Saturday 16 July 2016

ಎನ್.ಡಿ.ಟಿ.ವಿ ಯ ರವೀಶ್ ಕುಮಾರ್ ಅವರಿಗೊಂದಿಷ್ಟು ಪ್ರಶ್ನೆಗಳು.... ಭಾಗ ೧



ಜೆ.ಎನ್.ಯು ವಿವಾದ ತಾರಕಕ್ಕೇರಿದೆ. ಯಾವುದೇ ವಿವಾದವಾಗಲಿ ಸಾಮಾನ್ಯವಾಗಿ ದೊಡ್ದ ಪ್ರಚಾರ ಪಡೆಯೋದು ಮಾಧ್ಯಮಗಳಿಂದಲೇ.... " ಬ್ರೇಕಿಂಗ್ ನ್ಯೂಸ್ " ನ ಆಸೆ ಬುರುಕರಿಂದ ಸಣ್ಣ ಸುದ್ದಿಯೂ ಕೆಲವೊಮ್ಮೆ ದೊಡ್ಡದಾಗುತ್ತದೆ. ಇನ್ನು ಕೆಲವೊಮ್ಮೆ ದೊಡ್ಡ ಸುದ್ದಿಯೂ ಟುಸ್ಸಾಗುತ್ತದೆ. ಆದರೆ ಈ ಬಾರಿ ವಿಚಿತ್ರ ಅಂತಂದರೆ ಮಾಧ್ಯಮದಲ್ಲೇ ಎರಡು ಬಣವಾಗಿರೋದು... ನಿಜಕ್ಕೂ ನೋಡಿದರೆ ಇಂಥಾ ಪರಿಸ್ಥಿತಿಯಲ್ಲಿ ಮಾಧ್ಯಮ ಎರಡಾಗಬಾರದಿತ್ತು, ಪಕ್ಷಗಳೂ ಎರಡಾಗಬಾರದಿತ್ತು ಯಾಕಂದರೆ ಇದು ದೇಶನಿಷ್ಠೆಯ ಪ್ರಶ್ನೆ, ದೇಶಪ್ರೇಮದ ಪ್ರಶ್ನೆ ಆದರೂ ಈ ದೇಶದ ದೌರ್ಭಾಗ್ಯ " ಹಾ ನಾವು ದೇಶದ್ರೋಹಿಗಳೇ " ಅಂತ ಎದೆ ತಟ್ಟಿ ಹೇಳೋರು ಕಾಣಿಸಿಕೊಳ್ಳುತ್ತಿದ್ದಾರೆ. ದೇಶದ್ರೋಹದ ಸಂಚು ಮಾಡಿದವರ ಬೆನ್ನ ಹಿಂದೆ ನಿಂತು ರಕ್ಷಣೆಗೆ ಕಟಿಬದ್ಧರಾಗಿದ್ದಾರೆ.
ಹೀಗೆ ಹಲವು ಸುದ್ದಿ ಮಾಧ್ಯಮದ ಲಿಂಕ್ ಗಳನ್ನ ನೋಡುತ್ತಿದ್ದಾಗ ಎನ್.ಡಿ.ಟಿ.ವಿಯ ರವೀಶ್ ಅನ್ನೋರ ಸುದ್ದಿ ವಿಶ್ಲೇಷಣೆ ಸಿಕ್ಕಿತು. ಸರಿ ಸುಮಾರು ನಲವತ್ತು ನಿಮಿಷದ ವಿಡೀಯೋ.... ಇಡಿಯ ಕಾರ್ಯಕ್ರಮವೇ ಹಲವು ಗೊಂದಲಗಳಿಂದ ಕೂಡಿತ್ತು.... ಅದರಲ್ಲಿ ಆತ ಎತ್ತಿದ ಮೂಲ ಅಂಶ ತುಂಬಾ ಚೆನ್ನಾಗಿತ್ತು... ಮಾಧ್ಯಮಗಳು ಘಟನೆಯ ತೀರ್ಪುರಾಗಬಹುದಾ...? ಅಂತ. ನಿಜ ಮಾಧ್ಯಮ ಸತ್ಯವನ್ನ ತೋರಿಸುವವರಾಗಬೇಕೇ ಹೊರತು ತೀರ್ಪು ನೀಡುವವರಾಗಬಾರದು. ಆದರೆ ಕಾರ್ಯಕ್ರಮದ ಉದ್ದೇಶ ಅದನ್ನೇ ಸಾಬೀತು ಪಡಿಸುವುದಾಗಿದ್ದರೆ ಚೆನ್ನಾಗಿತ್ತು ಆದರೆ ಆತನ ಉದ್ದೇಶ ಅದಾಗಿರಲಿಲ್ಲ.... ಅವರ ಉದ್ದೇಶ.... ಇನ್ಯಾವುದೋ ಚಾನಲ್ ನ ಸುದ್ದಿ ವಿಶ್ಲೇಷಕ ಜನಪ್ರಿಯತೆಯನ್ನು ಗಳಿಸುತ್ತಿದ್ದಾನಲ್ಲ ಅದನ್ನ ತಡೆಯೋದು ಹೇಗೆ ಅನ್ನುವ ಅಸೂಯೆ ಅಷ್ಟೇ ಆಗಿತ್ತು ಅನ್ನುವುದಕ್ಕೆ ಅವರದೇ ವೀಡಿಯೋದಲ್ಲಿನ ದ್ವಂದ್ವಗಳೇ ಸಾಕ್ಷಿ. ಹೇಗೆ ಅನ್ನುವುದನ್ನ ಸ್ವಲ್ಪ ವಿಶ್ಲೇಷಿಸುವ ಮನಸ್ಸಾಯಿತು. ಆತ ಕೇಳಿದ ಪ್ರಶ್ನೆಗಳನ್ನೇ ಒಂದೊಂದಾಗಿ ವಿಶ್ಲೇಷಿಸುತ್ತಾ ಹೋಗೋಣ...
೧.ಅವರ ಕಾರ್ಯಕ್ರಮ ಶುರುವಾಗೋದೇ " ಟಿವಿ ಬೀಮಾರ್ ಹೋಗಯಾ ಹೈ... ಟಿವಿ ಕೋ ಟಿಬಿ ಹೋಗಯಾ ಹೈ " ಅನ್ನುವ ಮಾತಿನಿಂದ ಮಾಧ್ಯಮಕ್ಕೆ ಯಾವುದನ್ನ ತೋರಿಸಬೇಕು ಯಾವುದನ್ನು ತೋರಿಸಬಾರದು ಅನ್ನುವುದರ ಪರಿವೆಯಿಲ್ಲ ಅದಕ್ಕಾಗಿ ನಾವೀಗ ಪರದೆಯಲ್ಲಿ ಏನನ್ನು ತೋರಿಸದೆ ಕತ್ತಲಾಗಿಸುತ್ತೇವೆ. ನೀವು ಬರಿಯ ಮಾತುಗಳನ್ನಷ್ಟೇ ಕೇಳಿ... ಅನ್ನುತ್ತಾ ಪರದೆಯನ್ನ ಕಪ್ಪಾಗಾಗಿಸುತ್ತಾರೆ. ಇಡಿಯ ಕಾರ್ಯಕ್ರಮದಲ್ಲಿ " ಚೀರಾಟ " ಅನ್ನೋ ಪದವನ್ನ ಹಲವಾರು ಬಾರಿ ಪ್ರಯೋಗಿಸಿದ್ದಾರೆ. ಅದರ ಅರ್ಥ ಯಾರೋ ಒಬ್ಬ ವ್ಯಕ್ತಿಯನ್ನ ಗುರಿಯನ್ನಾಗಿಸಿ ಈ ಕಾರ್ಯಕ್ರಮ ಮಾಡಿದೆಯೆಂದೇ ತಾನೇ.... ಒಂದೆರಡು ಬಾರಿ ಈ ಪದ ಪ್ರಯೋಗ ಆಗಿದ್ದರೆ ನಾನು ಅನುಮಾನಿಸುತ್ತಿರಲಿಲ್ಲ ಆದರೆ ಇಡಿಯ ಕಾರ್ಯಕ್ರಮ ನೋಡಿದಾಗ ಚೀಕ್ ಚಿಲ್ಲಾಹಟ್ ಶಬ್ದಗಳು ಬೇಕಾಬಿಟ್ಟಿ ಬಳಕೆಯಾಗಿದೆ...ಇಲ್ಲಿ ಆಂಕರ್ ಗಳೇ ಜಡ್ಜ್ ಗಳಾಗುತ್ತಿದ್ದಾರೆ ಅನ್ನುತ್ತಾರೆ... ನಿಜ ಆಗಬಾರದು, ಆದರೆ ನೋಡುಗರೇನೂ ಯಾವುದೇ ಆಂಕರ್ ನ ಚರ್ಚೆಯನ್ನ ತೀರ್ಪನ್ನ ಜಡ್ಜ್ ನ ತೀರ್ಪು ಅನ್ನುವಂತೆ ನೋಡುವುದಿಲ್ಲವಲ್ಲ ಹಾಗಿದ್ದರೆ ಇವರು ಯಾರ ಮೇಲೆ ಕೋಪವನ್ನ ವ್ಯಕ್ತ ಪಡಿಸುತ್ತಿದ್ದಾರೆ...?
೨. ಆಂಕರ್ ಗಳ ಕೆಲಸ ಜನರಿಗೆ ಹೊಸ ಹೊಸ ಯೋಚನೆಯನ್ನ ತೋರಿಸುವುದು ಅಷ್ಟೇ ವಿನಹಾ ತೀರ್ಪು ಕೊಡುವುದಲ್ಲ ಅನ್ನುತ್ತಾರೆ. ಸರ್ಕಾರವನ್ನ ಪ್ರಶ್ನಿಸುವುದಷ್ಟೇ ನಮ್ಮ ಕೆಲಸ ಅನ್ನುತ್ತಾರೆ. ಆದರೆ ವಿಪರ್ಯಾಸ ನೋಡಿ ಯಾವ ಪ್ರಕರಣಕ್ಕೆ ಯಾವ ಸರ್ಕಾರವನ್ನ ಪ್ರಶ್ನಿಸಬೇಕು ಅನ್ನುವುದು ಇವರಿಗೆ ಗೊತ್ತೇ ಇಲ್ಲ.... ಹಿಂದೆ ಗುಜರಾತ್ ನಲ್ಲಿ ಗಲಭೆಯಾದಾಗ ರಾಜ್ಯ ಸರ್ಕಾರವನ್ನ ಪ್ರಶ್ನಿಸಿದರೆ ದಾದ್ರಿ ಘಟನೆಗೆ ಕೇಂದ್ರವನ್ನ ಪ್ರಶ್ನಿಸುತ್ತದೆ.... ಅಂದರೆ ಇವರ ಪ್ರಶ್ನೆಗೆ ನೈತಿಕತೆ ಇಲ್ಲ ಅನ್ನೋದು ಸಿದ್ಧವಾಯಿತಲ್ಲ. ತನ್ನ ಚಾನಲ್ ನಲ್ಲಿ ಇಂತಹಾ ನಿಯಮವನ್ನಿಟ್ಟುಕೊಂಡವನಾಗಿದ್ದಿದ್ದರೆ ಇನ್ನೊಂದು ಸುದ್ದಿ ವಿಶ್ಲೇಷಕನ ನಡೆಯನ್ನ ಪ್ರಶ್ನಿಸಬಹುದಿತ್ತು ಆದರೆ ತಾನೇ ಬೇಕಾದಷ್ಟು ಬಾರಿ ಇಂತಹ ಕೆಲಸ ಮಾಡಿದ್ದವರು ಈಗ ಮಾತ್ರ ಈ ರೀತಿ ವಿಶ್ಲೇಷಿಸುವುದಕ್ಕೆ ಕಾರಣವೇನು...?
೩. ಈಗಿನ ಆಂಕರ್ ಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಬೊಬ್ಬೆ ಹೊಡೆಯುವುದರಿಂದ ಪರಿಹಾರ ಸಾಧ್ಯವಾಗಿದ್ದರೆ ಪ್ರಧಾನ ಮಂತ್ರಿ ಮತ್ತು ಸೇನಾಧ್ಯಕ್ಷರು ನಿತ್ಯವೂ ಬೊಬ್ಬೆ ಹೊಡೆಯಬೇಕಿತ್ತು. ಅನ್ನುತ್ತಾರೆ. ಇಲ್ಲಿ " ಬೊಬ್ಬೆ " ಯ ಕುರಿತೇ ಇವರ ಅಸಹನೆ ತೋರ್ಪಡಿಸುತ್ತಾರೆಯೇ ವಿನಹ ಆ ಬೊಬ್ಬೆಯಲ್ಲಿರುವ ಸತ್ಯವನ್ನ ನೋಡುವ ಮನಸ್ಸು ಮಾಡುವುದಿಲ್ಲ. ನಿಜ ಯಾವುದೇ ವಿಚಾರ ಹೇಳುವಾಗ ಬೊಬ್ಬೆ ಹೊಡೆಯಬೇಕಾಗಿಲ್ಲ ಹಾಗಂತ ಬೊಬ್ಬೆ ಹೊಡೆದು ಹೇಳಿದ್ದೆಲ್ಲ ಸುಳ್ಳು, ಸೌಮ್ಯವಾಗಿ ಹೇಳಿದ್ದು ಮಾತ್ರ ನಿಜ ಅನ್ನಲಾಗುತ್ತದೆಯೇ.... ಈ ಸತ್ಯವನ್ನು ಮುಚ್ಚಿಟ್ಟು ಬೊಬ್ಬೆಯ ಕುರಿತು ಇವರೇಕೆ ಅಸಹಿಷ್ಣುಗಳಾಗಬೇಕು..... ?
೪. ಮಾಧ್ಯಮಗಳ ಆಂಕರ್ ಗಳು ಪಕ್ಷದ ವಕ್ತಾರರು ಹೆದರಿಸೋ ಕೆಲಸ ಮಾಡುತ್ತಿದ್ದಾರೆ, ಗುಂಡು ಹಾರಿಸೋ ಮಾತಾಡುತ್ತಿದ್ದಾರೆ.... ಯಾಕೆಂದರೆ ಹೋರಾಟಗಾರರು ಹೆದರಲಿ ಎಂದು ಹೀಗೆ ಮಾಡುತ್ತಿದ್ದಾರೆ ಅನ್ನುತ್ತಾರೆ. ನಿಜ ದೇಶದ್ರೋಹಿಗಳಿಗೆ " ಗೋಲಿ ಮಾರೋ ಸಾಲೋಂಕೋ..." ಅನ್ನುವ ಮಾತನ್ನ ಹೇಳಿದ್ದು ನಾನು ಕೇಳಿದ್ದೇನೆ. ಇದನ್ನ ತಪ್ಪು ಅಂತ ಬಿಂಬಿಸುವವರು ಆವತ್ತು ಓವೈಸಿ ಅನ್ನುವಾತ ಹದಿನೈದು ನಿಮಿಷ ಪೋಲಿಸರು ಸುಮ್ಮನಿದ್ದರೆ ಇಡಿಯ ಹಿಂದೂ ಸಮಾಜವನ್ನೇ ನಿರ್ನಾಮ ಮಾಡುತ್ತೇನೆ ಅಂದಾಗ ಯಾಕೆ ಸುಮ್ಮನಿದ್ದರು...? ಆಗಲೂ ಇಂತಹ " ಬೊಬ್ಬೆ "ಯ ಕುರಿತು ಸ್ಕ್ರೀನ್ ಕತ್ತಲಾಗಿಸಿ ಕಾರ್ಯಕ್ರಮ ಮಾಡಲಿಲ್ಲವೇಕೆ...? ಈಗ ಗೋಲಿ ಮಾರೋ ಅಂತ ಹೇಳಿದವರು ದೇಶದ್ರೋಹಿಗಳನ್ನು ಮಾತ್ರ ಗುರಿಯನ್ನಾಗಿಸಿದ್ದರು ಆದರೆ ಓವೈಸಿ ಇಡಿಯ ಹಿಂದೂ ಸಮಾಜವನ್ನೇ ನಿರ್ನಾಮ ಮಾಡುತ್ತೇನೆ ಅಂದಿದ್ದನಲ್ಲ. ಆವಾಗ ಮೌನ ಈಗ ಅಸಹನೆ ಇದು ಏನನ್ನ ತೋರಿಸುತ್ತದೆ...? ಅಷ್ಟಕ್ಕೂ ದೇಶದ್ರೋಹಿಗಳಿಗೆ ಗುಂಡು ಹೊಡೆಯುವ ಮಾತು ತಾನೇ ಆಡಿದ್ದು ಇದರಿಂದ ಇವರೇಕೆ ಆತಂಕಿತರಾಗುತ್ತಾರೆ...?
೫. ಸೈನಿಕರ ಬಲಿದಾನವನ್ನ ರಾಜಕೀಯಗೊಳಿಸುತ್ತಿದ್ದಾರೆ. ಆದರೆ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಕುಳಿತ ಸೈನಿಕರ ಕುರಿತು ಮೌನವಾಗುತ್ತಾರೆ. ಅನ್ನುತ್ತಾ ಕೇಂದ್ರ ಸರ್ಕಾರವನ್ನ ಟೀಕಿಸುತ್ತಾರೆ. ಸೈನಿಕರ ಬಲಿದಾನವನ್ನ ರಾಜಕೀಯಗೊಳಿಸಿದ್ದು ಎಲ್ಲೂ ಇಲ್ಲ ಪ್ರತಿಭಟನೆಗೆ ಕುಳಿತವರ ಜೊತೆ ಮಾತುಕತೆ ನಡೆಸಿ ಅವರ ಬೇಡಿಕೆಯನ್ನ ಒಪ್ಪಿದ ಮೇಲೆ ಈಗ ಪ್ರಶ್ನೆ ಎತ್ತುವುದು ಎಷ್ಟು ಸರಿ. ಇರಲಿ ಹೈದಾರಾಬಾದಿನಲ್ಲಿ ಒಬ್ಬಾತ ಕೆಳವರ್ಗದ ಹುಡುಗ ಆತ್ಮಹತ್ಯೆ ಮಾಡುತ್ತಾನೆ. ಅದನ್ನ ಕಾಂಗ್ರೆಸ್ ನಾಯಕರು ಎಡಪಂಥೀಯರು ರಾಜಕೀಯ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಾರೆ ಅದೇ ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಅನ್ನುವಾತ ಕೇರಳದಲ್ಲೊಬ್ಬ ಬಲಪಂಥೀಯ ವಿಚಾರಧಾರೆಯವನ ಹತ್ಯೆಯಾಗುತ್ತದೆ ಅದರೆ ಆಗ ಬಾರದ ಕಾಂಗ್ರೆಸ್ ನಾಯಕರನ್ನ ಎಡಪಂಥೀಯ ನಾಯಕರನ್ನ ರವೀಶ್ ಅವರು ಪ್ರಶ್ನಿಸುವುದಿಲ್ಲ. ಇದೇ ಕಾರ್ಯಕ್ರಮದಲ್ಲಿ ಜೆ.ಎನ್.ಯು ಘಟನೆಯನ್ನ ಪಕ್ಷದ ದೃಷ್ಟಿಯಿಂದ ನೋಡಬೇಡಿ ಅನ್ನುವ ರವೀಶ್ ತಾವು ಮಾತ್ರ ಟೀಕೆ ಸದಾ ಕೇಂದ್ರದ ಮೇಲಿರುವಂತೆ ಮಾತಾಡುತ್ತಾರಲ್ಲ. ಇವರಿಗೆ ಪ್ರಶ್ನೆ ಎತ್ತಲು ಅದೆಂಥಾ ನೈತಿಕತೆಯಿದೆ...?
ಮುಂದುವರೆಯುತ್ತದೆ...

No comments:

Post a Comment