Saturday 31 October 2015

ಕುಡುಕರ ಕಿವಿ ಹಿಂಡಿದ ಅಮೀರ್ ಖಾನ್...



ತಿಂಡಿ ತಿಂದು ಹಾಗೆ ಕುಳಿತಿದ್ದವನಿಗೆ ಪಕ್ಕನೆ ನೆನಪಾಯ್ತು ಇವತ್ತು ಸಂಡೇ ಅಲ್ವಾ... ನೋಡೋಣ... ಇವತ್ತಿನ "ಸತ್ಯ ಮೇವ ಜಯತೇ" ಯಲ್ಲಿ ಏನಿದೆ ಟಾಪಿಕ್ ಅಂತ...ಹಿಂದಿನ ಕೆಲವು ವಿಷಯಗಳಲ್ಲಿ ಆಮೀರ್ ಖಾನ್ ರ ನಡವಳಿಕೆ ಸ್ವಲ್ಪ ಮುನಿಸು ತಂದಿತ್ತು...ಆದರೂ ನೋಡಲು ಕಾರಣ ನನ್ನ ಬೆಂಬಲ ಯಾವತ್ತೂ ವಿಷಯಾಧಾರಿತ... ವ್ಯಕ್ತಿ ಆಧಾರಿತ ಅಲ್ಲ. ಹಾಗೆ ನೋಡಲು ಕುಳಿತಾಗ ಗೊತ್ತಾಯ್ತು ಇವತ್ತಿನ ವಿಷಯ ಮದ್ಯಪಾನದ ಬಗ್ಗೆ ಅಂತ...ನನಗೂ ನನ್ನ ಕೆಲವು ಗೆಳೆಯರಿಗೂ ಯಾವಾಗ್ಲೂ ವಾದಗಳಾಗುತ್ತಿತ್ತು ಅದಕ್ಕೆ ಉಪಯೋಗ ಆಗಬಹುದು ಅಂತ ತಿಳ್ಕೊಂಡು ನೋಡೋಕೆ ಕೂತೆ...
ಆ ಶೋ ನೋಡೋಕೆ ಬಂದ ಹೆಚ್ಚಿನವರು ಯುವಕ ಯುವತಿಯರು... ಅವರಲ್ಲಿ ಮೊದಲು ಅಮೀರ್ ಕೇಳಿದಾಗ ಹೆಚ್ಚು ಜನ ಕುಡಿಯುವವರು ಅಂತ ಗೊತ್ತಾಯ್ತು... ಅದರಲ್ಲು ಅವರು ತಮ್ಮ ಕುಡಿತಕ್ಕೆ ಕೊಟ್ಟ ಕಾರಣ ಕೇಳಿ ತುಂಬಾನೆ ನಗು ಬಂತು... ಒಬ್ಬ ಹುಡುಗನಿಗೆ.. ಚಿಂತೆ ದೂರ ಮಾಡುತ್ತಂತೆ ಒಬ್ಬ ತನ್ನ ಗೆಳೆಯರು ಮತ್ತು ಬಾಸ್ ಗೆ ಕಂಪನಿ ಕೋಡೋಕೆ ಕುಡಿಯೋದಂತೆ... ಮತ್ತೊಬ್ಬಳಿಗೆ... ನೃತ್ಯ ಮಾಡಲು ತಾಕತ್ತು ಕೊಡುತ್ತೆ ಅಂತ ಕುಡಿಯೋದಂತೆ... ಹ ಹ ಎಷ್ಟೊಂದು ಕಾರಣಗಳು ಅಲ್ವಾ... ಮತ್ತೆ ಒಬ್ಬ ವ್ಯಕ್ತಿ ವೇದಿಕೆಗೆ ಬಂದು ತನ್ನ ಅನುಭವವನ್ನು ಹಂಚಿಕೊಂಡ... ನಿಜಕ್ಕೂ ಈ "ಮದ್ಯ"ಕ್ಕೆ ಎಂಥಾವರನ್ನೂ ದಾಸರನ್ನಾಗಿಸುವ ತಾಕತ್ತಿದೆಯಲ್ವಾ ಅಂತ ಅನ್ನಿಸಿತು. ಡೆಲ್ಲಿಯಲ್ಲಿ ರಾಜಕೀಯ ವ್ಯಕ್ತಿಗಳನ್ನೇ ಹೆದರಿಸಬಲ್ಲಂತಾ ತಾಕತ್ತಿನ ಪತ್ರಕರ್ತನಾದ ವ್ಯಕ್ತಿ ಕುಡಿತಕ್ಕೆ ದಾಸನಾಗಿ ಎಷ್ಟೋ ತಿಂಗಳು ಬೀದಿಗಳಲ್ಲಿ ವಾಸಿಸುವಂತೆ ಮಾಡಿತ್ತಂತೆ. ಆತನನ್ನು ಆ ಮದ್ಯ ಯಾವ ರೀತಿ ದಾಸನನ್ನಾಗಿ ಮಾಡಿತ್ತು ಅಂದ್ರೆ.. ತನ್ನ ಹೆತ್ತ ತಂದೆ ತಾಯಿಯನ್ನೇ ಅವಮಾನಿಸುವಂತೆ ಮಾಡಿತ್ತಂತೆ...ಎಂಥಾ ತಾಕತ್ತು ಅಲ್ವಾ ಈ ಮದ್ಯಕ್ಕೆ...
ಮತ್ತೆ ಬಂದ ಒಬ್ಬ ವ್ಯಕ್ತಿ ಹೇಗೆ ತನ್ನ ಮಗನನ್ನು ಕುಡುಕನಿಂದಾಗಿ ಕಳಕೊಂಡ ಅನ್ನೋದನ್ನಿ ವಿವರಿಸಿದಾಗ ನಿಜಕ್ಕೂ ಮನಸ್ಸಿಗೆ ಬಹಳಷ್ಟು ನೋವಾಗಿತ್ತು, ಜಾವೇದ್ ಅಖ್ತರ್.. ದೊಡ್ದ ಸಾಹಿತಿ ತಾನು ಕುಡಿತದಿಂದ ಮುಕ್ತನಾದ ಬಗೆಯನ್ನು ವಿವರಿಸಿದರು...ಮತ್ತೆ ಬಂದ ವೈದರೊಬ್ಬರು ಕುಡಿಯುವುದು ಒಂದು ಚಟ ಅಲ್ಲ ಅದೊಂದು ರೋಗ ಅಂತ ಚೆನ್ನಾಗಿ ವಿವರಿಸಿದರು...ಮತ್ತೊಬ್ಬರ ಸರ್ವೇ ಪ್ರಕಾರ ಭಾರತದಲ್ಲಿ ಕುಡಿಯುವ ಸಾಮಾನ್ಯ ಮಟ್ಟ ಇತರ ದೇಶಗಳಲ್ಲಿನ ಓವರ್ ಲಿಮಿಟ್ಟನ್ನು ದಾಟಿದೆ ಅನ್ನೋದನ್ನು ಕೇಳಿದಾಗ ನನಗಂತೂ ಶಾಕ್ ಹೊಡೆದಂತಾಯ್ತು. ಇವರೆಲ್ಲಾ ಹೇಳುತ್ತಿದ್ದನ್ನು ಕೇಳುತ್ತಿದ್ದ ಯುವಜನತೆ ತಲೆಅಲ್ಲಾಡಿಸುತ್ತಿದ್ದಂತೂ ನಿಜ ಆದರೆ ಮದ್ಯವನ್ನು ಬಿಡುವ ಪಣ ತೊಟ್ಟಾರಾ...?
ನನ್ನ ಕೆಲವು ಗೆಳೆಯರು ಹೇಳೋದುಂಟು ನಾನೇನೂ ಯಾವತ್ತೂ ಕುಡಿಯೋಲ್ಲ ಅಪರೋಪಕ್ಕೊಮ್ಮೆ ಅದೂ ಕೂಡ ಇಂತಿಷ್ಟೇ ಕುಡಿಯೋದು ಅಂತ... ಅದು ಇತ್ತೀಚಿಗೆ ಕಿಕ್ ಕೂಡ ಕೊಡೋದಿಲ್ಲ ಅಂತ... ಬಹುಶ ಮೊದಲು ಮುವತ್ತಕ್ಕೆ ನಶೆ ಏರುತ್ತಿದ್ದುದು ಮತ್ತೆ ಅದೇ ನಶೆ ಬರಲು ಅರುವತ್ತು ಬೇಕಾದೀತು... ಹೀಗೆ ನಿಮ್ಮ ದೇಹ ಆ ಮದ್ಯದ ಪ್ರಮಾಣಕ್ಕೆ ಹೊಂದಿಕೊಳ್ಳುತ್ತೇ ನಿಮಗೋ ನಶೆಯೇ ಲಿಮಿಟ್ಟು ಅದು ಬರುವವರೆಗೂ ಕುಡಿಯೋದು ನಿಲ್ಲೋಲ್ಲ...ಹಾಗಿದ್ದೂ ಕುಡಿಯೋದು ಬೇಕಾ... ಭಗವಂತ ಕೊಟ್ತ ಈ ಶರೀರವನ್ನು ಕಾಪಾಡೋದು ನಮ್ಮ ಕರ್ತವ್ಯ ಅಲ್ವಾ...ಸುಮ್ಮನೆ ಕುಡಿದು ಹಾಳು ಮಾಡೋದು ಸರೀನಾ...(ಅದರಲ್ಲೂ ಈಗಿನ ಹುಡುಗಿಯರೂ ಕೂಡ ಇದಕ್ಕೆ ಹೊರತಲ್ಲ ಅನ್ನೋದು ಎಷ್ಟೊಂದು ಬೇಸರದ ವಿಷಯ ಅಲ್ವ)..
ನನ್ನ ಮಾತಿಗೆ ಬೆಲೆ ಕೊಡೋದು ಬೇಡ ಬಿಡಿ ಅಷ್ಟೊಂದು ಹಿರಿಯರು ವೈದರು ಎಲ್ಲ ಒಳ್ಳೇದಲ್ಲ ಅಂತಂದ್ರೆ ನಿಜಕ್ಕೂ ಅದು ಕೆಟ್ಟದೇ ಆಗಿರಬೇಕಲ್ವಾ... ನೀವೇ ಯೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ

No comments:

Post a Comment