Monday 2 November 2015

ಎಚ್ಚೆತ್ತುಕೊಳ್ಳುವುದಾದರೆ ಈಗಲೇ ಎಚ್ಚೆತ್ತುಕೊಳ್ಳಿ....



ಮತ್ತೆ ಮತ್ತೆ ನೆತ್ತರು ಚಿಮ್ಮುತ್ತದೆ. ಮತ್ತೆ ಮತ್ತೆ ಇದೊಂದು ಘನಾಂದಾರಿ ಕೆಲಸ ಎನ್ನುವಂತೆ " ನಾವೇ ಮಾಡಿದ್ದು " ಅನ್ನುತ್ತ ಸಂಸ್ಥೆಯೊಂದು ಹೊಣೆಯನ್ನ ಹೊತ್ತು ಕೊಳ್ಳುತ್ತೆ. ಅಷ್ಟಾದರೂ ಇಲ್ಲಿನ ರಾಜಕೀಯ ಪುಡಾರಿಗಳೆಂಬ ದೇಶದ್ರೋಹಿಗಳು.. ಸೇವೆಯಲ್ಲಿ ನಿರತ ವ್ಯಕ್ತಿಗಳ ಮೇಲೆ ಗೂಬೆ ಕೂರಿಸಲು ಹವಣಿಸುತ್ತಾರೆ. ಇನ್ನೆಷ್ಟು ದಿನ ಅಂತ ಇದನ್ನ ಸಹಿಸಿಕೊಳ್ಳಬೇಕು. ಇದಕ್ಕೊಂದು ಕೊನೆ ಎನ್ನುವುದೇ ಇಲ್ಲವೇ. ತನ್ನ ದೇಶದ ಜನರು ಈ ರೀತಿ ಸಾಯುತ್ತಿರುವುದು ಕಂಡ ಮೇಲೂ ಯಾಕೆ ಈ ವೋಟ್ ಬ್ಯಾಂಕ್ ವ್ಯಾಮೋಹ...?
ಒಂದು ದೇಶ ಈ ರೀತಿ ಭಯೋತ್ಪಾದನೆಗೆ ಗುರಿಯಾಗಲು ಸಾಧ್ಯವೇ...? ಖಂಡಿತ ಸಾಧ್ಯವಿಲ್ಲ. ಇದು ಆಗುತ್ತಾ ಇದೆ ಎಂದಾದಲ್ಲಿ ಖಂಡಿತವಾಗಿಯೂ ಇಲ್ಲಿನ ಸರ್ಕಾರಕ್ಕೆ ತನ್ನ ಸ್ವಂತ ಲಾಭದ ಹೊರತು ಮತ್ತಿನ್ನೇನು ಬೇಕಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಾಜನಾದವನಿಗೆ ತನ್ನ ಪ್ರಜೆಗಳು ಮಕ್ಕಳಿದ್ದಂತೆ ಅನ್ನುತ್ತಾರೆ. ಇಂದು ರಾಜನ ಸ್ಥಾನವನ್ನ ಸರ್ಕಾರ ತೆಗೆದುಕೊಂಡಿದೆ, ಆದರೆ ತನ್ನ ಮಕ್ಕಳ ಈ ರೀತಿಯ ಸಾವುಗಳು ಕೂಡ ರಾಜನಲ್ಲಿ ಆಕ್ರೋಷವನ್ನ ತರಿಸುತ್ತಿಲ್ಲ ಅಂತಾದರೆ ಪ್ರಜೆಗಳು ಯಾರ ಮೊರೆ ಹೋಗಬೇಕು....? ಇಂತಹ ದಾಳಿಗಳಾಗುತ್ತಿದೆ ಎನ್ನುವಾಗ ಇನ್ನೊಂದು ಕಾರಣವಾಗಿ ನಮಗೆ ಕಾಣಸಿಗುವುದು ಉಂಡ ಮನೆಗೆ ದ್ರೋಹ ಬಗೆಯುವ ಒಂದಷ್ಟು ಜನ ಮತಾಂಧರ ದಂಡು. ತಾನು ತಿನ್ನುತ್ತಿರುವುದು , ಕುಡಿಯುತ್ತಿರುವುದು, ಉಸಿರಾಡುತ್ತಿರುವುದೆಲ್ಲ ಈ ದೇಶದ ಕೃಪೆಯಿಂದ ಅನ್ನೊ ಸಾಮಾನ್ಯ ಜ್ಞಾನ ಇರದ ಬುದ್ದಿಗೇಡಿ ಜೀವಿಗಳು. ಮತ್ತು ಅವರನ್ನ ಕದ್ದು ಮುಚ್ಚಿ, ಅಥವಾ ಆರ್ಥಿಕ ಸಹಾಯದ ಮೂಲಕ ಬೆಳೆಸುತ್ತಿರುವ ಧೂರ್ತರು.
ಬಹುಶ ಸಾಮಾನ್ಯ ಜನರಿಗೂ ಇಂದು ಅರ್ಥವಾಗುತ್ತೆ ಭಯೋತ್ಪಾದಕ ಕೃತ್ಯಗಳನ್ನ ಎಸಗುತ್ತಿರುವುದು ಯಾರು ಅಂತ. ಕಾಕತಾಳೀಯವೋ ಎಂಬಂತೆ ಇಂದಿನ ಹೈದರಾಬಾದ್ ಬಾಂಬ್ ಸ್ಫೋಟದ ಹೊಣೆಯನ್ನು ಹೊತ್ತಿರುವುದು ಕೂಡ " ಇಂಡಿಯನ್ ಮುಜಾಹಿದೀನ್ " ಅನ್ನುವ ಮುಸ್ಲಿಂ ಸಂಘಟನೆ. ಹಾಗಂತ ಮುಸ್ಲಿಮರೆಲ್ಲರೂ ಭಯೋತ್ಪಾದಕರು ಎಂದು ನಾನು ಸಾರುತ್ತಿಲ್ಲ. ಕೆಲವು ಜನರ ತಪ್ಪಿಗೆ ಇಡಿಯ ಸಮುದಾಯವನ್ನ ಪೂರ್ತಿಯಾಗಿ ದೂಷಿಸೋದು ಸರಿಯಲ್ಲ ಅನ್ನೋದು ನನ್ನ ಭಾವನೆ. ಆದರೆ ನನ್ನ ಆಕ್ರೋಷ ಇರೋದು ಈ ಸಮುದಾಯ ಇಂಥ ಕೃತ್ಯಗಳಾದಾಗ ತಮ್ಮದೇ ಸಮುದಾಯದ ಎಡವಿದವರ ಬಗೆಗೆ ಜಾಣ ಕುರುಡನ್ನು ಪ್ರದರ್ಶಿಸುತ್ತದಲ್ಲ... ಅದು ಸಿಟ್ಟನ್ನ ತರಿಸುತ್ತದೆ. ತಮ್ಮ ಸಮುದಾಯದ "ಕೆಲವರು" ಎಲ್ಲೋ ಎಡವುತ್ತಿದ್ದಾರೆ ಇದನ್ನ ಸರಿ ಪಡಿಸಿಕೊಳ್ಳಬೇಕು ಅಂತ ಯಾಕವರಿಗೆ ಅನ್ನಿಸುತ್ತಿಲ್ಲ....? ಒಂದಂತೂ ಸತ್ಯ ನಮ್ಮಲ್ಲಿರುವವರ ಸಹಾಯ, ಸಹಕಾರ ಇರದೆ ಹೊರಗಿನವರಿಗೆ ಇಲ್ಲಿ ಬಂದು ಬಾಂಬು ಸಿಡಿಸೋಕೆ ಖಂಡಿತ ಸಾಧ್ಯವಿಲ್ಲ. ಸಾಧ್ಯವಾಗದ್ದು ನಡೆದಿದೆ ಅಂಥಾದಲ್ಲಿ ನಮ್ಮೊಳಗಿರುವ ಕ್ರಿಮಿಗಳನ್ನ ಪತ್ತೆ ಹಚ್ಚುವ ಕೆಲಸ ಮಾಡಬೇಕಲ್ವಾ...
ಸಿಡಿಯುವ ಬಾಂಬು ಯಾವ ಜಾತಿಯನ್ನೂ ಲೆಕ್ಕಿಸುವುದಿಲ್ಲ. ಹತ್ತಿರ ಇದ್ದವರ ನೆತ್ತರ ಸಹಿತ ಪ್ರಾಣವನ್ನ ಕಿತ್ತು ಬಿಡುತ್ತದೆ. ಇಂತಹ ಚಟುವಟಿಕೆಗೆ ಕೆಲವು ವ್ಯಕ್ತಿಗಳ ಸಹಕಾರ ಅವರದೇ ಆಪ್ತರ ಪ್ರಾಣ ತೆಗೆಯುವುದಿಲ್ಲ ಅನ್ನೋದಿಕ್ಕೆ ಏನು ಗ್ಯಾರಂಟಿ ಇದೆ. ಇದರ ಅರಿವು ಆದವರು ಖಂಡಿತ ಇಂತಾದಕ್ಕೆ ಸಹಕರಿಸಲಿಕ್ಕಿಲ್ಲ. ಅಮಾಯಕ ವ್ಯಕ್ತಿಗಳ ನೆತ್ತರನ್ನ ಹೀರೋದು ಎಲ್ಲಿಯ ಧರ್ಮ ಯುದ್ಧ. ಮತ್ತೊಮ್ಮೆ ಇವರುಗಳು ತಮ್ಮ ಧರ್ಮಗ್ರಂಥಗಳನ್ನ ಪರಿಶೀಲಿಸಬೇಕಲ್ವಾ... ಒಂದಷ್ಟು ಜನರ ವಿರೋಧ ಕಟ್ಟಿ ಕೊಂಡರೂ ಪರವಾಗಿಲ್ಲ ಮುಸ್ಲಿಂ ಸಮುದಾಯಕ್ಕಿಂದು ತಾವುಂಡ ಉಪ್ಪಿನ ಋಣವನ್ನ ತೀರಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕವರು ಇನ್ನೂ ಮನಸ್ಸು ಮಾಡಲಿಲ್ಲವೆಂದಾದಲ್ಲಿ ಖಂಡಿತ ಅವರ ಮೇಲೆ ಅನುಮಾನಗಳ ಹುತ್ತ ನಿರಂತರವಾಗಿ ಏರುತ್ತಲೇ ಹೋಗುತ್ತದೆ. ಬರುಬರುತ್ತಾ ಈ ಸಮುದಾಯ ಪ್ರತಿಯೊಬ್ಬ "ಭಾರತೀಯ"ನ ದ್ವೇಷ, ತಾತ್ಸಾರಕ್ಕೊಳಪಡಬೇಕಾಗುತ್ತದೆ. ಬಹುಶ ಈ ಅನುಮಾನಗಳಿಂದಾಗಿ ಅವರ ಬಾಳು ನರಕಮಯವಾದೀತು. ಮುಂದೊದಗಲಿರುವ ಈ ಕಷ್ಟಗಳನ್ನ ಈಗಲೆ ಅರಿತು ಪ್ರಜ್ಞಾವಂತ ಭಾರತೀಯರಾದರೆ ಅದು ಅವರಿಗೇ ಒಳಿತು. ಎಷ್ಟು ಸಮಯ ತಮ್ಮವರ ತಪ್ಪಗಳಿಗೆ ಕುರುಡರಾಗಿರುತ್ತಾರೋ ಅಷ್ಟೇ ಕಷ್ಟಗಳು ಮುಂದೊದಗಲಿದೆ.
ಇನ್ನು ಸರಕಾರ ಕುರಿತು...ಈ ಸರ್ಕಾರ ಪ್ರತಿಯೊಂದು ಹೆಜ್ಜೆಗಳನ್ನಿಡುವಾಗಲೂ ವೋಟ್ ಬ್ಯಾಂಕಿನ ಕುರಿತು ಆಲೋಚಿಸುತ್ತಲೇ ಮುಂದುವರಿಯುತ್ತದೆ. ಇದೆಂಥಾ ರಾಷ್ಟ್ರನಿಷ್ಠೆ... ಅಭಿವೃದ್ಧಿ ಇರದಿರುವಲ್ಲೂ ದೇಶಭಕ್ತಿಗೆ ಕೊರತೆ ಇರುವುದಿಲ್ಲ ಆದರೆ ನಮ್ಮವರೆಂಥಾ ರಾಜಕಾರಣಿಗಳು... ದೇಶಭಕ್ತಿ ಅನ್ನೋದನ್ನ ನಾವು ಅಮೆರಿಕಾದವರಿಂದ ಕಲಿತುಕೊಳ್ಳಬೇಕೇ.... ಅಮೆರಿಕಾದಲ್ಲಿ ಬರಿಯ ಒಂದು ಬಾರಿ ಮಾತ್ರ ದಾಳಿಯಾಗಿದ್ದು. ಮತ್ತೆಂದೂ ಮರುಕಳಿಸದ ರೀತಿಯಲ್ಲಿ ಅಲ್ಲಿನ ಪ್ರತಿಯೊಬ್ಬರೂ ತಮ್ಮ ದೇಶಭಕ್ತಿಯನ್ನ ಪ್ರದರ್ಶಿಸಿದ್ದಾರೆ. ತಮ್ಮ ದೇಶದಲ್ಲಿರದ ವೈರಿಯನ್ನು ಇನ್ನೊಂದು ದೇಶದೊಳಗೆ ಹೊಕ್ಕು ಕೊಂದು ಹೆಣವನ್ನೂ ಹೇಳಹೆಸರಿಲ್ಲದಂತೆ ಮಾಡಿದರಲ್ಲ . ಅದಕ್ಕಿಂತಲೂ ದೊಡ್ದದಾದ ದೇಶಭಕ್ತಿಯ ಉದಾಹರಣೆ ಸಿಕ್ಕೀತೇ...? ರಾಷ್ಟ್ರ ಹಿತಕ್ಕಾಗಿ ಒಂದು ಸಮುದಾಯವನ್ನ ಅನುಮಾನಿಸೋದರಲ್ಲಿ ತಪ್ಪೇನಿದೆ. ಒಂದು ವೇಳೆ ನಿರಪರಾಧಿಗಳು ಅಂತಾದಲ್ಲಿ ಒಳ್ಳೆಯದೇ. ಆದರೆ ಸರ್ಕಾರಕ್ಕೊಂದಿಷ್ಟು ಕಠಿಣ ನಿರ್ಧಾರಗಳನ್ನ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.ಇಲ್ಲವಾದಲ್ಲಿ ಈ ದುಷ್ಕೃತ್ಯಗಳನ್ನ ತಡೆಯೋದಿಕ್ಕಾಗೋದಿಲ್ಲ. ಭಯೋತ್ಪಾದಕನನ್ನ ಬೆಂಬಲಿಸಿ ಮೆರವಣಿಗೆ ಮಾಡಿದವರನ್ನ ಸುಮ್ಮನೆ ಬಿಟ್ಟು ಬಿಡುವ ಮೂರ್ಖತನ ಮಾಡಿದಲ್ಲಿ ಇಂತಹಾ ಘಟನೆಗಳು ಮರುಕಳಿಸದೇ ಇನ್ನೇನಾದೀತು.
ಪ್ರತಿಯೊಂದು ಬಾರಿಯೂ ಇಂತಹಾ ಸ್ಫೋಟಗಳಾದಾಗ ಅಮಾಯಕರೇ ಬಲಿಪಶುಗಳಾಗೋದು. ಒಂದು ವೇಳೆ ಇದೇ ರಾಜಕಾರಣಿಗಳ ಮಕ್ಕಳು, ಆಪ್ತರು ಬಲಿಯಾದರೆ ಅವರು ಸುಮ್ಮನಿರುತ್ತಾರ. ತಮ್ಮವರ ಕುರಿತು ಮಾತ್ರ ಮಮಕಾರ ಉಳಿದವರು ಹಾಳಾಗಿ ಹೋಗಲಿ ಅನ್ನೋ ದ್ವಂದ್ವತೆ ಜನರಿಗೆ ಗೊತ್ತಾಗದೇ ಇರೋದಿಲ್ಲ.. ಅನ್ನೋದು ಇವರಿಗೆ ಗೊತ್ತಾಗೋದು ಯಾವಾಗ...? ಇದಿನ್ನೆಷ್ಟು ಕಾಲ ಮುಂದುವರಿಯಲಿದೆ... ಇಂದು ಹೈದರಾಬಾದಿನ ಅಮಾಯಕರು... ನಾಳೆ ನಾವು ಕೂಡ ಇದಕ್ಕೆ ಹೊರತಲ್ಲ ತಾನೆ. ಇದೇ ರೀತಿ ಮುಂದುವರಿದರೆ ಸರಕಾರಕ್ಕೆ ಮೂರು ಕಾಸಿನ ಬೆಲೆ ಕೊಡದೇ ಜನ ರೊಚ್ಚಿಗೆದ್ದು ಸರ್ಕಾರದ ವಿರುದ್ಧವೇ ಪ್ರಹಾರ ಮಾಡುವ ಕಾಲ ಬಂದೇ ಬಂದೀತು. ಹಾಗಾಗಿ ಎಚ್ಚೆತ್ತುಕೊಳ್ಳುವವರಿಗೆ ಇದು ಸರಿಯಾದ ಸಮಯ. ಇಂತಾದ್ದನ್ನು ಕಂಡು ಸರಿಯಾದ ಕ್ರಮ ಕೈಗೊಳ್ಳದ ಸರ್ಕಾರ ಮತ್ತು ಸಭ್ಯತೆಯ ಮುಖವಾಡ ಧರಿಸಿ ಹಿಂದಿನಿಂದ ಸಹಕಾರ ನೀಡುವ ವ್ಯಕ್ತಿಗಳು... ಇಬ್ಬರೂ ಎಚ್ಚೆತ್ತುಕೊಂದರೆ ಒಳ್ಳೆಯದು. ಜನರ ಸಹನೆಯ ಕಟ್ಟೆಯೊಡೆಯುವ ಕಾಲ ಸನ್ನಿಹಿತವಾಗುತ್ತಿದೆ. ಇನ್ನು ಸುಮ್ಮನಿದ್ದಲ್ಲಿ... ಜನರ ಆಕ್ರೋಶದ ಪ್ರವಾಹದಲ್ಲಿ ಕೊಚ್ಚಿ ಹೋಗುವುದನ್ನ ತಡೆಯೋಕೆ ಯಾರಿಂದಲೂ ಸಾಧ್ಯವಾಗಲಿಕ್ಕಿಲ್ಲ.
ಕೊನೆಯದಾಗಿ ನಿಜವಾದ " ಭಾರತೀಯ " ರಿಗೆ ಒಂದು ಕಿವಿ ಮಾತು. " Wednesday " ಅನ್ನೋ ಸಿನಿಮಾದಲ್ಲಿ ಕಥೆಯ ಪ್ರಮುಖ ಪಾತ್ರವಾದ " ಆಮ್ ಆದ್ಮಿ " ಒಂದು ಮಾತನ್ನಾಡುತ್ತಾನೆ. ನಮ್ಮ ಮನೆಯೊಳಗೆ ಜಿರಲೆಯೊಂದು ಬಂದಿದೆ ಅಂತಾದಲ್ಲಿ ಹಿಡಿದು ಕೊಲ್ಲುವುದು ನಮ್ಮ ಕರ್ತವ್ಯ... ಬಿಟ್ಟರೆ ಮುಂದೆ ನಮಗೇ ಆಪತ್ತು. ಅದರಂತೆಯೇ ನಾವೆಲ್ಲರೂ ಇಂದು ಭಯೋತ್ಪಾದಕರೆಂಬ (ಯಾವುದೇ ಜಾತಿಯವರಾಗಿರಲಿ) ದೇಶದ್ರೋಹಿಗಳೆಂಬ ಕ್ರಿಮಿಗಳನ್ನ ಮಟ್ಟಹಾಕುವಲ್ಲಿ ಕಾರ್ಯತತ್ಪರರಾಗಬೇಕಿದೆ.

No comments:

Post a Comment