Saturday 31 October 2015

ತುಳಸಿಯ ಬಗೆಗೊಂದು ಕಥೆ..



ಮೊದಲೆಲ್ಲಾ ಕತ್ತಲಾಗಿ ಮಲಗೋ ಹೊತ್ತು ಬಂತೆಂದರೆ ಮಕ್ಕಳಿಗೆ ಕಥೆ ಹೇಳಿಯೇ ಮಲಗಿಸೋದು...ಈಗ ಕಾಲ ಬದಲಾಗಿದೆ ಕಥೆಯ ಬಗೆಗೆ ಯಾರಿಗೂ ಕುತೂಹಲವಿಲ್ಲ. ಆದರೂ ತುಲಸೀ ಪೂಜೆಯ ಈ ಶುಭ ದಿನದಂದು ತುಲಸಿಯ ಬಗೆಗಿನ ಕಥೆಯೊಂದನ್ನು ಹೇಳೋ ಆಸೆ... ಕುತೂಹಲ ಇದ್ದವರು ಹಾಗೇ ಓದಿ....
ಹಿಂದೆ ದ್ವಾಪರ ಯುಗದಲ್ಲಿ ಸೂರ್ಯನಂಥಾ ತೇಜಸ್ಸು ಉಳ್ಳ ಮಾರ್ತಾಂಡಾ ಅನ್ನೋ ಬ್ರಾಹ್ಮಣನೊಬ್ಬನಿದ್ದ. ತುಂಬಾ ನಿಯಮನಿಷ್ಠನಾಗಿದ್ದ ಆತ ಪ್ರತಿದಿನವೂ ಸ್ನಾನವಾದ ಬಳಿಕ ತುಳಸಿಗೆ ನೀರೆರೆದು ಕೈ ಮುಗಿದು ಕಾರ್ಯ ಆರಂಭಿಸುವ ಪರಿಪಾಠವನ್ನಿಟ್ಟುಕೊಂಡಿದ್ದ. ಅದೇ ರೀತಿ ಒಂದು ದಿನ ತುಳಸಿಗೆ ನೀರೆರೆದು ತನ್ನ ಕೆಲಸ ನಿಮಿತ್ತ ಹೊರಹೋಗುತ್ತಾನೆ. ಅಲ್ಲೇ ಹತ್ತಿರದಲ್ಲೊಬ್ಬ ಅಸಿಮರ್ದನ ಅನ್ನೋ ಬೇಡ ವಾಸಿಸುತಿರುತ್ತಾನೆ. ಆ ಬೇಡ ಮಾಡಿಟ್ಟ ಅನ್ನದ ಪಾತ್ರೆಯನ್ನು ಕೆಳಹಾಕಿದ ನಾಯಿಯೊಂದನ್ನು ಆತ ಓಡಿಸಿಬಿಟ್ಟಿರುತ್ತಾನೆ. ಅನ್ನ ಸಿಗದೆ ಬಾಯಾರಿ ಬಂದ ಆ ನಾಯಿ ಮಾರ್ತಾಂಡನ ತುಳಸಿಯ ಕೆಳಗಿದ್ದ ನೀರನ್ನು ಕುಡಿದು ಬಿಡುತ್ತದೆ. ಅದನ್ನು ಅಸಿಮರ್ದನ ನೋಡಿ ಬಿಡುತ್ತಾನೆ. ನನ್ನ ಅನ್ನದ ಪಾತ್ರೆ ಕೆಳಹಾಕಿ ಇಲ್ಲಿನ ತುಳಸಿಯನ್ನು ಅಪವಿತ್ರಗೊಳಿಸುತ್ತೀಯಾ ಎಂದು ಆ ನಾಯಿಯನ್ನು ಹೊಡೆದು ಕೊಲ್ಲುತ್ತಾನೆ.
ಆ ನಾಯಿ ಸತ್ತ ಕೂಡಲೇ ಯಮಭಟರು ಬಂದು ಅದರ ಆತ್ಮಕ್ಕೆ ಯಮಪಾಶ ಹಾಕುವಷ್ಟರಲ್ಲಿ ಅಲ್ಲಿಗೆ ವಿಷ್ಣುದೂತರು ಬರುತ್ತಾರಂತೆ. ಯಮಭಟರು ಹಾಕಿದ ಯಮಪಾಶವನ್ನು ಕಿತ್ತುಹಾಕಿ ಆ ನಾಯಿಯ ಆತ್ಮವನ್ನು ದಿವ್ಯವಾದ ವಿಮಾನದಲ್ಲಿ ಕುಳ್ಳಿರಿಸುತ್ತಾರಂತೆ. ಇದನ್ನು ನೋಡಿ ಆಶ್ಚರ್ಯಚಕಿತರಾದ ಯಮಭಟರು ಈ ನಾಯಿಯ ಆತ್ಮವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಾ ಅಂತ ಕೇಳಿದರಂತೆ. ಅದಕ್ಕೆ ವಿಷ್ಣುದೂತರು ಹೇಳುತ್ತಾರಂತೆ.... ಈ ಶ್ವಾನ ರೂಪಿ ಆತ್ಮ ಮೊದಲೊಬ್ಬ ರಾಜನಾಗಿದ್ದ. ಅನೇಕ ಪುಣ್ಯ ಕಾರ್ಯಗಳನ್ನು ಮಾಡಿದ್ದ. ಆದರೆ ಒಬ್ಬ ಸುಂದರಿಯನ್ನು ಅಪಹರಿಸಿದರ ಫಲವಾಗಿ ನಾಯಿ ರೂಪದಲ್ಲಿ ಜನಿಸಿದ. ಆದರೆ ಈಗ ತಾನೆ ತುಳಸಿಯ ಬುಡದ ನೀರನ್ನು ಕುಡಿದುದರ ಫಲವಾಗಿ ಇವನ ಪಾಪಗಳೆಲ್ಲವೂ ಪರಿಹಾರವಾಗಿ ವೈಕುಂಠ ಲೋಕಕ್ಕೆ ತೆರಳಲು ಅರ್ಹನಾಗಿದ್ದಾನೆ. ಹಾಗಾಗಿ ಇವನನ್ನು ಕರೆದೊಯ್ಯುತ್ತಿದ್ದೇವೆ.
ಈ ಕಥೆಯ ಸಾರಾಂಶ ಇಷ್ಟೇ... ತುಳಸಿಯು ವಿಷ್ಣು ಸಾಯುಜ್ಯ ಪಡೆಯಲು ಇರುವ ಸರಳ ಮಾರ್ಗ

No comments:

Post a Comment