ಬೆಂಗಳೂರಿನ ಇಡಿಯ ಮಹಿಳಾ ಸಮಾಜವೇ ಬೀದಿಗಿಳಿದಿತ್ತು... ಅದಕ್ಕೆ ಕಾರಣವೂ ಅಷ್ಟೇ ಪ್ರಬಲವಾದದ್ದು... ಶ್ರೀಮಂತ ಕುಟುಂಬದ ಒಬ್ಬಾಕೆ ಹೆಣ್ಣು ಮಗಳು ತಡರಾತ್ರಿ ಪಾರ್ಟಿ ಮುಗಿಸಿ ಬರುವಾಗ ಒಂದಿಬ್ಬರು ಹುಡುಗರು ಬಲಾತ್ಕರಿಸಿಬಿಟ್ಟಿದ್ದರು... ಹೇಳಿ ಕೇಳಿ ಆ ಶ್ರೀಮಂತ ಹುಡುಗಿಯ ತಾಯಿ ಬೆಂಗಳೂರಿನಲ್ಲೇ ಪ್ರಸಿದ್ಧವಾದ ಮಹಿಳಾ ಸಂಘದ... ಮಹಾ ಪೋಷಕಿ... ಆ ಮಹಿಳಾ ಸಂಘಕ್ಕೆ ಋಣಭಾರ ತೀರಿಸಲು ಒಳ್ಳೇ ಅವಕಾಶ... ಹಾಗಾಗಿ ಮಹಿಳಾ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಬಹಳ ಮುತುವರ್ಜಿಯಿಂದ ಈ ಹೋರಾಟವನ್ನು ಮುನ್ನಡೆಸುತ್ತಿದ್ದಳು... ಅದೇನು ಛಲ... ಸಾಕ್ಷಾತ್ ಭದ್ರಕಾಳಿಯೇ ಮೈಯಲ್ಲಿ ಬಂದಂತೆ.... " ವೀ ವಾಂಟ್ ಜಸ್ಟಿಸ್...ವೀ ವಾಂಟ್ ಜಸ್ಟಿಸ್..." ಅನ್ನೋ ಕೂಗು ಇನ್ನೇನು ಮುಗಿಲನ್ನ ಸೀಳಿ ಬಿಡುವುದರಲ್ಲಿತ್ತು... ಹೋರಾಟದ ಕಾವು ಪೋಲೀಸ್ ಇಲಾಖೆಗೆ ತಟ್ಟದೇ ಬಿಟ್ಟಿರಲಿಲ್ಲ... ಗೃಹಮಂತ್ರಿಗಳು ಆ ಸ್ಥಳಕ್ಕೆ ಭೇಟಿ ಕೊಟ್ಟಾಗ ಶ್ರೀಮತಿ ಅದ್ಯಾವ ರೀತಿ ರೋಪು ಹಾಕಿದಳೆಂದರೆ ಅದರ ನೇರ ಪರಿಣಾಮವಾಗಿದ್ದು ಪೋಲೀಸ್ ಇಲಾಖೆಯ ಮೇಲೆ...ಹಿರಿಯ ಅಧಿಕಾರಿಗಳು ಹೇಳೇ ಬಿಟ್ಟರು " ಅದೇನ್ ಮಾಡುತ್ತೀರೋ ಗೊತ್ತಿಲ್ಲ.... ಆ ರೇಪಿಸ್ಟ್ ಗಳು ಅರೆಸ್ಟ್ ಆಗಬೇಕು...ವಿತಿನ್ ಟ್ವೆಂಟಿಫೋರ್ ಹವರ್ಸ್..." ಕೂಡಲೇ ವಿಶೇಷ ತಂಡ ರಚನೆಯಾಗಿ ತನ್ನ ಜಾಲ ಬೀಸಿಯಾಗಿತ್ತು.... ಇತ್ತ ಸೂರ್ಯಾಸ್ತವಾಗುತ್ತಿದ್ದಂತೆ ಎಲ್ಲಾ ಹೋರಾಟಗಾರರೂ ತಮ್ಮ ತಮ್ಮ ಮನೆಯತ್ತ ಹೊರಡತೊಡಗಿದರು... ಶ್ರೀಮತಿಯೂ... ತನ್ನ ನೇತೃತ್ವದ ಹೋರಾಟಕ್ಕೆ ಸಹಕರಿಸಿದ ಮಹಿಳೆಯರನ್ನೆಲ್ಲರನ್ನೂ ಅಭಿನಂದಿಸಿ ಕಳುಹಿಸತೊಡಗಿದ್ದಳು.... ಮಾತನಾಡಲು ಆಗುತ್ತಿರಲಿಲ್ಲ..... ಸ್ವರವೆಲ್ಲಾ ಬಿದ್ದು ಹೋಗುವುದರಲ್ಲಿತ್ತು... ಆದರೂ ಉತ್ಸಾಹ ಒಂದಿಷ್ಟು ಕಡಿಮೆಯಾಗಿರಲಿಲ್ಲ.... ಗಂಟೆ ಓಡುತಿತ್ತು... ಶ್ರೀಮತಿಯೂ ಮನೆಯತ್ತ ಹೊರಟೇ ಬಿಟ್ಟಳು... ಮನೆಗೆ ಬಂದವಳೇ ತನ್ನ ಬ್ಯಾಗನ್ನ ಬದಿಗಿರಿಸಿ ಹಾಲ್ ನಲ್ಲಿದ್ದ ಮೆತ್ತನೆಯ ಸೋಫಾದ ಮೇಲೆ ದೊಪ್ಪನೆ ಬಿದ್ದು ಕೊಂಡು ಬಿಟ್ಟಳು...." ಉಫ್... ಸಾಕಪ್ಪಾ ಸಾಕು... ಸೀತಕ್ಕಾ ಒಂದು ಬಿಸಿ ಬಿಸಿ ಕಾಫಿ ಮಾಡಿಕೊಂಡು ಬನ್ನಿ..." ಅಂತ ತನ್ನ ಮನೆ ಕೆಲಸದಾಕೆಗೆ ಹೇಳಿ ಟಿವಿ ಆನ್ ಮಾಡಿದಳು.... ಅದಾಗಲೇ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಅಬ್ಬರಿಸತೊಡಗಿತ್ತು.... " ನಗರದಲ್ಲಿ ನಡೆದ ಬಲಾತ್ಕಾರದ ಆರೋಪಿಗಳ ಬಂಧನ... ಪೋಲೀಸರ ಅದ್ಭುತ ಕಾರ್ರ್ಯಾಚಾರಣೆ...." ಶ್ರೀಮತಿಯ ಮುಖದಲ್ಲಿ ಸಣ್ಣ ವಿಜಯದ ನಗು.... ತನ್ನ ಹೋರಾಟಕ್ಕೆ ಇಷ್ಟು ಶೀಘ್ರವಾಗಿ ಸಫಲತೆ ಸಿಕ್ಕೀತು ಅಂತ ಅವಳು ಯೋಚಿಸಿರಲಿಲ್ಲ... ಈ ಹೋರಾಟದ ಮುಂಚೂಣಿಯಲ್ಲಿದ್ದಾಗ ವಿರೋಧ ಪಕ್ಷದ ನಾಯಕರೊಬ್ಬರು ಅಬಿನಂದಿಸಿ ಹೋಗಿದ್ದನ್ನ ನೆನೆಸಿ ತನಗೇನಾದರೂ ರಾಜಕೀಯ ಲಾಭವಾದೀತಾ ಅಂತ ಮನಸಿನಲ್ಲಿಯೇ ಲೆಕ್ಕಾಚಾರ ಹಾಕುತ್ತಿರುವಾಗಲೇ ಅವಳ ಫೋನ್ ರಿಂಗಣಿಸಿತು... ತನ್ನ ಬ್ಯಾಗನ್ನ ತಡಕಾಡಿ ಮೊಬೈಲ್ ತೆಗೆದುಕೊಳ್ಳುವಷ್ಟರಲ್ಲಿ ರಿಂಗ್ ಕಟ್ ಆಗಿತ್ತು... ತನ್ನ ಏಕ ಮಾತ್ರ ಮುದ್ದಿನ ಪುತ್ರ ವಿಕ್ರಮ್ ನ ಕರೆ.... ತಾನೇ ವಾಪಾಸು ಕರೆ ಮಾಡಿ.... ಆತ ರಿಸೀವ್ ಮಾಡಿದ ಕೂಡಲೇ ..... " ಎಲ್ಲಿದಿಯೋ.... ನಿನ್ನೆಯಿಂದ ಮನೆಗೇ ಬಂದಿಲ್ಲ.... ಪಾರ್ಟಿ ಇನ್ನೂ ಮುಗೀಲಿಲ್ವಾ.... " ಅಂತ ಮೆಲ್ಲಗೆ ಗದರಿದಳು.... ಆದರೆ ವಿಕ್ರಮನ ಸ್ವರ ಕ್ಷೀಣಿಸಿತ್ತು.... ಆತನ ಮಾತುಗಳನ್ನ ಕೇಳಿದವಳೇ ಶ್ರೀಮತಿ ಕುಸಿದುಹೋದಳು...ಅದೇ ಸಮಯಕ್ಕೆ ಪೋಲೀಸ್ ಜೀಪಿನಿಂದ ಸ್ಟೇಶನ್ ಗೆ ಆರೋಪಿಗಳನ್ನು ಮುಖ ಪೂರ್ತಿ ಮುಚ್ಚಿ ಕೊಂಡೊಯ್ಯುವ ದೃಶ್ಯ ವನ್ನ ಮತ್ತೆ ಮತ್ತೆ ತೋರಿಸುತ್ತಿದ್ದುದು ಆಕೆಗೆ ಕಾಣಿಸಿತು.... ಹೌದು ಅದೇ ಪ್ಯಾಂಟ್.... ಶರ್ಟ್... ಇದು ತನ್ನ ಮಗನದ್ದೇ ಅಂದಾಗ ಮತ್ತೆ ಮಗನ ಸ್ವರ ಕೇಳಿಸಿತು... " ಅಮ್ಮಾ ಪ್ಲೀಸ್ ಏನಾದ್ರೂ ಮಾಡಮ್ಮ... " ಅನ್ನುತ್ತಿರುವಾಗಲೇ.... ಅತ್ತ ಪೋಲೀಸ್ " ಬೋ.... ಮಗನೇ ಮನೆಯವರನ್ನ ಬರಲಿಕ್ಕೆ ಹೇಳು ಅಂದ್ರೆ.... ಏನೇನೋ ಮಾತಾಡ್ತೀಯಾ... ಇಡೋ ಫೋನ್...." ಅಂದ ಬೈಯುತ್ತಿರುವ ಮಾತುಗಳು ಕೇಳಿತು.... ಫೋನ್ ಕಟ್ ಆಯಿತು...ಶ್ರೀಮತಿ ಪೂರ್ತಿಯಾಗಿ ಬೆವರತೊಡಗಿದ್ದಳು.... ಆ ಕ್ಷಣಕ್ಕೆ ಏನು ಮಾಡಬೇಕೆಂದೇ ತೋಚಲಿಲ್ಲ... ಕೂಡಲೇ ತನ್ನ ಪತಿಗೆ ಫೋನಾಯಿಸಿ.... ವಿಷಯ ತಿಳಿಸಿದಳು.... ತನ್ನ ಪರಿಚಯದ ವಕೀಲರ ನಂಬರುಗಳನೆಲ್ಲಾ ತಡಕಾಡಿದಳು..... ಅತ್ಯಾಚಾರಿಗಳನ್ನ ಗಲ್ಲಿಗೇರಿಸಲು ಶುರುವಾದ ಹೋರಾಟ ಮುಕ್ತಾಯದಂಚಿನಲ್ಲಿರುವಾಗಲೇ ಶ್ರೀಮತಿಗೆ ತನ್ನ ಮಗನನ್ನ ಉಳಿಸೋ ಹೋರಾಟ ಶುರುವಾಗಿತ್ತು..
Monday, 2 November 2015
ಬಲಾತ್ಕಾರ...

Subscribe to:
Post Comments (Atom)
No comments:
Post a Comment