Saturday 31 October 2015

ಸ್ವಾರ್ಥದ ಇತಿಹಾಸ....



ಬ್ರಿಟಿಷರು ಪ್ರಚಾರ ಮಾಡಿದ ಕಲ್ಪನೆಯ ಇತಿಹಾಸದ ಸಾರಾಂಶ
1. ಈಜಿಪ್ಟ್ ದೇಶದ ಸಂಸ್ಕೃತಿ ಮತ್ತು ಇತಿಹಾಸಗಳು ಜಗತ್ತಿನ ಇತರ ದೇಶಗಳ ಸಂಸ್ಕೃತಿ ಮತ್ತು ಇತಿಹಾಸಗಳಿಗಿಂತ ಪ್ರಾಚೀನವಾಗಿದೆ ಮತ್ತು ಅವುಗಳು ಸೆಮಿಟಿಕ್ ಜನರಿಗೆ ಸೇರಿದವುಗಳಾಗಿದೆ.
2. ಆರ್ಯ ಜನರು ಯಾವುದೋ ಒಂದು ಮೂಲ ನೆಲೆಯಿಂದ ಹೊರಟವರು, ಜಗತ್ತಿನ ನಾನಾ ಭಾಗಗಳಲ್ಲಿ ಚದುರಿಹೋಗಿದ್ದರು. ಅವರು ಯಾವುದೊಂದು ಪ್ರದೇಶದಲ್ಲಿ ಸ್ಥಿರವಾಗಿ ನೆಲಸದೇ ಒಂದು ಪ್ರದೇಶದಿಂದ ಬೇರೊಂದು ಪ್ರದೇಶಕ್ಕೆ ವಲಸೆ ಹೋಗುವಂಥಾ ಅಲೆಮಾರಿ ಜನಾಂಗದವರಾಗಿದ್ದರು.
3. ಕುದುರೆಗಳನ್ನು ಪಳಗಿಸಿ ಮಾರುವುದು ಅವರ ಮುಖ್ಯ ವ್ಯವಸಾಯವಾಗಿತ್ತು. ಆದುದರಿಂದ ಅವರು ತಮ್ಮ ಕುದುರೆಗಳಿಗಾಗಿ ಹೇರಳ ಮೇವು ದೊರೆಯುವಂಥಾ ಹುಲ್ಲುಗಾವಲುಗಳನ್ನು ಅರಸುತ್ತಾ ಸಾಗುತ್ತಿದ್ದರು.
4. ಅಂಥ ಆರ್ಯಜನರು ಶಕಪೂರ್ವ ೧೫೦೦ ವರ್ಷಗಳ ಸುಮಾರಿಗೆ ಪಶ್ಚಿಮಭಾಗದಿಂದ ಮುಂದುವರಿದು ಭಾರತವನ್ನು ಆಕ್ರಮಿಸಿ ಉತ್ತರ ಭಾರತದಲ್ಲಿ ನೆಲೆಸಿದ್ದ ದ್ರಾವಿಡ ಜನರನ್ನು ದಕ್ಷಿಣದತ್ತ ಅಟ್ಟಿದ್ದರು.
5. ವೇದಗಳಲ್ಲಿ ಪ್ರಾಚೀನತಮವಾದ ಋಗ್ವೇದದ ಮಂತ್ರಗಳು ಆರ್ಯ ಜನರು ಭಾರತದಲ್ಲಿ ನೆಲೆಸಿದ ತರುವಾಯ ರಚಿಸಲ್ಪಟ್ಟವು.
6. ಶಕದ ಎಂಟನೆಯ ಶತಮಾನಕ್ಕಿಂತ ಮೊದಲು ಭಾರತೀಯರಲ್ಲಿ ಇಲ್ಲವೇ ವೈದಿಕ ಜನರಲ್ಲಿ ಲಿಪಿಯು ಪ್ರಚಲಿತದಲ್ಲಿರಲಿಲ್ಲ. ಆದುದರಿಂದ ವೇದಮಂತ್ರಗಳು ಬರೆಯಲ್ಪಟ್ಟಿರದೇ ಕಂಠಪಾಠವಾಗಿ ಮುಂದೆ ಸಾಗುತ್ತಾ ಬಂದಿದ್ದವು. ಭಾರತೀಯರಲ್ಲಿ ಪ್ರಚಲಿತವಾದ ಹಾಗೂ ತರುವಾಯದ ಎಲ್ಲ ಭಾರತೀಯ ಲಿಪಿಗಳ ಮೂಲವಾಗಿದ್ದ ಬ್ರಾಹ್ಮೀವರ್ಣಮಾಲೆಯು ಸೆಮಿಟಿಕ್ ಮೂಲದ ಫಿಸಿಶ್ಶನ್ ಜನರು ಉಪಯೋಗಿಸುತಿದ್ದ ವರ್ಣಮಾಲೆಯಿಂದ ರೂಪಾಂತರಿಸಲ್ಪಟ್ಟದ್ದು.
7. ಋಗ್ವೇದ ಕಾಲದ ಜನರಿಗೆ ಜ್ಯೋತಿಷ್ಯದ ಜ್ಞಾನವಿರಲಿಲ್ಲ. ಋಗ್ವೇದದಲ್ಲಿ ಎರಡಕ್ಕಿಂತ ಹೆಚ್ಚು ನಕ್ಷತ್ರಗಳ ಹೆಸರುಗಳಿಲ್ಲ. ಭಾರತೀಯರು ಗ್ರಹಗಣಿತವನ್ನು ಯವನರಿಂದ ಕಲಿತಿದ್ದರು. ಮತ್ತು ಇಪ್ಪತ್ತೇಳು ಚಾಂದ್ರನಕ್ಷತ್ರಗಳ ಗಣನಾಕ್ರಮವನ್ನು ಬೆಬಿಲೋನೀ ಜನರಿಂದ ಅಲ್ಲದಿದ್ದರೆ ಚೀನೀಯರಿಂದ ಕಲಿತಿದ್ದರು.
8. ಭಾರತದಲ್ಲಿನ ಮೂಲನಿವಾಸಿಗಳಲ್ಲಿ ಶಿವನ ಲಿಂಗರೂಪದ ಆರಾಧನೆಯೂ, ನಾಗಾರಾಧನೆಯೂ ಆರ್ಯಜನರು ಭಾರತವನ್ನು ಪ್ರವೇಶಿಸುವ ಮೊದಲಿನಿಂದಲೂ ಪ್ರಚಲಿತದಲ್ಲಿತ್ತು. ಮತ್ತು ಆರ್ಯಜನರು ಶಿವನ ಮತ್ತು ನಾಗಾರಾಧನೆಯನ್ನು ಇಲ್ಲಿನ ಮೂಲನಿವಾಸಿಗಳಿಂದಲೇ ಸ್ವೀಕರಿಸಿದ್ದರು. ಅರ್ಥಾತ್ ಆರ್ಯಜನರಲ್ಲಿ ಶಿವನ ಆರಾಧನೆ ಋಗ್ವೇದೋತ್ತರ ಕಾಲದ ಬೆಳವಣಿಗೆಯಾಗಿದೆ.
9. ಆರ್ಯಜನರಲ್ಲಿ ಸ್ವಸ್ತಿಕದ ಚಿಹ್ನೆಗಳು ಪ್ರಚಲಿತದಲ್ಲಿರಲಿಲ್ಲ. ಆರ್ಯ ಜನರು ಸ್ವಸ್ತಿಕದ ವಿರೋಧಿಗಳಾಗಿದ್ದರು. ಅಂದರೆ ಸ್ವಸ್ತಿಕದ ಚಿಹ್ನೆಯು ಆರ್ಯಜನರಿಗೆ ಸೇರಿದ್ದಲ್ಲ.
10. ಸಿಂಧೂ ಕಣಿವೆಯ ಅಗೆತಗಳಲ್ಲಿ ಬೆಳಕಿಗೆ ಬಂದಿರುವ ಪ್ರಾಚೀನ ಅವಶೇಶಗಳಿಂದ ವ್ಯಕ್ತವಾಗುವ ಸಂಸ್ಕೃತಿಯು ಆರ್ಯರದ್ದಲ್ಲ. ಆರ್ಯರು ಭಾರತಕ್ಕೆ ಬರುವ ಮೊದಲೇ ಆ ಸಂಸ್ಕೃತಿಯು ಸಿಂಧೂ ಕಣಿವೆಯಲ್ಲಿ ಸ್ಥಾಪಿತವಾಗಿತ್ತು. ಆರ್ಯ ಜನರು ಬಂದು ಅದನ್ನು ನಾಶಗೊಳಿಸಿದರು.
ಇಂಥಾ ಕಲ್ಪನೆಗಳನ್ನು ಭಾರತೀಯರ ಮೇಲೆ ಹೇರಲು ಮುಖ್ಯ ಕಾರಣ ತಮ್ಮ ಧರ್ಮದ ಪ್ರತಿಷ್ಠಾಪನೆ ಮತ್ತು ಭಾರತೀಯರ ಮೇಲೆ ತಮ್ಮ ಆಳ್ವಿಕೆಯನ್ನು ಭದ್ರಪಡಿಸುವುದು... ಜಗತ್ತಿಗೆ ಭಾರತೀಯರಿಂದ ಯಾವುದೇ ಕೊಡುಗೆಯಿಲ್ಲ. ಎನ್ನುವುದನ್ನು ಹೇಳಿ ಮಾನಸಿಕವಾಗಿ ನಮ್ಮ ಕುಗ್ಗಿಸುವಂತೆ ಮಾಡುವುದು ಕೂಡ ಇವರ ಒಳಉದ್ದೇಶಗಳಲ್ಲಿ ಒಂದಾಗಿತ್ತು. ಇಂಥಾ ಕಲ್ಪನೆಗಳಿಗೆ ಅವರು ಯಾವುದೇ ಪ್ರಶ್ನಾತೀತ ಸಾಕ್ಷ್ಯವನ್ನು ಕೊಡುವ ಗೋಜಿಗೆ ಹೋಗಲಿಲ್ಲ.
( ಇಲ್ಲಿ ಸೆಮಿಟಿಕ್ ಅನ್ನೋದು ಕ್ರಿಶ್ಚಿಯನ್ ಅನ್ನೋ ಅರ್ಥ ಕೊಡುತ್ತೆ ಅನ್ನೋದು ನನ್ನ ಭಾವನೆ ಯಾಕೆಂದರೆ ಬಹಳ ಹಳೆಯ ಪುಸ್ತಕವಾದ್ದರಿಂದ ಸರಿಯಾದ ಅರ್ಥ ನನಗೆ ಸಿಕ್ಕಿಲ್ಲ ಹಾಗೆಯೇ ಇಲ್ಲಿ ಉಪಯೋಗಿಸಲಾಗಿರುವ ಶಕವರ್ಷಗಳ ಲೆಕ್ಕಾಚಾರ ನನಗೆ ಸರಿಯಾಗಿ ಅರ್ಥವಾಗಿಲ್ಲ ಯಾರಾದರೂ ತಿಳಿದಿದ್ದವರು ಹೇಳಬಹುದು....)

No comments:

Post a Comment