Wednesday 18 November 2015

ವಿಂಬ್ಲೆಯಲ್ಲಿ ಮೋದೀ ಭಾಷಣ



ಮೋದೀಜಿಯವರ ಭಾಷಣ ಅಂದರೆ ಸಾಕು ಅದರಲ್ಲೋನೋ ಹೊಸತು ಇದ್ದೇ ಇರುತ್ತದೆ... ಅದೇ ಹಳೇ ಸರಕನ್ನ ಮತ್ತೆ ಮತ್ತೆ ಹೇಳುವ ಜಾಯಮಾನದವರಲ್ಲ. ಅದನ್ನೇ ಹೇಳುತ್ತಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಒಂದಾಗುವುದೂ ಸಾಧ್ಯವಿರಲಿಲ್ಲ... ಬರಿಯ ಪೊಳ್ಳು ಮಾತಲ್ಲ ಅವರ ನುಡಿಗಳಲ್ಲಿ ಅದೇನೋ ಸೆಳೆತವಿದೆ... ನಿಮ್ಮೊಳಗಿನ ವಿಶ್ವಾಸವನ್ನ ಬಡಿದೆಬ್ಬಿಸುತ್ತದೆ. ಅದಕ್ಕೆ ಸಾಕ್ಷಿ ನಿನ್ನೆಯ ಭಾಷಣ. ಅವರ ಭಾಷಣದಲ್ಲಿ ನನ್ನ ಗಮನ ಸೆಳೆದ ಹಲವು ಅಂಶಗಳು.
೧. ಸ್ವಾತಂತ್ರ್ಯ ಹೋರಾಟಗಾರ ಶ್ಯಾಮಜೀ ಕೃಷ್ಣ ಶರ್ಮ ಅವರ ಅಸ್ಥಿ ತಂದ ವಿಚಾರ. ಎಂಥಾ ವಿಚಿತ್ರ ಅಲ್ವಾ... ಸ್ವಾತಂತ್ರ್ಯ ಸಿಕ್ಕಿ ಐವತ್ತಾರು ವರ್ಷಗಳ ಬಳಿಕ ಈ ದೇಶದ ಒಬ್ಬ ಮುಖ್ಯಮಂತ್ರಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಕೊನೆಯ ಆಸೆ ಈಡೇರಿಸುವ ಮನಸ್ಸಾಗುತ್ತದೆ... ಅದುವರೆಗೂ ಆಡಳಿತ ಮಾಡಿದ ದೇಶದ ಕೇಂದ್ರ ಸರ್ಕಾರಗಳು ಮಾಡಿದ್ದೇನು...? ಅನ್ನೋ ಪ್ರಶ್ನೆಯೊಂದು ಈಗ ನನ್ನನ್ನ ಕಾಡಲು ಶುಋ ಮಾಡಿದೆ.
೨. ಮೊದಲ ಬಾರಿಗೋ ಏನೋ... ಒಬ್ಬ ಪ್ರಧಾನಿ, ಭಾರತ ಕಂಡ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಮತ್ತವರ ಶಿಷ್ಯ ಮದನ್ ಲಾಲ್ ಧಿಂಗ್ರಾ ರ ಹೆಸರನ್ನ ಉಲ್ಲೇಖಿಸುತ್ತಾರೆ... ಇದುವರೆಗೆ ಗಾಂಧಿ, ನೆಹರುರನ್ನ ಬಿಟ್ಟು ಮತ್ಯಾರ ಹೆಸರೂ ಬರುತ್ತಲೇ ಇರಲಿಲ್ಲ.
೩. ಸೂಫೀ ಸಂತರ ಪಂಥದ ಅನುಯಾಯಿಗಳಾಗಿದ್ದಿದ್ದರೆ ಭಯೋತ್ಪಾದನೆ ಮಾರ್ಗ ತುಳಿಯುತ್ತಿರಲಿಲ್ಲ... ಅಂದಿದ್ದು.
೪. ಭಾರತದಲ್ಲಿ ಎಷ್ಟು ಗ್ರಾಮಗಳಿಗೆ ವಿದ್ಯುತ್ ತಲುಪಿಲ್ಲ ಅನ್ನೋ ಲೆಕ್ಕಾಚಾರ ಗೊತ್ತಿರೋದು... ಬಹುಶ ಇದು ಅವರ ಗುರಿ ತಲುಪುವ ಸ್ಪಷ್ಟತೆಯನ್ನ ತೋರಿಸುತ್ತದೆ.. ಮೊದಲಾಗಿದ್ದರೆ ಹಾಗಲ್ಲ... ಇನ್ನೂ ನಮ್ಮಲ್ಲಿ ಹಲವು ಗ್ರಾಮಗಳಿಗೆ ವಿದ್ಯುತ್ ತಲುಪಿಲ್ಲ ಅಂದಿದ್ದರೆ ಸಾಕಿತ್ತು ಎಷ್ಟು ಗ್ರಾಮ..? ಅದಕ್ಕೇನು ಮಾಡೋದು..? ಅನ್ನುವುದರ ಗೊಡವೆಗೆ ಯಾರೂ ಹೋಗುತ್ತಿರಲಿಲ್ಲ.
೫. ಸೂರ್ಯಪುತ್ರ ರಾಷ್ಟ್ರಗಳ ಒಕ್ಕೂಟದ ಕಲ್ಪನೆ... ಸೌರಶಕ್ತಿಯ ಉಪಯೋಗ ಯಾವೆಲ್ಲಾ ರಾಷ್ಟ್ರಗಳಿಗೆ ಉಪಲಬ್ಧವಿದೆ ಅನ್ನುವುದರ ಸ್ಪಷ್ಟ ಲೆಕ್ಕಾಚಾರ ಗೊತ್ತಿದೆ... ಮತ್ತು ಅದರ ಒಕ್ಕೂಟದಿಂದ ಇಡಿಯ ವಿಶ್ವಕ್ಕೆ ಲಾಭವಾಗುವಂಥಾ ಕಾರ್ಯಯೋಜನೆ ಮತ್ತು ಆ ಯೋಜನೆಗೆ ಭಾರತವೇ ನಾಯಕತ್ವ ವಹಿಸುವಂಥಾ ಕಲ್ಪನೆ... ನಿಜಕ್ಕೂ ಅದ್ಭುತ... ಈ ನಿಟ್ಟಿನಲ್ಲಿ ಭಾರತದ ಪ್ರಧಾನಿ ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲದ ಕುರಿತಾಗಿ ಎಷ್ಟು ಗಮನ ಹರಿಸುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತದೆ.
೬. " ಅಬ್ ಹಮ್ ಮೆಹೆರ್ಬಾನಿ ನಹೀ ಬರಾಬರೀ ಚಾಹ್ತೇ ಹೈ..." ಅದೆಂಥಾ ಸ್ವಾಭಿಮಾನದ ಮಾತು ರೀ... ದೇಶವನ್ನ ದಿಗ್ಗಜ ದೇಶಗಳ ಜೊತೆ ಸಮಾನವಾಗಿ ನಿಲ್ಲಿಸೋ ಮಾತು ಆಡಬೇಕಾದರೆ... ಹಾಗೆ ಮಾತನಾಡುತ್ತಿರುವಾಗ ಇತರ ದೇಶದ ನಾಯಕರೂ ತಲೆದೂಗುತ್ತಿರಬೇಕಾದರೆ... ಇಡಿಯ ಜಗತ್ತು ಇವರ ಮೇಲಿಟ್ಟಿರೋ ವಿಶ್ವಾಸ ಎಷ್ಟು ಆಳವಾಗಿದ್ದಿರಬಹುದು...ಅನ್ನೋದರ ಪರಿಚಯ ಆಗೋದಿಲ್ವಾ...
೭. " ಟಿವಿಯಲ್ಲಿ ಕಾಣಿಸುತ್ತಿರುವುದೇ ಭಾರತವಲ್ಲ..." ಅಂತ ಹೇಳಿದ್ದು... ನಿಜಕ್ಕೂ ಇದು ಭಾರತೀಯ ಮಾಧ್ಯಮಗಳ ಮುಖಕ್ಕೆ ನಮ್ಮ ಪ್ರಧಾನಿ ಕೊಟ್ಟ ಸಾತ್ವಿಕ ಹೊಡೆತ...... ಸತ್ಯವನ್ನ ಮರೆಮಾಚುವುದಲ್ಲ, ಸುದ್ದಿಯ ಸತ್ಯವನ್ನ ನಿಮಗೆ ಬೇಕಾದ ಹಾಗೆ ತಿರುಚಬೇಡಿ ಅನ್ನುವುದು ಮಾತ್ರ ಅವರ ಕೋರಿಕೆಯಾಗಿದ್ದ ಹಾಗೆ ಕಂಡಿತು.
೮. ರಾಜಸ್ಥಾನದಲ್ಲಿನ ಸಣ್ಣ ಗ್ರಾಮದಲ್ಲಿನ ಇಮ್ರಾನ್ ಖಾನ್ ಎಂಬ ವ್ಯಕ್ತಿಯ ಸಾಧನೆಯನ್ನ ಉಲ್ಲೇಖಿಸಿ ಭಾರತೀಯ ಮಾಧ್ಯಮಗಳು ಬೇಕಾಗಿದ್ದನ್ನ ತೋರಿಸುವುದು ಕಡಿಮೆಯೇ ಅನ್ನುವ ಟಾಂಗ್ ಕೊಟ್ಟಿದ್ದು... ನಿಜಕ್ಕೂ ನಮ್ಮ ಪ್ರಧಾನಿಗೆ ಮಾಧ್ಯಮಗಳ ಬೆಂಬಲ ಸಿಕ್ಕರೆ ದೇಶವನ್ನ ವಿಶ್ವಗುರುವಾಗಿಸಲು ಹೆಚ್ಚು ಸಮಯ ಬೇಕಾಗಿಲ್ಲ... ಆದರೆ ಮಾಧ್ಯಮ ಆ ಕೆಲಸ ಮಾಡುತ್ತಿಲ್ಲವಲ್ಲ ಅನ್ನುವುದೇ ಖೇದಕರ.
೯. ತಾವು ಮುಖ್ಯಮಂತಿಯಾಗಿದ್ದಾಗ ಈಡೇರಿಸಲಾಗದ ಬೇಡಿಕೆಯೊಂದನ್ನ ಪ್ರಧಾನಿಯಾಗಿ ಈಡೇರಿಸಿದ್ದು. ಲಂಡನ್ ಟು ಅಲಹಬಾದ್ ವಿಮಾನ ಸಂಚಾರ. ಅಂಥಾ ನೆನಪನ್ನೂ ಅವರಿಟ್ಟುಕೊಂಡಿದ್ದಾರಲ್ವಾ ಅನ್ನೋದೇ ಆಶ್ಚರ್ಯಕರ ಅಲ್ವಾ
೧೦. ಬರಿಯ ನಾವು ಬೆಳೆಯುವುದು ಮಾತ್ರವಲ್ಲ ನಮ್ಮ ಜೊತೆಗೆ ಉಳಿದವರೂ ಬೆಳೆಯಲಿ ಅನ್ನುವ ಉದ್ದೇಶ ನಮ್ಮದು... ನಿಜ ಇಂತಹಾ ಉಧಾತ್ತ ಚಿಂತನೆ ಭಾರತೀಯ ಪ್ರಧಾನಿಯೊಬ್ಬರಿಗೆ ಮಾತ್ರ ಬರಲು ಸಾಧ್ಯವೇನೋ...
ಬಿಹಾರದ ಫಲಿತಾಂಶ ಅದೇನೇ ಇರಲಿ ನಿಮ್ಮ ಸ್ಪಷ್ಟ ಗುರಿ... ಆ ಗುರಿಯತ್ತ ನೀವಿಡುತ್ತಿರುವ ದಿಟ್ಟ ಹೆಜ್ಜೆಯೇ ನಿಮ್ಮ ಮೇಲಿನ ನಮ್ಮ ನಂಬಿಕೆಯನ್ನ ಗಟ್ಟಿಗೊಳಿಸುವುದು... ತಾಯಿ ಭಾರತಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಹೀಗೇ ಇರಲಿ....

No comments:

Post a Comment