Monday 2 November 2015

ಮೋದಿ ಪ್ರಧಾನಿಯಾಗೋದು ಎಷ್ಟು ಮುಖ್ಯ ಅನ್ನೋದಿಕ್ಕೆ ಸಕಾರಣಗಳು



ಹೆಸರಾಂತ ಅಂಕಣಕಾರ " ಎಮ್. ವಿ.ಕಾಮತ್ " ಅವರ " ಮೋದಿಗೆ ಪ್ರಧಾನಿ ಹುದ್ದೆ ತಪ್ಪಿಸಲು ವ್ಯವಸ್ಥಿತ ಬ್ಲ್ಯಾಕ್ ಮೇಲ್..ನಿತೀಶ್ ರಾಜಕೀಯದ ಬಣ್ಣ ಬಯಲಾದೀತೇ..." ಅನ್ನೋ ಆರ್ಟಿಕಲ್ ಇಂದಿನ ಉದಯವಾಣಿಯಲ್ಲಿ ಓದಿದೆ. ನಿಜಕ್ಕೂ ಅಂಕಿ ಅಂಶಗಳ ಮೂಲಕ ನಮ್ಮ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ಮೋದಿಯ ಕೋಮುವಾದಿ... ಅವರ ಆಡಳಿತದಲ್ಲಿ ದಂಗೆಗಳಾಗಿವೆ... ಅತ ಮೌತ್ ಕಾ ಸೌದಾಗರ್ ಅಂತೆಲ್ಲಾ ಬೊಬ್ಬಿಡೋ ಅಂತ ಕಾಂಗ್ರೆಸ್ ಗೆ ತಮ್ಮ "ಕೈ"ಯ ಹುಣ್ಣನ್ನ ತೋರಿಸಿದ್ದಾರೆ. ಬಹುಷ ಅದೆಷ್ಟೋ ಸಮಯದಿಂದ ಹುಡುಕಾಡುತ್ತಿದ್ದ ಕೋಮು ದಂಗೆಗಳ ಕುರಿತ ಅಂಕಿ ಅಂಶಗಳನ್ನ ಇವರ ಲೇಖನದಲ್ಲಿ ಕಂಡಾಗ ನನಗಾದ ಖುಷಿ ಅಷ್ಟಿಷ್ಟಲ್ಲ......ಇಲ್ಲಿದೆ ನೋಡಿ ಈ ಅಂಕಿ ಅಂಶಗಳು...
1.1964ರಲ್ಲಿ ಬಿಹಾರದ ಜಮ್ಶೆಡ್ ಪುರದಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಸಂಖ್ಯೆ 2000 ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಕೆ.ಬಿ.ಸಹಾಯ್ (ಕಾಂಗ್ರೆಸ್)
2. 1969ರಲ್ಲಿ ಅಹಮದಾಬಾದ್ ನಲ್ಲಿನ ಗಲಭೆಯಲ್ಲಿನ ಸತ್ತವರ ಸಂಖ್ಯೆ 2000. ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಹಿತೇಂದ್ರ ದೇಸಾಯಿ (ಕಾಂಗ್ರೆಸ್)
3. 1980ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಸಂಖ್ಯೆ 200. ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ ನ ವಿ.ಪಿ.ಸಿಂಗ್
4. 1983 ರಲ್ಲಿ ಅಸ್ಸಾಂನಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಸಂಖ್ಯೆ 2,200. ಆಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ ನ ಹಿತೇಶ್ವರ ಸೈಕಿಯಾ.
5. 1984ರ ಸಿಖ್ ದಂಗೆಯಲ್ಲಿನ ಪ್ರತಿಯೊಂದು ಸಾವು ನೋವಿಗೂ ಹೊಣೆ ಬರಿಯ ಕಾಂಗ್ರೆಸಿಗರು.
6. 1992-93 ರ ಮುಂಬಯಿ ಹತ್ಯೆಗಳಾದ ಅಲ್ಲಿ ಮುಖ್ಯಮಂತ್ರಿಗಳಾಗಿದ್ದವರು ಕಾಂಗ್ರೆಸ್ಸಿನ ಸುಧಾಕರ್ ರಾವ್ ನಾಯಕ್
ಇಷ್ಟೊಂದು ಜನ ಕೈ ಪಡೆಯ ಮುಖ್ಯಮಂತ್ರಿಗಳ ಕಾಲದಲ್ಲಿ ಇಷ್ಟೊಂದು ಸಾವು ನೋವುಗಳಾಗಿದ್ದರು ಮೀಡಿಯಾ ಕಂಗಳಿಗೆ ಬರಿಯ ಮೋದಿ ಮಾತ್ರ ಕಾಣಸಿಗುತ್ತಾರೆ ಅನ್ನೋದು ವಿಷಾದನೀಯ ಅಲ್ವಾ. ಪದೇ ಪದೇ ಮೋದಿಯವರನ್ನ ಗೋಳು ಹೊಯ್ದುಕೊಂಡ ಮೀಡಿಯಾಗಳು ಈ ಮುಖ್ಯಮಂತ್ರಿಗಳನ್ನು ಮತ್ತು ಅವರ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ನೆನಪು ನಿಮಗಿದೆಯೇ...?
ಬರಿಯ ದಂಗೆಗಳ ಕುರಿತು ಮಾತ್ರವಲ್ಲ ಅಭಿವೃದ್ದಿಯ ಅಂಕಿ ಅಂಶಗಳನ್ನ ಬಿಹಾರದೊಂದಿಗೆ ಈ ರೀತಿ ತುಲನೆ ಮಾಡುತ್ತಾ ನಿತೀಶ್ ಕುಮಾರ್ ಅವರ ಪ್ರಧಾನಿ ಪಟ್ಟದ ಮಮಕಾರವನ್ನ ಬಯಲು ಮಾಡಿದ್ದಾರೆ.
1. 2001ರಲ್ಲಿ ಗುಜರಾತ್ ನಲ್ಲಿದ್ದ 17,227ರಷ್ಟಿದ್ದ ವ್ಯಕ್ತಿಗತ ಆದಾಯ ಇಂದು 57,508 ಅದೇ ಬಿಹಾರದಲ್ಲಿ 7,914ರಿಂದ 15,268. ಏರಿಕೆಯ ವ್ಯತ್ಯಾಸ ಅಲ್ಲಿ 40,281 ಆದರೆ ಇಲ್ಲಿ ಬರಿಯ 7,354
2. 2001ರಲ್ಲಿ ಗುಜರಾತ್ ನ ಬಡತನದ ಪ್ರಮಾಣ ಶೇ. 23 ಈಗ ಶೇ. 16.8 ಅದೇ ಬಿಹಾರದಲ್ಲಿ 2005 ರಲ್ಲಿ ಬಡತನದ ಪ್ರಮಾಣ ಶೇ.54.4 ಈಗ ಶೇ.53.1
3. 2001ರಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣ ಶೇ. 37.22 ಈಗ ಶೇ. 7.9 ಅದೇ ಬಿಹಾರದಲ್ಲಿ ಶೇ.74.69 ರಿಂದ ಶೇ. 55.14ಕ್ಕಷ್ಟೇ ಇಳಿದಿದ್ದು.
ಬಹುಷ ಇನ್ನಾದರೂ ಜನರಿಗೆ ಅರ್ಥವಾದೀತು ಅಂದುಕೊಂಡಿದ್ದೇನೆ. ಭಾರತಕ್ಕೆ ಮೋದಿ ಪ್ರಧಾನಿಯಾಗುವುದು ಎಷ್ಟು ಮುಖ್ಯ ಎಂದು ತಮ್ಮ ಲೇಖನದ ಮುಖಾಂತರ ಜನರಿಗೆ ತಿಳಿಹೇಳಿದ ಹಿರಿಯ ಅಂಕಣಕಾರ ಎಮ್. ವಿ.ಕಾಮತ್ ಅವರಿಗೆ ನಿಜಕ್ಕೂ ನಾನು ಆಭಾರಿ...

No comments:

Post a Comment