Monday 2 November 2015

ನಾನು ಮತ್ತು ನನ್ನ ನಿಲುವು....



ಗೆಳೆಯರೊಬ್ಬರು ನನ್ನ ಕುರಿತಾಗಿ ಈ ರೀತಿ ಕಮೆಂಟು ಮಾಡಿದ್ದಾರೆ...ನನ್ನ ಸ್ಟೇಟಸ್ ಗಳು ಅನ್ಯ ಕೋಮಿನವರನ್ನು ದ್ವೇಷಿಸುವಂಥಾದ್ದಂತೆ...ನನಗೆ ಅಲ್ಪಸಂಖ್ಯಾತರಿಂದ ಏನೋ ತೊಂದರೆ ಆದವರಂತೆ ವರ್ತಿಸುತ್ತಿದ್ದೇನಂತೆ... ನನ್ನ ತರ್ಕಗಳು ಅಥವಾ ವಾದಗಳು ಸರಿಯಿಲ್ಲವಂತೆ... ಈ ರೀತಿಯ ಮಾತುಗಳು ಬಂದಿದ್ದರಿಂದ ನನ್ನ ನಿಲುವುಗಳನ್ನ ಸ್ಪಷ್ಟ ಪಡಿಸುವ ಪ್ರಯತ್ನ ಇದು...
ಗೆಳೆಯರೇ.. ನನಗೆ ಯಾರ ಮೇಲೂ ದ್ವೇಷವಿಲ್ಲ.....ನನಗಿರೋದು ಸಿಟ್ಟು ಮಾತ್ರ... ನನ್ನ ದೇಶಕ್ಕೆ ಮತ್ತು ನನ್ನ ಧರ್ಮಕ್ಕೆ ಅಹಿತಕರವಾಗಿ ನಡೆದುಕೊಳ್ಳುವ ಪ್ರತಿಯೊಬ್ಬರ ಮೇಲೂ ಸಿಟ್ಟಿದೆ. ಯಾವುದೇ ವಿಷಯ ನನ್ನ ದೇಶ ಅಥವಾ ಇಲ್ಲಿನ ಮೂಲ ಸಂಸ್ಕೃತಿಗೆ ಧಕ್ಕೆ ತರುವಂತಿದ್ದರೆ ನನಗೆ ಸಿಟ್ಟು ಬರುತ್ತೆ. ಆ ಸಿಟ್ಟನ್ನು ನಾನು ನನ್ನ ಸ್ಟೇಟಸ್ ಮೂಲಕ ವಿರೋಧಿಸುತ್ತೇನೆ..ಈ ನನ್ನ ಸಿಟ್ಟು ವಿಷಯಾಧಾರಿತವೇ ಹೊರತು ವ್ಯಕ್ತಿ ಅಥವಾ ಮತ ಆಧಾರಿತ ಅಲ್ಲ... ಉದಾಹರಣೆಗೆ ಮೊನ್ನೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ ಬಂದಾಗ ಹಿಂದೂ ಆದ ಯೋಗೇಶ್ ಮಾಸ್ಟರ್ ಮತ್ತು ಅವನನ್ನು ಬೆಂಬಲಿಸಿದ ಗಿರೀಶ್ ಕಾರ್ನಾಡ್ ಇವರನ್ನು ವಿರೋಧಿಸಿದೆ... ನಾನು ಕಟ್ಟಾ ಹಿಂದೂವಾದಿ ಆಗಿದಿದ್ದರೆ ಹಿಂದೂಗಳನ್ನು ವಿರೋಧಿಸುತ್ತಿರಲಿಲ್ಲ ಅಲ್ವಾ... ಆದರೂ ನಾನು ವಿರೋಧಿಸಿದೆ ಅಂತಂದರೆ ಅದು ವಿಷಯ ಆಧಾರಿತ...
ದೆಹಲಿಯಲ್ಲಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕಿಳಿದಾಗ ದೆಹಲಿಯ ಮಸೀದಿಯ ಇಮಾಮರೊಬ್ಬರು ಮುಸ್ಲಿಮರಿಗೆ ಕರೆ ಕೊಟ್ಟರು.... " ಆ ಚಳುವಳಿಯಲ್ಲಿ ಭಾಗವಹಿಸಬೇಡಿ ... ಯಾಕೆಂದರೆ ಅಲ್ಲಿ ಭಾರತ್ ಮಾತಾ ಕೀ ಜಯ್ ಅನ್ನಬೇಕಾಗುತ್ತದೆ " ಅಂತ ಇದು ನನ್ನ ದೇಶಕ್ಕೆ ಮಾಡಿದ ಅಪಚಾರ ಅಂತನಿಸಿತು... ಖಂಡಿಸಿದೆ... ನನ್ನ ವಿರೋಧ ಆತನ ನಡವಳಿಕೆಗೆ. ವೈಯಕ್ತಿಕವಾಗಿ ಆತ ನನಗೇನೂ ಮಾಡಲಿಲ್ಲ ಆದರೆ ನನ್ನ ದೇಶಕ್ಕೆ ಆದ ಅಪಮಾನವನ್ನು ಖಂಡಿಸಿದ್ದುದರಲ್ಲಿ ಏನು ತಪ್ಪಿದೆ...?? ಅದೇ ಪಾಕಿಸ್ತಾನದ ಪ್ರಧಾನಿ ಭಾರತದ ಮಸೀದಿಯೊಂದಕ್ಕೆ ಬಂದಾಗ ಅಲ್ಲಿನ ಇಮಾಮ್ ರೊಬ್ಬರು ದೇಶದ ಗೌರವಕ್ಕೆ ಮೊದಲ ಆದ್ಯತೆ ಕೊಟ್ಟರು ಅದನ್ನು ಮನಪೂರ್ವಕವಾಗಿ ಹೊಗಳಿದ್ದೆ... ಆ ಇಮಾಮ್ ರಿಗೆ ಈಗಲೂ ನನ್ನಲ್ಲಿ ಗೌರವವಿದೆ ಕಾರಣ ಆ ವ್ಯಕ್ತಿ ಈ ದೇಶದ ಹಿತಕ್ಕೆ ಪೂರಕವಾಗಿ ನಡಕೊಂಡಿದ್ದರು. ನಾನು ಮುಸ್ಲಿಮರನ್ನು ದ್ವೇಷಿಸುತ್ತಿದ್ದರೆ ನಾನೇಕೆ ಅವರನ್ನು ಹೊಗಳುತ್ತಿದ್ದೆ.....?
ಹಾಗಾಗಿ ನಾನೇದರೂ ಹೇಳುತ್ತಿದ್ದರೆ ಅದು ವಿಷಯಾಧಾರಿತ... ಇನ್ನು ಮತಾಂತರದ ಬಗ್ಗೆ ನಾನೇದರೂ ಹೇಳುತ್ತಿದ್ದೇನೆ ಅಂತಂದರೆ ಯಾರು ಮತಾಂತರಕ್ಕೆ ಬೆಂಬಲ ನೀಡುತ್ತಾರೋ ಅವರ ಕುರಿತಾಗಿಯೇ ಹೊರತು ಎಲ್ಲರ ಕುರಿತಾಗಿ ಅಲ್ಲ... ಈ ದೇಶ ಇನ್ನುಳಿದ ಧರ್ಮಗಳಿಗೆ ಆಶ್ರಯ ನೀಡಿದೆ ಅಂತಾದರೆ ಅದಕ್ಕೆ ಕಾರಣ ಇಲ್ಲಿನ ಮೂಲ ಧರ್ಮದ ಹೃದಯ ವೈಶಾಲ್ಯತೆ... ಯಾರಾದರೂ ಸ್ವಇಚ್ಛೆಯಿಂದ ಇನ್ನೊಂದು ಧರ್ಮವನ್ನು ಸ್ವೀಕಾರ ಮಾಡುತ್ತಾರೆ ಅಂತಾದರೆ ಒಳ್ಳೆಯದೇ ನನದೇನೂ ಅಭ್ಯಂತರವಿಲ್ಲ. ಆದರೆ ಆಮಿಷಗಳನೊಡ್ಡಿ ಮತಾಂತರ ಮಾಡುವುದು ಖಂಡನೀಯವೇ... ಇದನ್ನ ನಮ್ಮ ಸಂವಿಧಾನವೇ ಹೇಳುತ್ತೆ. ಹಾಗಿದ್ದರೆ ಅದೇ ಮಾತನ್ನು ನಾನು ಹೇಳಿದರೆ ಅದು ಹೇಗೆ ದ್ವೇಷ ಕಾರುವ ಮಾತುಗಳಾಗುತ್ತದೆ. ನನ್ನ ಮಾತುಗಳು ಯಾರು ಈ ರೀತಿ ಮಾಡುತ್ತಾರೋ ಅವರಿಗೇ ಹೊರತು ಆ ಧರ್ಮದಲ್ಲಿರುವ ಪ್ರತಿಯೊಬ್ಬರಿಗೂ ಅಲ್ಲ....
ನನಗೂ ಬೇಕಾದಷ್ಟು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಿತ್ರರಿದ್ದಾರೆ... ಅವರೊಂದಿಗೆ ನಾನು ಯಾವತ್ತಿಗೂ ದ್ವೇಷ ಕಾರುವ ರೀತಿ ನಡೆದುಕೊಂಡಿಲ್ಲ... ಕಾರಣ ಅವರೊಂದಿಗೆ ನನ್ನದು ಸಹಜ ಮಿತ್ರತ್ವ.... ಬಹುಶ ಅಭಿಪ್ರಾಯ ಭೇದಗಳಿರಬಹುದು. ಆದರೆ ಅದರಿಂದ ನಮ್ಮ ಗೆಳೆತನ ಹಾಳಾಗಿಲ್ಲ. ನನಗೆ ತಿಳಿದಂತೆ ನಾನು ಇದುವರೆಗೂ ಯಾವುದೋ ಧರ್ಮವನ್ನು ದೂರಿ ಏನನ್ನೂ ಬರೆದಿಲ್ಲ... ನನ್ನ ಧರ್ಮದ ಶ್ರೇಷ್ಠತೆಯನ್ನು ಹೇಳಿದೆ ಅಂತಾದರೆ ಅದು ಉಳಿದ ಧರ್ಮವನ್ನು ದೂರಿದಂತಲ್ಲವಲ್ಲ. ಇಷ್ಟಾಗಿಯೂ ನಾನು ಕೋಮುವಾದಿ, ಹಿಂಸೆಗೆ ಪ್ರಚೋದಿಸುವವ ಅಂತನಿಸಿದರೆ ನಾನೇನು ಮಾಡಲು ಸಾಧ್ಯ ಹೇಳಿ...
ಈಗಿನ ಪೊಳ್ಳು ಜಾತ್ಯಾತೀತತೆ ನನ್ನದಲ್ಲ... ತಪ್ಪು ಮಾಡಿದವನ ಮತ ಯಾವುದೆನುವ ಗೋಜಿಗೆ ನಾನು ಹೋಗುವುದಿಲ್ಲ . ತಪ್ಪು ಯಾರೇ ಮಾಡಿರಲಿ ಅವರನ್ನ ವಿರೋದಿಸುತ್ತೇನೆ... ಅಫ್ಜಲ್ ಗುರು ಮತ್ತು ಕಸಬ್ ತನ್ನ ಮತದವ ಎಂದು ಅಲ್ಲೆಲ್ಲೋ ಅವನ ಪರವಾಗಿ ಮಾತನಾಡಿದ ಕೆಲವು ಮುಸ್ಲಿಂ ಯುವಕರಂತೆ ನಾನು ಮತಾಂಧನಲ್ಲ. ನನ್ನ ನಿಷ್ಠೆ ಈ ದೇಶಕ್ಕೆ ಅದನ್ನು ಹೇಳಿಕೊಟ್ಟಿದ್ದು ನನ್ನ ಧರ್ಮ ಹಾಗಾಗಿ ಅದು ಒಂದಕ್ಕೊಂದು ಪೂರಕ ಎಂದುಕೊಂಡಿದ್ದೇನೆ, ಹಾಗಾಗಿ ನಾನು ನನ್ನ ದೇಶವನ್ನೂ ಧರ್ಮವನ್ನೂ ಎರಡನ್ನೂ ಗೌರವಿಸುತ್ತೇನೆ. ಇದನ್ನೇ ನೀವು ಅನ್ಯ ಧರ್ಮ ದ್ವೇಷ ಅಂದರೆ ಹೇಗೆ....? ನನ್ನ ಈ ನಿಲುವು ತಪ್ಪು ಅನ್ನುವುದಾದರೆ ಅದನ್ನ ನಿರೂಪಿಸಿ ನಾನು ಒಪ್ಪಿಕೊಳ್ಳುತ್ತೇನೆ... ಆದರೆ ಅದು ನನ್ನ ದೇಶದ ಹಿತಕ್ಕೆ ಪೂರಕವಾಗಿರಬೇಕು... ಜೈ ಹಿಂದ್

No comments:

Post a Comment