋದು ಅಲಿಖಿತ ನಿಯಮ ಇದ್ದಿರಬಹುದೇನೋ ಅಂತನಿಸುತ್ತದೆ...ಇವರೊಳಗಿನ ಈ ಒಳಗೊಂದು ಹೊರಗೊಂದು ಸ್ವಭಾವವೇ ನನ್ನೊಳಗೆ ಇವರ ಬಗ್ಗೆ ಮತ್ತು ಇವರ ಹಲವು ವಿಚಾರಧಾರೆಯ ಬಗ್ಗೆ ನನ್ನಲ್ಲಿ ಅಸಹನೆ ತರಿಸುತ್ತದೆ.
ಹೇಗೂ ಈ ರೀತಿ ಹೇಳಿದ್ದಾರೆ ಇವರಿಗೆ ಒಂದೆರಡು ವಿಷಯ ಹೇಳಬೇಕಾಗಿದೆ. ಸ್ವಾಮೀ... ಯಾವ ಅರಸೊತ್ತಿಗೆಯನ್ನು ಸರ್ಕಾರ ತನ್ನ ವಶಪಡಿಸಿಕೊಂಡಿದೆಯೋ ಆ ಸರ್ಕಾರಕ್ಕೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಕರ್ತವ್ಯವೇ ತಾನೇ. ಇನ್ನು ಖರ್ಚಿನ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಪ್ರವಾಸೋದ್ಯಮ ಅನ್ನುವಂತಾದ್ದು ಒಂದಿದೆ. ಇದು ಸರ್ಕಾರಕ್ಕೆ ಒಳ್ಳೆಯ ಆದಾಯವನ್ನು ತಂದುಕೊಡಬಲ್ಲುದಾದದ್ದು. ಕೋಟಿ ಕೋಟಿ ಖರ್ಚು ಮಾಡಿದರೂ ಕೋಟಿ ಗಳಿಸು ಕೊಡುತ್ತದೆ ಕೂಡ... ಒಬ್ಬ ಪತ್ರಿಕೆಯ ಸಂಪಾದಕನಾಗಿ ನಿಮಗಿದು ಅರ್ಥವಾಗದಿದ್ದರೆ ಅದೊಂದು ದೊಡ್ಡ ವಿಪರ್ಯಾಸವೇ ಸರಿ. ಯಾವುದಾದರೂ ಅನ್ಯ ದೇಶದಲ್ಲಿ ಹೋಗಿ ಕರ್ನಾಟಕ ಅಂದರೆ ಏನು ನೆನಪಾಗುತ್ತೆ ಅಂತ ಕೇಳಿ ನೋಡಿ...ಅಲ್ಲಿನ ವಿದೇಶಿಗರಿಗೆ ಮೊದಲು ನೆನಪಾಗೋದು " ಮೈಸೂರು ಅರಮನೆ " ಮತ್ತು ಅಲ್ಲಿನ ವೈಭವೋಪೇತ ದಸರಾ ಮಹೋತ್ಸವ. ಯಾವ ಹಬ್ಬವು ಇಡಿಯ ವಿದೇಶದಲ್ಲಿ ಮತ್ತು ವಿದೇಶಿಗರ ಮನದಲ್ಲಿ ರಾಜ್ಯಕ್ಕೆ ಒಂದು ಉತ್ತಮ ಸ್ಥಾನವನ್ನು ಪ್ರತಿಷ್ಠೆಯನ್ನು ಕಲ್ಪಿಸಿಕೊಟ್ಟಿದೆಯೋ ಆ ಹಬ್ಬ ನಾಡಹಬ್ಬವಾಗುವುದರಲ್ಲೇನು ತಪ್ಪು...?
ಕೊನೆಯದಾಗಿ ನೀವು ದಸರಾ ಹೋಗೋದರ ಕುರಿತು... ಒಬ್ಬ ವ್ಯಕ್ತಿಗೆ ಒಂದು ವಸ್ತುವನ್ನು ನೋಡಬೇಕು ಅಂತನಿಸುವುದು ಯಾವಾಗ ಅಂದರೆ ಆತನಿಗೆ ಆ ವಸ್ತುವಿನ ಮೇಲೆ ವಿಶೇಷ ಆಸಕ್ತಿ ಇದ್ದಾಗ... ದಸರಾದಲ್ಲಿನ ಸಾಂಸ್ಕೃತಿಕ ಉತ್ಸವದ ವೈಭವವನ್ನು ನೋಡಲು ಪರಿಶುದ್ಧ ಮನಸ್ಸು ಅಗತ್ಯ. ಇದು ನನ್ನ ಧರ್ಮದ್ದಲ್ಲ ಅನ್ನುವ ಮಾನಸೀಕತೆಯಿಂದ ನೋಡಿದಾಗ ಎಲ್ಲವೂ ಡಂಭಾಚಾರಗಳಾಗೇ ಕಾಣಿಸುತ್ತದೆ. ಮೊದಲು ಈ ಪರಧರ್ಮದ ಬಗಿಗಿನ ಕೀಳು ದೃಷ್ಟಿಯನ್ನು ಕಿತ್ತೊಗೆಯಿರಿ ಆಗ ನಾಡಹಬ್ಬದ ಮಹತ್ವ ಗೊತ್ತಾದೀತು...

No comments:

Post a Comment