Saturday 31 October 2015

ವಿಶ್ವಕರ್ಮ ಬ್ರಾಹ್ಮಣರಲ್ಲೊಂದು ಆತ್ಮೀಯ ವಿನಂತಿ...



ಒಂದೆರಡು ಮಿತ್ರರಿಂದ ಕೇಳಿಪಟ್ಟೆ... ನಮ್ಮ ಸಮುದಾಯದ ನಾಯಕರು ಎಂದು ತನ್ನನ್ನು ತಾನೇ ಬಿಂಬಿಸಿಕೊಂಡಿರುವ ಕೆ.ಪಿ ನಂಜುಡಿಯವರು... ಮೀಸಲಾತಿಯ ಆಸೆಯನ್ನ ತೋರಿಸಿ ವಿಶ್ವಕರ್ಮ ಸಮುದಾಯದವರನ್ನ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿಕೊಂಡಿದ್ದಾರಂತೆ. ಈ ವಿಷಯದ ಮೂಲ ಮಾಹಿತಿ ನನಗಿನ್ನೂ ಸಿಕ್ಕಿಲ್ಲ. ಆದರೂ ಈ ಆಧಾರದ ಮೇಲೆಯೇ ನಿಮ್ಮಲ್ಲೊಂದಿಷ್ಟು ವಿಷಯ ಹೇಳಿಕೊಳ್ಳುವುದಿತ್ತು....
ಹಿಂದೂ ಸಮಾಜ ಬಹು ವೈವಿಧ್ಯಮಯ.... ಇಲ್ಲಿ ಅನೇಕ ಜಾತಿಗಳಿವೆ... ಮೊದಲಿದ್ದ ವರ್ಣ ಪದ್ಧತಿಯಿಂದ ಜಾತಿ ಪದ್ಧತಿಗಳು ಹೇಗೆ ಬಂತೋ ದೇವರೇ ಬಲ್ಲ.... ಆದರೂ ಈ ಜಾತಿಗಳು ಸಮಾಜದ ಕೆಲಸಗಳ ವಿಂಗಡನೆಯಿಂದಾಗೇ ಆಗಿರಬಹುದೇನೋ... ಅನ್ನೋದು ನನ್ನ ಅನಿಸಿಕೆ.... ಪ್ರತಿಯೊಂದು ಜಾತಿಗೂ ತನ್ನದೇ ಆದ ಕುಲ ಕಸುಬು ಇರುತ್ತಿದ್ದುದು ಸುಳ್ಳಲ್ಲ.. ( ಕೆಲವೊಮ್ಮೆ ಸಮಾಜದ ಒಳಿತಿಗಾಗಿ ರೂಪಿಸಿದ ನಿಯಮಗಳು ಇನ್ನೊಂದು ರೀತಿಯಲ್ಲಿ ಮುಳುವಾಗುವ ರೀತಿಯಂತೆ ಇಂದು ಜಾತಿಗಳು ಹಿಂದೂ ಸಮಾಜಕ್ಕೆ ಮುಳುವಾಗುತ್ತಿದೆ... ಇರಲಿ ಬಿಡಿ ) ಪ್ರತಿಯೊಬ್ಬರಿಗೂ ತಮ್ಮ ತಮ್ಮ ಜಾತಿಯ ಮೇಲೆ ವಿಶೇಷ ಅಭಿಮಾನ ಇದ್ದೇ ಇರುತ್ತದೆ. ಅದರಲ್ಲೇನೂ ತಪ್ಪಿಲ್ಲ ಆದರೆ ದುರಾಭಿಮಾನ ಇರಬಾರದು ಅಷ್ಟೇ.... ಮತ್ತು ನಾವೆಲ್ಲರೂ ಮೂಲ ಧರ್ಮವಾದ ವೈದಿಕ ಧರ್ಮದ ಒಂದು ಅಂಗ ಅನ್ನುವುದನ್ನೂ ಮರೆಯಬಾರದು.
ವಿಶ್ವಕರ್ಮ ಸಮುದಾಯ ಹಿಂದೂ ಧರ್ಮದ ಸಾಂಸ್ಕೃತಿಕ ಶ್ರೇಷ್ಠತೆಗೆ ಕೊಟ್ಟ ಕೊಡುಗೆಗಳು ಅಪಾರ.... ನಮ್ಮ ಮೂಲ ಕಸುಬಾದ ಚಿನ್ನದ ಕೆಲಸ, ಮರದ ಕೆಲಸ, ಲೋಹದ ಕೆಲಸ, ಶಿಲ್ಪದ ಕೆಲಸ ಹೀಗೆ ಇವೆಲ್ಲವೂ ಹಿಂದೂ ಧರ್ಮದ ಸಾಂಸ್ಕೃತಿಕ ವೈಭವಕ್ಕೆ ಪೂರಕ.... ಹಿಂದೂ ಧರ್ಮದ ಇನ್ನಿತರ ವರ್ಣಗಳ ಪ್ರೋತ್ಸಾಹದಿಂದ ನಮ್ಮಲ್ಲಿನ ಕಲೆಯ ಅನಾವರಣವಾಗಿದೆ. ಹಾಗಾಗಿ ಒಬ್ಬ ನಟನಿಗೆ ಪ್ರೇಕ್ಷಕ ಯಾವ ರೀತಿಯಿಂದ ಸ್ಫೂರ್ತಿ ನೀಡುತ್ತಾನೋ ಅದೇ ರೀತಿ ನಮ್ಮ ಕಲೆಯನ್ನ ಗುರುತಿಸಿ ಅಭಿನಂದಿಸೋಕೆ ಹಿಂದೂ ಧರ್ಮದ ಇನ್ನಿತರ ವರ್ಣದ ಜನರೂ ಅತ್ಯಗತ್ಯ....
ಭಾರತ ದೇಶದಲ್ಲಿ ಅದೆಷ್ಟೋ ದೇವಾಲಯಗಳಲ್ಲಿ ತಮ್ಮ ಚಾಕಚಕ್ಯತೆಯನ್ನ ತೋರಿಸಿದ ವಿಶ್ವಕರ್ಮರು ಇಡಿಯ ಭಾರತವನ್ನ ವಿದೇಶಿಗರ ಪಾಲಿಗೆ ಅದ್ಭುತವೆಂಬಂತೆ ತೋರಿಸಿಕೊಟ್ಟಿದ್ದಾರೆ... ಅದೆಷ್ಟೋ ಕಾಲದ ದೇವಾಲಯಗಳು ಹಿಂದೂ ರಾಜರುಗಳಿಂದ ನಿರ್ಮಿಸಲ್ಪಟ್ಟಿತು. ಹಾಗಾಗಿ ನಮಗೆ ಕಾಯಕವನ್ನ ಕೊಡುವುದಿದ್ದರೆ ಅದು ಹಿಂದೂಗಳು. ನಮ್ಮ ಕಲೆಯ ಆನಂದವನ್ನ ಸವಿಯುವುದು ನಮ್ಮದೇ ಧರ್ಮೀಯರು... ಯಾವಾಗ ಯವನರ ದಾಳಿಗೆ ಭಾರತ ತುತ್ತಾಯಿತೋ ಅಂದಿನಿಂದ ನಮ್ಮ ದೇವಾಲಯಗಳನ್ನ ಇನ್ನಿಲ್ಲದಂತೆ ಧ್ವಂಸ ಮಾಡಲಾಗಿತ್ತು... ಕಲೆಯ ಬೆಲೆ ಆ ಕಲೆಯನ್ನ ಆಸ್ವಾದಿಸುವವನಿಂದ ಮಾತ್ರ ಸಾಧ್ಯ... ಅದ್ಯಾವುದರ ಪರಿವೆ ಇಲ್ಲದೇ ಅದೆಷ್ಟೋ ಮೂರ್ತಿಗಳನ್ನ ತುಂಡರಿಸಲಾಯಿತು...
ಹೀಗಾಗಿ ನಮ್ಮ ಸಮುದಾಯದ ಸಂಸ್ಕೃತಿಯ ಉಳಿವಿಗೆ ಹಿಂದೂ ಧರ್ಮದ ಉಳಿವು ಅತ್ಯಗತ್ಯ... ಹಿಂದೂ ಧರ್ಮ ಉಳಿದಾಗ ಮಾತ್ರ ನಾವೂ ಉಳಿದೇವು... ಈಗಾಗಲೇ ಎಷ್ಟೋ ಜನ ತಮ್ಮ ಮೂಲ ಕಸುಬನ್ನ ಬಿಟ್ಟು ಹೋಗುತ್ತಿದ್ದಾರೆ. ಅವರನ್ನ ಮತ್ತೆ ನಮ್ಮ ಸಂಸ್ಕೃತಿಯ ಕೊಂಡಿಯಲ್ಲಿ ಸೇರಿಸಬೇಕಾಗಿದೆ. ಇದು ನಿಜವಾಗಿ ಸಮುದಾಯವನ್ನ ಮೇಲೆತ್ತುವ ಕಾರ್ಯ. ನಾವು ಈ ದಿಕ್ಕಿನಲ್ಲಿ ಯೋಚಿಸಬೇಕೆ ಹೊರತು ಮೀಸಲಾತಿಯ ಆಸೆಗೆ ಬಲಿಯಾಗಿ ನಮ್ಮ ಮೂಲ ಧರ್ಮವಾದ ಹಿಂದೂ ಧರ್ಮದ ವಿನಾಶಕ್ಕೆ ಕಾರಣರಾಗಬಾರದು. ಒಮ್ಮೆ ಯೋಚಿಸಿ ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಪರ ನಡೆ ನಿರೀಕ್ಷಿಸಬಹುದೇ...? ರಾಮಸೇತುವನ್ನೇ ಒಡೆಯಹೋದವರಲ್ವೇ... ನಮ್ಮ ದೇವರುಗಳಿಗೆ, ನಮ್ಮ ನಂಬಿಕೆಗಳಿಗೆ ಬೆಲೆ ಕೊಡಲಾಗದ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಸಾಂಸ್ಕೃತಿಕ ಮೌಲ್ಯ ಹೇಗೆ ತಾನೇ ಗೊತ್ತಾದೀತು...?
ಮೀಸಲಾತಿಯ ಆಸೆಯ ಮೂಲಕ ಹಿಂದೂಗಳನ್ನ ಒಡೆಯುವ ಕುತಂತ್ರ ಈಗ ಆಗ್ತಾ ಇದೆ... ಇದಕ್ಕೆ ಅವಕಾಶ ನಾವು ಕೊಡಬಾರದು... ಆ ಮೂಲಕ ಹಿಂದೂ ಸಮಾಜವನ್ನ ಒಡೆಯುವ ಪ್ರಯತ್ನವನ್ನ ನಾವು ತಡೆಗಟ್ಟಬೇಕಾಗಿದೆ... ಕಾಂಗ್ರೆಸ್ ಗೆ ಮತ ಹಾಕಿ ಅನ್ನುವ ನಾಯಕರ್ಯಾರೇ ಆದರೂ ಅವರದ್ದು ಸಮುದಾಯದ ಮೇಲಿನ ಕಾಳಜಿಯಲ್ಲ ಅದು ವ್ಯಕ್ತಿಗತ ಹಿತಾಸಕ್ತಿ ಅಷ್ಟೇ... ಈಗಾಗಲೇ ಮೀಸಲಾತಿಗಳಿಂದಾಗಿ... ಪ್ರತಿಭಾವಂತರಿಗಾದ ಅನ್ಯಾಯ ಅಷ್ಟಿಷ್ಟಲ್ಲ... ಹಾಗಾಗಿ ಒಮ್ಮೆ ಯೋಚಿಸಿ ನಿರ್ಧರಿಸಿ....
ಇನ್ನು ನಮ್ಮ ಜಾತಿಯನ್ನ ಬದಿಗಿಟ್ಟು ಯೋಚಿಸಿದರೂ ಸದ್ಯ ನಮ್ಮ ದೇಶಕ್ಕೆ ಬೇಕಾಗಿರುವುದು ಒಬ್ಬ ಸಮರ್ಥ ನಾಯಕ... ಯಾವ ನಾಯಕನಿಗೆ ಈ ದೇಶದ ಸಾಂಸ್ಕೃತಿಕ ಮೌಲ್ಯದ ಮಹತ್ವ ಗೊತ್ತಿದೆಯೋ ಅಂತವರ ಆಯ್ಕೆ ಮಾಡಬೇಕಾಗಿದೆ. ವಿದೇಶದಲ್ಲಿ ಬೆಳೆದು ಅಲ್ಲಿನ ಸಂಸ್ಕಾರದ ಮೂಲಕವೇ ಬೆಳೆದು ಬಂದಿರುವವರಿಗೆ ನಮ್ಮ ದೇಶದ ಲಗಾಮು ಹಿಡಿಯುವ ಯೋಗ್ಯತೆಯಿಲ್ಲ. ಇಡಿಯ ಭಾರತವನ್ನ ಮೀಸಲಾತಿಯ ಹಾಳು ಯೋಜನೆಯಿಂದ ಮುಕ್ತಗೊಳಿಸಬೇಕಾದರೆ ನಾವು ಇಂದು ತನ್ನನ್ನು ತಾನು ಸಾಬೀತು ಪಡಿಸಿಕೊಂಡಿರುವ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸಬೇಕಾಗಿದೆ... ಆ ಮೂಲಕ ರಾಷ್ತ್ರನಿರ್ಮಾಣದ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾಗಿದೆ.
ಕೊನೆಯಲ್ಲಿ ಒಂದು ಮಾತನ್ನಷ್ಟೇ ಹೇಳಲು ಬಯಸುತ್ತೇನೆ ಯಾರಿಗೆ ಮತ ಹಾಕಬೇಕು ಅನ್ನುವ ನಿರ್ಧಾರ ನಿಮ್ಮದು. ಆದರೂ ನಮ್ಮ ಧರ್ಮ ನಮ್ಮ ಸಂಸ್ಕಾರ ನಮಗೆ ಹೇಳಿಕೊಟ್ಟ ಪಾಠ... " ದೇಶ ಮೊದಲು " ಎನ್ನುವುದು. ಹಾಗಾಗಿ ದೇಶದ ಉಳಿವು ಯಾರ ಕೈಯಲ್ಲಿದೆ ಅನ್ನುವುದನ್ನ ಯೋಚಿಸಿ ಆಮೇಲೆ ನಿರ್ಣಯಕ್ಕೆ ಬನ್ನಿ.... ಇಡಿಯ ದೇಶಕ್ಕಾಗಿ ಮತ ಹಾಕಿ ಭಾರತ ಗೆಲ್ಲಿಸೋಣ....

No comments:

Post a Comment