Monday 2 November 2015

ಈ ಬಾರಿಯ ಗುರಿ, ಬರೀ ಮೋದಿ ಮೋದಿ ಮೋದಿ



ಮೋದಿಯವರ ಕುರಿತಾದ ಚರ್ಚೆ ನದಡಿಯುತಿತ್ತು... ಹಾಗೇ ಮಾತನಾಡುತ್ತಿರುವಾಗ ಮಿತ್ರರೊಬ್ಬರು ಮೋದಿಯವರೇನೋ ಒಳ್ಳೆಯವರೇ.. ಆದರೆ ನಾವು, ನಮ್ಮಲ್ಲಿ ನಿಲ್ಲೋ ಲೋಕಸಭಾ ಅಭ್ಯರ್ಥಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತೆ.... ಮೋದಿಗೋಸ್ಕರ ಯಾರು ಯಾರಿಗೋ ವೋಟ್ ಹಾಕೋಗಾಗೋಲ್ಲ ಅಂತಿದ್ದರು... ಒಂದು ರೀತಿಯಲ್ಲಿ ನೋಡಿದರೆ ಸರಿಯೇ... ಆದರೆ ನನ್ನ ಪ್ರಕಾರ ಈ ಬಾರಿ ನಾವು ನಮ್ಮ ನ್ಯಾಯಯುತವಾದ ಸ್ವಾರ್ಥವನ್ನ ಬದಿಗಿಟ್ಟು ಆಲೋಚಿಸಬೇಕಾಗಿದೆ. ಇಲ್ಲಿ ನ್ಯಾಯಯುತವಾದ ಸ್ವಾರ್ಥ ಅಂದಿದ್ದು ಯಾಕಂದರೆ, ಮತ ಹಾಕಿದಾತ ತನ್ನ ಪ್ರದೇಶದಲ್ಲಿ ಅಥವ ತನಗೆ ಅನುಕೂಲಕರವಾದ ಕೆಲಸ ಮಾಡಬೇಕು ಅನ್ನುವಂತಾದ್ದರಲ್ಲಿ ತಪ್ಪೇನು ಇಲ್ಲ... ಇದು ಪ್ರತಿಯೊಬ್ಬರ ಹಕ್ಕು ಕೂಡ. ಹಾಗಂತ ನನಗೆ ಅನುಕೂಲಕರವಾಗಿ ಅಥವಾ ನನ್ನ ಪ್ರದೇಶಕ್ಕೆ ಅನುಕೂಲಕರವಾಗಿಲ್ಲದ ಬಿಜೆಪಿ ಸದಸ್ಯನಿಗೆ ನಾನು ವೋಟ್ ಹಾಕಲಾರೆ. ನಾನು ಇನ್ನಿತರ ಪಕ್ಷದ ಸದಸ್ಯನಿಗೆ ವೋಟ್ ಹಾಕುತ್ತೇನೆ ಅನ್ನುವ ನಿರ್ಣಯ ಮಾಡುವ ಮೊದಲೊಮ್ಮೆ ನನ್ನೆರಡು ಮಾತುಗಳನ್ನ ಕೇಳಿ.
ಉದಾಹರಣೆಗಾಗಿ ಒಂದು ಮನೆಯ ಮುಖ್ಯ ನಾಲ್ಕು ಗೋಡೆಗಳು ಬೀಳುತ್ತಿದೆ ಅಂತಿಟ್ಟುಕೊಳ್ಳಿ... ಆ ಸಮಯದಲ್ಲಿ ನಮ್ಮ ಮುಖ್ಯ ಕೆಲಸ ಆ ಮನೆಯನ್ನ ಉಳಿಸುವುದು... ಆದರೆ ಅದಕ್ಕೆ ಬದಲಾಗಿ ಇದರಿಂದ ನನ್ನ ಕೋಣೆಯ ಬಲ್ಬ್ ಸರಿಯಾಗಿ ಉರಿಯುವುದೇ ಅಥವಾ ನನ್ನ ರೂಮಿನ ಕಸ ಹೋಗುವುದಿಲ್ಲ ಅನ್ನುವ ಯೋಚನೆ ಮಾಡುತ್ತಾ ಕುಳಿತರೆ... ನಾವಿರುವ ಕೋಣೆಯ ಮನೆಯೇ ಇಲ್ಲವಾಗುತ್ತದಲ್ಲವೇ...? ಅದೇ ರೀತಿ ಭಾರತ ದೇಶ ಇಂದು ಅಂತಹುದೇ ವಿಷಮ ಪರಿಸ್ಥಿತಿಯಲ್ಲಿದೆ. ರಕ್ಷಣಾ ನೀತಿ ಸರಿಯಿಲ್ಲ.. ವಿದೇಶಿ ನೀತಿ ಸರಿಯಿಲ್ಲ... ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನೆರೆಹೊರೆಯ ರಾಷ್ಟ್ರಗಳ ಕಿರುಕುಳಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಿಂಜರಿಯುವಂಥಾ ಪರಿಸ್ಥಿತಿ... ಇವೆಲ್ಲವೂ ಕೂಡ ಸರಿಯಾಗಬೇಕು ಅಂತಿದ್ದರೆ ನಮ್ಮ ಮತದಾನವೇ ಪ್ರಮುಖ ಪಾತ್ರ ವಹಿಸುತ್ತದೆ.
ಈಗ ದೇಶದ ರಕ್ಷಣೆಗೆ ಸರ್ಕಾರ ಒತ್ತು ಕೊಟ್ಟಿತು ಅಂತಿಟ್ಟುಕೊಳ್ಳಿ...ಎಷ್ಟೋ ಕೋಟಿ ಹಣ ನಿಗದಿ ಪಡಿಸಿತು ಅಥವಾ ಒಳ್ಳೆಯ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನ ಖರೀದಿಸಿತು ಅಂತಾನೆ ಇರಲಿ.. ಇದರಿಂದ ನನಗೇನಾದರೂ ನೇರ ಲಾಭ ಆಗಲಿದೆಯೇ..? ಈ ಪ್ರಶ್ನೆಗೆ ಬಹುಶ ಉತ್ತರ ಇಲ್ಲ ಅಂತಲೇ ಇರುತ್ತೆ... ಹಾಗಿದ್ದರೆ ಇದಕ್ಕೆ ನನ್ನ ಸಮ್ಮತಿ ಇಲ್ಲವೇ...? ಅಥವಾ ನಮ್ಮ ದೇಶದ ಸಾಲ ತೀರಿಸಿತು ಸರ್ಕಾರ ಅಂತಿಟ್ಟುಕೊಳ್ಳಿ ಇದರಿಂದಲೂ ನನಗೇನೂ ನೇರವಾದ ಲಾಭವಿಲ್ಲ ... ಹಾಗಾದರೆ ದೇಶದ ಸಾಲ ಹಾಗೆಯೇ ಇರಲಾ....? ಪ್ರತಿಯೊಂದು ಸುಧಾರಣೆಯ ಕಾರ್ಯಕ್ರಮಗಳು ನಮಗೆ ನೇರವಾಗಿ ಲಾಭದಾಯಕವಾಗಿರೋಲ್ಲ ಆದರೆ ಅದು ನಮ್ಮ ದೇಶವನ್ನ ಸಧೃಡಗೊಳಿಸುತ್ತದೆ.
ಈ ರೀತಿ ನಾವು ವಿಶಾಲ ಮನೋಭಾವದಲ್ಲಿ.. ದೇಶದ ಹಿತದೃಷ್ಟಿಯಿಂದ ಯೋಚಿಸಿದೆವು ಅಂತಿಟ್ಟುಕೊಳ್ಳಿ... ಆಗ ನಮಗೆ ಕಾಣಿಸೋದು ಒಂದೇ ಆಶಾಕಿರಣ.... ಶ್ರೀ ನರೇಂದ್ರ ಮೋದಿ... ಅವರು ಭಾರತವನ್ನ ಈ ಸಂಕಟದಿಂದ ಹೊರತರಬಲ್ಲರು ಅನ್ನೋದು ನನ್ನೊಬ್ಬನದಲ್ಲ ಹಲವು ಜನರ ನಂಬಿಕೆ. ಅವರ ಬರಿಯ ಮಾತುಗಳಿಂದ ಆಕರ್ಷಿತರಾಗಿ ಈ ನಂಬಿಕೆ ಬೆಳೆದಿಲ್ಲ ... ಹತ್ತು ವರ್ಷಗಳಿಂದ ತನ್ನನ್ನು ತಾನು ಸಾಬೀತು ಪಡಿಸಿ ತೋರಿಸುತ್ತಿದ್ದಾರೆ. ಅವರ ನಿರಂತರ ಶ್ರಮದ ಫಲವಾಗಿಯೇ ಗುಜರಾತ್ ಇಂದು ಜಗತ್ತಿನ ಕಣ್ಣನ್ನೇ ಕುಕ್ಕುತ್ತಿದೆ.... ಜಗತ್ತಿನ ರಾಜಕಾರಣಿಗಳೆಲ್ಲ ಮೋದಿಯ ಗುಣಗಾನ ಮಾಡುತ್ತಿದ್ದಾರೆ... ಹಾಗಾಗಿ ಈ ನಂಬಿಕೆ. ಅವರ ಯೋಚನಾ ವಿಧಾನ ಮತ್ತು ಅದನ್ನ ಕಾರ್ಯಗತಗೊಳಿಸುವ ರೀತಿ ನಿಜಕ್ಕೂ ಸದ್ಯದ ಮಟ್ಟಿನ ದೇಶದ ಆವಶ್ಯಕತೆ ಅಂತನಿಸುತ್ತದೆ.
ದೇಶವನ್ನ ಮೋದಿ ಕೈಯಲ್ಲಿಟ್ಟು ನೋಡಬೇಕು ಅಥವಾ ಅವರ ಸಾಧನೆಯ ಆಧಾರದಲ್ಲಿ ಅವರಿಗೊಂದು ಅವಕಾಶಕೊಡಬೇಕು ಅಂತಾದರೆ ನಾವು ಈ ಬಾರಿ ನಮ್ಮ ಸ್ಥಾನೀಯ ಅಭ್ಯರ್ಥಿಯ ಕುರಿತು ಹೆಚ್ಚು ಗಮನ ಕೊಡಬಾರದು. ಈ ಬಾರಿ ನನ್ನ ಮತ ದೇಶಕ್ಕಾಗಿ ಅಂತಿಟ್ಟುಕೊಳ್ಳಿ , ಯಾಕೆಂದರೆ ಒಬ್ಬ ಉತ್ತಮ ನಾಯಕ ಮಾತ್ರ ಇಡಿಯ ತಂಡವನ್ನ ಸಮರ್ಥವಾಗಿ ನಿಭಾಯಿಸಬಲ್ಲ. ಹಾಗಿರುವಾಗ ಈ ದೇಶದ ಬಗೆಗೆ ಹಲವು ಕನಸುಗಳನ್ನಿಟ್ಟುಕೊಂಡಿರುವಾತನಿಗೆ ನಾವು ನಮ್ಮ ಬೆಂಬಲ ನೀಡಬೇಕಷ್ಟೇ... ಖಂಡಿತ ಇದು ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ನಮಗೇ ಲಾಭದಾಯಕವಾಗುತ್ತದೆ ಅನ್ನುವುದರಲ್ಲಿ ಸಂಶಯವಿಲ್ಲ. ಈ ದೇಶದಲ್ಲಿ ಸರಿಯಾದ ಅರ್ಥಿಕ ನೀತಿಯಿಂದ ಹಣದುಬ್ಬರ ಕಮ್ಮಿಯಾಗುತ್ತದೆ ಅಂದರೆ ನಮ್ಮ ದಿನನಿತ್ಯದ ವೆಚ್ಚಗಳು ಕಮ್ಮಿಯಾಗುವುದಿಲ್ಲವೇ... ಇದು ನಮಗೆ ಲಾಭದಾಯಕ ತಾನೇ... ಹೆಚ್ಚು ಸುರಕ್ಷತೆಯಿಂದ ಹೆಚ್ಚು ಸ್ವಾಭಿಮಾನದಿಂದ ಬದುಕು ಕನಸು ನನಸಾಗಬೇಕಾದರೆ ನಾವು ಮೋದಿಗಾಗಿ ಮತ ಚಲಾಯಿಸಬೇಕು...
ಹಾಗಾದರೆ ನಿಮ್ಮ ಕ್ಷೇತ್ರದ ಅಭ್ಯರ್ಥಿ ಎಂತವನಿದ್ದರೂ ಮತ ಹಾಕಬೇಕೆ....? ಡಾ. ಸ್ವಾಮಿಯವರ ಮಾತೊಂದು ನೆನಪಿಗೆ ಬರುತ್ತಿದೆ... ಈ ಬಾರಿ ನಿಮ್ಮ ಕ್ಷೇತ್ರದಲ್ಲಿ ಒಂದು ಕತ್ತೆ ನಿಂತರೂ ಮೋದಿಗಾಗಿ ಮತ ನೀಡಿ.... ಯಾಕೆಂದರೆ ಮೋದಿ ಗೆ ಇಂಥ ಕತ್ತೆಗಳನ್ನ ಹದ್ದು ಬಸ್ತಿನಲ್ಲಿಡುವುದು ಗೊತ್ತಿದೆ ಅಂತ. ಇರಲಿ ಇದನ್ನ ಬದಿಗಿಡೋಣ ನನ್ನ ಪ್ರಕಾರ ಬಿಜೆಪಿಯ ಅಭ್ಯರ್ಥಿ ಅಷ್ಟು ಕಳಪೆ ಅಥವಾ ಕೆಟ್ಟವ ಅಂತಾದರೆ ನೀವು ತಟಸ್ಥರಾಗಿಬಿಡಿ ಅಂದರೆ ಇನ್ನಿತರ ಪಕ್ಷಕ್ಕೆ ಮತವನ್ನೀಯಬೇಡಿ... ಕಾರಣ ಇದು ಮತ್ತೆ ದೇಶವನ್ನ ಅತಂತ್ರವಾಗಿಸುತ್ತದೆ... ಅತಂತ್ರ ಸರ್ಕಾರದ ಪ್ರಧಾನಿ ಮೋದಿಯಾದರೂ ಅವರಿಗೆ ಆಗ ಸರ್ಕಾರ ನಡೆಸುವುದು ಕಷ್ಟವಾದೀತು. ಅದರಲ್ಲೂ ಕಾಂಗ್ರೆಸ್ ಅಭ್ಯರ್ತಿಗಳಿಗಂತೂ ಮತ ಹಾಕಲೇಬೇಡಿ... ಕಾರಣ ಆ ಪಕ್ಷ ದೇಶಕ್ಕೆ ಮಾರಕ. ಅದರಲ್ಲಿನ ಅಭ್ಯರ್ಥಿ ಒಳ್ಳೆಯವನಾಗಿದ್ದರೂ ನನ್ನ ಪ್ರಕಾರ ಆತ ಮತ ಪಡೆಯಲು ಅನರ್ಹ... ಯಾಕೆಂದರೆ ತನ್ನ ಪಕ್ಷ ದೇಶದ್ರೋಹದ ಕೆಲಸ ಮಾಡುತ್ತಿದ್ದರೂ ಅದನ್ನ ನೋಡಿಕೊಂಡು ಸುಮ್ಮನಿರುತ್ತಾನಲ್ಲ ಆತ ಹೇಗೆ ಉತ್ತಮನಾದಾನು...? ದೋಷ ತಟ್ಟಬೇಕಾದರೆ ತಾನೇ ತಪ್ಪು ಮಾಡಬೇಕಾಗಿಲ್ಲ, ತಪ್ಪು ಮಾಡುತ್ತಿರುವವರಿಗೆ ಸಹಕರಿಸುವುದೂ ಕೂಡ ತಪ್ಪೇ ತಾನೆ.
ಹಾಗಾಗಿ ಒಂದು ಕ್ಷಣ ನಾವು ನನ್ನ ಊರಿಗೇನು ಲಾಭ... ನನಗೇನು ಲಾಭ ಅನ್ನುವ ಆಲೋಚನೆಗಳಿಂದ ಹೊರಬಂದು ಈ ದೇಶಕ್ಕೆ ಹೊಸ ಚೈತನ್ಯ ತುಂಬುವಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಬೇಕಾಗಿದೆ....ದೇಶದ ಹಿತದ ಕುರಿತು ನಿಮ್ಮಷ್ಟಕ್ಕೆ ಯೋಚಿಸಿ... ನಿಮಗೆ ದೊರೆಯುವ ವಿಷಯಗಳಿಂದ ಮೋದಿಯ ತುಲನೆ ಮಾಡಿ... ನನಗೇನು...? ಅನ್ನುವುದನ್ನ ಬದಿಗಿಟ್ಟು ದೇಶದ ಹಿತದೃಷ್ಟಿಯಿಂದ ಒಂದು ನಿರ್ಣಯ ತೆಗೆದುಕೊಳ್ಳಿ... ಈ ಮಣ್ಣಿನ ಋಣ ತೀರಿಸಲು ತುಡಿಯುತ್ತಿರುವ ನರೇಂದ್ರ ಮೋದಿ ಅನ್ನೋ ತಾಯಿ ಭಾರತಿಯ ಆರಾಧಕನಿಗೆ ತಾಯಿ ಭಾರತಿಯ ಪೂಜೆ ಮಾಡುವ ಅವಕಾಶ ಮಾಡಿಕೊಡಿ... ಈ ಪೂಜೆಯಲ್ಲಿ ಶಂಖ ಜಾಗಟೆಯ ಸೇವೆ ನಮ್ಮದಾಗಲಿ...
ಬೋಲೋ ಭಾರತ್ ಮಾತಾ ಕೀ ಜೈ...

No comments:

Post a Comment