Thursday, 22 October 2015

ಸರ್ಟಿಫಿಕೇಟು



ಭಾರತದಲ್ಲಿಡೀ ಈಗ ವಿದ್ಯೆಯ ಕುರಿತಾಗಿ ಚರ್ಚೆ ನಡೀತಾ ಇದೆ. ನಾವೆಲ್ಲ ಆಂಗ್ಲರು ಮಾಡಿದ ಸಂಚಿಗೆ ಬಲಿಯಾಗಿದ್ದೇವೆ ಅನ್ನೋದಂತೂ ಸ್ಪಷ್ಟ. ಎಲ್ಲರಿಗೂ ಸರ್ಟಿಫಿಕೇಟಿನದೇ ಹುಚ್ಚು... ಇರಲಿ ಬಿಡಿ ಇದಕ್ಕೆ ಸಂಬಂಧಿಸಿದಂತೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ಹಾಗೆ ಸಣ್ಣ ಕಥೆ ಇದೆ.... ಹೆಚ್ಚಾಗಿ ನಾನು ಹೇಳಿಕೊಳ್ಳುತ್ತಾ ಇರುತ್ತೇನೆ.... ಒಮ್ಮೆ ಓದಿ
ಜಪಾನ್ ದೇಶದಲ್ಲಿ ಅತ್ಯಂತ ದೊಡ್ದ ಸಾಬೂನು ತಯಾರಿಸೋ ಕಂಪನಿ ಇತ್ತಂತೆ... ವಿಶ್ವ ಪ್ರಸಿದ್ಧ ಬ್ರಾಂಡ್... ಆದರೆ ಒಮ್ಮೆ ಅದೇನೋ ಎಡವಟ್ಟಾಗಿ ಎರಡು ಖಾಲಿ ಪೊಟ್ಟಣಗಳು ಮಾರುಕಟ್ಟೆಗೆ ಹೋಯಿತು... ಒಳಗೆ ಸಾಬೂನು ಇರಲೇ ಇಲ್ಲ. ಅದು ಹೇಗೋ ವಾಹಿನಿಯವರಿಗೆ ಗೊತ್ತಾಗಿ... ಎಲ್ಲಾ ಕಡೆ ತೋರಿಸಿಯೇ ಬಿಟ್ಟರು... ಕಂಪೆನಿಗೋ ಬಹಳಾನೇ ಮುಜುಗರ... ದೊಡ್ಡ ದೊಡ್ಡ ಅಧಿಕಾರಿಗಳ ಸಭೆ ಸೇರಿತು.. ಮ್ಯಾನೇಜಿಂಗ್ ಡೈರೆಕ್ಟರ್ ಸಿಕ್ಕಾಪಟ್ಟೆ ಕೋಪಗೊಂಡು ಇಂಜಿನಿಯರುಗಳಿಗೆಲ್ಲಾ ಹೇಳಿದರು... " ಅದೇನು ಮಾಡುತ್ತೀರೋ ಗೊತ್ತಿಲ್ಲ... ಅದೆಷ್ಟೇ ಖರ್ಚಾದರೂ ಪರವಾಗಿಲ್ಲ ಇನ್ನೊಮ್ಮೆ ಈ ಥರ ಆಗಬಾರದು ಪರಿಹಾರ ಹುಡುಕಿ " ಅಂತ. ಈ ಇಂಜಿನಿಯರುಗಳು ( ಸರ್ಟಿಫಿಕೇಟ್ ಪಡೆದುಕೊಂಡವರು ) ಎಲ್ಲಾ ಯೋಜನೆ ತಯಾರಿಸಿದರು... ಪ್ಯಾಕಿಂಗ್ ಗೆ ಬರೋ ಸಮಯದಲ್ಲಿ ಅಲ್ಲೊಂದು ತೂಕ ನೋಡೋ ಯಂತ್ರ ಇಡಬೇಕು, ಒಂದು ವೇಳೆ ತೂಕ ಇರದ ಪಕ್ಷದಲ್ಲಿ ಅದು ಇನ್ನೊಂದು ಕಡೆಗೂ... ತೂಕ ಸಹಿತ ಸಾಬೂನು ಮುಂದಿನ ಹಂತಕ್ಕೂ.. ಹೋಗುವ ಹಾಗೆ ಒಂದು ಕನ್ವೇಯರ್ ರಚನೆ ಮಾಡತೊಡಗಿದರು... ಬಹು ದೊಡ್ಡ ಯೋಜನೆ ಕೋಟಿಗಟ್ಟಲೆ ಹಣ ಬೇಕಾಗುತ್ತಿತ್ತು... ಇದು ಇನ್ನೇನು ಕಾರ್ಯರೂಪಕ್ಕೆ ಬರುವುದರಲ್ಲೇ ಇತ್ತು .... ಈ ನಡುವೆ ಅಲ್ಲಿ ಪ್ಯಾಕಿಂಗ್ ಮಾಡೋ " ಕಲಿಯದ " ಸಾಮಾನ್ಯ ಕೆಲಸಗಾರ ಒಬ್ಬ ... ಹಳೆಯ ಕನ್ವೇಯರ್ ನ ಹತ್ತಿರ ಒಂದು ದೊಡ್ಡ ಫ್ಯಾನ್ ಇರಿಸಿಬಿಟ್ಟ.... ಈ ಜೋರಾದ ಗಾಳಿಗೆ ಖಾಲಿ ಡಬ್ಬಗಳೆಲ್ಲಾ ಹಾರಿಹೋಗುತ್ತಿತ್ತು... ಅದೇ ಸಾಬೂನು ಇರುವಂಥಾದ್ದು ಮಾತ್ರ ಮುಂದಿನ ಹಂತಕ್ಕೆ ಹೋಗುತ್ತಿತ್ತು...
ವಾಸ್ತವದಲ್ಲಿ ಇಡಿಯ ಕಂಪೆನಿಯ ಇಂಜಿನಿಯರುಗಳು ತಲೆಖರ್ಚು ಮಾಡಿ ಕೋಟಿ ಹಣ ಹಾಳು ಮಾಡೋಕೆ ಯೋಜನೆ ಹಾಕಿದ್ರೋ ಆ ಸಮಸ್ಯೆಯನ್ನ ಒಬ್ಬ ಸಾಮಾನ್ಯ ಕೆಲಸದವ ಯಾವುದೇ ಖರ್ಚು ಇಲ್ಲದೆ ಪರಿಹರಿಸಿಬಿಟ್ಟಿದ್ದ. ನಿಮ್ಮ ಜೀವನದಲ್ಲಿ ನಿಮ್ಮ ಬುದ್ಧಿಮಟ್ಟಕ್ಕೂ ಈ ಸರ್ಟಿಫಿಕೇಟಿಗೂ ಏನೇನೂ ಸಂಬಂಧವಿಲ್ಲ.. ಇದನ್ನ ಅರಿತವನೇ ಜಾಣ...
ಬಹುಶ ಈಗ ನಿಮಗೆ ಅರ್ಥವಾಗಿರಬಹುದು ಈ ಕಥೆ ಏನು ಹೇಳುತ್ತೆ ಅಂತ. ಇದೊಂದು ಪಾಠವಾಗಬೇಕು ಭಾರತೀಯರಿಗೆ. ಸರ್ಟಿಫಿಕೇಟೇ ಜೀವನ ಅಲ್ಲ... ನಿಮ್ಮ ಮಕ್ಕಳನ್ನ ಜೀವನದಲ್ಲಿ ಯೋಗ್ಯರಾಗುವಂತೆ ನೋಡಿಕೊಳ್ಳಿ... ಅದೇ ಅವನ ಭವ್ಯಭವಿಷ್ಯವನ್ನ ರೂಪಿಸೋದು... ಈ ಹಾಳು ಸರ್ಟಿಫಿಕೇಟಿನಿಂದ ಉದ್ಯೋಗ ಸಿಗಬಹುದೇ ವಿನಹ ಭವ್ಯ ಭವಿಷ್ಯದ ಗ್ಯಾರಂಟಿ ಇಲ್ಲ.

No comments:

Post a Comment