Saturday, 31 October 2015

ಇದು ವಿಮರ್ಶೆಯಲ್ಲ ನನ್ನನಿಸಿಕೆ...ಇತ್ತೀಚೆಗೆ ಒಂದು ವಿಷಯದ ಬಗ್ಗೆ ನಾ ಮೆಚ್ಚುವ ಇಬ್ಬರು ಲೇಖಕರ ಆರ್ಟಿಕಲ್ ಓದಿದೆ. ಒಂದು ಪ್ರತಾಪ್ ಸಿಂಹ ಅವರ " ಮೇನಕೆ ಬಂದು ಕುಣಿಯುವವರೆಗೆ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇಯೇ ಆಯಿತು " ಇನ್ನೊಂದು ಚಕ್ರವರ್ತಿ ಸೂಲಿಬೆಲೆಯವರ " ಎರಡು ರಾಷ್ಟ್ರೀಯ ಪಕ್ಷ ಎಷ್ಟೊಂದು ಅಂತರ ". ಮೊದಲೇ ಹೇಳಿದಂತೆ ಎರಡೂ ಕರ್ನಾಟಕದಲ್ಲಿನ ಬಿಜೆಪಿಯ ಸೋಲಿನ ಕುರಿತಾಗೇ ಇರೋದು. ಪ್ರತಾಪ್ ಸಿಂಹ ಅವರು ಯಾವ ರೀತಿ ಸೋಲನುಭವಿಸಿತು ಅನ್ನೋದನ್ನ ವಿಶ್ಲೇಷಣೆ ಮಾಡಿದ್ದರೆ, ಸೂಲಿಬೆಲೆಯವರು ಎರಡು ಪಕ್ಷಗಳ ನಡುವಿನ ವ್ಯತ್ಯಾಸವನ್ನ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಈ ಎರಡು ಲೇಖನಗಳನ್ನ ಓದಿದ ನಂತರ ನನಗೆ ನನ್ನ ಅನಿಸಿಕೆಯನ್ನು ಹೇಳೋ ಮನಸಾಯಿತು ಹಾಗಾಗಿ ಈ ಸಣ್ಣ ಲೇಖನ...ಮೊದಲೇ ಶೀರ್ಷಿಕೆಯ ರೂಪದಲ್ಲಿ ಹೇಳಿದ್ದೇನೆ, ಇದು ವಿಮರ್ಶೆಯಲ್ಲ ಯಾಕೆಂದರೆ ಇಬ್ಬರೂ ತಮ್ಮ ಬರಹಗಳಿಂದ ಜನರ ಮಂತ್ರಮುಗ್ಧರನ್ನಾಗಿಸಿದವರು. ಅವರ ಕುರಿತಾಗಿ ವಿಮರ್ಶೆ ಮಾಡುವ ಯೋಗ್ಯತೆ ಎಳ್ಳಷ್ಟೂ ನನ್ನಲ್ಲಿಲ್ಲ ಅನ್ನೋದು ನನ್ನ ಧೃಡವಾದ ನಂಬಿಕೆ. ಹಾಗಾಗಿ ಇಲ್ಲಿರೋದು ಅದೇ ವಿಷಯದ ಕುರಿತಾದ ನನ್ನ ಅನಿಸಿಕೆ ಅಷ್ಟೇ..
ಮೊದಲಿಗೆ ಪ್ರತಾಪ್ ಸಿಂಹರ ಲೇಖನವನ್ನ ನೋಡೋದಾದ್ರೆ... ಬಿಜೆಪಿಯ ಸೋಲಿನ ಕುರಿತಾದ ಪ್ರತಾಪ್ ಅವರ ಅನಾಲಿಸಿಸ್ ಸೂಪರ್... ಎರಡು ಮಾತಿಲ್ಲದೆ ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅಧಿಕಾರದ ಮೆಟ್ಟಲೇರುವ ಹೊತ್ತಲ್ಲಿ ಆದ ಸಣ್ಣ ಸಣ್ಣ ತಪ್ಪುಗಳು ಮುಂದೆ ಯಾವ ರೀತಿ ಯುಡಿಯೂರಪ್ಪ ಅವರನ್ನ ಕಾಡತೊಡಗಿತು, ಯಾವ ರೀತಿ ಹೈಕಮಾಂಡ್ ನ ನಡೆಗಳು ಯಡಿಯೂರಪ್ಪ ಅವರನ್ನ ತಪ್ಪು ದಾರಿ ಹಿಡಿಯುವಂತೆ ಪ್ರೇರೇಪಿಸಿತು ಅನ್ನೋದರ ಸ್ಪಷ್ಟ ಚಿತ್ರಣ ಕೊಡುತ್ತಾ ಹೋಗುತ್ತಾರೆ. ಆಪರೇಶನ್ ಕಮಲ, ರೆಡ್ಡಿಗಳ ದರ್ಪ, ಸುಷ್ಮಾರವರ ಮಾತುಗಳು, ಅನಂತ್ ಕುಮಾರರ ಒಳಸಂಚು ಹೀಗೆ...ಏಕಾಂಗಿತನವನ್ನ ಅನುಭವಿಸಿದ ಯಡಿಯೂರಪ್ಪನವರು ಎಡವಿದರು ಅಂದರು. ಇದೆಲ್ಲವನ್ನೂ ಒಪ್ಪೋಣ ಆದರೆ ಸ್ವಲ್ಪ ಹಿಮ್ದಿನದನು ಮೆಲುಕು ಹಾಕಿದರೆ ಇದೇ ಪ್ರತಾಪ್ ಸಿಂಹ ಅವರು ಯಡಿಯೂರಪ್ಪ ಅವರನ್ನ ತಮ್ಮ ಎರಡು ಮೂರು ಲೇಖನದಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು...( ೨೦೦೮ ರ ಲೇಖನಗಳು.. ಅವರ ಬ್ಲಾಗ್ ನಲ್ಲಿ ಈಗಲೂ ಲಭ್ಯವಿದೆ) ವರ್ಗಾವಣೆಯ ಕುರಿತಾಗಿ, ನಿವೃತ್ತಿ ವಯಸ್ಸನ್ನು ಏರಿಸಿದ್ದುದರ ಕುರಿತಾಗಿ ಹೀಗೆ ಹಲವು ವಿಷಯಗಳಲ್ಲಿ ನೇರವಾಗಿ ದೋಷಾರೋಪಣೆ ಮಾಡಿದ್ದ ಪ್ರತಾಪರಿಗೆ ಈಗ ಯುಡಿಯೂರಪ್ಪನವರ ತಪ್ಪುಗಳು ಕೂಡ ಬಿಜೆಪಿಯ ಸೋಲಿಗೆ ಒಂದು ಕಾರಣ ಅಂತನ್ನಿಸದೇ ಇರೋದು ನನಗೇಕೋ ಸರಿ ಅನ್ನಿಸಲಿಲ್ಲ. ಯಡಿಯೂರಪ್ಪನವರ ಪುತ್ರಪ್ರೇಮದ ಬಗ್ಗೆ ಟೀಕಿಸಿದ್ದ ಪ್ರತಾಪರು ಯಾಕೋ ಇಲ್ಲಿ ಅದನ್ನ ಉಲ್ಲೇಖಿಸಲಿಲ್ಲ. ಬಿಜೆಪಿಯಿಂದ ಹೊರ ಬಂದ ಮೇಲೆ ಯಡಿಯೂರಪ್ಪನವರ ನಡೆಯ ಬಗೆಗೆ ಯಾವುದೇ ರೀತಿಯ ಮಾತುಗಳನ್ನಾಡದೇ "ಬಿಜೆಪಿ" ಯಡಿಯೂರಪ್ಪನವರ ಬಳಿ ಹೋಗಿ ಅವರನ್ನ ಕರೆತರುವ ಪ್ರಯತ್ನ ಮಾಡಬೇಕು ಅಂದರು.
ನನಗೆ ಯಡಿಯೂರಪ್ಪನವರ ಬಗ್ಗೆ ಯಾವುದೇ ದ್ವೇಷ ಇಲ್ಲ ಆದರೆ ಅಸಮಾಧಾನ ಖಂಡಿತ ಇದೆ. ಕಾರಣ ಸದಾ ಜನಸೇವೆಯ ಪಣತೊಟ್ಟವನಿಗೆ ಇಂತಾದ್ದೇ ಪದವಿಯಲ್ಲಿದ್ದುಕೊಂಡು ನಾನು ಜನಸೇವೆ ಮಾಡುತ್ತೇನೆ ಅನ್ನೋ ಭಾವನೆ ಬರಬಾರದು. ಯಾವುದೇ ಪದವಿ ಇರಲಿ ಜನಸೇವೆ ಮಾತ್ರ ಮುಖ್ಯವಾಗಬೇಕಲ್ವಾ.. ಹಾಗಂತ ಕರ್ನಾಟಕದಲ್ಲಿನ ಬಿಜೆಪಿಯಲ್ಲಿನ ನಾಯಕರುಗಳಲ್ಲಿ ಹೆಚ್ಚಿನ ನಾಯಕತ್ವದ ಗುಣ ಇರುವುದು ಯಡಿಯೂರಪ್ಪನವರಲ್ಲೇ ಅನ್ನೋದನ್ನ ತಳ್ಳಿ ಹಾಕುವಂತಿಲ್ಲ. ಆದರೆ ಅವರಲ್ಲಿನ " ನಾನೇ..." ಅನ್ನುವ ಅಹಂ ಸರಿಯಲ್ಲ ಅನ್ನೋದು ನನ್ನ ಭಾವನೆ. ಅದನ್ನು ಬಿಟ್ಟು ಬಿಟ್ಟರೆ ಸಾಕು. ಎಲ್ಲವೂ ಸರಿಯಾಗುತ್ತದೆ. ಈ ಕಿವಿಮಾತನ್ನ ಪ್ರತಾಪರ ಲೇಖನದಲ್ಲಿ ಹುಡುಕಾಡಿದ್ದೆ. ಆದರ್ಯಾಕೋ ಸಿಗಲೇ ಇಲ್ಲ. ಉಳಿದೆಲ್ಲರನ್ನ ದೂಷಿಸಿದ ಪ್ರತಾಪರು , ಬಿಜೆಪಿ ಪಕ್ಷವೇ ಯಡಿಯೂರಪ್ಪನವರ ಬಳಿ ಹೋಗಬೇಕು ಅಂದರು. ಇದು ನನ್ನನ್ನ ಬಹಳಷ್ಟು ಕಾಡಿತು. ಕಾರಣ ಪಕ್ಷ ಯಾವತ್ತಿಗೂ ವ್ಯಕ್ತಿಗಿಂತ ಮೇಲು ಅನ್ನೋದು ನನ್ನ ಭಾವನೆ. ಒಂದು ವೇಳೆ ಒಬ್ಬ ವ್ಯಕ್ತಿ ಯಾವುದೇ ತಪ್ಪು ಮಾಡಿಲ್ಲ ಅಂತಾದಾಗ ಪಕ್ಷ ಅವನ ಬಳಿ ಹೋಗುವುದರಲ್ಲಿ ತಪ್ಪನಿಸಲಿಕ್ಕಿಲ್ಲ ಆದರೆ ಇಲ್ಲಿ ವ್ಯಕ್ತಿಯದೂ ತಪ್ಪಿದೆ ಅಂತಾದಾಗ ಮೊದಲು ಪಕ್ಷ ಯಾಕೆ ತಲೆಬಾಗಬೇಕು...? ಇಲ್ಲಿ ಒಬ್ಬರಿಗೊಬ್ಬರು ಪೂರಕವಾಗಿರುವುದರಿಂದ ವ್ಯಕ್ತಿ ಮೊದಲು ಪಕ್ಷಕ್ಕೆ ತಲೆಬಾಗಲಿ ಅನ್ನೋದು ನನ್ನ ಅಭಿಪ್ರಾಯ. ಈ ಮೊದಲೊಮ್ಮೆ ಹೇಳಿದ್ದೆ ಬಿಜೆಪಿಗಾದ ನಷ್ಟಕ್ಕಿಂತಲೂ ಅತಿಯಾದ ನಷ್ಟವಾಗಿದ್ದು ಯಡಿಯೂರಪ್ಪನವರಿಗೆ ಹಾಗಾಗಿ ಮಾತುಕತೆಯ ಒಲವು ಅವರಲ್ಲಿ ಮೊದಲು ಬರಬೇಕು.
ಇನ್ನು ದಕ್ಷಿಣ ಕನ್ನಡದ ಪರಿಸ್ಥಿಯ ಕುರಿತು ಪ್ರಭಾಕರ ಭಟ್ಟರನ್ನು ತುಂಬಾನೇ ತರಾಟೆಗೆ ತೆಗೆದುಕೊಂಡರು. ಅದರೊಳಗಿನ ನಿಜಾಂಶ ಕುರಿತು ನನಗಂತೂ ಅಷ್ಟಾಗಿ ಗೊತ್ತಿಲ್ಲ. ಯಾಕೆಂದರೆ ಇಲ್ಲಿನ ಹಲವಾರು ಜನರಿಗೆ ಪ್ರಭಾಕರ ಭಟ್ಟರು ಯೋಗ್ಯತೆಯ ಅರಿವಿದೆ. ಆದರೆ ಪ್ರತಾಪರು ಪತ್ರಕರ್ತರು ಹಾಗಾಗಿ ಒಳಸುದ್ದಿಗಳೆಲ್ಲವೂ ಗೊತ್ತಿರಬಹುದು. ನಾವು ಬರಿಯ ಓದುಗರು ಅಷ್ಟೊಂದು ಮಾಹಿತಿ ನಮಗೆ ಸಿಗೋದಿಲ್ಲ. ಇರಲಿ ಬಿಡಿ ಆದರೆ ಆ ಕುರಿತಾಗಿ ನನ್ನ ಅಸಮಾಧಾನ ಇರುವುದು ಜಾತಿಗಳನ್ನೆಳೆದು ತಂದಿರುವುದಕ್ಕೆ. ಇತ್ತೀಚೆಗಿನ ಕೆಲವು ಸಮಯದಿಂದ ಸಂಘದ ಒಡನಾಟದಲ್ಲಿರುವುದರಿಂದ ಈ ಮಾತನ್ನ ಹೇಳಬಯಸುತ್ತೇನೆ. ಸಂಘ ಅಂದರೆ ಅದೊಂದು ರೀತಿಯ ಅರ್ಪಣಾ ಮನೋಭಾವನೆ ನನ್ನ ಧರ್ಮದ ಕುರಿತಾಗಿ ಮತ್ತು ನನ್ನ ದೇಶದ ಕುರಿತಾಗಿ. ಇಲ್ಲಿ ಯಾವುದೇ ವೈಯಕ್ತಿಕ ಆಸೆಗಳು ಇರುವ ಸಾಧ್ಯತೆಯೇ ಇಲ್ಲ . ಹಾಗಾಗಿಯೇ ಮಂಗಳೂರಿನ ಸಾಂಘಿಕ್ ನಲ್ಲಿ ಒಂದು ಲಕ್ಷಕ್ಕೂ ಮೀರಿದ ಜನ ಪಾಲ್ಗೊಂಡಿದ್ದು. ಇದೇ ಒಂದು ವೇಳೆ ಬಿಜೆಪಿಯ ಕಾರ್ಯಕ್ರಮವಾಗಿದ್ದರೆ ಅಲ್ಲಿ ಖಂಡಿತ ಒಂದು ಲಕ್ಷ ಜನ ಒಗ್ಗೂಡುವ ಸಾಧ್ಯತೆ ಇರಲಿಕ್ಕಿಲ್ಲ. ಸ್ವಯಂಸೇವಕರಲ್ಲಿನ ನಿಸ್ವಾರ್ಥತೆ ಬಿಜೆಪಿಯ ಕಾರ್ಯಕರ್ತರಲ್ಲಿಲ್ಲ. ಹಾಗಾಗಿ ಇಲ್ಲಿ ಯಾರೊಬ್ಬನೂ ಯಾವುದೇ ಪದವಿಯ ಆಕಾಂಕ್ಷಿಯಾಗೋದಿಲ್ಲ , ತನಗೆ ನೀಡಲ್ಪಟ್ಟ ಕೆಲಸವನ್ನು ದೇಶಸೇವೆ ಅನ್ನುತ್ತಾ ಮಾಡುತ್ತಾನೆ. ಅದು ಬಿಲ್ಲವರೇ ಆಗಿರಲಿ, ಮೊಗವೀರರೇ ಆಗಿರಲಿ. ಒಮ್ಮೆ ಸ್ವಯಂಸೇವಕ ಅಂತಾದ ಮೇಲೆ ಆತ ತಾನು ಬಿಲ್ಲವ ಅಥವಾ ಮೊಗವೀರ ಅನ್ನೋದನ್ನ ಬದಿಗಿಟ್ಟು ಬಿಡುತ್ತಾನೆ. ಹೊಡೆದಾಟಕ್ಕೆ ಬಿಲ್ಲವರು ಮೊಗವೀರರನ್ನ ಬಳಸಿಕೊಂಡರು ಅನ್ನೋದನ್ನ ಸಲೀಸಾಗೇ ಹೇಳಿದರು ಅವರಿಗೆ ಸ್ಥಾನ ಮಾನ ಕೊಡಲಿಲ್ಲ ಅಂದರು, ಆದರೆ ಲಾಲಾಜಿ ಮೆಂಡನ್ ಮೊಗವೀರ ಸಮಾಜದವರು, ಸುನಿಲ್ ಕುಮಾರ್ ಬಿಲ್ಲವ ಸಮಾಜದವರು ಇವೆರೆಲ್ಲರಿಗೆ ಸ್ಥಾನ ಮಾನ ಸಿಕ್ಕಿದೆ ತಾನೇ. ಬ್ರಾಹ್ಮಣರಿಗೆ ಬೆರಳಿಗೆ ಗಾಯವಾದ ಉದಾಹರಣೆಗಳಿಲ್ಲ ಅಂದರು. ಬಹುಷ ಇದು ಎದೆಗಾರಿಕೆಯ ಪ್ರಶ್ನೆ ಹಿಂದಿನಿಂದಲೂ ಕ್ಷತ್ರಿಯ ವರ್ಗವೇ ಹೋರಾಟಕ್ಕೆ ಸಜ್ಜಾಗುತ್ತಿದ್ದುದು. ಬ್ರಾಹ್ಮಣರ ಸಾತ್ವಿಕ ಆಹಾರವೇ ಇದಕ್ಕೆ ಕಾರಣವಾಗಿರಬಹುದು ಅಲ್ವಾ. ಹಾಗಂತ ದೇಶಕ್ಕಾಗಿ ತಾವೂ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಹೋರಾಟ ಮಾಡಿಯಾರು. ಎಲ್ಲೋ ಸಂಘದ ವಿಷಯದಲ್ಲಿ ಜಾತಿಯನ್ನು ಎಳೆದು ತಂದಿದ್ದು ನನಗೇಕೋ ಹಿಡಿಸಲಿಲ್ಲ ಕಾರಣ ಸಂಘ ನಿಜವಾದ ಜಾತ್ಯಾತೀತ ಶಕ್ತಿ...( ನಿಜವಾದ ಸ್ವಯಂಸೇವಕರು ( ಯಾವುದೇ ಜಾತಿಯವರಾಗಿರಲಿ..) ಪ್ರತಾಪರ ಈ ಮಾತಿನಿಂದ ಸಂಘದ ಮೇಲಿನ ನಿಷ್ಠೆಯನ್ನು ಬಿಟ್ಟು ಕೊಡಲಿಕ್ಕಿಲ್ಲ ಅನ್ನೋದು ನನ್ನ ಬಲವಾದ ನಂಬಿಕೆ) ಪದವಿಯ ಆಸೆ ಅಥವಾ ಸ್ಥಾನ ಮಾನದ ಆಸೆಗಳನ್ನಿಟ್ಟುಕೊಂಡು ಬಂದವ ಸ್ವಯಂಸೇವಕನಾಗಿರಲು ಹೇಗೆ ತಾನೇ ಸಾಧ್ಯ...?
ಇನ್ನು ಸೂಲಿಬೆಲೆಯವರ ಲೇಖನ ತೆಗೆದುಕೊಂಡರೆ ಯಡಿಯೂರಪ್ಪನವರು ಹೋದುದನ್ನ ಉಲ್ಲೇಖಿಸಿ ನಷ್ಟವಾದುದನ್ನ ಪರೋಕ್ಷವಾಗಿ ಹೇಳಿದರೂ " ಬಿಜೆಪಿಯಲ್ಲಿ ಪಕ್ಷ ದೊಡ್ಡದು ಉಳಿದವರೆಲ್ಲರೂ ಚಿಕ್ಕದು ಅನ್ನುತ್ತಾರೆ." ಬಹುಷ ಇದನ್ನ ನನ್ನ ಜೊತೆ ಹಲವಾರು ಜನ ಒಪ್ಪಿಕೊಂಡಾರು. ಪಕ್ಷಕ್ಕಿಂತ ದೊಡ್ಡದಿಲ್ಲ ಅನ್ನುವುದನ್ನ ಯಾವರೀತಿ ಸಮರ್ಥಿಸಿಕೊಂಡರೆಂದರೆ ಅಡ್ವಾಣಿಯವರನ್ನೂ ತರಾಟೆಗೆ ತೆಗೆದುಕೊಂಡರು. ನಿಜ ಸಣ್ಣದಾಗಿದ್ದಾಗಲೇ ಚಿವುಟಬೇಕಾಗಿದ್ದ ತಪ್ಪುಗಳನ್ನ ಹಿರಿಯರಾಗಿ ಚಿವುಟದೇ ಇದ್ದಿದ್ದು ಅಡ್ವಾಣಿಯವರ ತಪ್ಪೇ... ಆವಾಗ ಸುಮ್ಮನಿದ್ದು ಈಗ ಬಿಜೆಪಿ ಗೆಲ್ಲುತ್ತಿದ್ದರೆ ನನಗೆ ಅಚ್ಚರಿಯಾಗುತ್ತಿತ್ತು ಅನ್ನೋದು ಎಷ್ಟು ಸರಿ...? ಆದರೆ ಸೂಲಿಬೆಲೆಯವರ ಒಂದು ಮಾತು ನನಗೆ ಅಷ್ಟಾಗಿ ಹಿಡಿಸಲಿಲ್ಲ ಅದು " ಶಾಸಕರಾಗಿ ಆಯ್ಕೆಯಾಗೋದು ಮೊದಲನೆಯ ಬಾರಿ ಅನುಭವ ಪಡೆಯಲಿಕ್ಕೆ ಎರಡನೆಯ ಬಾರಿ ಕೆಲಸ ಮಾಡಲಿಕ್ಕೆ . ಮೂರನೆ ಬಾರಿ ಸಾಕು ತರುಣರಿಗೆ ದಾರಿ ಬಿಡಿ... ಎನ್ನುವ ಪ್ರಭಾಕರ ಭಟ್ಟರ ಮಾತನ್ನು ಉಲ್ಲೇಖಿಸಿದ್ದು. ನನ್ನ ಪ್ರಕಾರ ಇಲ್ಲಿ ಈ ಮಾತು ಶಾಸಕನಾಗಿರುವವನ ವ್ಯಕ್ತಿತ್ವ ಅಥವ ಆತ ಮಾಡುವ ಕೆಲಸದ ರೀತಿಯ ಮೇಲೆ ನಿರ್ಭರವಾಗಿರಬೇಕು... ಈಗ ಮೋದಿಯ ವಿಚಾರವನ್ನೇ ತೆಗೆದುಕೊಳ್ಳಿ ಮೂರು ಬಾರಿ ಅಧಿಕಾರ ಕೊಟ್ಟು ಸುಮ್ಮನಿರಲು ಸಾಧ್ಯವೇ....ಇನ್ನೊಂದು ಸೂಲಿಬೆಲೆಯವರು ಕೂಡ ಅಗ್ರಗಣ್ಯ ನಾಯಕರನ್ನ ತರಾಟೆಗೆ ತೆಗೆದುಕೊಂಡಂತೆ ಯಡಿಯೂರಪ್ಪನವರ ಕಿವಿ ಹಿಂಡಲಿಲ್ಲ ಅನ್ನುವುದು ನನಗೂ ಬೇಸರ ತಂದಿತು.
ಇರಲಿ ಬಿಡಿ ಒಟ್ಟಾರೆಯಾಗಿ ನೋಡಿದಾಗ ಎರಡು ಲೇಖನಗಳಲ್ಲಿ ನನಗೆ ಚಕ್ರವರ್ತಿಯವರ ಲೇಖನ ಸ್ವಲ್ಪ ಹೆಚ್ಚು ಅಂಕ ಪಡೆಯಲು ಯೋಗ್ಯ ಅಂತನಿಸಿತು ಕಾರಣ ಅವರು ತಮ್ಮ ಇಡಿಯ ಲೇಖನದಲ್ಲಿ ಸಂಘ ಶಕ್ತಿಯ ಬಗ್ಗೆ ಮತ್ತು ಸಿದ್ಧಾಂತಗಳ ಬಗ್ಗೆ ಬರೆದಿದ್ದಾರೆ. ನನ್ನ ಅಭಿಪ್ರಾಯವೂ ಅದೇ ಒಬ್ಬ ವ್ಯಕ್ತಿ ಸಂಘವನ್ನು ಸೇರಲಿ ಅಥವಾ ಯಾವುದೇ ಪಕ್ಷವನ್ನು ಸೇರಲಿ ಅಲ್ಲಿನ ಸಿದ್ಧಾಂತಗಳಿಗೆ ಬದ್ಧನಾಗಿರಬೇಕು. ಯಾವತ್ತಿಗೂ ನನಗಿಂತ ಪಕ್ಷ ಮೇಲು ಅನ್ನುವ ಸಾಮಾನ್ಯ ಜ್ನಾನವುಳ್ಳವನಾಗಿರಬೇಕು ಆಗ ಮಾತ್ರ ಪಕ್ಷಕ್ಕಾಗಲಿ ಅಥವ ವ್ಯಕ್ತಿಗಾಗಲಿ ಒಳ್ಲೆಯ ಹೆಸರು ಬರಲು ಸಾಧ್ಯ... ಅದಕ್ಕಾಗಿ ಏನೋ ಸೂಲಿಬೆಲೆಯವರು ಬಿಜೆಪಿ ಸಂಘ ಶಕ್ತಿಯಿಂದಾಗಿ ಮತ್ತೆ ಮೇಲೆದ್ದು ಬರುತ್ತದೆ ಅಂದರೇ ಹೊರತು ಯಡಿಯೂರಪ್ಪನವರಿಂದ ಮಾತ್ರ ಮೇಲೆ ಬರಲು ಸಾಧ್ಯ ಅನ್ನಲಿಲ್ಲ. ಅಂದ ಹಾಗೆ ಪ್ರತಾಪ್ ಸಿಂಹರೇ ಮೇನಕೆಯ ಪ್ರಕರಣದ ಬಗ್ಗೆ ಗೊತ್ತಾದ ಮೇಲೂ ಜನರು ವಿಶ್ವಾಮಿತ್ರರನ್ನ ಮಹಾ ತಪಸ್ವಿ ಅಂತಾನೇ ಕರೆಯುತ್ತಾರೆ ಅಲ್ವಾ....?

ಇದು ಭಯವೋ.... ಅನುಮಾನವೋ....ಇವತ್ತು ತಾರೀಖು 26/11/12 ನಾಲ್ಕು ವರ್ಷಗಳ ಕೆಳಗೆ ಇದೇ ದಿನದಂದು ಮುಂಬಯಿಯ ಹಲವು ಕಡೆ ಉಗ್ರರ ದಾಳಿಯಾಗಿತ್ತು. ಹಲವು ಜನ ಪ್ರಾಣವನ್ನು ಕಳಕೊಂಡರು, ದೇಶದ ತೋಳ್ಬಲವಾದ ಪೋಲೀಸ್ ಇಲಾಖೆ ಮತ್ತು ಕಮಾಂಡೋ ಪಡೆ ತಮ್ಮ ವೀರ ಸೈನಿಕರನ್ನು ಕಳೆದುಕೊಂಡಿತು. ಈ ಘಟನೆ ನಡೆದು ನಾಲ್ಕು ವರ್ಷ ಕಳೆದ ಬಳಿಕ, ಸಿಕ್ಕಿ ಬಿದ್ದ ಏಕೈಕ ಅಪರಾಧಿಗೆ ಮೊನ್ನೆ ಮೊನ್ನೆ ನೇಣಿನುಡುಗೊರೆ ದೊರೆಯಿತು. ಸ್ಪಷ್ಟವಾಗಿ ಕಾಣುವ ವೀಡಿಯೋ ಇದ್ದಾಗಲೇ ಶಿಕ್ಷೆ ಜಾರಿಗೊಳಿಸಲು ನಾಲ್ಕು ವರ್ಷ ಬೇಕಾಗಿದೆ ಅಂತಾದರೆ ಇನ್ನು ಅಸ್ಪಷ್ಟ ಸಾಕ್ಷಿಗಳಿದ್ದಿದ್ದರೆ ಏನು ಗತಿಯಾಗಿರುತ್ತಿತ್ತೋ. ಸರ್ಕಾರದ ಭದ್ರತಾ ವೈಫಲ್ಯಗಳಿಗೆಲ್ಲಾ ಮೊದಲು ಶಿಕ್ಷೆ ಅನುಭವಿಸೋದು ಸಾಮಾನ್ಯ ಜನರು. ಅದು ಅತಿ ಶೀಘ್ರವೇ... ಆದರೆ ಅಪರಾಧಿಗೆ ಮಾತ್ರ ಎಷ್ಟೊಂದು ಕಾಲಾವಕಾಶ...? ಈ ಘಟನೆ ಎಲ್ಲೋ ನಮ್ಮನ್ನೂ ನಮ್ಮ ವ್ಯವಸ್ಥೆಯನ್ನೂ ನಾವು ಮತ್ತೊಮ್ಮೆ ಪರಿಶೀಲಿಸಬೇಕು ಅನ್ನೋ ಸಂದೇಶ ಕೊಡೋದಿಲ್ವಾ...?
ಅದೇನೇ ಇರಲಿ ಮೊನ್ನೆ ಕಸಬ್ ಗೆ ಗೌಪ್ಯವಾಗಿ ಗಲ್ಲು ಶಿಕ್ಷೆ ವಿಧಿಸಲಾಯಿತು.ಇಲ್ಲಿ ನನ್ನದೊಂದು ಸಂದೇಹ ನಿಜಕ್ಕೂ ಗಲ್ಲು ಆಗಿದೆಯಲ್ವಾ...? ಯಾಕೆಂದರೆ ಇದುವರೆಗೂ ನೇಣು ಹಾಕಿರುವ ಬಗ್ಗೆ ನಂಬಲರ್ಹ ವಿಡೀಯೋ ಆಗಲಿ ಫೋಟೋವಾಗಲಿ ಸರ್ಕಾರದ ಕಡೆಯಿಂದ ಬಿಡುಗಡೆಯಾಗಿಲ್ಲ. ಮತ್ತು 7.30 ನೇಣು ಹಾಕಿ 9.30ಗೆ ಅಲ್ಲೇ ಧಫನ ಮಾಡಿಲಾಗಿದೆ ಎಂದಿದ್ದಾರೆ ಗೃಹ ಮಂತ್ರಿ. ಅದಕ್ಕೂ ಯಾವುದೇ ಸಾಕ್ಷಿ ಇಲ್ಲ. ಅಲ್ಲಿ ಇದ್ದ ಅಧಿಕಾರಿ ವರ್ಗದವರ್ಯಾರು ಅನ್ನೋದು ಸ್ಪಷ್ಟವಾಗಿಲ್ಲ. ಇಷ್ಟಾದ ಅಸ್ಪಷ್ಟತೆ ಇದ್ದಾಗಲೂ ನಾವು ಇದನ್ನು ನಂಬಿ ಹಾಯಾಗಿದ್ದೇವೆ.
ಇಡಿಯ ಜಗತ್ತಿನ ಕಣ್ಣನ್ನು ಕುಕ್ಕುವಂತೆ ತನ್ನ ಕುಕೃತ್ಯವನ್ನು ಜಾರಿಗೊಳಿಸಿದ ಈತನಿಗೆ ಜನರ ಮುಂದೆಯೇ ನೇಣು ಹಾಕಬೇಕಾಗಿತ್ತು. ಇನ್ನು ಮುಂದೆ ಯಾರೂ ಕೂಡ ಇಂತಹಾ ದುಸ್ಸಾಹಸಕ್ಕೆ ಕೈ ಹಾಕಬಾರದೆನುವ ಸ್ಪಷ್ಟ ಸಂದೇಶವೊಂದನ್ನು ಇವನ ಸಾವಿನ ಮುಖಾಂತರ ಜಗತ್ತಿನ ಎಲ್ಲಾ ಭಯೋತ್ಪಾದಕರಿಗೆ ತಿಳಿಸಿಹೇಳಬೇಕಿತ್ತು. ಆದರೆ ಸರ್ಕಾರವೇ ಹೆದರಿದಂತಿದೆ. ಇದು ಸರ್ಕಾರದ ಭಯವೂ ಆಗಿರಬಹುದು ಅಥವಾ ಅನುಮಾನವೂ ಆಗಿರಬಹುದು. ಇದನ್ನು ನನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸುವ ಸಣ್ಣ ಪ್ರಯತ್ನ ಇಲ್ಲಿ ಮಾಡುತ್ತಿದ್ದೇನೆ ಇದು ನಿಜವೋ ಸುಳ್ಳೋ ಅನ್ನೋದನ್ನು ನಿಮ್ಮ ತರ್ಕಕ್ಕೆ ಬಿಡುತ್ತೇನೆ.
ಈ ಘಟನೆಯನ್ನು ಗೌಪ್ಯವಾಗಿ ಮಾಡಿರೋದಕ್ಕೆ ಕಾರಣ ಭದ್ರತೆಯ ದೃಷ್ಟಿಯಿಂದ ಅನ್ನುತ್ತಾದೆ ಸರ್ಕಾರ. ಭದ್ರತೆ ಯಾರದ್ದು ಕಸಬ್ ನದ್ದೋ ಅಥವಾ ಭಾರತೀಯರದ್ದೋ... ಒಂದು ವೇಳೆ ಕಸಬ್ ನದ್ದು ಅಂತಾದರೆ ಆತನನ್ನು ಅಪಹರಿಸಿಯಾರು ಅನ್ನೋ ಭಯ ಕಾಡಬೇಕು, ಆದರೆ ಸರ್ಕಾರ ಅಷ್ಟೊಂದು ಖರ್ಚು ಮಾಡಿ ಬಿಗಿ ಬಂದೋಬಸ್ತು ಮಾಡಿದೆಯಲ್ಲಾ...ಅದರ ಬಗ್ಗೆ ನಂಬಿಕೆ ಇಲ್ಲವೇ... ಅರ್ಥಾತ್ ತಮ್ಮ ಪಡೆಯ ಕ್ಷಮತೆಯ ಬಗೆಗೆ ಅನುಮಾನವೇ...? ಇದರ ಇನ್ನೊಂದು ಮುಖ ಅಂದರೆ ಭಾರತೀಯರ ಭದ್ರತೆಯ ಬಗ್ಗೆ ಅಂತಾದಲ್ಲಿ ಗೌಪ್ಯವಾಗಿ ಮರಣದಂಡನೆ ಕೊಟ್ಟರೂ ಸಾವಿನ ನಂತರ ವಿಷಯ ಬಹಿರಂಗಗೊಳಿಸೋದು ಇದ್ದೇ ಇದೆಯಲ್ವಾ. ನಮ್ಮಲ್ಲಿರುವ ರಕ್ಷಣಾ ಪಡೆಯನ್ನು ಸನ್ನದ್ಧಗೊಳಿಸಿ ಮರಣದಂಡನೆ ಜಾರಿಗೆ ತರಬಹುದಿತ್ತಲ್ವಾ... ಇಲ್ಲೂ ಸರ್ಕಾರಕ್ಕೆ ತಮ್ಮ ರಕ್ಷಣಾ ಪಡೆಯ ಕಾರ್ಯ ದಕ್ಷತೆಯ ಬಗ್ಗೆ ಅನುಮಾನವಿದ್ದಾಗ ಮಾತ್ರ ಈ ಅಭದ್ರತೆಯ ಭಯ ಕಾಡೋಕೆ ಸಾಧ್ಯ ಅಲ್ವಾ...?
ಈ ಘಟನೆಯ ಮೂರನೇ ಆಯಾಮ ಯಾರಿಂದ ಅಭದ್ರತೆ ಆಗುವ ಸಂಭವವಿದೆ ಅನ್ನೋದು.
1. ಭಯೋತ್ಪಾದಕ ಸಂಘಟನೆಗಳು ಅಭದ್ರತೆಯನ್ನುಂಟು ಮಾಡಬಹುದು ಅನ್ನೋದು. ಹಾ ಒಪ್ಪಬಹುದಾದ ಮಾತು ಆದರೆ ವಿಶ್ವದಲ್ಲಿನ ಬಲಿಷ್ಠ ಸೇನಾ ಪಡೆಗಳಲ್ಲಿ ಒಂದಾಗಿರುವ ನಮ್ಮ ರಕ್ಷಣಾ ದಳವನ್ನು ಸರಿಯಾಗಿ ಬಳಸಿಕೊಂಡಲ್ಲಿ ಭಯೋತ್ಪಾದಕ ದಾಳಿಯನ್ನು ತಡೆಯುವುದು ಅಸಾಧ್ಯವೇನಲ್ಲವಲ್ಲ. ಅಮೇರಿಕಾದಲ್ಲಿ ಒಂದು ಬಾರಿ ದಾಳಿಯಾಗಿದೆ ಅಷ್ಟೇ. ಮತ್ತೆಂದೂ ದಾಳಿಗೆ ಅವಕಾಶವನ್ನು ಅವರು ಮಾಡಿಕೊಡಲಿಲ್ಲ.ಅಲ್ಲಿನ ತಂತ್ರಜ್ಞಾನಗಳ ಮಾಹಿತಿಯ ವಿನಿಮಯ ಮಾಡಿಕೊಂಡು ಅದೇ ರೀತಿಯಲ್ಲಿ ರಕ್ಷಣಾವ್ಯೂಹ ರಚಿಸಬಹುದು. ಅಲ್ಲಿಯವರಿಗೆ ಸಾಧ್ಯವಿದೆ ಅಂತಾದರೆ ನಮ್ಮ ಸೇನೆಗೆ ಯಾಕಾಗೋದಿಲ್ಲ. ಖಂಡಿತ ಸಾಧ್ಯವಿದೆ ಆದರೆ ನಾವು ರಾಷ್ಟ್ರ ರಕ್ಷಣೆಯ ವಿಷಯ ಬಂದಾಗ ರಾಜಕೀಯವನ್ನು ಸ್ವಲ್ಪ ಬದಿಗೊತ್ತಬೇಕು. ಆದರೆ ನಮ್ಮ ರಾಜಕಾರಣಿಗಳಿಗೆ ಅಥವಾ ಸರ್ಕಾರಕ್ಕೆ ರಾಜಕೀಯ ಬೇಕೆ ವಿನಹ ರಾಷ್ಟ್ರವಲ್ಲ ಅನ್ನೋದು ಕಹಿ ಸತ್ಯವಾಗಿಬಿಡುತ್ತದೆ.

2. ಆಂತರಿಕ ದಂಗೆಗಳಾಗಬಹುದು ಅನ್ನೋದು. ಇದೊಂದು ವಿಚಿತ್ರ ಸ್ಥಿತಿ. ದಂಗೆಗಳು ಯಾಕೆ ಆಗಬೇಕು...? ಒಬ್ಬ ಉಗ್ರವಾದಿಗೆ ಶಿಕ್ಷೆ ಕೊಟ್ಟಾಗ ದೇಶದ ಜನರಲ್ಲಿ ಸಂಭ್ರಮ ಉಂಟಾಗುತ್ತದೆಯೇ ಹೊರತು ದಂಗೆಯಾಗೋ ಸಂಭವನೀಯತೆ ಕಡಿಮೆ ಅಲ್ವಾ. ಹೇಳದೇ ಇದ್ದರೂ ಸರ್ಕಾರಕ್ಕಿರೋ ಭಯ ಅಥವಾ ಅನುಮಾನ ಭಾರತೀಯ ಮುಸ್ಲಿಂ ಸಮುದಾಯದ ಮೇಲೆ ಅನ್ನೋದು ವಾಸ್ತವ. ಮುಂದೆ ಆಗಲಿರೋ ದಂಗೆಯ ಕುರಿತಾದ ಭಯದ ಬಗ್ಗೆ ಹೇಳೋದಾದರೆ , ನಾನು ಮತ್ತೆ ರಕ್ಷಣಾ ಪಡೆಯ ಕಾರ್ಯದಕ್ಷತೆಯ ಮೇಲಿನ ಅನುಮಾನದ ಬಗ್ಗೆ ಮೊದಲು ಹೇಳಿದ ಮಾತನ್ನೇ ಪುನರುಚ್ಚರಿಸಬೇಕಾಗುತ್ತದೆ. ಇನ್ನು ದಂಗೆಯಾಗೋ ಅನುಮಾನದ ಕುರಿತಾಗಿ ಹೇಳೋದಾದರೆ... ದಂಗೆಯಾಗುವ ಅನುಮಾನ ಇರುವ ಕಡೆ ಸಮಗ್ರ ಜಾಗರೂಕತೆಯ ಕ್ರಮ ಕೈಗೊಂಡರಾಯಿತು ಅಲ್ವಾ. ಹಾಗಿದ್ದು ಒಬ್ಬ ಉಗ್ರವಾದಿಯ ಶಿಕ್ಷೆಗೆ ದಂಗೆ ಏಳುತ್ತಾರೆ ಅಂತಾದರೆ ಅಂಥವರನ್ನು ಉಗ್ರವಾದಿಗಳೇ ಅಂತ ನಿರ್ಣಯಿಸೋದರಲ್ಲಿ ಹಿಂಜರಿಕೆ ಇರಬಾರದು. ಯಾರೆಲ್ಲಾ ದಂಗೆಯಲ್ಲಿ ಭಾಗವಹಿಸುತ್ತಾರೋ ಅಂಥವರು ದೇಶದ ಆಂತರಿಕ ಉಗ್ರಗಾಮಿಗಳು ಎಂದು ನಿರ್ಣಯಿಸಿ ಅವರಿಗೂ ಮರಣದಂದನೆಯನ್ನು ವಿಧಿಸುವುದರಲ್ಲಿ ಎರಡು ಬಾರಿ ಯೋಚಿಸಬಾರದು. ಯಾಕೆಂದರೆ ಇಂಥಾ ದಂಗೆಕೋರರು ಮೊಳಕೆಯಲ್ಲಿರೋ ವಿಷಬೀಜ. ಬೆಳೆಯಲು ಬಿಟ್ಟಷ್ಟು ನಮ್ಮ ದೇಶಕ್ಕೇ ಆಪತ್ತು. ನಿಜವಾದ ಭಾರತೀಯ ಮುಸ್ಲಿಂ ಉಗ್ರವಾದಿಯೊಬ್ಬನಿಗೆ ಶಿಕ್ಷೆಯಾದಾಗ ಸಂತಸ ವ್ಯಕ್ತಪಡಿಸಿಯಾನೇ ಹೊರತು ದಂಗೆ ಏಳಲಾರ. ಸರ್ಕಾರದ ಈ ನಡೆಯಲ್ಲಿ ಒಂದು ವಿಷಯ ಸ್ಪಷ್ಟವಾಗೋದು ಏನೆಂದರೆ ಯಾವ ಪಕ್ಷ ಮುಸ್ಲಿಂ ಸಮುದಾಯವನ್ನು ವೋಟ್ ಬ್ಯಾಂಕ್ ಅನ್ನಾಗಿ ಮಾಡಿದೆಯೋ, ಜಾತ್ಯಾತೀತತೆ ಸೋಗಿನಲ್ಲಿ ಮುಸ್ಲಿಂ ಸಮುದಾಯದ ರಕ್ಷಕರು ಅನ್ನುತ್ತಾ ರಾಜಕೀಯ ಮಾಡುತ್ತಿದ್ದರೋ , ಅವರೇ ಮುಸ್ಲಿಂ ಸಮುದಾಯದ ಮೇಲೆ ಅನುಮಾನದ ದೃಷ್ಟಿಯನ್ನಿಟ್ಟಿದ್ದಾರೆ.( ಈ ನಿಟ್ತಿನಲ್ಲಿ ಹೇಳುವುದಾದರೆ ಭಾರತೀಯ ಮುಸ್ಲಿಂ ಸಮುದಾಯ ಮಾಡಬೇಕಾಗಿರೋ ಮೊಟ್ಟ ಮೊದಲ ಕೆಲಸ ದೇಶದ ಬಗೆಗಿನ ನಿಷ್ಟೆಯನ್ನು ಸಾಬೀತು ಪಡಿಸೋದು)... ಒಂದು ವೇಳೆ ಸರ್ಕಾರಕ್ಕೆ ತನ್ನ ದೇಶದ ಮುಸ್ಲಿಂ ಪ್ರಜೆಗಳ ಮೇಲೆ ಅನುಮಾನ ಇಲ್ಲವಾಗಿದ್ದಲ್ಲಿ ಕಸಬ್ ನಿಗೆ ಸಾರ್ವಜನಿಕವಾಗಿ ಶಿಕ್ಷೆ ಕೊಡುತಿತ್ತು, ಈ ರೀತಿ ಕದ್ದು ಮುಚ್ಚಿ ಅಲ್ಲ. ಹೊರಗಿನ ದಾಳಿಯ ಬಗೆಗೆ ಸತರ್ಕರಾಗಿದ್ದರಾಯಿತು.

ಹಾಗಾಗಿ ಭಯೋತ್ಪಾದನೆಯನ್ನು ಮಟ್ಟಹಾಕಬೇಕೆಂದಾದರೆ ಮೊದಲು ನಮ್ಮಲ್ಲಿ ಇರಬೇಕಾದದ್ದು ನಿರ್ಭಯತ್ವ ಮತ್ತು ನಮ್ಮವರ ಮೇಲಿನ ನಂಬಿಕೆ. ಎದುರಾಳಿ ದಾಳಿ ಮಾಡಿಯಾನು ಅನ್ನುತ್ತಾ ನಾವೇ ಏಕೆ ಕಲ್ಪಿಸಿ ಹೆದರಿಕೊಳ್ಳಬೇಕು, ಆಕ್ರಮಣದ ಊಹೆ ಇದ್ದರೆ ಪ್ರತ್ಯಾಕ್ರಮಣಕ್ಕೆ ಸಿದ್ಧರಾಗೋಣ. ನಾವು ಹೆದರಿಸುವವರಾಗಬೇಕೇ ಹೊರತು ಹೆದರುವಂತವರಾಗಕೂಡದು ಅಲ್ವಾ. ನಾವು ಹೆದರಿಕೊಂಡಿದ್ದಾನೆ ಅನ್ನೋ ಒಂದು ಸಣ್ಣ ಕುರುಹು ಸಿಕ್ಕರೂ ಸಾಕು ಶತ್ರುವಿನ ಬಲ ಮತ್ತು ಆತ್ಮವಿಶ್ವಾಸ ನೂರ್ಮಡಿ ಹಿಗ್ಗುತ್ತದೆ. ಇದಕ್ಕೆ ಅವಕಾಶ ಕೊಟ್ಟಲ್ಲಿ ನಮಗೆ ಸೋಲು ಕಟ್ಟಿಟ್ಟ ಬುತ್ತಿ. ಎಲ್ಲಿಯವರೆಗೆ ನಾವು ಈ ಗುಣಗಳನ್ನು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ 26/11 ರಂಥಾ ಘಟನೆಗಳು ಮರುಕಳಿಸುತ್ತಾನೆ ಇರುತ್ತೆ...
ಈ ಘಟನೆಯಲ್ಲಿ ಜೀವತೆತ್ತ ಎಲ್ಲರ ಆತ್ಮಕ್ಕೆ ಶಾಂತಿ ಸಿಗೋದು ಇಂಥಾ ದುರ್ಘಟನೆಗಳು ಮರುಕಳಿಸದಿದ್ದಾಗ ಮಾತ್ರ ಅನ್ನೋದು ನನ್ನ ಅಭಿಪ್ರಾಯ... ನಿಮ್ಮದು....?????

26/11 ರಂದು ಪ್ರಾಣ ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸುತ್ತಾ... ತಾಯಿ ಭಾರತಿಯ ರಕ್ಷಣೆಗೆ ನಾನು ಸದಾ ಸಿದ್ಧ ಅನ್ನುವ ಪ್ರತಿಜ್ಞೆಗೈಯುತ್ತೇನೆ....

ಇದು ಕನ್ನಡ ಪ್ರೇಮವೋ ಅಥವಾ ಅನ್ಯ ಮತ ದ್ವೇಷವೋ...ವಾರ್ತಾಭಾರತಿಯ ಸಂಪಾದಕರಾದ ಬಶೀರ್ ಬಿ. ಎಮ್ ಅವರು ಹೇಳಿಕೊಂಡದ್ದು... " ದಸರಾ ನಾಡಹಬ್ಬವಾಗುವುದನ್ನು ಮತ್ತು ಸರ್ಕಾರ ಅದಕ್ಕಾಗಿ ಕೋಟಿ ಕೋಟಿ ಹಣ ಸುರಿಯೋದನ್ನು ನಾನು ವಿರೋದಿಸುತ್ತೇನೆ. ಯಾಕೆಂದರೆ ಅಲ್ಲಿ ನಡೆಯುವುದು ನಾಡು ನುಡಿಯ ಹಬ್ಬ ಅಲ್ಲ.. ಬದಲಿಗೆ ವೈದಿಕರ ವೈಭವೀಕರಣ ಮತ್ತು ರಾಜ ಪ್ರಭುತ್ವದ ವೈಭವೀಕರಣ...ನಾಡ ಹಬ್ಬ ಅಂದರೆ ಕನ್ನಡದ ಕುರಿತಾಗಿ ಇರಬೇಕು.......... ನಾನು ಇದುವರೆಗೂ ದಸರಾಕ್ಕೆ ಹೋಗಿಲ್ಲ ಇನ್ನೂ ಹೋಗಲ್ಲ ಯಾಕೆಂದರೆ ಅದು ಯಾವ ರೀತಿಯಲ್ಲೂ ನನ್ನ ಬದುಕಿಗೆ ಮಾದರಿಯಲ್ಲ. "
ಇವರ ಈ ಮಾತನ್ನು ನೋಡುವಾಗ ಇವರ ಈ ನಿಲುವಿಗೆ ಎರಡು ಕಾರಣಗಳಿರಬಹುದು ಅಂತನ್ನಿಸುತ್ತದೆ.
೧. ಕನ್ನಡದ ಮೇಲಿನ ಅಪ್ಪಟ ಪ್ರೇಮ.
೨. ವೈದಿಕ ಧರ್ಮದ ಮೇಲಿನ ದ್ವೇಷ.
ಈಗ ಮೊದಲ ಕಾರಣವನ್ನು ನೋಡೋಣ... ಕನ್ನಡದ ಮೇಲಿನ ಅಪ್ಪಟ ಪ್ರೇಮ. ದಸರಾದಲ್ಲಿ ಕನ್ನಡದ ಬಗೆಗೇನೂ ವಿಶೇಷ ಗಮನ ಇರೋದಿಲ್ಲ ಅನ್ನೋರು ಸ್ವತಃ ಇವರ ಸಮುದಾಯದಲ್ಲಿ ಕನ್ನಡಕ್ಕೆ ಎಷ್ಟು ಮಹತ್ವ ಕೊಡುತ್ತಾರೆ....? ಇವರ ಯಾವ ಧಾರ್ಮಿಕ ಆಚರಣೆಗಳಲ್ಲಿ, ಅಥವಾ ಸಂಸ್ಥೆಗಳ ಆಚರಣೆಗಳಲ್ಲಿ ಕನ್ನಡ ಬಳಸಲಾಗುತ್ತದೆ....? ಇವರು ಬಳಸೋದು ಉರ್ದು ಭಾಷೆ ಅಥವಾ ಮಲೆಯಾಳಿ ಅಥವಾ ಅರೆಬಿಕ್ ಇದೇ ಭಾಷೆಗಳು ತಾನೇ... ಅಲ್ಲಿ ಕಾಣಿಸದ ಕನ್ನಡದ ಕಾಳಜಿ... ದಸರಾ ಬಗೆಗಾಗುವಾಗ ಯಾಕೆ ಇವರ ಮನಸಿನೊಳಗಿನಿಂದ ಚಿಮ್ಮಿ ಬರುತ್ತದೆ... ಅಥವಾ ಇವರ ಬಳಿಯೇ ಕೇಳೋಣ ನೀವು ನಿಮ್ಮ ಸಮುದಾಯದಲ್ಲಿ ಕನ್ನಡತನ ತರಲು ಏನೆಲ್ಲಾ ಪ್ರಯತ್ನ ಮಾಡಿದ್ದೀರಿ...? ಈಗಲೂ ಕೂಡ ಹೆಚ್ಚಿನವರು ಮಾತನಾಡುವುದು ನಮ್ದೂಕೆ... ನಿಮ್ದೂಕೆ... ಬಂದು ಬಿಟ್ಟಿ....ಮಾಡಿಬಿಟ್ಟಿ.. ಅನ್ನೋ ವ್ಯಾಕರಣ ರಹಿತ ಉರ್ದು ಮಿಶ್ರಿತ ಕನ್ನಡವೇ ತಾನೇ...( ಕೆಲವೊಂದು ಪ್ರದೇಶಗಳ ಮಟ್ಟಿನಲ್ಲಿ ಭಾಷೆ ಬದಲಾವಣೆ ಆಗೋದು ಸಹಜ ಆದರೆ ಅಲ್ಲಿ ನೆಲೆಸಿರುವ ಎಲ್ಲಾ ಸಮುದಾಯಗಳವರ ಪಾಲಿಗೂ ಅದೇ ಆಗಿರುತ್ತದೆ ಆದರೆ ಇಲ್ಲಿ ಹಾಗಿಲ್ಲ ಅನ್ನೋದು ಗಮನಿಸತಕ್ಕ ವಿಷಯ ಅಂತ ನನಗನಿಸುತ್ತದೆ...) ಇವನ್ನೆಲ್ಲಾ ಸರಿಪಡಿಸೋದು ಯಾವಾಗ...? ಬಹುಶ ಉತ್ತರ ಸಿಗೋದು ಕಷ್ಟವೇ.... ಹಾಗಾಗಿ ಇವರು ಈ ರೀತಿ ಮಾತನಾಡೋಕೆ ಕನ್ನಡದ ಬಗೆಗಿನ ಅಪ್ಪಟ ಪ್ರೇಮ ಕಾರಣ ಅಲ್ಲ ಅನ್ನೋದು ಸ್ಪಷ್ಟವಾಗುತ್ತೆ.
ಇನ್ನು ಎರಡನೇ ಕಾರಣ ನೋಡೋಣ...ವೈದಿಕ ಧರ್ಮದ ಮೇಲಿನ ದ್ವೇಷ.... ಇದಾದರೂ ಒಂದು ರೀತಿಯಲ್ಲಿ ಒಪ್ಪತಕ್ಕುದಾದ ಮಾತು. ಯಾಕೆಂದರೆ ತಲೆತಲಾಂತರಗಳಿಂದ ಇದನ್ನು ಕಾಣುತ್ತಲಿದ್ದೇವೆ... ಯಾವ ರಾಜ ಪ್ರಭುತ್ವದ ಮಾತನ್ನು ಇವರಾಡಿದರೋ ಅದೇ ರಾಜರ ಕಾಲದಿಂದ ಅರ್ಥಾತ್ ಮುಸ್ಲಿಂ ದೊರೆಗಳ ಕಾಲದಿಂದ ಈ ವೈದಿಕ ಧರ್ಮದ ಬಗೆಗಿನ ದ್ವೇಷ ಇದ್ದಿದ್ದೇ... ಅದಕ್ಕೆ ಭಾರತದ ನಿಜ ಇತಿಹಾಸವನ್ನೊಮ್ಮೆ ಓದಿದರಾಯಿತು.
ಇವರಿಗೆ ನಾಡಹಬ್ಬವನ್ನು ವಿರೋದಿಸೋಕೆ ಇದೇ ಮೂಲ ಕಾರಣವಾಗಿದ್ದಲ್ಲಿ ಯಾಕೆ ಅದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ... ಕಾರಣ.... ಒಂದು ಪತ್ರಿಕೆಯ ಸಂಪಾದಕನಾಗಿ ಜಾತ್ಯಾತೀತನಾಗಿರಬೇಕಾಗಿರೋದು ಅಲಿಖಿತ ನಿಯಮ ಇದ್ದಿರಬಹುದೇನೋ ಅಂತನಿಸುತ್ತದೆ...ಇವರೊಳಗಿನ ಈ ಒಳಗೊಂದು ಹೊರಗೊಂದು ಸ್ವಭಾವವೇ ನನ್ನೊಳಗೆ ಇವರ ಬಗ್ಗೆ ಮತ್ತು ಇವರ ಹಲವು ವಿಚಾರಧಾರೆಯ ಬಗ್ಗೆ ನನ್ನಲ್ಲಿ ಅಸಹನೆ ತರಿಸುತ್ತದೆ.
ಹೇಗೂ ಈ ರೀತಿ ಹೇಳಿದ್ದಾರೆ ಇವರಿಗೆ ಒಂದೆರಡು ವಿಷಯ ಹೇಳಬೇಕಾಗಿದೆ. ಸ್ವಾಮೀ... ಯಾವ ಅರಸೊತ್ತಿಗೆಯನ್ನು ಸರ್ಕಾರ ತನ್ನ ವಶಪಡಿಸಿಕೊಂಡಿದೆಯೋ ಆ ಸರ್ಕಾರಕ್ಕೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಕರ್ತವ್ಯವೇ ತಾನೇ. ಇನ್ನು ಖರ್ಚಿನ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಪ್ರವಾಸೋದ್ಯಮ ಅನ್ನುವಂತಾದ್ದು ಒಂದಿದೆ. ಇದು ಸರ್ಕಾರಕ್ಕೆ ಒಳ್ಳೆಯ ಆದಾಯವನ್ನು ತಂದುಕೊಡಬಲ್ಲುದಾದದ್ದು. ಕೋಟಿ ಕೋಟಿ ಖರ್ಚು ಮಾಡಿದರೂ ಕೋಟಿ ಗಳಿಸು ಕೊಡುತ್ತದೆ ಕೂಡ... ಒಬ್ಬ ಪತ್ರಿಕೆಯ ಸಂಪಾದಕನಾಗಿ ನಿಮಗಿದು ಅರ್ಥವಾಗದಿದ್ದರೆ ಅದೊಂದು ದೊಡ್ಡ ವಿಪರ್ಯಾಸವೇ ಸರಿ. ಯಾವುದಾದರೂ ಅನ್ಯ ದೇಶದಲ್ಲಿ ಹೋಗಿ ಕರ್ನಾಟಕ ಅಂದರೆ ಏನು ನೆನಪಾಗುತ್ತೆ ಅಂತ ಕೇಳಿ ನೋಡಿ...ಅಲ್ಲಿನ ವಿದೇಶಿಗರಿಗೆ ಮೊದಲು ನೆನಪಾಗೋದು " ಮೈಸೂರು ಅರಮನೆ " ಮತ್ತು ಅಲ್ಲಿನ ವೈಭವೋಪೇತ ದಸರಾ ಮಹೋತ್ಸವ. ಯಾವ ಹಬ್ಬವು ಇಡಿಯ ವಿದೇಶದಲ್ಲಿ ಮತ್ತು ವಿದೇಶಿಗರ ಮನದಲ್ಲಿ ರಾಜ್ಯಕ್ಕೆ ಒಂದು ಉತ್ತಮ ಸ್ಥಾನವನ್ನು ಪ್ರತಿಷ್ಠೆಯನ್ನು ಕಲ್ಪಿಸಿಕೊಟ್ಟಿದೆಯೋ ಆ ಹಬ್ಬ ನಾಡಹಬ್ಬವಾಗುವುದರಲ್ಲೇನು ತಪ್ಪು...?
ಕೊನೆಯದಾಗಿ ನೀವು ದಸರಾ ಹೋಗೋದರ ಕುರಿತು... ಒಬ್ಬ ವ್ಯಕ್ತಿಗೆ ಒಂದು ವಸ್ತುವನ್ನು ನೋಡಬೇಕು ಅಂತನಿಸುವುದು ಯಾವಾಗ ಅಂದರೆ ಆತನಿಗೆ ಆ ವಸ್ತುವಿನ ಮೇಲೆ ವಿಶೇಷ ಆಸಕ್ತಿ ಇದ್ದಾಗ... ದಸರಾದಲ್ಲಿನ ಸಾಂಸ್ಕೃತಿಕ ಉತ್ಸವದ ವೈಭವವನ್ನು ನೋಡಲು ಪರಿಶುದ್ಧ ಮನಸ್ಸು ಅಗತ್ಯ. ಇದು ನನ್ನ ಧರ್ಮದ್ದಲ್ಲ ಅನ್ನುವ ಮಾನಸೀಕತೆಯಿಂದ ನೋಡಿದಾಗ ಎಲ್ಲವೂ ಡಂಭಾಚಾರಗಳಾಗೇ ಕಾಣಿಸುತ್ತದೆ. ಮೊದಲು ಈ ಪರಧರ್ಮದ ಬಗಿಗಿನ ಕೀಳು ದೃಷ್ಟಿಯನ್ನು ಕಿತ್ತೊಗೆಯಿರಿ ಆಗ ನಾಡಹಬ್ಬದ ಮಹತ್ವ ಗೊತ್ತಾದೀತು...

ಇತಿಹಾಸದ ಗೋರಿ ಬಗೆದು ಬೇತಾಳ ಹೊರುವವರು--- ಒಂದಷ್ಟು ದ್ವಂದ್ವಗಳು೧.ನೇತಾಜಿ ಸುಭಾಶ್ ಚಂದ್ರ ಬೋಸರ ಕಣ್ಮರೆ ರಹಸ್ಯ ಕುರಿತ ಚರ್ಚೆ ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಅಷ್ಟು ದಾಖಲೆಗಳಲ್ಲಿ ಇಷ್ಟು ಬಹಿರಂಗಗೊಂಡಿದೆ. ಅದರಲ್ಲಿ “ಜವಾಹರ್ ಲಾಲ್ ನೆಹರೂ ನೇತಾಜಿಗೆ ದ್ರೋಹ ಬಗೆದಿದ್ದು ಸಾಬೀತಾಗಿದೆ” ಇತ್ಯಾದಿ ಮಾತುಗಳು ಗುಂಪುಗಳಲ್ಲಿ ಚರ್ಚೆಯಾಗ್ತಿವೆ. ಇಷ್ಟಕ್ಕೂ ನೆಹರೂ ದ್ರೋಹ ಬಗೆದಿದ್ದರೆಂದೇ ಇಟ್ಟುಕೊಳ್ಳೋಣ. ಸಾಬೀತಾಗಿದೆಯೋ ಇಲ್ಲವೋ, ವಾದಕ್ಕೆ ಇಟ್ಟುಕೊಳ್ಳೋಣ. ಅವರ ಅಂದಿನ ದ್ರೋಹಕ್ಕೆ ಇಂದು ಶಿಕ್ಷಿಸೋದು ಯಾರನ್ನು?
ಚೇತನಾ ತೀರ್ಥಹಳ್ಳಿಯವರೇ... ನೀವೇ ನಿಮ್ಮ ಲೇಖನದಲ್ಲಿ ಹೇಳಿದಿರಿ ಇತಿಹಾಸವನ್ನ ಪಾಠಶಾಲೆಯಾಗಿ ಕಲಿಯಬೇಕು... ಹಾಗಾಗಿ ಈಗ ಹೊರ ಬಂದ ಸತ್ಯ ಕೇವಲ ಅರಿವಿಗಷ್ಟೇ, ಯಾರನ್ನೋ ಶಿಕ್ಷಿಸುವುದಕ್ಕೆ ಇಂದು ಸತ್ಯವನ್ನು ಹೊರತರಲಾಗುತ್ತಿದೆ ಅನ್ನುವ ಊಹೆ ನಿಮಗ್ಯಾಕೆ...? ನೆಹರೂರವರು ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅನ್ಯಾಯ ಮಾಡಿದ್ದು ಈಗಿನ ಭಾರತೀಯರಿಗೆ ಇಂದಿನ ಯುವ ಪೀಳಿಗೆಗೆ ತಿಳಿಯಿತು ಅಂತಾದರೆ ನಿಮಗ್ಯಾಕೆ ಹೊಟ್ಟೆಯುರಿ...? ಯಾವುದು ನಿಜವಾದ ಇತಿಹಾಸ ಯಾವುದು ಸುಳ್ಳು ಅನ್ನುವುದನ್ನು ಕಡತಗಳು ಸಾಬೀತು ಪಡಿಸುತ್ತವೆ ಎಂದಾದಾಗ ಜನರು ತಿಳಿದುಕೊಳ್ಳಲಿ... ಕನಿಷ್ಠ ಮುಂದಿನ ಪೀಳಿಗೆಗಾದರೂ ಪ್ರಥಮ ಪ್ರಧಾನಿ ಎನಿಸಿಕೊಂಡವರ ದೇಶನಿಷ್ಠೆ ಗೊತ್ತಾಗಲಿ... ಗೊತ್ತಾದೊಡನೆ ಯಾರೂ ಅವರ ಕುಟುಂಬಿಕರನ್ನ ಶಿಕ್ಷಿಸುವುದಿಲ್ಲ ಬಿಡಿ... ನಿಮ್ಮ ಪ್ರಕಾರ ಇತಿಹಾಸ ಅಂದರೆ ಯಾರನ್ನೋ ಶಿಕ್ಷಿಸುವುದಕ್ಕಾಗಿ ಇರುವಂಥಾದ್ದು ಅಂತಲೇ...?

೨.ಸುಭಾಷರು ಫ್ಲೈಟ್ ಕ್ರಾಷ್ ನಲ್ಲಿ ಕೊನೆಯಾಗಲಿಲ್ಲ ಅನ್ನುವ ಮಾತು ಇವತ್ತು ನೆನ್ನೆಯದಲ್ಲ. ಅವರು ಜೀವಂತ ಇರಬಹುದು ಅನ್ನುವ ಗುಮಾನಿ ಮತ್ತು ಸ್ವಾತಂತ್ರ್ಯ ಹೋರಾಟದ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಗಳಿಂದಾಗಿ ಅವರ ‘ಕಥೆ’ ಮುಗಿಸಲಾಗಿದೆ ಅನ್ನುವ ಊಹಾಪೋಹಗಳ ನಡುವೆಯೇ ಭಾರತೀಯರು ದಶಕಗಳನ್ನು ಕಳೆದಿದ್ದಾರೆ. ಈ ನಡುವೆ ಈ ಸಂಗತಿಯನ್ನು ಇಟ್ಟುಕೊಂಡೇ ರಾಜಕೀಯ ಲಾಭ ಮಾಡಿಕೊಳ್ಳುತ್ತ ಬಂದವರು ಅಧಿಕಾರ ಸಿಕ್ಕಮೇಲೆ ‘ವಿದೇಶೀ ಸಂಬಂಧಗಳಿಗೆ ಧಕ್ಕೆ’ ಅನ್ನುವ ಮತ್ತದೇ ಹಿಂದಿನ ಸರ್ಕಾರಗಳ ನೆಪವೊಡ್ಡಿದ್ದಾರೆ.

ನಿಮ್ಮ ಲೇಖನದಲ್ಲಿ ಒಂದು ಕಡೆ ಸತ್ಯದ ಅನಾವರಣ ಮಾಡಿರುವುದರಿಂದ ಏನು ಲಾಭ ಅನ್ನುವ ಪ್ರಶ್ನೆ ಎತ್ತುತ್ತಾ ಯಾರನ್ನು ಶಿಕ್ಷಿಸುತ್ತೀರಿ... ಅನ್ನುತ್ತೀರ, ಅದೇ ಮತ್ತೊಂದು ಕಡೆ ಕೇಂದ್ರ ಸರ್ಕಾರ ಇನ್ನೂ ಸತ್ಯ ಬಹಿರಂಗ ಪಡಿಸಿಲ್ಲ ಅನ್ನುತ್ತಾ ರಾಜಕೀಯ ಮಾಡುತ್ತಿದ್ದೀರಿ ಅನ್ನುತ್ತೀರಿ.... ವಾಸ್ತವದಲ್ಲಿ ನಿಮಗೆ ಬೇಕಾಗಿದ್ದು ಏನು...? ಸತ್ಯವೋ ಅಥವಾ ಕೇಂದ್ರ ಸರ್ಕಾರವನ್ನು ದೂರಲು ಒಂದು ನೆಪವೋ...?

೩.ಯಾವ ಇತಿಹಾಸ, ಪುರಾಣ ಅಥವಾ ಧರ್ಮಗ್ರಂಥ ಇಂದಿಗೂ ತನ್ನ ಪ್ರಭಾವ ಉಳಿಸಿಕೊಂಡು ಜನಜೀವನವನ್ನು ದುಸ್ತರವಾಗಿಸ್ತಿವೆಯೋ, ಯಾವ ಸ್ಮೃತಿಗಳ ಆದೇಶಗಳು ಜನರಲ್ಲಿ ಒಡಕು ಮೂಡಿಸ್ತವೆಯೋ, ಅಂಥವನ್ನು ಪ್ರಶ್ನಿಸುವ ಅಗತ್ಯವೂ ಖಂಡಿತ ಇದೆ. ಅವುಗಳ ಪೊಳ್ಳುತನವನ್ನು ಎತ್ತಿ ಆಡುವ, ಚರ್ಚಿಸುವ ಅಗತ್ಯ ಒಂದು ಹಂತದವರೆಗೆ ಇದ್ದೇ ಇದೆ.
ಖಂಡಿತ ಪ್ರಶ್ನಿಸಬಹುದು ಆದರೆ ಕೇವಲ ಒಂದು ಧರ್ಮದ್ದೇ ಪೊಳ್ಳುತನವನ್ನ ಪ್ರಶ್ನಿಸುವ ಕಾರ್ಯವಾಗುತ್ತಿದೆಯಲ್ಲಾ ಅದು ಯಾಕೆ...? ಇನ್ನಿತರ ಇತಿಹಾಸದಲ್ಲಿ ಪುರಾಣ ಅಥವಾ ಧರ್ಮಗ್ರಂಥದಲ್ಲಿ ಪೊಳ್ಳುತನವೇ ಇಲ್ಲವೇ ಅಥವಾ ಅದೇ ಸ್ಮೃತಿಗಳಲ್ಲಿ ಇರುವ ಒಳ್ಳೆಯ ಅಂಶಗಳನ್ನ ಪ್ರಚಾರಗೊಳಿಸೋ ಕಾರ್ಯ ಯಾಕೆ ಆಗುತ್ತಿಲ್ಲ...?

೪.ಗೋಡ್ಸೆಯ ಬಗ್ಗೆ ಹಿಟ್ಲರನ ಬಗ್ಗೆ ಯಾಕೆ ಮಾತಾಡಬೇಕು ಅಂದರೆ, ಇವತ್ತು ಕೂಡ ಜನಾಂಗೀಯ ದ್ವೇಷದ, ಸಿದ್ಧಾಂತ ರೋಷದ ಮಂದಿ ನಮ್ಮ ನಡುವೆ ಇದ್ದಾರೆ ಆದ್ದರಿಂದ. ಅಂಥವರಿಂದ ತೊಂದರೆ ಆಗ್ತಲೇ ಇರುವುದರಿಂದ.
ತೊಂದರೆ ಬರೀ ಒಂದು ಜನಾಂಗದ ಒಂದು ಸಿದ್ದಾಂತದ ರೋಷದ ಮಂದಿಯಿಂದಲೇ ಆಗುತ್ತಿದೆಯೇ...? ಇನ್ನೊಂದು ತುದಿಯಿಂದಲೂ ಇಂಥವುಗಳಾದಾಗ ತಾವು ಮಾತಾಡುತ್ತೀರಾ...?

೫. ಈ ಹೊತ್ತು ನೆನಪಾಗಿದ್ದು: “ಭೂತದಲ್ಲಿ ನೆಲೆಸಿರಬೇಡ. ಭವಿಷ್ಯವನ್ನು ಕನಸುತ್ತ ಕೂರಬೇಡ. ಈ ಕ್ಷಣವನ್ನು ಪರಿಪೂರ್ಣವಾಗಿ ಬದುಕು” ಅನ್ನುತ್ತಾನೆ ಬುದ್ಧ. ನಮ್ಮಲ್ಲಿ ಕೆಲವರು ಇತಿಹಾಸದಿಂದ ಪಾಠ ಕಲಿಯಲು ಬಯಸುತ್ತಿಲ್ಲ. ಇತಿಹಾಸದಲ್ಲೇ ಇದ್ದು ಚಡಪಡಿಸುವ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೇನು ಮದ್ದು?
ತಮ್ಮ ಇಡಿಯ ಲೇಖನವು ಈ ಕ್ಷಣದ ಕುರಿತಾಗಿ ಇಲ್ಲವಲ್ಲ.... ಯಾವುದೋ ಇತಿಹಾಸದ ಸತ್ಯ ಆಧಾರ ಸಹಿತ ಸಿಕ್ಕಿತೆನ್ನುವಾಗ ಆದ ನೋವನ್ನು ಹೇಳಿಕೊಂಡು ಸದಾ ನೀವು ನಿಮಗಾಗದ ಇತಿಹಾಸದಲ್ಲಿನ ಪಾತ್ರಗಳನ್ನ ದೂರುವುದಕ್ಕೆ ಕಾರಣಗಳನ್ನ ನೀವೆ ಕೊಡುವ ಕೆಲಸ ಮಾಡಿದ್ದೀರಿ ಅಷ್ಟೇ ತಾನೇ... ಹಾಗಾದರೆ ನೀವು ಇತಿಹಾಸದಿಂದ ಕಲಿತದ್ದು ಇದೇನಾ... ಇಡಿಯ ಲೇಖನದಲ್ಲಿ ನಿಮ್ಮ ಚಡಪಡಿಕೆ ಕಾಣಿಸುತ್ತಿದೆಯಲ್ಲ ಅದಕ್ಕೇನು ಮದ್ದಿದೆ...?

ಅಸಹ್ಯದ ತುತ್ತ ತುದಿಯಲ್ಲಿದೆ ಕಾಂಗ್ರೆಸ್....ಭಾರತದ ಆಡಳಿತ ನಡೆಸುವ ಆಸೆಯಿಂದ ರೂಪುಗೊಂಡ ಯಾವುದೇ ಪಕ್ಷಕ್ಕಾದರೂ ಭಾರತದ ಹಿತದೃಷ್ಟಿ ಪ್ರಾಮುಖ್ಯವಾಗಿರಬೇಕು.. ಆದರೆ ತಮ್ಮ ಸ್ವಹಿತಾಸಕ್ತಿಯನ್ನೇ ಅಜೆಂಡಾ ಮಾಡಿಕೊಂಡ ಪಕ್ಷಕ್ಕೆ ದೇಶದ ಕಾಳಜಿ ಎಲ್ಲಿ ಕಾಣಿಸೀತು...? ಒಂದಲ್ಲ ಎರಡೆರಡು ಘಟನೆಗಳು ಇದನ್ನ ಸಾರುತ್ತವೆ... ಸದಾ ಭಾರತಕ್ಕೆ ತಲೆನೋವಾಗಿರೋಕೆ ಬಯಸುವ ಪಾಕಿಸ್ಥಾನದಂತಹ ದೇಶವೊಂದರ ಕುಟಿಲತೆಯನ್ನು ಬಲ್ಲವರಾಗಿಯೂ ಮೊನ್ನೆ ಸ್ಫೋಟಗೊಂಡ ಪಾಕಿಸ್ಥಾನದ ಬೋಟಿನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನ ಮಾಡುವುದು ಇದಕ್ಕೊಂದು ನಿದರ್ಶನ ಅಲ್ಲವೇ... ಎಂಥಾ ವಿಚಿತ್ರ ವಿರೋಧಿಸುವುದಕ್ಕಾಗಿ ವಿರೋಧ ಅನ್ನೋದೇ ಮೂಲ ಮಂತ್ರವೇ...? ಶಹಬ್ಬಾಸ್ ಸೈನಿಕರೇ... ಭಾರತದಲ್ಲಿ ಸಂಭವಿಸಲಿದ್ದ ಇನ್ನೊಂದು ದುರಂತವನ್ನ ತಡೆದಿರಿ ಎಂದು ಬೆನ್ನ ತಟ್ಟಬೇಕಾದ ನಾವೇ ಅವರನ್ನ ಅನುಮಾನಿಸೋದೆ...? ಇಂತಹ ಹೇಳಿಕೆಗಳಿಂದ ಇನ್ನೊಂದು ಮುಂಬೈ ಸ್ಫೋಟ ಪ್ರಕರಣಗಳಾಗದಂತೆ ತಡೆದ ನಮ್ಮ ನೌಕಾಪಡೆಯ ಆತ್ಮಸ್ಥೈರ್ಯ ಏನಾಗಬೇಡ....? ಒಂದು ವೇಳೆ ಸಂಶಯವಿದ್ದಿದ್ದರೂ ಅದನ್ನ ಗುಪ್ತವಾಗಿ ಸರಕಾರದೊಂದಿಗೆ ಚರ್ಚಿಸಬಹುದಿತ್ತು... ಅಲ್ಲವೇ.... ಆದರೆ ಅವರ ಲಾಭದ ಲೆಕ್ಕಾಚಾರವೇ ಬೇರೆ ಅಮಾಯಕರ ಹತ್ಯೆ ಅನ್ನುತ್ತಾ ಸರ್ಕಾರವನ್ನ ದೂಷಿಸಿದರೆ... ಮತ್ತೆ ತಮ್ಮ ವೋಟ್ ಬ್ಯಾಂಕ್ ತಮಗೆ ಅಧಿಕಾರ ದಕ್ಕಿಸಿಕೊಡಬಹುದು ಅನ್ನೋ ದೂ(ದು)ರಾಲೋಚನೆ...
ಇರಲಿ ಬಿಡಿ ಇದೊಂದೆ ಕಾರಣನಾ ಅನ್ನುವವರಿಗೆ ಇಂದಿನ ವಿಜಯವಾಣಿಯಲ್ಲಿ ಇನ್ನೊಂದು ಸುದ್ದಿ ಸಿಗುತ್ತದೆ . ಮೆಹ್ದಿಯ ಹಿಂಬಾಲಕರನ್ನು ರಕ್ಷಿಸುವ ಸಲುವಾಗಿ ತನಿಖಾಧಿಕಾರಿಯನ್ನೇ ವರ್ಗಾವಣೆ ಮಾಡಲಾಗಿದೆಯಂತೆ.... ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಗುರಿತಿಸಿಕೊಂಡಿರುವಾತನ ವಿರುದ್ಧ ಚಾರ್ಜ್ ಶೀಟ್ ಹಾಕೋಕೆ ಒತ್ತಡ ತರುತ್ತಿರುವುದು..ಈ ಪ್ರಕರಣದ ತೀವ್ರತೆಯನ್ನು ತಗ್ಗಿಸಲು ಪೋಲೀಸರ ವಿರುದ್ಧ ಒತ್ತಡ ಹೇರೋದು ಇದೆಲ್ಲಾ ಏನನ್ನ ಸೂಚಿಸುತ್ತದೆ...? ದೇಶ ಅಪಾಯಕ್ಕೆ ಸಿಕ್ಕರೂ ಪರವಾಗಿಲ್ಲ... ನಮ್ಮ ವೋಟ್ ಬ್ಯಾಂಕ್ ಹಾಳಾಗಬಾರದು ಅನ್ನೋದೇ ತಾನೇ...? ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಲಿಲ್ಲವೇ.... ಇವರುಗಳು ನಮ್ಮ ದೇಶದ ರಕ್ಷಣೆ ಮಾಡಿಯಾರೇ...?
ಎಲ್ಲೋ ಇವರಿಗೆ ಮತದಾನ ಮಾಡೋದು ಅಂದರೆ ನಮ್ಮ ಮರಣ ಪತ್ರಕ್ಕೆ ನಾವೇ ಅರ್ಜಿ ಹಾಕೋದು ಅನ್ನಬಹುದು... ಯಾಕೆಂದರೆ ಉಗ್ರವಾದಿಗಳನ್ನೇ ಪರೋಕ್ಷವಾಗಿ ಬೆಂಬಲಿಸೋದು ಅಂದರೆ ಮುಂದೆ ನಮ್ಮಲ್ಲಿ ಬಾಂಬಿಡಲು ಬನ್ನಿ ಅಂತ ಆಹ್ವಾನ ಕೊಟ್ಟ ಹಾಗೆಯೇ... ಆದರೆ ಇಂತಹ ಪರೋಕ್ಷ ಬೆಂಬಲಿಗರಿಗೆಲ್ಲಾ ಅವರು ಹೇಳಿ ಬಾಂಬ್ ಇಡುತ್ತಾರೆಯೇ... ನಾವು ನೀವು ಹಾದು ಹೋಗುವ ಹಾದಿ ಬೀದಿಯಲ್ಲಿಟ್ಟು ಹೊರಟು ಹೋಗುತ್ತಾರೆ..ಮೊನ್ನೆ ಅಮಾಯಕ ಭವಾನಿ ಎಂಬುವವರು ಬಲಿಯಾದಂತೆ ನಾವು ನೀವುಗಳು ಮತಹಾಕಿದ ಮತದಾರರು ಇದಕ್ಕೆ ಬಲಿಪಶುಗಳು..
ಇಂತಹ ಬೇಕಾದಷ್ಟು ವಿಷಯಗಳನ್ನ ಹೇಳುತ್ತಾ ಸಾಗಬಹುದು... ಅದಕ್ಕೆ ಹೇಳಿದ್ದು... ಅಸಹ್ಯದ ತುತ್ತತುದಿಯಲ್ಲಿದೆ ಕಾಂಗ್ರೆಸ್ ಅಂತ. ಹೇಳಿದೊಡನೆ ಸರಿಯಾದಾರು ಅನ್ನೋ ಭರವಸೆಯಿಂದಲ್ಲ... ಒಮ್ಮೆ ಹಾಗೇ ಕುಳಿತು ಅತ್ಮಾವಲೋಕನ ಮಾಡಿಕೊಳ್ಳಿ...ನನ್ನ ವಿನಂತಿ. ನನ್ನವರು ಸುರಕ್ಷಿತ ಅನ್ನೋ ಭ್ರಮೆಯಲ್ಲಿ ಬದುಕಬೇಡಿ... ಒಂದಲ್ಲ ಒಂದು ದಿನ ನಿಮ್ಮ ಆಪ್ತರೋ ಸಂಬಂಧಿಗಳು, ಮಕ್ಕಳೋ ಯಾರೂ ಕೂಡ ಇಂತಹ ಬಾಂಬಿಗೆ ಬಲಿಯಾಗೋಕೆ ನೀವೇ ಕಾರಣೀಕರ್ತರಾಗಿಬಿಟ್ಟೀರಿ...ಜೋಕೆ.. ಕೆಟ್ಟ ಮೇಲೆ ಚಿಂತಿಸಿ ಫಲವಿಲ್ಲವಲ್ಲ.... ಯೋಚಿಸಿ...ದೇಶದ ಭದ್ರತೆಯನ್ನ ನಿಮ್ಮ ರಾಜಕೀಯದಾಟಕ್ಕೆ ಬಲಿಕೊಡಬೇಡಿ...

ನಾನೇಕೆ ಕಾಂಗ್ರೆಸ್ ವಿರೋಧಿ.....???ಪ್ರತಿಯೊಬ್ಬನಿಗೂ ಒಂದು ಪಕ್ಷವನ್ನು ಮೆಚ್ಚಿಕೊಳ್ಳಲು ಅಥವಾ ವಿರೋಧಿಸಲು ತನ್ನದೇ ಆದ ಕಾರಣಗಳಿರುತ್ತದೆ.( ಇದಕ್ಕೆ ವ್ಯತರಿಕ್ತವಾಗಿ ನನ್ನ ಅಪ್ಪ ಮೆಚ್ಚಿದ್ದರು, ಹಾಗಾಗಿ ನಾನು ಕೂಡ ಮೆಚ್ಚುತ್ತೇನೆ ಅನ್ನುವವರೂ ಕೆಲವರು ಇರುತ್ತಾರೆ. ಅದನ್ನ ಬಿಟ್ಟು ಬಿಡೋಣ.) ಅದೇ ರೀತಿ ಕಾಂಗ್ರೆಸ್ ಗೆ ನನ್ನ ವಿರೋಧವಿದೆ, ಒಬ್ಬ ದೇಶವನ್ನು ಪ್ರೀತಿಸುವ ಭಾರತೀಯನಾಗಿ ಕಾಂಗ್ರೆಸ್ ನ ಕೆಲವು ಇತಿಹಾಸದ ನಡೆ ಮತ್ತು ಕೆಲವು ವರ್ತಮಾನದ ನಡೆಯನ್ನು ನೋಡಿದಾಗ ನನಗೆ ಈ ಪಕ್ಷ ದೇಶದ ಹಿತಕ್ಕೆ ಮಾರಕ ಎಂದು ಅನಿಸತೊಡಗಿತು.ಸಣ್ಣ ಸಣ್ಣ ಕಾರಣಗಳು ಹಲವಾರಿದ್ದರೂ ಒಂದಷ್ಟು ಮುಖ್ಯ ಕಾರಣಗಳನ್ನ ನಿಮ್ಮ ಜೊತೆ ಹಂಚೆಕೊಳ್ಳಬಯಸುತ್ತೇನೆ.

೧. ಪಕ್ಷದೊಳಗೇ ಇಲ್ಲ ಪ್ರಜಾಪ್ರಭುತ್ವ.
ಈ ಪಕ್ಷದ ಸ್ಥಾಪನೆ ಆದ ಮೊದಲಲ್ಲಿ ಸ್ವಲ್ಪ ಮಟ್ಟಿನ ಪ್ರಜಾ ಪ್ರಭುತ್ವ ಅಂದರೆ ಸರ್ವ ಸದಸ್ಯರ ಮಾತಿಗೆ ಮನ್ನಣೆ ಸಿಕ್ಕಿತ್ತಾದರೂ ಗಾಂಧೀಜಿಯವರ ಸೇರ್ಪಡೆಯ ನಂತರ ಅಲ್ಲಿ ಗಾಂಧೀಜಿಯವರದ್ದೆ ಆಡಳಿತ ಶುರುವಾಯಿತು. ಗಾಂಧೀಜಿಯವರ ಆಳ್ವಿಕೆಯಲ್ಲಿ ಅದೆಷ್ಟೋ ಜನ ಸಮರ್ಥ ವ್ಯಕ್ತಿಗಳಿಗೆ ಅನ್ಯಾಯವಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿನ ಸುಭಾಷ್ ಚಂದ್ರ ಬೋಸರಿಗಾದ ಅನ್ಯಾಯ ಇರಬಹುದು, ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭ ಬಾಯಿ ಪಟೇಲ್ ರಿಗಿರಬಹುದು. ಭಗತ್ ಸಿಂಗ್ ಅಥವಾ ಕ್ರಾಂತಿಕಾರಿಗಳಿಗಿರಬಹುದು. ಅಷ್ಟೇ ಏಕೆ ಅವರ ನಿಲುವಿನಿಂದಾಗಿ ವಂದೇ ಮಾತರಂ ಹಾಡು ತುಂಡಾಯಿತು, ದೇಶವೇ ಹೋಲಾಯಿತು. ದೇಶದ ಜನರ ಒಕ್ಕೊರಲ ಅಭಿಪ್ರಾಯವಾದ " ಚರಕ ಇರುವ ಕೇಸರಿ ಧ್ವಜ " ದೇಶದ ಬಾವುಟ ಆಗೋದು ತಪ್ಪಿಹೋಯಿತು. ಹೀಗೆ ಏಕ ವ್ಯಕ್ತಿಯ ಅಭಿಪ್ರಾಯ ಹೇರಿಕೆ ಈ ಪಕ್ಷದಲ್ಲಿ ಮುಂದುವರಿದುಕೊಂಡು ಬಂದಿದೆ. ನೆಹರು, ಇಂದಿರಾಗಾಂಧಿ, ಹೀಗೆ ಸಾಗಿ ಸಾಗಿ ರಾಹುಲ್ ಗಾಂಧಿಯವರೆಗೆ ಬಂದು ಒಂದು ಕುಟುಂಬದ ಸ್ವತ್ತಾಗಿ ಹೋಗಿದೆ. ಈ ರೀತಿ ಒಬ್ಬ ವ್ಯಕ್ತಿಯ, ಒಂದು ಕುಟುಂಬದ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ಪಕ್ಷ ದೇಶದ ಜನರ ಅಭಿಪ್ರಾಯಕ್ಕೆ ಬೆಲೆ ಕೊಟ್ಟಾರು ಅನ್ನೋದನ್ನ ನಾ ಹೇಗೆ ನಂಬಲಿ...?

೨. ನೆಹರೂರವರ ಅವಾಂತರಗಳು
ಈ ದೇಶದ ಪ್ರಥಮ ಪ್ರಧಾನಿಯಾದ ನೆಹರೂರವರ ಅವಾಂತರಗಳನ್ನ ಹೇಳಹೊರಟರೆ ಬೇಕಾದಷ್ಟಿವೆ. ಪಾಕಿಸ್ಥಾನವನ್ನು ನಿರ್ನಾಮ ಮಾಡಿಸುವಂಥಾ ಅವಕಾಶವನ್ನು ಯುದ್ಧ ವಿರಾಮ ಘೋಷಿಸಿ ಹಾಳುಗೆಡವಿದ್ದು, ಸೈನ್ಯ ಪ್ರಮುಖರ ಮಾತಿಗೆ ಕಿವಿಗೊಡದೆ ಚೀನಾದೆದುರು ದೇಶದ ಘನತೆಗೆ ಕುಂದು ತಂದಿದ್ದು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕೊಟ್ಟಿದ್ದು ಪ್ರಮುಖವಾದವುಗಳು. ಭಾರತೀಯ ಸಂಸ್ಕೃತಿಯ ಬಗ್ಗೆ ತಿರಸ್ಕಾರವಿದ್ದ ವ್ಯಕ್ತಿಗೆ ಈ ದೇಶದ ಚುಕ್ಕಾಣಿ ಹಿಡಿಯುವ ಭಾಗ್ಯ ಒದಗಿಸಿದ್ದು ಇದೇ ಕಾಂಗ್ರೆಸ್ ಅಲ್ವಾ...ಗೋಹತ್ಯೆ ನಿಷೇಧದ ಮಸೂದೆಗೆ ಮೊದಲ ತಡೆಯಾಗಿದ್ದು ನೆಹರೂರವರು ಅನ್ನೋದನ್ನ ಮರೆಯಲು ಸಾಧ್ಯವೇ... ಒಂದು ರೀತಿಯಲ್ಲಿ ನೋಡಿದರೆ ಗಾಂಧೀಜಿಯವರಂತೆ ನೆಹರೂ ಕೂಡ ಸರ್ವಾಧಿಕಾರಿಯಂತೆ ನಡೆಯತೊಡಗುತ್ತಾ ಸರ್ವರ ಅಭಿಪ್ರಾಯಕ್ಕೆ ಕಿಂಚಿತ್ತು ಗೌರವ ಕೊಡದೆ ತನ್ನದೇ ಹಠ ಸಾಧಿಸತೊಡಗಿದರು. ಒಂದು ಪಕ್ಷದಲ್ಲಿ ಸರ್ವ ಸಮ್ಮತಿಗೆ ಬೆಲೆ ಇಲ್ಲ ಅಂತಾದಲ್ಲಿ ಆ ಪಕ್ಷಕ್ಕೆ ನಾನು ಹೇಗೆ ಗೌರವ ಕೊಡಲಿ....?

೩. ಇಂದಿರಾಗಾಂಧಿಯ ದರ್ಪ....
ದಿಟ್ಟತನವನ್ನ ಮೆಚ್ಚಿ ದುರ್ಗೆಗೆ ಹೋಲಿಸಲ್ಪಟ್ಟರೂ ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿಯಂಥಾ ಘಟನೆ ಸಂಭವಿಸಲು ಕಾರಣೀಕರ್ತೆ ಈಕೆಯೇ.... ಅಧಿಕಾರದ ಅಮಲಿನ ಅತಿರೇಕ ಅಂದರೆ ಇದೇ ಅಲ್ವಾ, ಪಟ್ಟದಾಸೆಗಾಗಿ ಜನರನ್ನೇ ಸಂಕಷ್ಟಕ್ಕೀಡು ಮಾಡಲು ಹಿಂದು ಮುಂದು ನೋಡಲಾರಳು ಅನ್ನುವ ಈಕೆ ಇದೇ ಕಾಂಗ್ರೆಸ್ಸಿನ ನಾಯಕಿ. ಅಧಿಕಾರದ ಮದದಿಂದಾದ ಎಡವಟ್ಟುಗಳ ಕಾರಣದಿಂದಾಗಿ ಆಕೆ ಕೊಲ್ಲಲ್ಪಟ್ಟಳೇನೋ ... ಆದರೆ ಆ ನಂತರ ಆದ ಸಿಖ್ ಧಂಗೆಯಲ್ಲಿ ಕಾಂಗ್ರೆಸ್ಸಿಗರು ಮಾಡಿದ್ದೇನು...? ಅಮಾಯಕ ಸಿಖ್ಖರ ನರಮೇಧವೇ ಆಯಿತು. ತಮ್ಮದೇ ಮನಸೋ ಇಚ್ಛಾ ವರ್ತಿಸುವ ನಾಯಕರು... ಅವರುಗಳ ತಪ್ಪನ್ನೆಲ್ಲಾ ಕಡೆಗಣಿಸಿ ಕುರಿ ಮಂದೆಯಂತೆ ಹಿಂಬಾಲಿಸುವ ಬೆಂಬಲಿಗರು, ಇದೇ ಕಾಂಗ್ರೆಸ್ಸಿನ ಅಂತಃ ಶಕ್ತಿಯೇ...? ತಮ್ಮ ನಾಯಕಿಯ ಹತ್ಯೆಯಾದುದನು ಕಂಡು ರೋಷಗೊಂಡ ಕಾಂಗ್ರೆಸ್ ಕಾರ್ಯಕರ್ತರು ಅಮಾಯಕ ಸಿಖ್ ರ ಮಾರಣ ಹೋಮ ಮಾಡಿದರಲ್ಲ... ಇಂಥಾ ರೋಷ, ಭಾರತದ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ನಡೆಸುವ ದಾಳಿಗಳಾದ ಏಕೆ ಮೂಡುವುದಿಲ್ಲ....? ಇದರ ಅರ್ಥ ಕಾಂಗ್ರೆಸ್ಸಿಗರಿಗೆ ದೇಶಕ್ಕಿಂತ ತಮ್ಮ ನಾಯಕ/ಕಿ ಯರೇ ದೊಡ್ಡದೇ....? ದೇಶಕ್ಕಿಂತ ಯಾರೂ ದೊಡ್ದದಲ್ಲ ಅನ್ನುವ ನಂಬಿಕೆಯುಳ್ಳ ನನಗೆ ಇಂಥಾ ಪಕ್ಷ ಹೇಗೆ ತಾನೆ ಮೆಚ್ಚುಗೆಯಾದೀತು...?

೪. ನಿಗೂಢ ರಾಜಕೀಯಗಳು....
ಸುಭಾಶ್ ಚಂದ್ರ ಬೋಸ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಇದೇ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ದೇಶ ತೊರೆದ ಅವರನ್ನ ಸ್ವಾತಂತ್ರ್ಯಾನಂತರ ಆದರ ಪೂರ್ವಕವಾಗಿ ಬರಮಾಡಿಕೊಳ್ಳಬೇಕಾಗಿತ್ತು , ಆದರೆ ನೆಹರೂ ಮತ್ತವರ ಕಾಂಗ್ರೆಸ್ ಸರ್ಕಾರ ಮಾಡಿದ್ದೇನು...? ತನ್ನ ದೇಶದ ಪರಮೋಚ್ಛ ಸ್ವಾತಂತ್ರ್ಯ ಹೋರಾಟಗಾರನ ವಿರುದ್ಧವಾಗಿ ಬ್ರಿಟಿಷರ ಪರವಾಗಿ ನಿಷ್ಠೆ ತೋರಿಸಿತು.... ಬಿಡಿ ಕಾಂಗ್ರೆಸ್ ಕಂಡ ಅತ್ಯಂತ ಉತ್ತಮ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ... ಅವರ ಸಾವಿನಲ್ಲಿ ಅದೇನೋ ನಿಗೂಢತೆ ಆದರೆ ಅದನ್ನು ಬಯಲುಗೊಳಿಸೋ ಇಚ್ಛೆ ಸ್ವತಃ ಕಾಂಗ್ರೆಸ್ ಗೇ ಇಲ್ಲ ಅಂದರೆ ಯಾವೂದೋ ರಾಜಕೀಯ ಒಳಸಂಚು ಇದ್ದಿರಲೇಬೇಕಲ್ವಾ....? ಇದೇ ರೀತಿ ದೇಶ ಕಂಡ ಮತ್ತೋರ್ವ ದೇಶಭಕ್ತ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ... ಇವರ ಸಾವಿನ ಹಿಂದೆಯೂ ರಾಜಕೀಯ "ಕೈ"ವಾಡ ಇದ್ದ ಹಾಗನಿಸುತ್ತದೆ, ಈ ಸಾವುಗಳ ತನಿಖೆ ಸಮರ್ಪಕವಾಗಿಲ್ಲ ಅದಕ್ಕೆ ಬೇಕಾದ ಸರಿಯಾದ ಸಮಜಾಯಿಷಿಕೆ ಇನ್ನೂ ಕಾಂಗ್ರೆಸ್ ನಿಂದ ಸಿಕ್ಕಿಲ್ಲ... ಇದೆಲ್ಲಾ ಕಾಂಗ್ರೆಸ್ ನ ಅಧಿಕಾರದ ಮೋಹಕ್ಕೆ ಹಿಡಿದ ಕನ್ನಡಿಗಳಲ್ಲವೇ...?

೫. ರಾಜೀವ ಗಾಂಧಿಯ "ವಿದೇಶ" ವ್ಯಾಮೋಹ...
ಈ ರೀತಿ ಹೇಳೋದಿಕ್ಕೆ ಅವರು ವಿದೇಶಿ ಹೆಣ್ಣನ್ನು ಮದುವೆ ಆಗಿದ್ದು ಖಂಡಿತಾ ಅಲ್ಲ, ( ಅದು ನಮ್ಮ ದುರ್ದೈವ) ಇದಕ್ಕೆ ಮುಖ್ಯ ಕಾರಣ ದೇಶದಲ್ಲಾದ ದೊಡ್ದ ದುರಂತ " ಭೋಪಾಲ್ ಅನಿಲ ದುರಂತ" ದ ಸಮಯದಲ್ಲಿ ಪ್ರಧಾನಮಂತ್ರಿ ರಾಜೀವ ಗಾಂಧಿ ನಡೆದುಕೊಂಡ ರೀತಿ. ತನ್ನ ದೇಶದ ಜನರನ್ನು ಕಾಪಾಡುವುದಕ್ಕಿಂತಲೂ ಈ ದುರ್ಘಟನೆಯ ಕಾರಣೀಕರ್ತ...ವಾರೆನ್ ಆಂಡರ್ಸನ್ ಅವರನ್ನು ಕಾಪಾಡೋದು ಮುಖ್ಯ ಅಂದು ಕೊಂಡು ಬಿಟ್ಟರಲ್ಲಾ..., ಒಬ್ಬ ವ್ಯಕ್ತಿಯನ್ನು ಅದೂ ಪ್ರಧಾನ ಮಂತ್ರಿಯಾಗಿ ದೇಶಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಯಾವ ರೀತಿ ಸಮರ್ಥಿಸಿಕೊಳ್ಳಲು ಸಾಧ್ಯ...? ಆದರೆ ಕಾಂಗ್ರೆಸಿಗರಿಗೆ ಇದು ದೇಶದ್ರೋಹದ ಕೆಲಸವಾಗಿ ಕಾಣಿಸಲೇ ಇಲ್ಲ. ಮತ್ತೆ ಬೆಂಬಲಕ್ಕೆ ನಿಂತು ಬಿಟ್ಟರು. ನೊಂದ ಜೀವಗಳಿಗೆ ದೇಶದ ಆಡಳಿತ ಪಕ್ಷ ಮತ್ತು ಪ್ರಧಾನಿ ಈ ರೀತಿಯ ಸಹಾನುಭೂತಿ ತೋರಿಸುವುದೇ...? ಇಂಥ ಒಂದು ಪಕ್ಷ ವಿರೋಧಕ್ಕಷ್ಟೇ ಅರ್ಹ ಅಂತನಿಸುವುದಿಲ್ಲವೇ...? (ಭೋಫೋರ್ಸ್ ಹಗರಣ ರಾಜೀವರ ವಿದೇಶ ವ್ಯಾಮೋಹಕ್ಕೆ ಇನ್ನೊಂದು ಉದಾಹರಣೆ ಅಲ್ಲವೇ...)

೬ ಹಗರಣಕ್ಕಾಗಿ ಸೈನಿಕರ ಜೀವವನ್ನು ಪಣವಿಡಲು ತಯಾರು...
ತನ್ನ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಮಾಡಿದ ಹಗರಣಗಳೆಷ್ಟೋ.... ಲೆಕ್ಕ ಹಾಕೋಕೆ ನಾನು ಹೋಗೋದಿಲ್ಲ . ಆದರೆ ಸೈನ್ಯದ ವಿಷಯದಲ್ಲಿ ಹಗರಣ ಮಾಡೋದು ಬಿಟ್ಟಿಲ್ಲವಲ್ಲ ಅದು ಬೇಸರವನ್ನು ತರಿಸುತ್ತದೆ. ಈ ದೇಶದ ರಕ್ಷಣೆಗಾಗಿ ನಿಜವಾಗಿಯು ಪ್ರಾಣವನ್ನು ಪಣವಾಗಿಡುವವರು ಸೈನಿಕರು. ಅಂಥಾ ಸೈನಿಕರ ಬೆನ್ನಿಗೆ ಚೂರಿ ಹಾಕುವುದು ಎಷ್ಟು ಸರಿ..? ಶಸ್ತ್ರಾಸ್ತ್ರ ಖರೀದಿಯಲ್ಲಿ ಕೊನೆಗೆ ಸೈನಿಕರ ಸವಲತ್ತಿನ ಕುರಿತಾದ ಆದರ್ಶ ಹಗರಣ ಇವೆಲ್ಲವನ್ನೂ ಕ್ಷಮಿಸಲಾಗುವಂತದ್ದೇ. ಇತ್ತೀಚಿನ ಘಟನೆ ನೋಡಿ ಇಬ್ಬರು ಸೈನಿಕರ ಕತ್ತನ್ನು ಕಡಿದ ಪಾಕಿನ ಮೇಲೆ ಅದ್ಯಾವ ರಾಜತಾಂತ್ರಿಕ ಒತ್ತಡವನ್ನು ಹೇರಿದೆ...? ಬಿಡಿ ಇನ್ನೊಂದು ಸರ್ಕಾರದ ಅವಧಿಯಲ್ಲಾದದ್ದು ಅನ್ನುವ ಕಾರಣಕ್ಕೆ ಸೈನ್ಯ ತಂದು ಕೊಟ್ಟ ವಿಜಯವನ್ನು ಮರೆಯುವ ಯತ್ನ ಮಾಡಿತಲ್ಲ ಇದು ಸಹಿಸಲು ಸಾಧ್ಯವೇ...ಸೈನಿಕರ ಜೀವಕ್ಕೆ ಬೆಲೆ ಕೊಡದ ಕಾಂಗ್ರೆಸ್ ಮೆಚ್ಚುಗೆಗೆ ಅರ್ಹವೇ...?

೭. ದೇಶಕ್ಕೆ ಮಾರಕವಾದರೂ ಪರವಾಗಿಲ್ಲ ಅಲ್ಪಸಂಖ್ಯಾತರ ಓಲೈಕೆ ಆಗಲೇಬೇಕು
ಅಲ್ಪ ಸಂಖ್ಯಾತರ ಓಲೈಕೆ ಕಾಂಗ್ರೆಸ್ ನ ಹಳೆಯ ಚಾಳಿ, ಇದರಿಂದಾಗಿಯೇ ದೇಶದ ಸ್ವಾತಂತ್ರ್ಯ ಮರಳಿ ತರುವಲ್ಲಿ ಮಹತ್ವದ ಕೊಡುಗೆ ಕೊಟ್ಟ ವಂದೇ ಮಾತರಂ ಹಾಡು ತುಂಡಾಗಿ ಹೋದದ್ದು. ಅದು ಬಹಳ ಹಿಂದಿನದಾಯಿತು ಆದರೆ ಕಾಂಗ್ರೆಸ್ ಸರ್ಕಾರ ಒಂದೆರಡು ವರ್ಷಗಳ (ತಾರೀಖು ನನಗೆ ಸರಿಯಾಗಿ ನೆನಪಿಲ್ಲ) ಹಿಂದೆ ತುಂಡಾದ ವಂದೇ ಮಾತರಂ ಹಾಡನ್ನು ಕಡ್ಡಾಯಗೊಳಿಸುವ ಯೋಜನೆ ಹಾಕಿಕೊಂಡಿತು, ಆದರೆ ಈ ವಿಷಯ ಗೊತ್ತಾಗುತ್ತಿದ್ದಂತೆ ಅಲ್ಪಸಂಖ್ಯಾತರ ಪ್ರಬಲ ವಿರೋಧ ಕಂಡು ಬಂದಿತು, ಕೂಡಲೇ ಅವರ ವಿರೋಧಕ್ಕೆ ತಾಯಿ ಭಾರತಿಯ ತಲೆಯನ್ನೇ ಬಾಗಿಸಿಬಿಟ್ಟರಲ್ಲ...ಇದೆಂಥಾ ದುರವಸ್ಥೆ... ತೀರಾ ಇತ್ತೀಚಿನ ಘಟನೆಯೊಂದು ನೆನಪಿಗೆ ಬರುತ್ತದೆ ಅಣ್ಣಾ ಹಜಾರೆಯವರ ಚಳುವಳಿಯ ಸಂಧರ್ಭವೊಂದರಲ್ಲಿ ಒಬ್ಬ ಇಮಾಮ್ " ಮುಸ್ಲಿಮರಿಗೆ ಕರೆ ಕೊಡುತ್ತಾರೆ.... ಅಣ್ಣಾ ಹಜಾರೆಯವರ ಚಳುವಳಿಯಲ್ಲಿ ಭಾಗವಹಿಸಬೇಡಿ ಅಲ್ಲಿ ಭಾರತ ಮಾತಾ ಕೀ ಜೈ ಅನ್ನ ಬೇಕಾಗುತ್ತದೆ " ಅಂತ ಇಂಥಾ ದೇಶದ್ರೋಹದ ಮಾತನ್ನಾಡಿದವನ ಬಗೆಗೆ ಸರ್ಕಾರ ಏನು ಕಠಿಣ ಕ್ರಮ ಕೈಗೊಂಡಿತು...? ಕಾಶ್ಮೀರದಲ್ಲಿ ಭಾರತದ್ದೇ ಧ್ವಜ ಹಾರಿಸಲು ಬಿಡದ ಅಲ್ಲಿನ ಸರ್ಕಾರಕ್ಕೆ ಕೇಂದ್ರದ ಬೆಂಬಲ ಏನನ್ನು ಸೂಚಿಸುತ್ತದೆ. ರಾಷ್ಟ್ರಪ್ರೇಮ ಎನ್ನುವುದು ಎಳ್ಳಷ್ಟಾದರೂ ಇದೆಯಾ...? ಇಂಥಾ ಪಕ್ಷವನ್ನು ವಿರೋಧಿಸದೇ ಮೆಚ್ಚಿಕೊಳ್ಳಲು ಸಾಧ್ಯವೇ....?

೮.ಬಹುಸಂಖ್ಯಾತರ ದಮನಕ್ಕಾಗಿ ಮಾರಕ ಯೋಜನೆಗಳು
ಇಲ್ಲಿನ ಬಹುಸಂಖ್ಯಾತರ ಭಾವನೆಗಳೊಂದಿಗೆ ಆಟ ಆಡುವುದು ಈ ಪಕ್ಷಕ್ಕೆ ಅತ್ಯಂತ ಖುಶಿ ಕೊಡುವ ವಿಷಯವೇನೋ.... ಇತ್ತೀಚೆಗೆ ತರಲು ಬಯಸಿರುವ "ಕೋಮು ಸೌಹಾರ್ದ ಮಸೂದೆ " ಮತ್ತ್ಯಾವುದರ ಪ್ರತೀಕ....? ರಾಮಸೇತುವಿನ ವಿಷಯದಲ್ಲಿ ಕೇಂದ್ರ ನಡೆದುಕೊಳ್ಳುತ್ತಿರುವ ರೀತಿ ಏನು....ಬಾಬರಿ ಮಸೀದಿಯನ್ನು ಕೆಡವಿದ್ದು ಅಲ್ಪಸಂಖ್ಯಾತರ ಭಾವನೆಗೆ ತಂದಿರುವ ಧಕ್ಕೆ ಅನ್ನುವ ಕಾಂಗ್ರೆಸ್ ಈಗ ತಾನೇ ಬಹುಸಂಖ್ಯಾತರ ಭಾವನೆಯನ್ನು ಕೆಡವಲು ಹೊರಟಿದ್ದು ಎಷ್ಟು ಸರಿ....? ಗೋಹತ್ಯಾ ನಿಷೇಧ ಜಾರಿಗೆ ಬರಬೇಕೆನ್ನುವ ಬಹುಸಂಖ್ಯಾತರ ಆಸೆಗೆ ಇನ್ನೂ ಈ ಕೈ ಅಡ್ಡಿಯಾಗಿದೆ ಅಲ್ವಾ...

೯. ಕುಟುಂಬ ರಾಜಕಾರಣ....
ಒಂದು ರೀತಿಯಲ್ಲಿ ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿದೆಯೇ ಅನ್ನೋ ಸಂಸಯ ಬರುತ್ತದೆ. ಕಾರಣ ಇಲ್ಲಿ ಆಡಳಿತ ನಡೆಸುವುದು ಒಂದು ಕುಟುಂಬ . ಪ್ರಧಾನ ಮಂತ್ರಿ ಎನುವುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಿದೆ. ಅಧಿಕಾರದಲ್ಲಿರಬೇಕಾದದ್ದು... ಗಂಡ.... ತಪ್ಪಿದರೆ ಹೆಂಡತಿ...ತಪ್ಪಿದರೆ ಮಗ.... ಇದೇ ರೀತಿ....ಯಾಕೆ ಕಾಂಗ್ರೆಸ್ ಪಕ್ಷದಲ್ಲಿ ಇತರ ಸಮರ್ಥ ನಾಯಕರೇ ಇಲ್ಲವೇ....? ಒಂದು ವೇಳೆ ಇದ್ದಾರೆ ಅಂತಾದರೆ ಅವರನ್ನು ದಾರಿಯಲ್ಲಿನ ಮುಳ್ಳಿನ ತರ ಬದಿಗಿರಿಸಲಾಗುತ್ತದೆ. ಅಸಮರ್ಥರಿಗೆ ಅಧಿಕಾರ ಕೊಡುವ ಈ ರೀತಿಯ ವಂಶಾಡಳಿತವನ್ನ ನಾನೇಕೆ ಬೆಂಬಲಿಸಲಿ...?

೧೦.ಹೀಗೊಬ್ಬ ಯುವರಾಜ....
ಸದ್ಯಕ್ಕೆ ಕಾಂಗ್ರೆಸ್ ತನ್ನ ವಂಶಾಡಳಿತವನ್ನು ಮುಂದುವರೆಸುತ್ತ ಮತ್ತೊಬ್ಬ ಯುವರಾಜನನ್ನು ದೇಶದ ಮುಂದಿರಿಸಿದೆ... ನನ್ನನ್ನು ಕಾಡುವ ಒಂದು ಪ್ರಶ್ನೆ... ಒಬ್ಬ ಡಾಕ್ಟರನ ಮಗ ಅವನ ಅಪ್ಪನ ಕಾರಣದಿಂದಾಗಿ ರೋಗಿಯೊಬ್ಬನ ಶುಶ್ರೂಷೆ ಮಾಡಲು ಯೋಗ್ಯನಾಗುತ್ತಾನೆಯೇ....? ಅಥವಾ ಜನಗಳು ಆತನನ್ನು ಕೂಡ ಡಾಕ್ಟರ್..( ಯಾಕೆಂದರೆ ಆತನ ಅಪ್ಪ ಡಾಕ್ಟರ್ ತಾನೇ) ಎಂದು ಒಪ್ಪಿಕೊಳ್ಳುತ್ತಾರೆಯೇ...? ಇಲ್ಲ ಅಂತಾದಲ್ಲಿ ರಾಜಕೀಯದಲ್ಲ್ಯಾಕೆ ಈ ರೀತಿ ಆಗೋಲ್ಲ. ಆತ ಸಮರ್ಥ ಅಂತಾದಲ್ಲಿ ಒಪ್ಪಿಕೊಳ್ಲೋಣ ಆದರೆ ಆತನ ಅಸಮರ್ಥತೆ ನಮ್ಮ ಕಣ್ಣ ಮುಂದಿರುವಾಗ ಹೇಗೆ ತಾನೆ ಒಪ್ಪಿಕೊಳ್ಳೋಕೆ ಸಾಧ್ಯ....ನಾವೆಲ್ಲ ತಾಯಿ ಎಂದು ಪೂಜಿಸುವ ಭಾರತ ಮಾತೆ ಈತನಿಗೆ ಜೇನು ಗೂಡು... ಮುಂಬೈ ದಾಳಿಯ ಸಂಧರ್ಭದಲ್ಲಿ ದೇಶ ಸಂಕಷ್ಟದ ಸ್ಥಿತಿಯಲ್ಲಿದ್ದಾಗಲೂ ಪಾರ್ಟಿಯ ಮೋಜನ್ನು ಬಿಡಲೊಲ್ಲದ ನಾಯಕನ ಕೈಯಲ್ಲಿ ನನ್ನ ದೇಶವನ್ನು ಹೇಗೆ ಕೊಡಲಿ.... ಮಾತಿನಲ್ಲಿ ಪ್ರಭುದ್ಧತೆ ಇಲ್ಲದಾತನಿಗೆ ನನ್ನದೇನಿದ್ದರೂ ವಿರೋಧವೇ...
ಬಹುಷ ಈರೀತಿ ಪಟ್ಟಿ ಮಾಡುತ್ತಾ ಹೋದರೆ ಮಹಾಭಾರತದ ರೀತಿಯ ದೊಡ್ಡ ಗ್ರಂಥವಾದೀತೇನೋ... ಇರಲಿ ಬಿಡಿ ಒಬ್ಬ ಭಾರತೀಯನಾಗಿ ಈ ದೇಶದ ಹಿತ ನನ್ನ ಮೊದಲ ಆದ್ಯತೆ. ರಾಜಕೀಯ ಏನೇ ಇರಲಿ ಆದರೆ ಅದು ದೇಶಕ್ಕೆ, ದೇಶದ ಸಂಸ್ಕೃತಿಗೆ, ದೇಶದ ಭದ್ರತೆ ಮಾರಕವಾಗಬಾರದು. ಅಲ್ಪ ಸಂಖ್ಯಾತರ ಭಾವನೆಗೆ ಗೌರವ ಹೇಗೆ ಸಿಗಬೇಕೋ ಅದಕ್ಕಿಂತಲೂ ಜಾಸ್ತಿ ಇಲ್ಲಿನ ಮೂಲ ನಾಗರಿಕರಾದ ಬಹುಸಂಖ್ಯಾತರ ಭಾವನೆಗೆ ಮನ್ನಣೆ ಸಿಗಬೇಕು ಅನ್ನುವುದು ನನ್ನ ಭಾವನೆ. ಆದರೆ ಕಾಂಗ್ರೆಸ್ ಗೆ ದೇಶ ಮತ್ತು ಇಲ್ಲಿನ ಸಂಸ್ಕೃತಿ , ಭದ್ರತೆ ಯಾವುದೂ ಬೇಕಿಲ್ಲ, ಆ ಪಕ್ಷಕ್ಕೆ ಬೇಕಾಗಿರುವುದು ಅಲ್ಪ ಸಂಖ್ಯಾತರ ತುಷ್ಟೀಕರಣದಿಂದ ಸಿಗುವ ಅಧಿಕಾರ... ಅಷ್ಟೇ.... ಹಾಗಾಗಿ ಕಾಂಗ್ರೆಸನ್ನು ಬೆಂಬಲಿಸೋದು ದೇಶದ್ರೋಹಕ್ಕೆ ಸಮ ಅನ್ನೋದು ನನ್ನ ಭಾವನೆ ಅದಕಾಗೇ ಹೇಳಿದ್ದು ನಾನೊಬ್ಬ ಕಾಂಗ್ರೆಸ್ ವಿರೋಧಿ.

ಕೆಟ್ಟ ಮೇಲೂ ಬುದ್ದಿ ಬಾರದವರು....ಸಿಟ್ಟು, ಹತಾಶೆ, ಅಸಹನೆ ಎಲ್ಲಾ ಒಮ್ಮೆಗೇ ಉಂಟಾಗುತ್ತಿದೆ. ಕಾರಣ ನಿನ್ನೆ ಪೇಶಾವರದಲ್ಲಿ ನಡೆದ ಘಟನೆಯಲ್ಲಿ ಬಲಿಯಾದ ಅಮಾಯಕ ಮಕ್ಕಳ ಭೀಕರ ಚಿತ್ರಣ. ಬಹುಃಶ ದೇಶಕ್ಕೆ ದೇಶವೇ ಜಾತ್ಯಾತೀತವಾಗಿ ಈ ಅಮಾನವೀಯ ಘಟನೆಯನ್ನ ಖಂಡಿಸುತ್ತಿರಬೇಕಾದರೆ ನಮ್ಮಲ್ಲೇ ಕೆಲವೊಂದು ಜನರ ಹೇಳಿಕೆ ದಿಗ್ಬ್ರಾಂತಿಯನ್ನ ಉಂಟು ಮಾಡುತ್ತಿದೆ. ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋದು ನಮ್ಮಲ್ಲಿ ಪ್ರಚಲಿತದಲ್ಲಿರೋ ಹಳೆಯ ಗಾದೆ ಮಾತು, ಆದರೆ ಕೆಲವೊಂದು ಜನರನ್ನ ಕಂಡಾಗ ಇವರ್ಯಾವತ್ತೂ ಸರಿಯಾಗೋದೇ ಇಲ್ವಾ ಅನ್ನಿಸುತ್ತೆ.
ಅತ್ತ ಈ ಕ್ರೂರ ಕೃತ್ಯವನ್ನೆಸಗಿದವರು ತಮ್ಮ ಅಮಾನವೀಯ ನಡವಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಮಿಲಿಟರಿಯವರು ತಮ್ಮ ಕುಟುಂಬವನ್ನ ಹತ್ಯೆಗೈದಿದ್ದಾರೆ ಅವರ ಕುಟುಂಬವನ್ನೂ ನಾವು ಹತ್ಯೆಗೈದಿದ್ದೇವೆ ಅಂದಿದ್ದಾರಂತೆ. ಇದು ಶಂಡರ ಲಕ್ಷಣ ಅಲ್ವಾ. ಹೋರಾಡಲಾಗದ ಅಮಾಯಕರೆದುರು ತಮ್ಮ ಬಲ ಪ್ರದರ್ಶನಕ್ಕೆ ಸಜ್ಜಾಗಿದ್ದಾರಲ್ವಾ... ಇದೇ ಪುರುಷತ್ವವನ್ನ ಹಿಡಿದುಕೊಂಡು ಇವರು ಸ್ವರ್ಗದಲ್ಲಿರುವ ಎಪ್ಪತ್ತೆರಡು ಕನ್ಯೆಯರನ್ನ ಬಯಸೋದಾ...? ಹಾಗೊಂದು ಅಷ್ಟು ಜನ ಕನ್ಯೆಯರು ಒಂದು ವೇಳೆ ಅಲ್ಲಿದ್ದರೂ ಇವರನ್ನ ಕಂಡಾಗ ಅಸಹ್ಯೆ ಪಟ್ಟುಕೊಳ್ಳೋದಿಲ್ವಾ... ಇರಲಿ ಇನ್ನೊಂದು ಮಾತಿನ ಪ್ರಕಾರ ಆಧುನಿಕ ಶಿಕ್ಷಣ ಪದ್ಧತಿ ಬೇಡ ಅದಕ್ಕಾಗಿ ಈ ರೀತಿಯ ಕೃತ್ಯ ಅಂದಿದ್ದಾರಂತೆ. ಹಾಗಿದ್ದರೆ ಇವರಿಗ್ಯಾಕೆ ಆಧುನಿಕ ರೈಫಲ್ಲುಗಳು, ಬಾಂಬುಗಳು... ಅದನ್ನೇನು ಅವರು ಮದರಸಾ ಶಿಕ್ಷಣದಿಂದ ತಯಾರಿಸಿದ್ದೇ...? ಯಾಕೆ ಹಳೆಯ ಕತ್ತಿ ಬಿಲ್ಲು ಬಾಣಗಳನ್ನ ಬಳಸೋದಿಲ್ಲ... ತಮಗಾದರೆ ಬೇಕು ಇತರರಿಗೆ ಬೇಡ ಇದ್ಯಾವ ನ್ಯಾಯ...? ತಮ್ಮ ಮತಾಂಧತೆಗಾಗಿ ಮಕ್ಕಳನ್ನೂ ಬಿಡದ ನೀಚರಿಗೆ ಎಷ್ಟು ಬುದ್ಧಿ ಹೇಳಿದರೇನು...?
ಆದರೆ ಅಲ್ಲಿ ಬರಿಯ ಒಂದಷ್ಟು ತಾಲಿಬಾನಿಗಳು ಇನ್ನಿತಿರರ ಬೆಂಬಲ ಪಡೆಯದೇ ಇಷ್ಟು ಶಕ್ತರಾದರೇ...? ಖಂಡಿತಾ ಸಾಧ್ಯವಿಲ್ಲ. ಅಷ್ಟು ದುಬಾರಿ ಶಸ್ತ್ರಾಸ್ತ್ರಗಳಿಗೆಲ್ಲಾ ಯಾರಾದರೂ ಧನ ಸಹಾಯ ಮಾಡಿರಲೇ ಬೇಕಲ್ಲಾ... ಯಾರಾದರೂ ಸರ್ಕಾರದ ಕಣ್ಣುತಪ್ಪಿಸಿ ಅವರ ಕೈಗೆ ಕೊಟ್ಟಿರಲೇಬೇಕಲ್ವಾ.... ಈ ರೀತಿ ಸಹಾಯ ಮಾಡುವವರೂ ಹಾಗಿದ್ದರೆ ಭಯೋತ್ಪಾದಕರೇ ತಾನೇ... ಇಂಥವರಿಗಾದರೂ ಯಾವಾಗ ಬುದ್ಧಿ ಬರೋದು... ????
ಬಿಟ್ಟು ಬಿಡೋಣ... ನೆರೆಯ ಕೆಲವೊಂದು ದೇಶಗಳಲ್ಲಿ ಮತಾಂಧತೆ ಅದ್ಯಾವ ರೀತಿಯಲ್ಲಿ ಬೀಡು ಬಿಟ್ಟಿದೆ ಅಂದರೆ ಸುಮ್ಮನಿರುವ ಅವರ ಸಮುದಾಯದ್ದೇ ದೊಡ್ಡ ಭಾಗ ಜಾಗೃತರಾಗದೇ ಇದು ಸರಿಯಾಗೋಲ್ಲ ಅನ್ನೋಣ. ಆದರೆ ನಮ್ಮಲ್ಲೇ ಇದ್ದಾರಲ್ಲ. ಕೆಲವೊಂದು ಬುದ್ಧಿ ಜೀವಿಗಳು... ಇವರಿಗೇನು ಮಾಡೋಣ ಹೇಳಿ. ನಿನ್ನೆ ಒಬ್ಬಾತ ಪತ್ರಿಕೆಯೊಂದರ ಸಂಪಾದಕನಂತಹ ಮುಖ್ಯ ಸ್ಥಾನದಲ್ಲಿದ್ದವನ ಹೇಳಿಕೆ ನೋಡಿದಾಗ ಇವರೂ ಆ ಭಯೋತ್ಪಾದಕರಿಗಿಂತ ಕಮ್ಮಿಯಿಲ್ಲ ಅಂತನಿಸಿತು.
ಇಂಥಾ ಸಂಧರ್ಭದಲ್ಲಿ ಇವರು ಬಾಯ್ತೆರೆದರೆ ಸಾಕು ವಿಶ್ವ ರಾಜಕೀಯವನ್ನೇ ಭೋಧಿಸಿಬಿಡ್ತಾರೆ. ತಾಲೀಬಾನ್ ಇವರ ಪಾಲಿಗೆ " ಅನೈತಿಕ ಜಾಗತಿಕ ರಾಜಕಾರಣದ ಸೃಷ್ಟಿ ". ಒಪ್ಪೋಣ ಇದು ಅಮೇರಿಕಾದ ಸೃಷ್ಟಿ ಅಂತ. ಆದರೆ ಈ ಸಂಘಟನೆ ನೀಡಿದ ಹೇಳಿಕೆ ನೋಡಿದರೆ ಇದು ಅವರದೇ ಸ್ವಂತ ಕೃತ್ಯ ಅಲ್ವಾ... ಪಾಶ್ಚಾತ್ಯ ಶಿಕ್ಷಣವನ್ನ ವಿರೋದಿಸೋಕೆ ಅಮೇರಿಕಾ ಯಾಕೆ ತಾನೇ ಹೇಳಿಕೊಡುತ್ತೆ...? ಅದನ್ನ ವಿರೋದಿಸಬೇಕು ಅನ್ನೋದು ಈ ಕ್ರೂರಿಗಳದೇ ಬುದ್ಧಿ ಅಲ್ವಾ... ರಷ್ಯಾದ ಜನರನ್ನ ಅಫಘಾನಿಸ್ತಾನದಿಂದ ಓಡಿಸೋಕೆ ಅಮೆರಿಕಾ ಮತ್ತು ಪಾಕಿಸ್ಥಾನ ಮಾಡಿದ ಪಡೆಯಂತೆ ಇದು. ಆದರೆ ಈಗ ಯಾಕೆ ಇದು ಕಾರ್ಯ ನಿರತವಾಗಿದೆ...? ಹಿಂದೆಂದೋ ರಾಜಕೀಯಕ್ಕೆ ಈ ಬಣದ ಸ್ಥಾಪನೆಯಾಗಿದ್ದರೂ ಈಗ ಇವರಿಗೆ ಶಸ್ತ್ರಾಸ್ತ್ರಗಳನ್ನ ಅಮೆರಿಕಾ ಉಚಿತವಾಗಿ ಕೊಡುತ್ತದೆಯೇ ಯಾರೋ ಹಣ ಒದಗಿಸಿರಲೇಬೇಕಲ್ಲಾ... ಅವರು ಯಾವ ರಾಜಕೀಯದ ಭಾಗ... ಇದನ್ನು ಅವರು ವಿಶ್ಲೇಷಿಸೋದೇ ಇಲ್ಲ ಸರಿ ಕೊನೆಗೆ ಇವರೆಲ್ಲರನ್ನೂ ಅಮೆರಿಕಾ ಮತ್ತು ಪಾಕಿಸ್ಥಾನ ಒಟ್ಟಾಗಿ ನಿರ್ನಾಮ ಮಾಡಲಿ ಅಂತ ಒಂದು ಮಾತನ್ನೂ ಆಡುವುದಿಲ್ಲ.
ಇದು ಧರ್ಮದ ಸೃಷ್ಟಿಯಲ್ಲ ಅನ್ನುತ್ತಾರೆ. ಸರಿ ಒಪ್ಪೋಣ ಹಾಗಿದ್ದರೆ ಈ ನೀಚರು ಈ ಆಧುನಿಕ ಶಿಕ್ಷಣ ಬೇಡ ಮದರಸಾ ಶಿಕ್ಷಣವನ್ನಷ್ಟೇ ಕಲಿಯಬೇಕು ಅನ್ನುವ ಮಾತನ್ನು ಹೇಳಿದರಲ್ಲ... ಇದು ಯಾವ ರಾಜಕೀಯದ ಆಶಯ...? ಇವರ ದಾಳಿಗೆ ಯಾವುದೋ ಧಾರ್ಮಿಕ ವಿಚಾರವೇ ಕಾರಣವಾಯಿತು ಅಂತಾಗಲಿಲ್ಲವೇ...? ಇದು ನಿಜವಾದ ಕಾರಣವಲ್ಲ ಬರಿಯ ಮಿಲಿಟರಿಯ ಮೇಲಿನ ಸೇಡು ಕಾರಣ ಅಂತಾನೇ ಇಟ್ಟುಕೊಳ್ಳೋಣ... ಹಾಗಾದರೆ ಪಾಕಿಸ್ಥಾನದ ಮಕ್ಕಳನ್ನ ಕೊಲ್ಲುವುದರಿಂದ ಅಮೆರಿಕಾಗೆ ಏನು ನಷ್ಟವಾಯಿತು...? ಅಮೆರಿಕಾದ ರಾಜಕೀಯದಾಟಕ್ಕೆ ತಮ್ಮ ಸಮುದಾಯದ ಮಕ್ಕಳನ್ನೇ ಬಲಿತೆಗೆದುಕೊಳ್ಳುವಷ್ಟು ಮೂರ್ಖರಾ ಇವರು...? ರಾಜಕೀಯ ಸೃಷ್ಟಿಯಾದರೆ ಆ ಮಕ್ಕಳನ್ನ ಕೊಲ್ಲುವಾಗ " ಅಲ್ಲಾಹು ಅಕ್ಬರ್ " ಅಂತ ಯಾಕೆ ಹೇಳಬೇಕಿತ್ತು...? ಅಮೆರಿಕಾ ಜಿಂದಾಬಾದ್ ಅಂತಾನೋ.... ಪಾಕಿಸ್ಥಾನ್ ಜಿಂದಾಬಾದ್ ಅಂತಾನೋ... ಅಥವಾ ತಾಲಿಬಾನ್ ಜಿಂದಾಬಾದ್ ಅಂತಾನೋ ಕೂಗಿದ್ದರೆ ರಾಜಕೀಯದ ವಾಸನೆ ಬರುತ್ತಿತ್ತು ಆದರೆ ಇಲ್ಲಿನ ಘೋಷಣೆಯನ್ನ ಕೇಳಿದಾಗಲೂ ಈ ಮತಾಂಧರ ಮತಾಂಧತೆಯನ್ನ ಗುರಿತಿಸದೆ ಹೋದರಲ್ಲಾ...ಈ ಬುದ್ಧಿ ಜೀವಿಗಳು ಇವರ ಕುರಿತಾಗಿ ಏನು ಹೇಳೋಣ...?
ಈ ಅಮಾನವೀಯ ಘಟನೆಯ ಖಂಡಿಸುವ ಹೇಳಿಕೆ ಅನ್ನೋ ಇವರ ಮಾತಿನಲ್ಲಿ ಎಲ್ಲೂ ಸಹ ಆಕ್ರೋಶ ಅಥವ ಅಮಾಯಕರ ಬಗೆಗೆ ಕರುಣೆ ಕಾಣಿಸಲೇ ಇಲ್ಲ ಕಂಡದ್ದೂ ಅವಕಾಶವಾದಿತನ. ಭಯೋತ್ಪಾದನೆ ಧರ್ಮದ ಸೃಷ್ಟಿಯಲ್ಲ ಅನ್ನುವವರು ಭಾರತದಲ್ಲಿ ಒಂದು ಧರ್ಮ ಇಂಥಾದ್ದನ್ನೇ ಸೃಷ್ಟಿಸುತ್ತಿದೆ ಅನ್ನುತ್ತಾರೆ. ಅದೇ ಥರ ಅಲ್ಲೂ ಧರ್ಮದ್ದೇ ಸೃಷ್ಟಿಯಾ ಅಂದರೆ ಅಲ್ಲ... ಅದು ರಾಜಕೀಯದ ಸೃಷ್ಟಿ ಇಲ್ಲಿ " ಕೇಸರಿ " ಅನ್ನುವ ಪದವನ್ನ ಉಲ್ಲೇಖ ಮಾಡಿ ಹಿಂದೂ ಧರ್ಮದಿಂದ ತಾಲೀಬಾನಿಗಳ ಸೃಷ್ಟಿಯಾಗುತ್ತಿದೆ ಅನ್ನುತ್ತಾರಲ್ಲಾ ಎಂಥಾ ದ್ವಂದ್ವ ವಾದ ಇವರದ್ದು... ಅಷ್ಟಾಗಿಯೂ ಇಲ್ಲಿ ಯಾವುದೇ ಇಂಥಾ ಹೇಯ ಕೃತ್ಯ ನಡೆದಿಲ್ಲ. ಆದರೂ ಇವರು ಬಹಳ ಚಾಕಚಕ್ಯತೆಯಿಂದ ಇಂಥಾ ಹಲವಾರು ಘಟನೆಗಳು ನಡೆದಿವೆ ಅನ್ನುತ್ತಾರೆ ಆದರೆ ಯಾವುದನ್ನೂ ಉದಾಹರಿಸೋದಿಲ್ಲ.
ಇಲ್ಲೂ ನಮ್ಮ ಪ್ರಧಾನಿಯನ್ನ ಟೀಕಿಸೋ ಅವಕಾಶವನ್ನ ಕಂಡುಕೊಳ್ಳುತ್ತಾರೆ. ಇವರಿಗೇ ಇಡೀ ಭಾರತದಲ್ಲಿ ಕಾಣಿಸೋದು "ಕೇಸರಿ ಉಗ್ರವಾದ" ಮಾತ್ರ ವಂತೆ. ಅದನ್ನ ಹತ್ತಿಕ್ಕಲು ಪ್ರಯತ್ನಿಸಿದರಷ್ಟೇ ಪ್ರಧಾನಿಯವರು ಪೇಶಾವರದ ಘಟನೆಯ ಬಗ್ಗೆ ಹೇಳಿದ ಮಾತುಗಳು, ಮಿಡಿದ ಕಂಬನಿ ಅರ್ಥಪೂರ್ಣವಾಗೋದಂತೆ.. ವಿಚಿತ್ರ ಅಂದರೆ ಅವರ ಮಾತಿನಲ್ಲೆಲ್ಲೂ ಸಂತಾಪದ ಪ್ರದರ್ಶನವೇ ಇಲ್ಲ. ಒಬ್ಬ ಸಂಪಾದಕನಾಗಿ ತಪ್ಪು ಎಲ್ಲಿ ಆಗುತ್ತಿದೆ...? ಇಂಥಾ ಘಟನೆಗೆ ಮೂಲ ಕಾರಣವೇನು ಅನ್ನುವುದರ ವಿಮರ್ಶೆ ಮಾಡೂವುದನ್ನ ಬಿಟ್ಟು ಭಾರತದ ಪ್ರಧಾನಿಗಳೆ ಬುದ್ಧಿ ಹೇಳೋಕೆ ಹೊರಡುತ್ತಾರಲ್ವಾ... ಇವರಿಗೆಲ್ಲಾ ಯಾವಾಗ ಬುದ್ಧಿ ಬರೋದು...? ಇನ್ನಾದರೂ ದೋಷಗಳನ್ನ ಗುರುತಿಸಬೇಕಲ್ವಾ... ಖಂಡಿತಾ ಭಯೋತ್ಪಾದಕರಿಗೆ ಧರ್ಮ ಇಲ್ಲ ಇವರ ಹೇಳಿಕೆಯನ್ನ ಒಪ್ಪಿಕೊಳ್ಳೋಣ ನಾನು ಅದನ್ನೇ ಹೇಳೋದು... ಇವರೊಳಗಿನ ರಾಕ್ಷಸರನ್ನಷ್ಟೇ ನೋಡಿ... ಅವರೊಳಗಿನ ಸ್ವಧರ್ಮೀಯನನ್ನ ನೋಡಬೇಡಿ ಅಂತ. ಆ ರಾಕ್ಷಸತ್ವಕ್ಕೆ ಕಾರಣವಾದ ಅಂಶಗಳನ್ನಷ್ಟೇ ಕಿತ್ತೆಸೆಯಿರಿ. ಇಲ್ಲವಾದಲ್ಲಿ ಇದು ಇಡಿಯ ಸಮುದಾಯವನ್ನ ಕಿತ್ತು ತಿನ್ನೋದು ಖಂಡಿತಾ. ಇದನ್ನ ಬಿಟ್ಟು ಅಮೆರಿಕಾ ರಾಜಕಾರಣ ಅಂತ ಬೊಬ್ಬಿಡುತ್ತಾ ಹೋದರೆ... ಈ ಪಾಪಿಗಳು ಸರ್ವನಾಶ ಮಾಡುತ್ತಾ ಹೋಗುತ್ತಾರೆ. ಜಿಹಾದಿ ಎಂದು ಹಾದಿ ತಪ್ಪಿದ್ದವರನ್ನು ಹಾದಿಗೆ ತರಬೇಕಾದ ಇಂಥವರೇ ಹಾದಿ ತಪ್ಪುತ್ತಿದ್ದಾರೆಂದರೆ ಏನು ಮಾಡೋಣ. ಕಡಿಯಲಿ ಬಿಡಿ ತಾವಿರುವ ಗೆಲ್ಲಿನ ಬುಡವನ್ನೇ ಎಂದು ಸುಮ್ಮನಾಗೋದೇ ಲೇಸು ಅಲ್ವೇ...
ಕೊನೆಯ ಸಾಲು : ಹಿಂದೂಗಳಾಗಿದ್ದು ಹಿಂದೂಗಳನ್ನೇ ಟೀಕಿಸೋ ಭಾರತದಲ್ಲಿನ ಬುದ್ಧಿಜೀವಿಗಳಂತಹಾ ಸಂತತಿ... ಪಾಕಿಸ್ಥಾನದಲ್ಲಿ ಕಾಣಿಸಿಕೊಳ್ಳಲಿ... ಇಲ್ಲಿ ಕಾಣದಾಗಲಿ ಆಗಲೇ ಎರಡೂ ದೇಶಕ್ಕೆ ಭವ್ಯ ಭವಿಷ್ಯ.

ತುಳಸಿಯ ಬಗೆಗೊಂದು ಕಥೆ..ಮೊದಲೆಲ್ಲಾ ಕತ್ತಲಾಗಿ ಮಲಗೋ ಹೊತ್ತು ಬಂತೆಂದರೆ ಮಕ್ಕಳಿಗೆ ಕಥೆ ಹೇಳಿಯೇ ಮಲಗಿಸೋದು...ಈಗ ಕಾಲ ಬದಲಾಗಿದೆ ಕಥೆಯ ಬಗೆಗೆ ಯಾರಿಗೂ ಕುತೂಹಲವಿಲ್ಲ. ಆದರೂ ತುಲಸೀ ಪೂಜೆಯ ಈ ಶುಭ ದಿನದಂದು ತುಲಸಿಯ ಬಗೆಗಿನ ಕಥೆಯೊಂದನ್ನು ಹೇಳೋ ಆಸೆ... ಕುತೂಹಲ ಇದ್ದವರು ಹಾಗೇ ಓದಿ....
ಹಿಂದೆ ದ್ವಾಪರ ಯುಗದಲ್ಲಿ ಸೂರ್ಯನಂಥಾ ತೇಜಸ್ಸು ಉಳ್ಳ ಮಾರ್ತಾಂಡಾ ಅನ್ನೋ ಬ್ರಾಹ್ಮಣನೊಬ್ಬನಿದ್ದ. ತುಂಬಾ ನಿಯಮನಿಷ್ಠನಾಗಿದ್ದ ಆತ ಪ್ರತಿದಿನವೂ ಸ್ನಾನವಾದ ಬಳಿಕ ತುಳಸಿಗೆ ನೀರೆರೆದು ಕೈ ಮುಗಿದು ಕಾರ್ಯ ಆರಂಭಿಸುವ ಪರಿಪಾಠವನ್ನಿಟ್ಟುಕೊಂಡಿದ್ದ. ಅದೇ ರೀತಿ ಒಂದು ದಿನ ತುಳಸಿಗೆ ನೀರೆರೆದು ತನ್ನ ಕೆಲಸ ನಿಮಿತ್ತ ಹೊರಹೋಗುತ್ತಾನೆ. ಅಲ್ಲೇ ಹತ್ತಿರದಲ್ಲೊಬ್ಬ ಅಸಿಮರ್ದನ ಅನ್ನೋ ಬೇಡ ವಾಸಿಸುತಿರುತ್ತಾನೆ. ಆ ಬೇಡ ಮಾಡಿಟ್ಟ ಅನ್ನದ ಪಾತ್ರೆಯನ್ನು ಕೆಳಹಾಕಿದ ನಾಯಿಯೊಂದನ್ನು ಆತ ಓಡಿಸಿಬಿಟ್ಟಿರುತ್ತಾನೆ. ಅನ್ನ ಸಿಗದೆ ಬಾಯಾರಿ ಬಂದ ಆ ನಾಯಿ ಮಾರ್ತಾಂಡನ ತುಳಸಿಯ ಕೆಳಗಿದ್ದ ನೀರನ್ನು ಕುಡಿದು ಬಿಡುತ್ತದೆ. ಅದನ್ನು ಅಸಿಮರ್ದನ ನೋಡಿ ಬಿಡುತ್ತಾನೆ. ನನ್ನ ಅನ್ನದ ಪಾತ್ರೆ ಕೆಳಹಾಕಿ ಇಲ್ಲಿನ ತುಳಸಿಯನ್ನು ಅಪವಿತ್ರಗೊಳಿಸುತ್ತೀಯಾ ಎಂದು ಆ ನಾಯಿಯನ್ನು ಹೊಡೆದು ಕೊಲ್ಲುತ್ತಾನೆ.
ಆ ನಾಯಿ ಸತ್ತ ಕೂಡಲೇ ಯಮಭಟರು ಬಂದು ಅದರ ಆತ್ಮಕ್ಕೆ ಯಮಪಾಶ ಹಾಕುವಷ್ಟರಲ್ಲಿ ಅಲ್ಲಿಗೆ ವಿಷ್ಣುದೂತರು ಬರುತ್ತಾರಂತೆ. ಯಮಭಟರು ಹಾಕಿದ ಯಮಪಾಶವನ್ನು ಕಿತ್ತುಹಾಕಿ ಆ ನಾಯಿಯ ಆತ್ಮವನ್ನು ದಿವ್ಯವಾದ ವಿಮಾನದಲ್ಲಿ ಕುಳ್ಳಿರಿಸುತ್ತಾರಂತೆ. ಇದನ್ನು ನೋಡಿ ಆಶ್ಚರ್ಯಚಕಿತರಾದ ಯಮಭಟರು ಈ ನಾಯಿಯ ಆತ್ಮವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಾ ಅಂತ ಕೇಳಿದರಂತೆ. ಅದಕ್ಕೆ ವಿಷ್ಣುದೂತರು ಹೇಳುತ್ತಾರಂತೆ.... ಈ ಶ್ವಾನ ರೂಪಿ ಆತ್ಮ ಮೊದಲೊಬ್ಬ ರಾಜನಾಗಿದ್ದ. ಅನೇಕ ಪುಣ್ಯ ಕಾರ್ಯಗಳನ್ನು ಮಾಡಿದ್ದ. ಆದರೆ ಒಬ್ಬ ಸುಂದರಿಯನ್ನು ಅಪಹರಿಸಿದರ ಫಲವಾಗಿ ನಾಯಿ ರೂಪದಲ್ಲಿ ಜನಿಸಿದ. ಆದರೆ ಈಗ ತಾನೆ ತುಳಸಿಯ ಬುಡದ ನೀರನ್ನು ಕುಡಿದುದರ ಫಲವಾಗಿ ಇವನ ಪಾಪಗಳೆಲ್ಲವೂ ಪರಿಹಾರವಾಗಿ ವೈಕುಂಠ ಲೋಕಕ್ಕೆ ತೆರಳಲು ಅರ್ಹನಾಗಿದ್ದಾನೆ. ಹಾಗಾಗಿ ಇವನನ್ನು ಕರೆದೊಯ್ಯುತ್ತಿದ್ದೇವೆ.
ಈ ಕಥೆಯ ಸಾರಾಂಶ ಇಷ್ಟೇ... ತುಳಸಿಯು ವಿಷ್ಣು ಸಾಯುಜ್ಯ ಪಡೆಯಲು ಇರುವ ಸರಳ ಮಾರ್ಗ

ಅಭಿಮಾನ ಹೇಗಿರಬೇಕೆಂದರೆ... ಅಭಿಮಾನದ ಮೇಲೆಯೇ ಅಭಿಮಾನ ಮೂಡುವಂತಿರಬೇಕು.ನಮ್ಮಲ್ಲಿ ಸರ್ವೇ ಸಾಧಾರಣವಾಗಿ ಪ್ರತಿಯೊಬ್ಬರಿಗೂ ಹೆಚ್ಚಾಗಿ ಮೆಚ್ಚಿನ ನಟ ಅಥವಾ ಮೆಚ್ಚಿನ ರಾಜಕಾರಣಿ ಅಥವಾ ಮೆಚ್ಚಿನ ವ್ಯಕ್ತಿ ಅನ್ನೋ ಯಾವುದಾದರೂ ವ್ಯಕ್ತಿಗಳು ಇದ್ದೇ ಇರುತ್ತಾರೆ. ಅವರನ್ನ ಆರಾಧಿಸುವಷ್ಟು ನಮಗೆ ಅವರ ಮೇಲೆ ಅಭಿಮಾನ. ಅಂದರೆ ಗರ್ವ... ನನ್ನ ಮೆಚ್ಚಿನ ವ್ಯಕ್ತಿಯ ಯಾವುದೇ ನಡೆ ಕೂಡಾ ನಮಗೆ ಶ್ಲಾಘನೀಯವಾಗಿ ಬಿಡುತ್ತದೆ. ಅವರನ್ನ ಯಾರಾದರೂ ಟೀಕಿಸಿದರೆ ನಮಗೆ ಇನ್ನೆಲ್ಲಿಲ್ಲದ ಕೋಪ ಬಂದು ಬಿಡುತ್ತದೆ... ಇದು ಹೆಚ್ಚಾಗಿ ಕಾಣಸಿಗುವುದು ಸಿನಿಮಾ ನಟ/ಟಿ ವಿಷಯದಲ್ಲಿ ಅಥವಾ ರಾಜಕೀಯ ನಾಯಕರ ವಿಷಯದಲ್ಲಿ.... ಈ ಅಭಿಮಾನ ಎಲ್ಲಿಯವರೆಗೆ ಸಾಗುತ್ತದೆ ಎಂದರೆ ನಾವು ನಮ್ಮ ನಮ್ಮಲ್ಲೇ ಜಗಳವಾಡಲೂ... ಸಂಬಂಧಗಳನ್ನು ಮುರಿಯಲೂ ಸಿದ್ಧರಾಗುತ್ತೇವೆ. ಹಾಗಾಗಿ ನಮ್ಮಲ್ಲಿ ನಮ್ಮಲ್ಲಿ ಇಂತಹಾ ಪ್ರಭಾವ ಬೀರಬಲ್ಲ ಈ " ಅಭಿಮಾನ " ಅನ್ನುವುದರ ಕುರಿತಾಗಿ ನಾವೊಮ್ಮೆ ಆಳವಾಗಿ ಚಿಂತಿಸಬೇಕಾಗಿದೆ ಅಂತನಿಸುವುದಿಲ್ಲವೇ...?
ಮೇಲೆ ಹೇಳಿದ ಹಾಗೇ ಸಿನಿಮಾ ನಟರ ಮೇಲಿನ ಅಭಿಮಾನ ಮತ್ತು ರಾಜಕೀಯ ನಾಯಕರ ಮೇಲಿನ ಅಭಿಮಾನ ಈ ಎರಡು ವಿಭಾಗವನ್ನೂ ಆಯ್ದುಕೊಂಡು ನನ್ನೊಳಗಿನ ಚಿಂತನೆಯನ್ನ ನಿಮ್ಮಲ್ಲಿ ಹಂಚಿಕೊಳ್ಳುವ ಆಸೆ... ಅದೇ ಈ ಲೇಖನದ ಮೂಲ ಆಶಯ.. ಮೊದಲಿಗೆ ಸಿನಿಮಾ ಕ್ಷೇತ್ರವನ್ನು ಕೆಗೆತ್ತಿಕೊಳ್ಳೋಣ... ವಾಸ್ತವದಲ್ಲಿ ನಮಗೆ ಯಾರೋ ನಟ ಅಥವಾ ನಟಿ ಯಾಕೆ ಇಷ್ಟವಾಗುತ್ತಾರೆ....?? ಯಾವುದೋ ಸಿನಿಮಾದಲ್ಲಿನ ನಟನೆಯಲ್ಲಿ ಅವರು ತೋರುವ ನಟನೆ ನಮ್ಮನ್ನ ಮನಸೋಲುವಂತೆ ಮಾಡಿರುತ್ತದೆ ಅಥವಾ ಅವರ ಮುಖ ಸೌಂದರ್ಯ ದೇಹಧಾರ್ಡ್ಯತೆ ಇತ್ಯಾದಿ... ಇಲ್ಲಿ ಸೌಂದರ್ಯ ಪ್ರಾಕೃತಿಕವಾಗಿ ಸಿಕ್ಕಿರುವುದರಿಂದ ( ಈಗ ಹಾಗೆ ಹೇಳುವಂತೆಯೂ ಇಲ್ಲ ಮೇಕಪ್ ತೆಗೆದರೆ ನಾನು ಮೆಚ್ಚುವ ನಟ/ಟಿ ಇವರೇನಾ ಅನ್ನುವ ಗೊಂದಲವೂ ನಮ್ಮನ್ನ ಕಾಡೀತು... ಅದನ್ನ ಬಿಟ್ಟು ಬಿಡೋಣ ) ಅದನ್ನ ಬದಿಗಿಡೋಣ... ನಮಗೆ ಮುಖ್ಯವಾಗಿ ಬೇಕಾಗಿರುವುದು " ಅಭಿಮಾನ " ಅಲ್ವೇ.... ಹೀಗೆ ಯಾವುದೋ ಒಂದು ಅಂಶ ನಮ್ಮ ಮನಸ್ಸಿಗೆ ಮುದ ನೀಡಿತು ಅಂದಾಗ ಅವರ ಮೇಲೆ ಅಭಿಮಾನ ಮೂಡುತ್ತದೆ. ಸಾಧಾರಣವಾಗಿ ಕಥೆಯಲ್ಲಿ ಉತ್ತಮ ವ್ಯಕ್ತಿತ್ವವನ್ನು ಪ್ರದರ್ಶಿಸುವ ನಟರು ವಾಸ್ತವದಲ್ಲಿ ಅದೇ ರೀತಿ ಇರಬೇಕು ಅಂತೇನಿಲ್ಲ... ಆದರೂ ನಾವು ಯಾವುದೋ ಸಿನಿಮಾದಲ್ಲಿನ ನಟನೆಯ ಭಾಗವಾದ ಒಳ್ಳೆಯತನವನ್ನ ಅವರದ್ದೇ ಸ್ವಂತ ಗುಣ ಅಂತ ತಿಳಿದುಬಿಡುತ್ತೇವೆ... ಇದು ಒಂದು ವಿಪರ್ಯಾಸವೇ ಆದರೂ ಅದರ ಆಧಾರದ ಮೇಲೆಯೇ ಅಭಿಮಾನವನ್ನ ಬೆಳೆಸಿಕೊಂಡು ಬಿಡುತ್ತೇವೆ.
ಈಗ ಒಂದೆರಡು ಘಟನೆಗಳನ್ನ ಆಯ್ದುಕೊಳ್ಳೋಣ.. ಹಿಂದೊಮ್ಮೆ ಕನ್ನಡದ ನಾಯಕ ನಟ ದರ್ಶನ್ ತಮ್ಮ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾಗ.... ಅದು ತಪ್ಪು ಎಂದುದಕ್ಕೆ ನನ್ನ ಬಳಿ ಸ್ನೇಹಿತೆಯೊಬ್ಬಳು ಬಹಳಷ್ಟು ಚರ್ಚೆ ಮಾಡಿದ್ದಳು... " ಅವರ ಹೆಂಡತಿಯೇ ಹಾಗಿದ್ದರೆ ಇವರೇನು ಮಾಡಬಲ್ಲರು...? ಗಂಡನಾಗಿ ಕೈಯೆತ್ತುವ ಅಧಿಕಾರ ಅವರಿಗಿದೆ ಅಲ್ವಾ... " ಅಂತೆಲ್ಲಾ ಹೇಳಿದ್ದ ನೆನಪು... ( ಒಬ್ಬ ಹೆಣ್ಣಾಗಿ ಹೆಣ್ಣಿನ ಮೇಲಿನ ದೌರ್ಜನ್ಯವನ್ನ ವಿರೋಧಿಸುವ ಬದಲಾಗಿ ತನ್ನ ಮೆಚ್ಚಿನ ನಟನ ಪರ ವಹಿಸಿದ್ದು ಆ ಕ್ಷಣಕ್ಕೆ ನನ್ನನ್ನ ದಂಗಾಗಿಸಿಬಿಟ್ಟಿತ್ತು.. ) ಈ ಘಟನೆಯ ಕುರಿತು ಯೋಚಿಸುವಾಗ ನನಗನಿಸೋದು... ಒಂದು ವೇಳೆ ದರ್ಶನ್ ಹೆಂಡತಿಯ ಜಾಗದಲ್ಲಿ ಇವರ ಆಪ್ತರಿದ್ದು... ಯಾವುದೋ ಗಂಡು ಒಬ್ಬ ಅವಳ ಮೇಲೆ ಹಲ್ಲೆ ಮಾಡಿದ್ದಿದ್ದರೆ...????
ಇತ್ತೀಚೆಗಷ್ಟೇ ಬಹುಚರ್ಚಿತ ವಿಷಯ ರಸ್ತೆಯ ಬದಿಯಲ್ಲಿ ಮಲಗಿದ್ದವರ ಮೇಲೆ ಕುಡಿದು ಕಾರು ಹಾಯಿಸಿದ್ದ ಸಲ್ಮಾನ್ ಖಾನ್ ರ ಹಿಟ್ ಆಂಡ್ ರನ್ ಕೇಸ್... ಬಹುಶ ಸಲ್ಮಾನ್ ಪರವಾಗಿ ಬಾಲಿವುಡ್ ನ ಹಲವರು ಧ್ವನಿ ಎತ್ತಿ ಬಿಟ್ಟಿದ್ದರು.... ( ತೀರ್ಪು ಮತ್ತು ಅದರ ಹಿಂದಿನ ರಾಜಕೀಯ ಬಿಟ್ಟು ಬಿಡೋಣ ) ಇಲ್ಲೂ ಒಂದು ವೇಳೆ ದಾರಿ ಬದಿಯಲ್ಲಿ ಮಲಗಿದವರು ಸಲ್ಮಾನ್ ಪರ ನಿಂತವರ ಮನೆಯವರಾಗಿದ್ದಿದ್ದರೆ...???
ಈ ಎರಡೂ ಘಟನೆಯಲ್ಲಿ ನೋವುಂಡವರು ನಮಗೇನೂ ಆಗಬೇಕಾಗಿಲ್ಲ... ನನ್ನ ಮನಸ್ಸಿಗೆ ತೀರಾ ಆಪ್ತರೇನಲ್ಲ, ಹಾಗಾಗಿ ನನ್ನ ಮನಸ್ಸಿಗೆ ಮುದ ನೀಡುವ ನಟನ ಪರ ವಕಾಲತ್ತು ವಹಿಸಲು ನಾವು ಸಜ್ಜಾಗುತ್ತೇವೆ... ಅದೇ ಒಂದು ವೇಳೆ ಆ ನಟನ ಬದಲಾಗಿ ಇನ್ಯಾರೋ ಗೊತ್ತಿಲ್ಲದ ಅಪರಿಚಿತ ವ್ಯಕ್ತಿ ಇಂತಹಾ ಕೃತ್ಯ ಮಾಡಿ... ನೋವಿಗೊಳಗಾದವರು ನಮ್ಮ ಆಪ್ತರಾದಾಗ ಖಂಡಿತವಾಗಿಯೂ ನಮ್ಮ ನಿಲುವು ನ್ಯಾಯದ ಪರವಾಗಿರುತ್ತದೆ ಅಲ್ಲವೇ...? ಹಾಗಿದ್ದರೆ ಅಭಿಮಾನ ಅನ್ನುವುದು ನಮ್ಮನ್ನ ಸಾಮಾಜಿಕ ನ್ಯಾಯದಿಂದ ವಿಮುಖವಾಗುವಂತೆ ಮಾಡುತ್ತದೆಯಾ....? ಒಂದು ವೇಳೆ ನಿಮ್ಮ ಉತ್ತರ ಹೌದು ಅಂತಾಗಿದ್ದಲ್ಲಿ ಇಂತಹಾ " ಅಭಿಮಾನ " ಸಮಾಜದ ಒಳಿತಿಗೆ ಮಾರಕವಲ್ಲವೇ....???? ಈ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ನಾನು ಕೊಡೋದಿಲ್ಲ ಆ ಉತ್ತರ ನಿಮ್ಮ ಮನಸ್ಸಿನಿಂದಲೇ ಬರಲಿ ಅನ್ನೋದು ನನ್ನ ಆಶಯ...
ಇನ್ನು ಎರಡನೇ ರೀತಿಯ ಅಭಿಮಾನವನ್ನ ಕೈಗೆತ್ತಿ ಕೊಳ್ಳೋಣ... ಇದು ರಾಜಕೀಯ ನೇತಾರರ ಮೇಲಿನ ಅಭಿಮಾನ... ಇದು ಸ್ವಲ್ಪ ವಿಭಿನ್ನ... ಇಲ್ಲಿ ಪಕ್ಷದ ಸಿದ್ಧಾಂತಗಳೂ ಪ್ರಾಮುಖ್ಯವಾಗುತ್ತದೆ ಮತ್ತು ವ್ಯಕ್ತಿಯ ವೈಯಕ್ತಿಕ ವರ್ಚಸ್ಸು ಕೂಡಾ ಪ್ರಧಾನ ಪಾತ್ರ ವಹಿಸುತ್ತದೆ... ರಾಜಕೀಯ ವ್ಯಕ್ತಿಗಳ ಮೇಲೆ ಅಭಿಮಾನ ಮೂಡುವಲ್ಲಿ ಪ್ರಮುಖ ಪಾತ್ರ ವಹಿಸುವಂಥಾದ್ದು ಆತನಿರುವ ಪಕ್ಷದ ಸಿದ್ಧಾಂತ ಮತ್ತು ವ್ಯಕ್ತಿಗಿರುವ ಸಾಮಾಜಿಕ ಕಳಕಳಿ ಅಥವ ಆತ ಕೈಗೊಂಡಿರೋ ಜನಪರ ಸೇವೆಗಳು... ಇಲ್ಲಿ ಅಭಿಮಾನ ಅನ್ನುವುದು ವ್ಯಕ್ತಿಯ ಮೇಲೂ ಇದ್ದಿರಬಹುದು ಅಥವಾ ಪಕ್ಷದ ಮೇಲೂ ಇದ್ದಿರಬಹುದು ಅಥವಾ ಸಿದ್ಧಾಂತಗಳ ಮೇಲೂ ಇದ್ದಿರಬಹುದು ಆದರೆ ವ್ಯಕ್ತಿಯ ಮೇಲೆ ಅಥವಾ ಪಕ್ಷದ ಮೇಲೆ ಅಭಿಮಾನವಿದ್ದು ಸಿದ್ಧಾಂತಗಳ ಮೇಲಿರದಿದ್ದಾಗ ಅನರ್ಥಗಳಾಗುವ ಸಂಭವವೇ ಹೆಚ್ಚು... ಉದಾಹರಣೆಗೆ ವ್ಯಕ್ತಿಯ ಮೇಲಿನ ಅಭಿಮಾನಕ್ಕೆ ಇತ್ತೀಚಿನ ಪ್ರಕರಣ ಜಯಲಲಿತಾ ಅವರ ಲಂಚ ಪ್ರಕರಣ ಬಲು ಸೂಕ್ತ ಅಂತನಿಸುತ್ತದೆ. ಅಲ್ಲಿ ಪಕ್ಷ ಅಥವಾ ಸಿದ್ಧಾಂತಕ್ಕಿಂತಲೂ ವ್ಯಕ್ತಿ ಮುಖ್ಯವಾಗಿರುವುದು ಕಾಣಸಿಗುತ್ತದೆ... ಹಾಗಾಗೇ ಅಲ್ಲಿ ವ್ಯಕ್ತಿಯ ಮೇಲಿನ ಅಭಿಮಾನದಿಂದಾಗಿ ಅವರ ಪರ ವಹಿಸುತ್ತಾ ಆತ್ಮಹತ್ಯೆ ಮಾಡಿಕೊಳ್ಳಲೂ ಹಿಂಜರಿಯದ ಜನರೆಷ್ಟೋ ಇದ್ದರು... ಒಂದು ವೇಳೆ ಆ ಪಕ್ಷದ ಮೇಲೆ ಆರೋಪವಾಗಿರುತ್ತಿದ್ದಿದ್ದರೆ ಆ ರೀತಿ ಮಾಡುತ್ತಿರಲಿಲ್ಲ ಅಲ್ಲವೇ... ಇಲ್ಲಿ ಅವರಿಂದ ಲಾಭ ಪಡೆದ ಜನಗಳು ಅವರ ಮೇಲಿಡುವ ಕೃತಜ್ಞತಾಪೂರ್ವಕ ಅಭಿಮಾನ ಬೇರೆಯೇ ಅಂತವರ ಅಭಿಮಾನ ತೀರಾ ಅತಿರೇಕದ್ದಾಗಿರುತ್ತದೆ... ಅಂತವರನ್ನ ಬದಿಗಿಡೋಣ. ಅದರ ಹೊರತಾಗಿಯೂ ಅಭಿಮಾನ ಇಡೋ ಜನರು ಆ ನಾಯಕ/ಕಿಯ ತಪ್ಪುಗಳನೆಲ್ಲಾ ಮರೆಮಾಚೋದು ಅಥವಾ ಅದೇನೂ ದೊಡ್ಡದಲ್ಲ ಅನ್ನುವುದು ಎಷ್ಟು ಸರಿ...? ಜಯಲಲಿತಾ ಅವರ ಅಕ್ರಮ ಆಸ್ತಿ ಶೇಕಡಾ ಹತ್ತರೊಳಗೆ ಇದೆ ಅದು ಅಪರಾಧವಲ್ಲ ಅನ್ನುವ ತೀರ್ಪಿದೆ... ಅಂದರೆ ವಾಸ್ತವದಲ್ಲಿ ಇರಬೇಕಾದುದಕ್ಕಿಂತ ಜಾಸ್ತಿ ಇದೆ ಎನ್ನುವುದು ಖಾತ್ರಿಯಾಗಿದೆ... ಇದು ಗೊತ್ತಾದ ಮೇಲೂ ಅವರೇನೂ ಮಾಡಿಲ್ಲ ಅನ್ನುವುದು ಅವರ ತಪ್ಪನ್ನು ಪೋಷಿಸಿದಂತೆಯೇ ಅಲ್ವಾ.... ಈ ರೀತಿಯ ಪೋಷಣೆ ಮುಂದೆ ತಪ್ಪುಗಳ ಸಂಖ್ಯೆಯನ್ನ ಹೆಚ್ಚಿಸುವುದಿಲ್ಲವೇ...?
ಇನ್ನೊಂದು ರೀತಿಯ ಅಭಿಮಾನ ಅಂದರೆ ಅದು ಪಕ್ಷದ ಮೇಲಿನ ಅಭಿಮಾನ... ಇಲ್ಲಿ ವ್ಯಕ್ತಿಯ ಮೇಲಿನ ಅಭಿಮಾನವಿರದೆ, ಪಕ್ಷ ಮಾಡಿದ್ದೆಲ್ಲವನ್ನೂ ಸಮರ್ಥಿಸುವುದನ್ನ ಕಾಣುತ್ತೇವೆ... ತಮ್ಮ ಪಕ್ಷದಲ್ಲದವರ ಮೇಲೆ ಅಥವಾ ಅದರಲ್ಲಿರೋ ನಾಯಕರ ಮೇಲೆ... ಅವರ ನಿಲುವಿನ ಮೇಲೆ..... ತೀರಾ ಹೆಚ್ಚಿನ ಅಕ್ರೋಷವನ್ನಿಟ್ಟುಕೊಳ್ಳುತ್ತಾರೆ.. ಇದಕ್ಕೆ ಬೇಕಾದಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ... ಆಡಳಿತ ಪಕ್ಷದ ಯಾವುದೋ ಒಂದು ಒಳ್ಳೆಯ ನಿರ್ಧಾರ ನಮ್ಮ ಪಕ್ಷದ ಯೋಜನೆಯದ್ದೇ ಬದಲಾದ ರೂಪ ಅನ್ನುವಂಥಾದ್ದು... ಅಥವಾ ಯೋಧರ ಕಾರ್ಯಾಚಾರಣೆಯ ಶ್ರೇಯಸ್ಸನ್ನ ಬರೀ ಸೈನಿಕರಿಗೆ ಮಾತ್ರ ಕೊಡಬೇಕು ಮಂತ್ರಿಗಳಿಗೆ ಕೊಡಬಾರದು ಅನ್ನುವುದು ಅಥವಾ ಪ್ರಧಾನ ಮಂತ್ರಿಗಳ ವಿದೇಶ ಪ್ರವಾಸವನ್ನ ಟೀಕಿಸುವುದು ಹಿಂದಿನ ಸರಕಾರದ ನೀತಿಯನ್ನು ವಿರೋಧಿಸಿ ತಮಗೆ ಆಡಳಿತ ಸಿಕಾಗ ಅದನ್ನೇ ಪ್ರತಿಪಾದಿಸುವುದು... ಈ ರೀತಿ... ( ಅದರಲ್ಲೂ ಹಾಸ್ಯಾಸ್ಪದವಾದ ಅಭಿಮಾನದ ಪ್ರತ್ಯಕ್ಷ ಪ್ರಮಾಣ ಅಂದರೆ ಪೆಟ್ರೋಲು ಬೆಲೆ ಇಳಿಕೆಗೆ ಪ್ರಧಾನಿ ಕಾರಣರಲ್ಲದಕ್ಕೆ ಅಂತಾರಾಷ್ಟ್ರ‍ೀಯ ಕಚ್ಚಾ ತೈಲದ ಬೆಲೆ ಇಳಿಕೆ ಕಾರಣ ಅನ್ನುತ್ತಿದ್ದ ಅಭಿಮಾನೀ ವೃಂದವೊಂದು ಬೆಲೆಯೇರಿಕೆಯಾಗುತ್ತಿದ್ದಂತೆ ಪ್ರಧಾನಿಯವರನ್ನ ಟೀಕಿಸಲು ಪ್ರಾರಂಭಿಸಿದ್ದು...) ಕೆಲವೊಂದು ಬಾರಿ ಈ ಅಭಿಮಾನದ ಅತಿರೇಕ ಎಲ್ಲಿಯವರೆಗೆ ಸಾಗುತ್ತದೆ ಅಂದರೆ ಕೊಲೆ ಅಥವ ಕೊಲೆಯ ಸರಣಿಯೇ ನಡೆದು ಬಿಡುತ್ತದೆ... ಕಾರ್ಯಕರ್ತರ ಮಾರಣಹೋಮ ನಡೆದುಬಿಡುತ್ತದೆ.
ಬಹುಶಃ ಇಂಥಾ ರಾಜಕೀಯ ಪ್ರೇರಿತ ಅಭಿಮಾನ ದೇಶದ ಹಿತದೃಷ್ಟಿಯಿಂದ ಸಮಾಜದ ಹಿತದೃಷ್ಟಿಯಿಂದ ಬಹಳಾನೇ ಕೆಟ್ಟದ್ದು... ಅಷ್ಟೊಂದು ಕೆಟ್ಟದ್ದಾ...? ಅನ್ನುವುದಕ್ಕೊಂದು ಉದಾಹರಣೆಯಾಗಿ ಒಂದೆರಡು ವಿಷಯಗಳನ್ನ ಕೈಗೆತ್ತಿಕೊಳ್ಳೋಣ... ಭಾರತದ ಪ್ರಧಾನ ಮಂತ್ರಿಗಳು ಸ್ವಚ್ಛಭಾರತ ಅಭಿಯಾನ ಕೈಗೊಳ್ಳುವಾಗ ಅವರು " ದೇಶವಾಸಿಗಳೇ ಭಾರತವನ್ನ ಸ್ವಚ್ಛಗೊಳಿಸಲು ನಿಮ್ಮ ಒಂದು ಗಂಟೆ ಸಮಯ ನನಗೆ ಕೊಡಿ... ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಕೊಳ್ಳಿ " ಅಂದರು .... ಇಲ್ಲಿ ದೇಶದ ಪ್ರಧಾನ ಮಂತ್ರಿಗಳು ಹೇಳುತ್ತಿರುವುದು ದೇಶದ ಹಿತದೃಷ್ಟಿಯಿಂದ ಅನ್ನುವುದನ್ನ ನಾವು ತೆಗೆದುಕೊಳ್ಳಬೇಕೆ ಹೊರತು ಪ್ರಧಾನ ಮಂತ್ರಿಗಳು ಯಾವ ಪಕ್ಷದವರು... ?? ನಾವೇನಾದರೂ ಸ್ವಚ್ಛತೆಯ ಕೆಲಸದಲ್ಲಿ ಕೈ ಜೋಡಿಸಿದರೆ ನಮ್ಮ ಪಕ್ಷಕ್ಕೆ ನಷ್ಟವಾಗಿ ಆ ಪಕ್ಷಕ್ಕೆ ಲಾಭವಾದರೆ...? ನಮ್ಮ ಪಕ್ಷಕ್ಕೇನೂ ಲಾಭವಿಲ್ಲ ಅನ್ನುವ ಲೆಕ್ಕಾಚಾರ ಹಾಕತೊಡಗಿದರೆ ನಷ್ಟ ನಮ್ಮ ದೇಶಕ್ಕೇನೆ ಅಲ್ವಾ.... ಇಲ್ಲಿ ನಮ್ಮ ಅಭಿಮಾನ ನಮ್ಮ ದೇಶಕ್ಕೆ ಮಾರಕವಾಯಿತು ತಾನೇ... ಇಂತಹದ್ದೇ ಇನ್ನೊಂದು ವಿಚಾರ ತೀರಾ ಇತ್ತೀಚಿನದು ನಮ್ಮ ಹದಿನೆಂಟು ಯೋಧರ ಕೊಂದು ಹಾಕಿದ ಉಗ್ರರನ್ನ ನಮ್ಮ ಸೇನೆಯು ನೆರೆರಾಷ್ಟ್ರದ ಗಡಿರೇಖೆಯೊಳಕ್ಕೆ ಹೊಕ್ಕು ಸಂಹಾರ ಮಾಡಿ ಸೇಡು ತೀರಿಸಿಕೊಂಡಿತು... ಇಲ್ಲಿ ಈ ಕಾರ್ಯಾಚಾರಣೆ ಭಾರತೀಯರಾದ ನಮಗೆಲ್ಲರಿಗೂ ಅಭಿಮಾನದ ಸಂಕೇತವಾಗಿರಬೇಕಿತ್ತು... ಆದರೆ ಕೆಲವೊಂದು ಪತ್ರಕರ್ತರು ಇದನ್ನ ವಿಶ್ಲೇಷಿಸಿದ ರೀತಿ ದೇಶದ ಸಮಗ್ರತೆಗೆ ಧಕ್ಕೆ ತರುವಂತಾದ್ದಾಗಿತ್ತು... ಇದು ದೇಶದ ಒಗ್ಗಟ್ಟಿಗೆ ಮಾರಕವಲ್ಲವೇ... ಶತ್ರು ರಾಷ್ಟ್ರಕ್ಕೆ ದೇಶದೊಳಗೆ ಒಡಕಿದೆ ಅನ್ನುವುದು ಗೊತ್ತಾದಾಗ ಅವರ ಆತ್ಮಬಲ ಹೆಚ್ಚಾಗುವುದು ಶತಸ್ಸಿದ್ದವಲ್ಲವೇ..???
ಹೀಗೆ ವ್ಯಕ್ತಿ ಅಥವಾ ಪಕ್ಷದ ಮೇಲಿನ ಅಭಿಮಾನ ಅತಿರೇಕವಾದಾಗ ದೊಡ್ಡ ಪೆಟ್ಟು ಬೀಳುವುದು ಸಾಮಾಜಿಕ ನ್ಯಾಯಕ್ಕೆ... ಜನರು ತಮ್ಮ ಕುರುಡು ಅಭಿಮಾನದಿಂದಾಗಿ ಸಾಮಾಜಿಕ ನ್ಯಾಯವನ್ನ ಮರೆತು ಬಿಡುತ್ತಾರೆ.... ಹಾಗಾಗಿ ನಮ್ಮ ಅಭಿಮಾನದ ಮೇಲೆ ಬಿಗಿ ಹಿಡಿತ ಇರುವುದು ಸಮಾಜದ ಒಳಿತಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ... ವ್ಯಕ್ತಿ ಯಾರೇ ಆಗಿರಲಿ ಪಕ್ಷ ಯಾವುದೇ ಆಗಿರಲಿ.... ಅವರ ಅಥವಾ ಆ ಪಕ್ಷದ ಒಳ್ಳೆಯ ನಿಲುವಿಗೆ ಬೆಂಬಲ ಕೊಡೋದು ನಮ್ಮ ಕರ್ತವ್ಯ . ಅರ್ಥಾತ್ ಸಮಾಜದ ಸೌಹಾರ್ದತೆಗೆ , ದೇಶದ ಘನತೆಗೆ, ಸಾಂಸ್ಕೃತಿಕ ಮೌಲ್ಯಗಳ ಉಳಿಯುವಿಕೆಗೆ ಪೂರಕವಾಗಿದ್ದಲ್ಲಿ ನಮ್ಮ ಅಭಿಮಾನವನ್ನ ಬದಿಗಿಟ್ಟಾದರೂ ಸರಿ ಆ ನಿಲುವನ್ನು ಬೆಂಬಲಿಸುವ ಗುಣ ಬೆಳೆಸಿಕೊಂಡಲ್ಲಿ ಆಗ ದೇಶ ಮತ್ತಷ್ಟು ಬೆಳಗುತ್ತದೆ ತಾನೇ... ಅದಕ್ಕಾಗೇ ಹೇಳಿದ್ದು.... ಅಭಿಮಾನ ಹೇಗಿರಬೇಕೆಂದರೆ... ಅಭಿಮಾನದ ಮೇಲೆಯೇ ಅಭಿಮಾನ ಮೂಡುವಂತಿರಬೇಕು ಅಂತ... ನಿಮಗೇನನಿಸುತ್ತದೆ...?

ಅಪರಾಧಕ್ಕೆ ಧರ್ಮವಿಲ್ಲ ಎನ್ನುತ್ತಲೇ ಧರ್ಮಪ್ರೇಮ ಮೆರೆದ ಲೇಖಕರೋರ್ವರ ಒಂದಷ್ಟು ಪ್ರಶ್ನೆಗೆ ನನ್ನ ಮರು ಪ್ರಶ್ನೆ...ಯಾಕೂಬ್ ಕುರಿತಾಗಿ ಒಬ್ಬ ಲೇಖಕರೋರ್ವರ ಹಲವು ಪ್ರಶ್ನೆಗಳನ್ನು ನನ್ನ ಕಣ್ಣಿಗೆ ಬಿದ್ದಿತ್ತು .... ಓದಿದಾಗ ನನ್ನ ಮನಸ್ಸಿನಲ್ಲಿಯೂ ಒಂದಷ್ಟು ಪ್ರಶ್ನೆಗಳು.... ಹುಟ್ಟಿತು ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ...

1. ಮೇಮನ್‍ನ ಅರ್ಜಿಯೊಂದನ್ನು ಸುಪ್ರೀಮ್ ಕೋರ್ಟ್ ಇನ್ನೂ ಇತ್ಯರ್ಥಪಡಿಸುವುದಕ್ಕಿಂತ ಮೊದಲೇ, ಜುಲೈ 30ರಂದು ಆತನನ್ನು ಗಲ್ಲಿಗೇರಿಸುವುದಾಗಿ ಮಹಾರಾಷ್ಟ್ರದ ಬಿಜೆಪಿ ಸರಕಾರವು ಘೋಷಿಸಿತು. ಈ ತುರ್ತಿನ ಉದ್ದೇಶವೇನು?
ಒಂದೆರಡಲ್ಲ ಇಪ್ಪತ್ತೊಂದು ವರ್ಷಗಳೇ ಕಳೆದು ಹೋಗಿದೆ... ವಿಕೀಪೀಡಿಯಾದಲ್ಲಿ ನಾನು ಕಂಡಂತೆ ಜುಲೈ 2007ಕ್ಕೆ ಶಿಕ್ಷೆ ಪ್ರಕಟವಾಗಿತ್ತು. ಈಗ ಶಿಕ್ಷೆ ಕೊಡಲು ಹೋದರೆ ಅದು ತುರ್ತು ಆಗುತ್ತದೆಯೇ...? ಅಲ್ಲದೇ ನ್ಯಾಯಾಲಯವೊಂದು ಗಲ್ಲಿಗೆ ಹಾಕಿ ಎಂದು ತೀರ್ಪು ಕೊಟ್ಟ ಮೇಲೆ ತಾನೇ ಸರ್ಕಾರ ಗಲ್ಲಿನ ದಿನಾಂಕ ನಿಗದಿ ಪಡಿಸೋದು...... ಅದೂ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಧ್ಯರಾತ್ರಿಯವರೆಗೆ ಸುಪ್ರೀಮ್ ಕೋರ್ಟ್ ತೆರೆದಿದ್ದು ವಿಚಾರಣೆ ಮಾಡಿ ಶಿಕ್ಷೆಯನ್ನು ಸರಿ ಎಂದಿತು.... ಆ ತೀರ್ಪು ಕೇಳಿದ ಮೇಲೂ ಇವರಿಗೆ ಶಿಕ್ಷೆ ತುರ್ತಾಗಿ ಕೊಟ್ಟರು ಅಂತ ಅನಿಸೋದು ಯಾಕೆ...? ಇನ್ನೂ ಎಷ್ಟು ಕಾಯಬೇಕಿತ್ತು...? ಅದರಲ್ಲೂ ಇನ್ನೂ ಅವನಿಗೆ ಸಮಯ ಸಿಗಬೇಕಿತ್ತು ಅಂತ ಇವರಿಗೆ ಅನಿಸೋದು ಯಾಕೆ ...? ಸರಕಾರ ಅನ್ನೋ ಬದಲು ಬಿಜೆಪಿ ಸರಕಾರ ಅನ್ನೋದು ಯಾಕೆ..? ಕಾಂಗ್ರೆಸ್ ಸರಕಾರ ಇದ್ದಿದ್ದರೆ ಸುಮ್ಮನಿರುತ್ತಿದ್ದರೆ...? ಹಾಗಾದ್ರೆ ಇದು ಅಪರಾಧಿಯ ಮೇಲಿನ ಪ್ರೇಮವೇ...? ಆತನ ಮತದ ಮೇಲಿನ ಪ್ರೇಮವೇ..? ಅಥವಾ ಬಿಜೆಪಿ ಸರ್ಕಾರದ ಮೇಲಿನ ದ್ವೇಷವೇ...?

2.ಈ ಹಿಂದಿನ ಯಾವ ಪ್ರಕರಣದಲ್ಲಾದರೂ ಗಲ್ಲಿಗೇರಿಸಲು ಇಷ್ಟೊಂದು ಅವಸರವನ್ನು ತೋರಲಾಗಿತ್ತೇ?
ನನಗರ್ಥ ಅಗೋದಿಲ್ಲ ಹಿಂದಿನ ಪ್ರಕರಣದಲ್ಲಿ ಇಲ್ಲ ಅಂದ ಮಾತ್ರಕ್ಕೆ ಅಪರಾಧಿಯೊಬ್ಬನನ್ನ ಬಿಡಲು ಸಾಧ್ಯವೇ...? ಯಾವುದಕ್ಕಾದರೂ ಒಂದು ಮೊದಲು ಅಂತ ಇರಲೇಬೇಕಲ್ಲ... ಅದು ಇದೇ ಅಂದುಕೊಳ್ಳುವುದಿಲ್ಲವೇಕೆ...? ಗಲ್ಲಿಗೇರಿಸಲು ಅಪರಾಧ ಮಾಡಿದ್ದು ಸಾಬೀತಾಗೋದು ಮುಖ್ಯವಾ ಅಥವಾ ಅಂತದ್ದೇ ಒಂದು ಪ್ರಕರಣ ಹಿಂದೆ ಆಗಿರೋದು ಮುಖ್ಯವಾ...? ಇಂಥಾದ್ದೇ ಪ್ರಶ್ನೆ ಹಿಂದೆಂದಾದರೂ ಇವರು ಮಾಡಿದಂತೆ ಬಾಂಬ್ ಬ್ಲಾಸ್ಟ್ ಆಗಿತ್ತಾ...? ಅನ್ನೋ ಪ್ರಶ್ನೆಯನ್ನ ಇವರ್ಯಾಕೆ ಕೇಳುವುದಿಲ್ಲ...?

3.ಅಪರಾಧಿಗೆ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೋ ಅಥವಾ ಕ್ಷಮಾದಾನ ಪಡೆಯುವುದಕ್ಕೋ ಸಕಲ ಅವಕಾಶಗಳನ್ನೂ ಮುಕ್ತವಾಗಿಡುವುದು ನ್ಯಾಯದ ಬೇಡಿಕೆ. ಮಹಾರಾಷ್ಟ್ರ ಸರಕಾರ ಈ ಮೂಲಭೂತ ಸ್ವಾತಂತ್ರ್ಯವನ್ನೇ ಯಾಕೂಬ್‍ನಿಗೆ ನಿರಾಕರಿಸುವ ರೀತಿಯಲ್ಲಿ ವರ್ತಿಸಿದ್ದೇಕೆ?
ಆತನ ಮೂಲಭೂತ ಸ್ವಾತಂತ್ರ್ಯ ಎಲ್ಲಿ ಕಿತ್ತುಕೊಂಡಿದೆ...? ಇಪ್ಪತ್ತೊಂದು ವರ್ಷ ಸಿಕ್ಕಿರುವುದು ಕಾಲಾವಕಾಶ ಅಲ್ಲವೇ? ಅದಾಗಿಯೂ ಮದ್ಯರಾತ್ರಿಯಲ್ಲೂ ನ್ಯಾಯಾಲಯದ ಬಾಗಿಲು ತೆರೆದೇ ಇತ್ತು ಅನ್ನೋದು ನ್ಯಾಯಾಲಯ ನ್ಯಾಯದ ಪರವಾಗಿ ಇತ್ತು ಅನ್ನುವುದರ ಮತ್ತು ಅಪರಾಧಿ ಮಾತು ಕೇಳುವುದಕ್ಕೂ ಸಿದ್ಧ ಅನ್ನುವುದನ್ನು ಸೂಚಿಸುತ್ತದೆಯಲ್ಲವೇ...? ಇಷ್ಟಾಗಿಯೂ ಇವರಿಗೆ ಕಾಲಾವಕಾಶ ಕೊಡಲಿಲ್ಲ ಅಂತ ಅನಿಸಲು ಕಾರಣ ಅಪರಾಧಿಯ ಮತ ಕಾರಣವೇ...? ಇನ್ನೂ ಮೂಲಭೂತ ಸ್ವಾತಂತ್ರ್ಯ ಅನ್ನೋದು ದೇಶದ ಮೇಲೆ ನಿಷ್ಠೆ ಇದ್ದವರಿಗೆ ಕೊಡಬೇಕೆ ಹೊರತು ದೇಶವಾಸಿಗಳನ್ನೆ ಬಾಂಬಿಟ್ಟು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿ ದೇಶದ್ರೋಹದ ಕೆಲಸ ಮಾಡಿದವರಿಗೇಕೆ ಕೊಡಬೇಕು...? ಮೂಲಭೂತ ಸ್ವಾತಂತ್ರ್ಯ ಬಯಸಿದವರು ದೇಶದ ಮೂಲಭೂತ ಕರ್ತವ್ಯದ ಪಾಲನೆ ಮಾಡಿದ್ದಾರೆಯೇ...?

4.ಪಾಕಿಸ್ತಾನದಿಂದ ಬಂದು ಭಾರತದ ಅಧಿಕಾರಿಗಳ ಮುಂದೆ ಶರಣಾಗತನಾಗಿದ್ದವನನ್ನು ಮುಂಬೈಯ ರೈಲ್ವೆ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದರೆಂದು ಇಷ್ಟು ಕಾಲ ಯಾಕೆ ಸುಳ್ಳನ್ನು ಹರಡಲಾಗಿತ್ತು?
ಆತನ ಬಂಧನ ಕುರಿತು ಸುಳ್ಳು ಹೇಳಿದ್ದಾರೆ ಅಂತಲೇ ಇಟ್ಟುಕೊಳ್ಳೋಣ... ( ಈ ವಿಚಾರವಾಗಿ ಇನ್ನೂ ಪೋಲೀಸ್ ಇಲಾಖೆಯಿಂದ ಸ್ಪಷ್ಟೀಕರಣ ಇನ್ನೂ ಸಿಗಲಿಲ್ಲವಾದರೂ ಇವರು ಹೇಳಿದ್ದನ್ನೇ ಸತ್ಯ ಅಂದುಕೊಳ್ಳೋಣ ) ಆದರೆ ಆತ ಎಲ್ಲಿ ಸಿಕ್ಕ ಅನ್ನುವುದಕ್ಕೂ ಗಲ್ಲಿನ ಶಿಕ್ಷೆಗೂ ಸಂಬಂಧ ಇಲ್ಲವಲ್ಲ. ಗಲ್ಲು ಶಿಕ್ಷೆ ನೀಡಿದ್ದು ಆತನ ಅಪರಾಧಕ್ಕೆ... ಆತನ ಅಪರಾಧ ಸಾಬೀತಾಗಿದೆ ಹಾಗಾಗಿ ಶಿಕ್ಷೆ ಆಗಿದೆ ಅನ್ನುವುದು ಯಾಕೆ ಇವರಿಗೆ ಗೊತ್ತಾಗುವುದಿಲ್ಲ...? ಇವರೇ ಹೇಳಿದ ಹಾಗೆ ಆತ ಪಾಕಿಸ್ಥಾನದಿಂದ ಬಂದದ್ದು ಅನ್ನುವಾಗ ಆತ ಪಾಕಿಸ್ಥಾನಕ್ಕೆ ಯಾಕೆ ತೆರಳಬೇಕಾಗಿತ್ತು...? ನನಗೆ ಭಾರತಕ್ಕಿಂತಲೂ ಪಾಕಿಸ್ಥಾನ ಸುರಕ್ಷಿತ ಅಂತ ಆತನಿಗೇಕೆ ಅನಿಸಬೇಕಿತ್ತು...? ಆತ ನಿರಪರಾಧಿ ಆಗಿದ್ದಿದ್ದರೆ ಪಾಕಿಸ್ಥಾನಕ್ಕೆ ತೆರಳದೇ ಇಲ್ಲೇ ಇದ್ದು ನ್ಯಾಯಾಲಯದ ಮೊರೆ ಹೋಗಬೇಕಾಗಿತ್ತಲ್ಲವೇ ..? ಅಲ್ಲಿಗೆ ಹೋಗಿ ಇಲ್ಲಿ ಬಂದಿರುವ ಕಾರಣ ಅಲ್ಲಿಗಿಂತಲೂ ಇಲ್ಲಿ ತಾನು ಸುರಕ್ಷಿತ ಎಂಬುದು ತಾನೆ...? ಕಳೆದ ಇಪ್ಪತ್ತೊಂದು ವರ್ಷದಲ್ಲಿ ಆತನ ವಕೀಲನಿಗೂ ಆ ಅಂಶ ಆತ ಯಾಕೆ ಹೇಳಲಿಲ್ಲ....?

5. ಯಾಕೂಬ್ ಶರಣಾಗತನಾದದ್ದು 1994ರಲ್ಲಿ. ಆದರೆ ಇದಕ್ಕಿಂತ 5 ವರ್ಷಗಳ ಮೊದಲೇ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‍ನ ಮುಖ್ಯಮಂತ್ರಿಯಾಗಿದ್ದ ಬಿಯಂತ್ ಸಿಂಗ್‍ರನ್ನು ಕೊಲ್ಲಲಾಗಿದೆ. ಪಂಜಾಬ್‍ನ ಖಾಲಿಸ್ತಾನ್ ಹೋರಾಟವೂ ತುಂಬಾ ಹಳೆಯದು. ಆದರೆ ಈ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರಿಗೆ ವಿಧಿಸಲಾಗಿರುವ ಮರಣದಂಡನೆಯನ್ನು ನಮ್ಮ ವ್ಯವಸ್ಥೆ ಈವರೆಗೂ ಜಾರಿಗೊಳಿಸಿಲ್ಲ . ರಾಷ್ಟ್ರಪತಿಯವರಿಂದ ಕ್ಷಮಾದಾನದ ಅರ್ಜಿಯು ತಿರಸ್ಕರಿಸಲ್ಪಟ್ಟ ಬಳಿಕವೂ ಅವರ ಸಹಿತ ಸುಮಾರು 25 ಮಂದಿ ಕೈದಿಗಳು ಇನ್ನೂ ಜೀವಂತವಾಗಿಯೇ ಇದ್ದಾರೆ. ಹೀಗಿರುವಾಗ ಸರದಿಯನ್ನು ತಪ್ಪಿಸಿ ಹಿಂದಿನವರನ್ನು ಹಾಗೆಯೇ ಉಳಿಸಿಕೊಂಡು ಈತನನ್ನು ಗಲ್ಲಿಗೆ ಕೊಡುವ ಆಸಕ್ತಿಯನ್ನು ಮಹಾರಾಷ್ಟ್ರದ ಸರಕಾರ ತೋರಲು ಏನು ಕಾರಣ?
ಇವರು ತೋರಿಸಿರುವ ಪ್ರಕರಣದಲ್ಲಿ ಒಬ್ಬೊಬ್ಬ ವ್ಯಕ್ತಿಗಳ ಸಾವಾಗಿದೆ ಆದರೂ ಅದು ಮುಖ್ಯವೇ ಅದರಲ್ಲೇನೂ ಸಂಶಯವಿಲ್ಲ. ಆದರೆ ಯಾಕೂಬನು ಸಾರ್ವಜನಿಕರ ಹತ್ಯೆಯ ವಿಷಯ. ಅಲ್ಲಿ ಹಲವಾರು ಅಮಾಯಕರು ಬಲಿಯಾಗಿದ್ದಾರೆ ಅನ್ನೋದು ಯಾಕೆ ಇವರಿಗೆ ಕಾಣಿಸುವುದಿಲ್ಲ. ಆದರಲ್ಲೂ ಅಪರಾಧಿಗೆ ಧರ್ಮ ಇಲ್ಲ ಎನ್ನುವ ಇವರು ಅಪರಾಧಕ್ಕಾಗಿ ಶಿಕ್ಷೆ ಆಗಿದೆ ಅನ್ನುವುದು ಗೊತ್ತಾದ ಮೇಲೆ ಸರದಿಯಲ್ಲಿ ಕೊಡಬೇಕಿತ್ತು ಅನ್ನುವುದರಲ್ಲಿ ಏನು ಅರ್ಥವಿದೆ...? ಸರದಿಯ ಸಾಲಲ್ಲಿ ಬಂದು ದೇಶದ್ರೋಹಿಯೊಬ್ಬ ತಡವಾಗಿ ಸಾಯಲಿ ಅನ್ನೋ ಬಯಕೆ ಯಾಕೆ...? ಅವರಿಗೂ ಮರಣ ದಂಡನೆ ಬೇಗನೆ ಕೊಡಿ ಅನ್ನುವುದು ಬಿಟ್ಟು ಇವರಿಗೆ ಸರದಿಯ ಸಾಲಲ್ಲಿ ಕೊಡಲಿಲ್ಲ ಅನ್ನುವುದು ಯಾಕೆ...? ಮತ್ತೆ ಮತ್ತೆ ಇವರು ಮಹಾರಾಷ್ಟ್ರ ಸರ್ಕಾರ ಸರ್ಕಾರ ಅನ್ನೋದು ಏನನ್ನು ಧ್ವನಿಸುತ್ತದೆ ? ನಿಜವಾಗಿಯೂ ಅಪರಾಧಿಗೆ ಶಿಕ್ಷೆ ಆಗಬೇಕು ಅನ್ನುವ ಮನಸ್ಸಿದೆಯೇ...?

6.ಮರಣದಂಡನೆ ವಿಧಿಸದಂತೆ ಒತ್ತಾಯಿಸಿ ಆತನಿರುವ ನಾಗ್ಪುರ ಜೈಲಿನ ಇತರ ಕೈದಿಗಳು ಒಂದು ದಿನದ ಉಪವಾಸ ಆಚರಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು, ಜೈಲಿನಲ್ಲಿ ಆತನ ನಡವಳಿಕೆ ಅತ್ಯುತ್ತಮವಾಗಿತ್ತು ಎಂದಲ್ಲವೇ ಅದರರ್ಥ ?
ಜೈಲಿನಲ್ಲಿ ಇರುವವರು ಉಪವಾಸ ಮಾಡಿದ ಕೂಡಲೇ ಬಾಂಬ್ ಬ್ಲಾಸ್ಟಿನಲ್ಲಿ ಅನ್ಯಾಯವಾಗಿ ಸತ್ತವರ ಪಾಲಿಗೆ ನ್ಯಾಯ ಸಿಕ್ಕಂತಾಗುತ್ತದೆಯೇ...? ಜೈಲಿನಲ್ಲಿ ಇರುವವರೆಲ್ಲಾ ಅಪರಾಧಿಗಳೇ... ಅಪರಾಧಿಗಳ ಮಾತಿಗೆಲ್ಲಾ ಬೆಲೆಕೊಡುವುದಾದರೆ ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆಯಾಕೆ ಬೇಕು? ಶಿಕ್ಷೆ ಕೊಡುವುದಕ್ಕೂ ವೋಟಿಂಗ್ ಮಾಡಬಹುದಲ್ಲಾ... ಜೈಲಿನಲ್ಲಿ ಆತನ ನಡವಳಿಕೆ ಉತ್ತಮವಾಗಿದ್ದರೆ ಕ್ಷಮಿಸಿ ಬಿಡಬೇಕೆ.... ಉತ್ತಮರಂತೆ ನಟಿಸಲೂ ಬಹುದಲ್ಲವೇ...? ಯಾರೋ ಬಬ್ಬಾತ ಮಾಡುವ ಅಪರಾಧವನ್ನೆಲ್ಲಾ ಮಾಡಿ ಜೈಲಿನಲ್ಲಿ ಉತ್ತಮನಂತೆ ನಟಿಸಿದರೆ ಆತನನ್ನ ಬಿಟ್ಟು ಬಿಡಲು ಆಗುತ್ತದೆಯೇ...?

7.ರಾಜಕೀಯ ನಾಯಕರ ವೈಯಕ್ತಿಕ ಹಿತಾಸಕ್ತಿಗಳು ಈ ಗಲ್ಲು ಪ್ರಕರಣದಲ್ಲಿ ಪಾತ್ರ ವಹಿಸಿವೆಯೇ ?
ರಾಜಕೀಯ ನಾಯಕರ ಹಿತಾಸಕ್ತಿ ಇತ್ತೂ ಅಂತಲೇ ಇಟ್ಟುಕೊಳ್ಳಿ ಆದರೆ ಇಲ್ಲಿ ಅಪರಾಧಿಗೆ ತಾನೇ ಶಿಕ್ಷೆ ಆಗಿದ್ದು... ನಿರಪರಾಧಿಗೆ ಅಲ್ವಲ್ಲಾ... ಹಾಗಿರುವಾಗ ಇವರಿಗೆ ರಾಜಕೀಯ ಹಿತಾಸಕ್ತಿಯ ಕುರಿತೇಕೆ ಚಿಂತೆ...? ತಮ್ಮ ಮತದವರು ಅನ್ನುವ ಕಾರಣವಾಗಿದ್ದರೆ ಅವರ್ಯಾಕೆ ಅಪರಾಧಕ್ಕೆ ಧರ್ಮವಿಲ್ಲ ಅನ್ನುವ ಮಾತನ್ನ ಹೇಳಬೇಕಿತ್ತು... ಧರ್ಮ ಇಲ್ಲದ ಒಬ್ಬ ಅಪರಾಧಿಯ ಸಾವಿಗೆ ರಾಜಕೀಯ ನಾಯಕರು ಆಸಕ್ತಿ ವಹಿಸುತ್ತಿದ್ದಾರೆ ಅಂತಾದರೆ ಅದು ದೇಶದ ಸುರಕ್ಷತೆಯ ಆಧಾರದ ಮೇಲೆ ಉತ್ತಮ ಬೆಳವಣಿಗೆಯಲ್ಲವೇ ? ಅದನ್ನ ಯಾಕೆ ಇವರು ಸಹಿಸಿಕೊಳ್ಳುತ್ತಿಲ್ಲ...? ಇದರ ಅರ್ಥ ದೇಶದ ಸುರಕ್ಷತೆ ಇವರಿಗೆ ಬೇಕಾಗಿಲ್ಲವೇ...?

8.ಅಪರಾಧಿಗಳಿಗೆ ಧರ್ಮವಿಲ್ಲ ಎಂದು ಎಷ್ಟೇ ವಾದಿಸಿದರೂ ಮತ್ತು ಅಪರಾಧಕ್ಕೆ ಧರ್ಮವನ್ನು ಜೋಡಿಸುವುದನ್ನು ನಾವೆಷ್ಟೇ ಬಲವಾಗಿ ಖಂಡಿಸಿದರೂ ನಮ್ಮನ್ನಾಳುವವರ ನಡವಳಿಕೆಗಳು ಆ ವಾದ ಸುಳ್ಳೆಂದು ಸಾಬೀತುಪಡಿಸುತ್ತಿದೆಯಲ್ಲವೇ ?
ಇಲ್ಲಿ ನಮ್ಮನ್ನಾಳುವವರನ್ನು ಯಾಕೆ ಎಳೆದು ತರುತ್ತಿದ್ದಾರೆ...? ತೀರ್ಪು ನೀಡಿದ್ದು ನ್ಯಾಯಾಲಯ ಅಲ್ಲವೇ... ನ್ಯಾಯಾಲಯ ಬಯಸುವುದು ಸಾಕ್ಷ್ಯಾಧಾರಗಳನ್ನೇ ಅಲ್ಲವೇ ಅದರ ಕುರಿತು ಯೋಚಿಸುವುದು ಬಿಟ್ಟು ಆಡಳಿತ ನಡೆಸುವವರ ನಡವಳಿಕೆಯ ಮೇಲೆ ಯಾಕೆ ಕಣ್ಣು...? ಅದರಲ್ಲೂ ಇವರು ಪದೇ ಪದೇ ಈಗಿನ ಸರಕಾರವನ್ನ ಆರೋಪಿಯಾಗಿಸುತ್ತಿದ್ದಾರೆ. ಆದರೆ ಪ್ರಕರಣ ಇಪ್ಪತ್ತೊಂದು ವರ್ಷದಿಂದ ನಡೆಯುತ್ತಿದೆ ಆಗಿನ ಸರ್ಕಾರವನ್ನೆಲ್ಲಾ ಯಾಕೆ ದೂಷಿಸುವುದಿಲ್ಲ ? ಇದರ ಅರ್ಥ ತಮ್ಮ ಓದುಗರನ್ನು ಈಗಿನ ಸರ್ಕಾರದ ವಿರುದ್ಧ ಎತ್ತಿ ಕಟ್ಟುವುದೇ ಇವರ ಉದ್ದೇಶವೇ..?

9.ಗುಜರಾತ್‍ನ ನರೋಡಾ ಪಾಟಿಯಾದಲ್ಲಿ 97 ಮಂದಿಯ ಹತ್ಯೆಗೆ ನೇತೃತ್ವ ನೀಡಿದ್ದ ಮಾಯಾ ಕೊಡ್ನಾನಿಯ ಮರಣ ದಂಡನೆಯು ಜೀವಾವಧಿಯಾಗಿ ಪರಿವರ್ತನೆಯಾಗಿದೆ
ಮಾಯಾ ಕೊಡ್ನಾನಿ ಗೆ ಜೀವಾವಧಿ ಶಿಕ್ಷೆ ಆಗಿದೆ ಅನ್ನುವುದನ್ನು ಉಲ್ಲೇಖಿಸಿ ಬೇಸರ ಪಡುತ್ತಾರೆ ಅಂದರೆ ಅವನಿಗೂ ಗಲ್ಲು ಆಗಬೇಕಿತ್ತು ಅನ್ನುವುದು ತಾನೆ... ಅದೇ ತನ್ನ ಧರ್ಮದವನಿಗೆ ಜೀವಾವಧಿ ಶಿಕ್ಷೆ ಜಾರಿಗೆಗೊಳಿಸಬಹುದಿತ್ತು ಅನ್ನುತ್ತಾರೆ... ಇನ್ನೊಂದೆಡೆ ಅಪರಾಧಿಗೆ ಧರ್ಮವಿಲ್ಲ ಅನ್ನುತ್ತಾರೆ.... ಎಂಥಾ ವಿಚಿತ್ರ ತನ್ನ ಧರ್ಮದವನಿಗೆ ಜೀವಾವಧಿ ಶಿಕ್ಷೆಯಾಗಲಿ ಅನ್ನೋದು ಇನ್ನೊಂದು ಧರ್ಮದವನಿಗೆ ಗಲ್ಲಾಗಲಿ ಅಂತ ಬಯಸುವುದು ಸ್ವಧರ್ಮಪ್ರೇಮವಲ್ಲದೇ ಮತ್ತೇನು?... ಹಾಗಿದ್ದರೆ ಅಪರಾಧಕ್ಕೆ ಧರ್ಮವಿಲ್ಲ ಅನ್ನೋ ಮಾತು ಇವರ ಮನಸ್ಸಿನಾಳದಿಂದ ಬಂದದ್ದಲ್ಲ ಅಂತಾಯಿತಲ್ಲವೇ...?

10.ಇದರ ಜೊತೆಗೇ, ಮಾಲೆಗಾಂವ್, ಸಮ್ಜೋತಾ, ಅಜ್ಮೀರ್ ಸ್ಫೋಟಗಳ ಕುರಿತಾದ ನಿಧಾನಗತಿಯ ತನಿಖೆಯನ್ನು ಇಟ್ಟು ನೋಡುವಾಗ ಯಾಕೂಬ್ ಮೇಮನ್ ಪ್ರಕರಣದಲ್ಲಿ ಸರಕಾರ ತೋರುತ್ತಿರುವ ಅವಸರವು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆಯಲ್ಲವೇ ?
ಅಬ್ಬಬ್ಬಾ ಎಂಥಾ ವಿಚಿತ್ರ ವಾದಗಳು... ಒಂದೆಡೆ ಯಾಕೂಬ್ ಪ್ರಕರಣ ತೋರಿಸಿ ಇಂತಹಾ ತುರ್ತು ಬೇಕಿತ್ತಾ ಅನ್ನುತ್ತಾರೆ.... ಅಲ್ಲಿ ಅಪರಾಧಿ ಆತನ ಧರ್ಮದವ.... ಇನ್ನೊಂದು ಕಡೆ ಮೂರು ಪ್ರಕರಣದಲ್ಲಿ ನಿಧಾನಗತಿಯ ತನಿಖೆಯಾಗ್ತಾ ಇದೆ ಅನ್ನುತ್ತಾರೆ... ಅಲ್ಲಿ ಅಪರಾಧಿ ಸ್ಥಾನದಲ್ಲಿರೋರು ಇನ್ನೊಂದು ಧರ್ಮದವರು ಸಾವು ನೋವುಗಳಿಗೊಳಗಾದವರು ಅವರ ಧರ್ಮದವರು... ಒಬ್ಬ ಸಾಮಾನ್ಯ ಓದುಗನಿಗೂ ಇವೆರಡನ್ನ ಹೋಲಿಸಿ ನೋಡಿದಾಗ ತಿಳಿದೇ ಬಿಡುತ್ತದೆ ಇಲ್ಲಿ ಪ್ರಶ್ನೆ ಕೇಳಿರುವವರಿಗೆ ತನ್ನ ಧರ್ಮದವರ ಮೇಲಿನ ಪ್ರೀತಿಯೇ ಈ ರೀತಿ ಪ್ರಶ್ನೆ ಕೇಳುವಂತೆ ಮಾಡಿದೆ ಎಂದು.... ಹಾಗಿರುವಾಗ ಇವರು ನಿಷ್ಪಕ್ಷಪಾತವಾಗಿ ದೇಶದ ಹಿತವನ್ನಿರಿಸಿ ಲೇಖನ ಬರೆದಾರೇ ಅನ್ನುವುದು ಅನುಮಾನಕ್ಕೆಡೆ ಮಾಡಿಕೊಡುವುದಿಲ್ಲವೇ...?

11.ಯಾಕೂಬ್ ನನ್ನು ಗಲ್ಲಿಗೇರಿಸಿದರೆ ಖುಷಿ ಪಡುವವರು ಪಾಕಿಸ್ಥಾನಿಗಳು ಯಾಕೆಂದರೆ ಅವರ ವಿರುದ್ಧದ ಸಾಕ್ಷ್ಯ ನಾಶವಾಗುತ್ತದೆ..?
ಇದರ ಅರ್ಥ ಕಳೆದ ಇಪ್ಪತ್ತೊಂದು ವರ್ಷಗಳಿಂದ ಆತ ಏನೂ ಬಾಯಿ ಬಿಡಲಿಲ್ಲವೆಂದೇ... ಒಂದು ವೇಳೆ ಹೇಳಿ ಆಗಿದ್ದಲ್ಲಿ ಆತ ತಪ್ಪಿತಸ್ಥ ಎಂದು ತಾನೇ ಅರ್ಥ. ಬೇಕಾದ ಸಾಕ್ಷ್ಯಗಳೆಲ್ಲಾ ಸಿಕ್ಕಾದ ಮೇಲೆ ತಾನೆ ಅಪರಾಧಿ ಅಂತ ನ್ಯಾಯಾಲಯ ತೀರ್ಪು ಕೊಟ್ಟದ್ದು ? ಹಾಗಿರುವಾಗ ಅಪರಾಧಿಗೆ ಶಿಕ್ಷೆ ಆಗುತ್ತದೆ ಅನ್ನೋದು ಇಲ್ಲಿನವರಿಗೆ ಖುಷಿ ಕೊಡುವುದಿಲ್ಲವೆಂದೇ ಅರ್ಥವೇ...?

12.ಮುಂಬೈ ಬಾಂಬ್ ಸ್ಫೋಟಕ್ಕಿಂತ ಮೊದಲು ನಡೆದ ಮುಂಬೈ ಕೋಮು ಗಲಭೆಯಲ್ಲಿ ಸಾವಿರಕ್ಕಿಂತ ಅಧಿಕ ಮಂದಿ ಸಾವಿಗೀಡಾಗಿದ್ದರು. ಈ ಗಲಭೆಯಲ್ಲಿ ಶಿವಸೇನೆ ಮತ್ತು ಬಿಜೆಪಿಯು ಪ್ರಮುಖ ಪಾತ್ರ ವಹಿಸಿದ್ದನ್ನು ಶ್ರೀ ಕೃಷ್ಣ ಆಯೋಗ ವಿವರವಾಗಿ ಹೇಳಿತ್ತು. ಆದರೆ ಶಿವಸೇನೆಯ ನಾಯಕ ಮಧುಕರ್ ಸರ್‍ಪೋತೆದಾರ್‍ರಿಗೆ ಕೆಳ ನ್ಯಾಯಾಲಯವು ಜುಜುಬಿ ಒಂದು ವರ್ಷದ ಶಿಕ್ಷೆ ಘೋಷಿಸಿದ್ದನ್ನು ಬಿಟ್ಟರೆ ಇನ್ನಾರೂ ಶಿಕ್ಷೆಯ ಹತ್ತಿರವೇ ಸುಳಿಯಲಿಲ್ಲ. ಅಲ್ಲದೇ ಮಧುಕರ್‍ರನ್ನು ಒಂದು ದಿನದ ಮಟ್ಟಿಗಾದರೂ ಜೈಲಿಗೆ ಕಳುಹಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಲಿಲ್ಲ.

ಕೋಮುಗಲಭೆಯ ಪ್ರಕರಣವೇ ಇರಲಿ... ಇವರು ಶಿಕ್ಷೆ ಆಗಲೇ ಇಲ್ಲ ಅನ್ನುವ ಅಪರಾಧಿಗಳು ಬರಿಯ ಇತರ ಧರ್ಮದವರು ಮಾತ್ರ ಯಾಕಾಗಿರುತ್ತಾರೆ.? ಕೋಮು ಗಲಭೆ ಅಂದ ಮೇಲೆ ಎರಡೂ ಕಡೆಯವರು ಅಪರಾಧ ಎಸಗಿದ್ದಾರೆ ಅಂದು ತಾನೇ ಅರ್ಥ ಆ ಕೋಮುಗಲಬೆಯಲ್ಲಿ ಅವರ ಧರ್ಮದವರಿಗೆ ಏನೇನು ಶಿಕ್ಷೆ ಯಾಗಿದೆ ಅನ್ನೋದನ್ನ ಯಾಕೆ ಹೋಳೋದಿಲ್ಲ..? ಕೋಮುಗಲಭೆಯನ್ನ ಮೂಲವಾಗಿ ಆರಭಿಸಿದವರ ಪಟ್ಟಿಯನ್ನು ಯಾಕೆ ನೀಡೋದಿಲ್ಲ...? ಕೋಮುಗಲಭೆಗೂ ಬಾಂಬ್ ಬ್ಲಾಸ್ಟಿಗೂ ಯಾಕೆ ತಳಕು ಹಾಕುತ್ತಾರೆ...? ಸರಿ ಹಾಕಿದ ಮೇಲೆ ಇದುವರೆಗೆ ಏನೆಲ್ಲಾ ಕೋಮುಗಲಭೆಯಾಗಿದೆ ಎಷ್ಟು ಜನ ಅಪರಾಧಿಗಳಿದ್ದಾರೆ ಅನ್ನೋ ಪಟ್ಟಿಯನ್ನೇಕೆ ಕೊಡುವುದಿಲ್ಲ...? ಉಲ್ಲೇಖಿಸುವಾಗಲೂ ತಮ್ಮ ಧರ್ಮದವರನ್ನ ಬಿಟ್ಟು ಉಳಿದವರನ್ನೇ ಯಾಕೆ ಉಲ್ಲೇಖಿಸುತ್ತಾರೆ..?
ಹೀಗೆ ಹಲವು ಪ್ರಶ್ನೆಗಳು ಕೇಳುತ್ತಾ ತಮ್ಮ ಧರ್ಮಪ್ರೇಮವನ್ನ ಎಲ್ಲೆಡೆ ಹರಡುವ ಲೇಖಕರು ಎಲ್ಲಿಯೂ ಯಾಕೂಬ್ ನಿರಪರಾಧಿಯಾಗಿದ್ದ ಅನ್ನುವುದನ್ನ ಉಲ್ಲೇಖಿಸುವುದೇ ಇಲ್ಲ. ಅದರ ಕುರಿತಾದ ಒಂದೇ ಒಂದು ಸಾಕ್ಷ್ಯವನ್ನ ಕೊಡುವುದಿಲ್ಲ. ಅದನ್ನೇನಾದರೂ ನೀಡಿದ್ದರೆ ಒಪ್ಪಬಹುದಿತ್ತೇನೋ ನಮ್ಮ ನ್ಯಾಯಾಲಯ ಎಡವಿದೆ ಎಂದು . ಆದರೆ ಅದು ನಮಗೆ ಕಾಣಸಿಗುವುದೇ ಇಲ್ಲ. ಹಾಗಿದ್ದೂ ಆತನಿಗೆ ಅನ್ಯಾಯವಾಯಿತು ಅನ್ನುತ್ತಾರೆ. ಇಷ್ಟೆಲ್ಲಾ ಪ್ರಶ್ನೆಗಳು ಸೂಚ್ಯವಾಗಿ ತಮ್ಮ ಧರ್ಮದವರ ಮೇಲೆ ಸರ್ಕಾರ ಅನ್ಯಾಯ ಮಾಡುತ್ತಿದೆ ಅನ್ನುವ ಭಾವನೆ ಓದುಗನಲ್ಲಿ ಬರಲಿ ಅನ್ನುವ ರೀತಿ ಕೇಳಿದ್ದಾರೆ. ಅದೂ ಅಲ್ಲದೇ ಮುಂಜಾವಿನವರೆಗೂ ಕಾರ್ಯನಿರತವಾದ ನ್ಯಾಯಾಲಯವನ್ನ ಸಂಶಯಿಸುತ್ತಾರೆ. ಒಬ್ಬ ವ್ಯಕ್ತಿಗೆ ತಾನು ನಿರಪರಾಧಿ ಅಂತ ಪ್ರೂವ್ ಮಾಡೋದಿಕ್ಕೆ ಇಪ್ಪತ್ತೊಂದು ವರ್ಷಗಳನ್ನ ಕೇವಲ ಭಾರತದ ನ್ಯಾಯಾಂಗ ಮಾತ್ರ ಕೊಡಬಲ್ಲದು ಆದರೆ ಅಪರಾಧಕ್ಕೆ ಧರ್ಮವಿಲ್ಲ ಅನ್ನೋ ಸುಳ್ಳು ಹೇಳುತ್ತಾ ಇರುವವರಿಗೆ ನಮ್ಮ ನ್ಯಾಯಾಂಗದ ಮೇಲೆ ನಂಬಿಕೆ ಬರೋದಿಕ್ಕೆ ಸಾಧ್ಯವೇ ಇಲ್ಲ ಅಲ್ವೇ...
ಈ ಮೂಲ ಪ್ರಶ್ನೆಗಳನ್ನ ಕೇಳಿದವರಿಗೆ ಅಪರಾಧಿಯ ಧರ್ಮದ ಮೇಲೆ ಪ್ರೀತಿ ಇದ್ದಿರಬಹುದು ಆದರೆ ಮರುಪ್ರಶ್ನೆ ಕೇಳಿದ ನನಗಂತೂ ಅಪರಾಧಿಯ ಧರ್ಮದ ಮೇಲೆ ಖಂಡಿತಾ ಪ್ರೀತಿ ಇಲ್ಲ... ನಿರಪರಾಧಿಗೆ ಶಿಕ್ಷೆ ಆಗಬಾರದು ಅನ್ನುವುದನ್ನ ನಾನು ಬಲವಾಗಿ ಪ್ರತಿಪಾದಿಸುತ್ತೇನೆ ಆದರೆ ಒಮ್ಮೆ ದೋಷಿ ಎಂದು ನಮ್ಮ ನ್ಯಾಯಾಲಯ ತೀರ್ಪು ಕೊಟ್ಟಿತು ಅಂದ ಮೇಲೆ ನಾನು ಆತನ ಧರ್ಮ ನೋಡೋದಿಲ್ಲ. ಆತ ಏನಿದ್ದರೂ ಅಪರಾಧಿ ಅಷ್ಟೇ. ನಮ್ಮ ದೇಶದ ನ್ಯಾಯಾಲಯ ಕೊಟ್ಟ ಶಿಕ್ಷೆಯನ್ನ ಒಪ್ಪಿಕೊಳ್ಳುತ್ತೇನೆ. ಅದು ಮಾಯಾ ಕೊಡ್ನಾನಿಯೇ ಆಗಿರಲಿ ಅಥವಾ ಸಾಧ್ವಿ ಪ್ರಜ್ಞಾ ಸಿಂಗೇ ಆಗಿರಲಿ... ನನಗೇನೂ ಅನಿಸುವುದಿಲ್ಲ. ಹಾಗಿದ್ದೂ ನಮ್ಮ ನ್ಯಾಯಾಂಗವನ್ನ ಸಂಶಯಿಸುವವರು ಇನ್ನೂ ಯಾಕೆ ಇಲ್ಲೇ ಇದ್ದಾರೋ ಗೊತ್ತಾಗುವುದಿಲ್ಲ... ಯಾಕೆಂದರೆ ಆಡಳಿತಗಾರರ ಮೇಲೆ ನಂಬಿಕೆ ಇಲ್ಲದೆ ಇದ್ದಾಗ ಆ ದೇಶದಲ್ಲಿ ಬದುಕುವುದಕ್ಕೆ ಆಗುತ್ತದೆ. ಆದರೆ ಅಲ್ಲಿನ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೋಯಿತು ಎಂದರೆ ಬದುಕುವುದು ತೀರಾ ಕಷ್ಟ... ಹಾಗಾದಾಗ ತಮಗೆ ಯಾವ ದೇಶದ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರುತ್ತದೋ ಆ ದೇಶಕ್ಕೆ ಹೊರಟು ಹೋಗುವುದು ಒಳಿತಲ್ಲವೇ....???

ಕುಡುಕರ ಕಿವಿ ಹಿಂಡಿದ ಅಮೀರ್ ಖಾನ್...ತಿಂಡಿ ತಿಂದು ಹಾಗೆ ಕುಳಿತಿದ್ದವನಿಗೆ ಪಕ್ಕನೆ ನೆನಪಾಯ್ತು ಇವತ್ತು ಸಂಡೇ ಅಲ್ವಾ... ನೋಡೋಣ... ಇವತ್ತಿನ "ಸತ್ಯ ಮೇವ ಜಯತೇ" ಯಲ್ಲಿ ಏನಿದೆ ಟಾಪಿಕ್ ಅಂತ...ಹಿಂದಿನ ಕೆಲವು ವಿಷಯಗಳಲ್ಲಿ ಆಮೀರ್ ಖಾನ್ ರ ನಡವಳಿಕೆ ಸ್ವಲ್ಪ ಮುನಿಸು ತಂದಿತ್ತು...ಆದರೂ ನೋಡಲು ಕಾರಣ ನನ್ನ ಬೆಂಬಲ ಯಾವತ್ತೂ ವಿಷಯಾಧಾರಿತ... ವ್ಯಕ್ತಿ ಆಧಾರಿತ ಅಲ್ಲ. ಹಾಗೆ ನೋಡಲು ಕುಳಿತಾಗ ಗೊತ್ತಾಯ್ತು ಇವತ್ತಿನ ವಿಷಯ ಮದ್ಯಪಾನದ ಬಗ್ಗೆ ಅಂತ...ನನಗೂ ನನ್ನ ಕೆಲವು ಗೆಳೆಯರಿಗೂ ಯಾವಾಗ್ಲೂ ವಾದಗಳಾಗುತ್ತಿತ್ತು ಅದಕ್ಕೆ ಉಪಯೋಗ ಆಗಬಹುದು ಅಂತ ತಿಳ್ಕೊಂಡು ನೋಡೋಕೆ ಕೂತೆ...
ಆ ಶೋ ನೋಡೋಕೆ ಬಂದ ಹೆಚ್ಚಿನವರು ಯುವಕ ಯುವತಿಯರು... ಅವರಲ್ಲಿ ಮೊದಲು ಅಮೀರ್ ಕೇಳಿದಾಗ ಹೆಚ್ಚು ಜನ ಕುಡಿಯುವವರು ಅಂತ ಗೊತ್ತಾಯ್ತು... ಅದರಲ್ಲು ಅವರು ತಮ್ಮ ಕುಡಿತಕ್ಕೆ ಕೊಟ್ಟ ಕಾರಣ ಕೇಳಿ ತುಂಬಾನೆ ನಗು ಬಂತು... ಒಬ್ಬ ಹುಡುಗನಿಗೆ.. ಚಿಂತೆ ದೂರ ಮಾಡುತ್ತಂತೆ ಒಬ್ಬ ತನ್ನ ಗೆಳೆಯರು ಮತ್ತು ಬಾಸ್ ಗೆ ಕಂಪನಿ ಕೋಡೋಕೆ ಕುಡಿಯೋದಂತೆ... ಮತ್ತೊಬ್ಬಳಿಗೆ... ನೃತ್ಯ ಮಾಡಲು ತಾಕತ್ತು ಕೊಡುತ್ತೆ ಅಂತ ಕುಡಿಯೋದಂತೆ... ಹ ಹ ಎಷ್ಟೊಂದು ಕಾರಣಗಳು ಅಲ್ವಾ... ಮತ್ತೆ ಒಬ್ಬ ವ್ಯಕ್ತಿ ವೇದಿಕೆಗೆ ಬಂದು ತನ್ನ ಅನುಭವವನ್ನು ಹಂಚಿಕೊಂಡ... ನಿಜಕ್ಕೂ ಈ "ಮದ್ಯ"ಕ್ಕೆ ಎಂಥಾವರನ್ನೂ ದಾಸರನ್ನಾಗಿಸುವ ತಾಕತ್ತಿದೆಯಲ್ವಾ ಅಂತ ಅನ್ನಿಸಿತು. ಡೆಲ್ಲಿಯಲ್ಲಿ ರಾಜಕೀಯ ವ್ಯಕ್ತಿಗಳನ್ನೇ ಹೆದರಿಸಬಲ್ಲಂತಾ ತಾಕತ್ತಿನ ಪತ್ರಕರ್ತನಾದ ವ್ಯಕ್ತಿ ಕುಡಿತಕ್ಕೆ ದಾಸನಾಗಿ ಎಷ್ಟೋ ತಿಂಗಳು ಬೀದಿಗಳಲ್ಲಿ ವಾಸಿಸುವಂತೆ ಮಾಡಿತ್ತಂತೆ. ಆತನನ್ನು ಆ ಮದ್ಯ ಯಾವ ರೀತಿ ದಾಸನನ್ನಾಗಿ ಮಾಡಿತ್ತು ಅಂದ್ರೆ.. ತನ್ನ ಹೆತ್ತ ತಂದೆ ತಾಯಿಯನ್ನೇ ಅವಮಾನಿಸುವಂತೆ ಮಾಡಿತ್ತಂತೆ...ಎಂಥಾ ತಾಕತ್ತು ಅಲ್ವಾ ಈ ಮದ್ಯಕ್ಕೆ...
ಮತ್ತೆ ಬಂದ ಒಬ್ಬ ವ್ಯಕ್ತಿ ಹೇಗೆ ತನ್ನ ಮಗನನ್ನು ಕುಡುಕನಿಂದಾಗಿ ಕಳಕೊಂಡ ಅನ್ನೋದನ್ನಿ ವಿವರಿಸಿದಾಗ ನಿಜಕ್ಕೂ ಮನಸ್ಸಿಗೆ ಬಹಳಷ್ಟು ನೋವಾಗಿತ್ತು, ಜಾವೇದ್ ಅಖ್ತರ್.. ದೊಡ್ದ ಸಾಹಿತಿ ತಾನು ಕುಡಿತದಿಂದ ಮುಕ್ತನಾದ ಬಗೆಯನ್ನು ವಿವರಿಸಿದರು...ಮತ್ತೆ ಬಂದ ವೈದರೊಬ್ಬರು ಕುಡಿಯುವುದು ಒಂದು ಚಟ ಅಲ್ಲ ಅದೊಂದು ರೋಗ ಅಂತ ಚೆನ್ನಾಗಿ ವಿವರಿಸಿದರು...ಮತ್ತೊಬ್ಬರ ಸರ್ವೇ ಪ್ರಕಾರ ಭಾರತದಲ್ಲಿ ಕುಡಿಯುವ ಸಾಮಾನ್ಯ ಮಟ್ಟ ಇತರ ದೇಶಗಳಲ್ಲಿನ ಓವರ್ ಲಿಮಿಟ್ಟನ್ನು ದಾಟಿದೆ ಅನ್ನೋದನ್ನು ಕೇಳಿದಾಗ ನನಗಂತೂ ಶಾಕ್ ಹೊಡೆದಂತಾಯ್ತು. ಇವರೆಲ್ಲಾ ಹೇಳುತ್ತಿದ್ದನ್ನು ಕೇಳುತ್ತಿದ್ದ ಯುವಜನತೆ ತಲೆಅಲ್ಲಾಡಿಸುತ್ತಿದ್ದಂತೂ ನಿಜ ಆದರೆ ಮದ್ಯವನ್ನು ಬಿಡುವ ಪಣ ತೊಟ್ಟಾರಾ...?
ನನ್ನ ಕೆಲವು ಗೆಳೆಯರು ಹೇಳೋದುಂಟು ನಾನೇನೂ ಯಾವತ್ತೂ ಕುಡಿಯೋಲ್ಲ ಅಪರೋಪಕ್ಕೊಮ್ಮೆ ಅದೂ ಕೂಡ ಇಂತಿಷ್ಟೇ ಕುಡಿಯೋದು ಅಂತ... ಅದು ಇತ್ತೀಚಿಗೆ ಕಿಕ್ ಕೂಡ ಕೊಡೋದಿಲ್ಲ ಅಂತ... ಬಹುಶ ಮೊದಲು ಮುವತ್ತಕ್ಕೆ ನಶೆ ಏರುತ್ತಿದ್ದುದು ಮತ್ತೆ ಅದೇ ನಶೆ ಬರಲು ಅರುವತ್ತು ಬೇಕಾದೀತು... ಹೀಗೆ ನಿಮ್ಮ ದೇಹ ಆ ಮದ್ಯದ ಪ್ರಮಾಣಕ್ಕೆ ಹೊಂದಿಕೊಳ್ಳುತ್ತೇ ನಿಮಗೋ ನಶೆಯೇ ಲಿಮಿಟ್ಟು ಅದು ಬರುವವರೆಗೂ ಕುಡಿಯೋದು ನಿಲ್ಲೋಲ್ಲ...ಹಾಗಿದ್ದೂ ಕುಡಿಯೋದು ಬೇಕಾ... ಭಗವಂತ ಕೊಟ್ತ ಈ ಶರೀರವನ್ನು ಕಾಪಾಡೋದು ನಮ್ಮ ಕರ್ತವ್ಯ ಅಲ್ವಾ...ಸುಮ್ಮನೆ ಕುಡಿದು ಹಾಳು ಮಾಡೋದು ಸರೀನಾ...(ಅದರಲ್ಲೂ ಈಗಿನ ಹುಡುಗಿಯರೂ ಕೂಡ ಇದಕ್ಕೆ ಹೊರತಲ್ಲ ಅನ್ನೋದು ಎಷ್ಟೊಂದು ಬೇಸರದ ವಿಷಯ ಅಲ್ವ)..
ನನ್ನ ಮಾತಿಗೆ ಬೆಲೆ ಕೊಡೋದು ಬೇಡ ಬಿಡಿ ಅಷ್ಟೊಂದು ಹಿರಿಯರು ವೈದರು ಎಲ್ಲ ಒಳ್ಳೇದಲ್ಲ ಅಂತಂದ್ರೆ ನಿಜಕ್ಕೂ ಅದು ಕೆಟ್ಟದೇ ಆಗಿರಬೇಕಲ್ವಾ... ನೀವೇ ಯೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ

ಕಾಳಜಿಯ ಹೆಸರಲ್ಲೊಂದು ಪ್ರಚಾರದಾಸೆ...ಮೊನ್ನೆ ರಕ್ಷಾ ಬಂಧನದ ದಿನ ಟಿವಿ ಚಾನಲ್ ಚೇಂಜ್ ಮಾಡ್ತಾ ಇರಬೇಕಾದ್ರೆ " ರಾಜ್ ನ್ಯೂಸ್ " ಅನ್ನೋ ಚಾನಲ್ಲಿನಲ್ಲಿ ಒಂದು ಚರ್ಚೆ ಆಗ್ತಾ ಇತ್ತು. ವಿಚಿತ್ರ ಹೆಡ್ ಲೈನ್.... " ತಿರುಪತಿ ತಿಮ್ಮಪ್ಪನಿಗೆ ಕುಳಿತುಕೊಳ್ಳಲು ಕುರ್ಚಿ ಕೊಡಿ.... " ಯಾರೋ " ನರಸಿಂಹ ಮೂರ್ತಿ " ಎಂಬಾತ ಹೀಗೊಂದು ದೂರು ನೀಡಿದ್ದಾನಂತೆ, ಮಾನವ ಹಕ್ಕುಗಳ ಆಯೋಗಕ್ಕೆ. ಹಲವು ಶತಮಾನಗಳಿಂದ ತಿರುಪತಿಯ ತಿಮ್ಮಪ್ಪ ನಿಂತುಕೊಂಡೇ ಇದ್ದಾನೆ ಹಾಗಾಗಿ ಅವನಿಗೆ ಸಾಕಾಗಿರುತ್ತೆ, ಅವನಿಗೆ ಕುಳಿತುಕೊಳ್ಳಲು ಕುರ್ಚಿಯೊಂದನ್ನು ಕೊಡಬೇಕು ಅಂತ. ಅಬ್ಬಾ ಹೆಡ್ಡಿಂಗ್ ನೋಡಿದ ಕೂಡಲೇ ಛೇ... ಅದೇನು ಕಾಳಜಿ ಅಂತ ಯಾರಾದರೂ ತಿಳಿದುಕೊಂಡಾರು ಅಲ್ವಾ ಆದರೆ ಈ ವಿಚಿತ್ರ ವ್ಯಕ್ತಿಯ ಕಾಳಜಿಯ ಹಿಂದಿರುವ ಉದ್ದೇಶ ಬೇರೆಯೇ.. ಚರ್ಚೆ ಮುಂದುವರಿಯುತ್ತಿದ್ದಂತೆ ಆತನ ಕಾಳಜಿಯ ಪರದೆ ಹರಿಯತೊಡಗಿತ್ತು. ನೋಡ ಹೋದರೆ ಆತನೊಬ್ಬ ಪಕ್ಕಾ ನಾಸ್ತಿಕವಾದಿ. ನಿಜಕ್ಕೂ ಅವನನ್ನ ಕಾಡತೊಡಗಿದ್ದು ತಿಮ್ಮಪ್ಪನ ಕಾಲುನೋವಲ್ಲ ಅಲ್ಲಿ ಹೆಚ್ಚುತ್ತಿರುವ ಆಸ್ತಿಕರ ಆರಾಧನೆ.
ನಿಜಕ್ಕೂ ತಿರುಪತಿಯಲ್ಲೀಗ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಅಲ್ಲಿ ಬಂದು ತಮ್ಮ ಹರಕೆ ಸಲ್ಲಿಸಿ ಕೃತಾರ್ಥರಾದ ಭಾವದಿಂದ ಮನೆಗೆ ತೆರಳುತ್ತಾರೆ. ಬಹುಶ ಈ ನಾಸ್ತಿಕವಾದಿಗೆ ಇದು ಖಂಡಿತ ಹಿಡಿಸಿರಲಿಕ್ಕಿಲ್ಲ. ತಾನು ನಂಬಿರೋ ಸಿದ್ಧಾಂತದ ವಿರೋಧಿಗಳ ಪ್ರಾಬಲ್ಯ ಆತನಲ್ಲಿ ಹೊಟ್ಟೆಯುರಿ ತರಿಸಿರಬಹುದು. ಈ ಹೊಟ್ಟೆ ಉರಿ ಮತ್ತು ತನಗೆ ತನ್ನ ನಂಬಿಕೆಗೆ ಪ್ರಚಾರ ಸಿಗಬೇಕು ಅನ್ನೋ ದಾಹ, ಇವೆರಡೂ ಈತನನ್ನ ಈ ರೀತಿ ಮಾಡುವಂತೆ ಮಾಡಿರಬಹುದು. ಸುಮ್ಮನೆ ಆಸ್ತಿಕರ ಈ ಅರಾಧನೆಯ ಬಗ್ಗೆ ಹೇಗೆ ತಕರಾರು ಎತ್ತೋದು....? ಅದಕ್ಕೆ ಈ ವಾಮಮಾರ್ಗ. ದೇವರಿಗೆ ಕಾಲು ನೋಯುತ್ತೆ ಅವರಿಗೊಂದು ಕುರ್ಚಿ ಕೊಡಿ ಎಂದವ ಚರ್ಚೆಯಲ್ಲಿ ಹೇಳತೊಡಗಿದ್ದು ಬೇರೆಯೇ... ಇಲ್ಲದ ದೇವರಿಗೆ ಅಲ್ಲಿ ಪೂಜೆಯ ನೆಪದಲ್ಲಿ ಹಣ ಪೋಲಾಗುತ್ತಿದೆ ಎಂದ. ಅಲ್ಲಿಗೆ ಅವನ ನಾಸ್ತಿಕತನದ ನಿಜ ಬಣ್ಣ ಬಯಲಾಗಿತ್ತು.
ಆಸ್ತೀಕತೆ ಮತ್ತು ನಾಸ್ತಿಕತೆಯ ಬಗ್ಗೆ ಇನ್ನೊಮ್ಮೆ ಬರೆಯೋಣ ಈ ಬಾರಿ ಬೇಡ. ಆದರೆ ನಾನು ಕಂಡಂತೆ ಸಾಮಾನ್ಯವಾಗಿ ಆಸ್ತಿಕರಿಗೂ ನಾಸ್ತಿಕರಿಗೂ ಇರುವ ಒಂದು ಪ್ರಾಮುಖ್ಯವಾದ ವ್ಯತ್ಯಾಸ ಅಂದರೆ, ಅದು ಇನ್ನೊಬ್ಬರ ಭಾವನೆಗೆ ಗೌರವ ಕೊಡೋದು. ಒಬ್ಬ ಆಸ್ತಿಕ ನಾಸ್ತಿಕನ ನಂಬಿಕೆಗೆ ಬೆಲೆ ಕೊಟ್ಟು ಸುಮ್ಮನಿದ್ದು ಬಿಡುತ್ತಾನೆ, ಆದರೆ ನಾಸ್ತಿಕ ಹಾಗಲ್ಲ.. ಅವನಿಗೆ ಆಸ್ತಿಕನ ಆಚರಣೆಗಳನ್ನ ಮೂದಲಿಸೋದಂದರೆ ಪಂಚಪ್ರಾಣ. ಇಂತಹುದೇ ದೃಶ್ಯ ಈ ನಾಸ್ತಿಕನ ಮಾತಿನಲ್ಲೂ ಕಾಣಸಿಕ್ಕಿತ್ತು. ಎಲ್ಲಿಯವರೆಗೆ ಅಂದರೆ ಚರ್ಚೆಗೆಂದು ಬಂದಿದ್ದ ಧಾರ್ಮಿಕ ವ್ಯಕ್ತಿಯೊಬ್ಬರಿಗೆ ನಿಮಗೇನು ಗೊತ್ತು...? ಬರಿಯ ಗಂಟೆ ಹಿಡಕೊಂಡು ಅಲ್ಲಾಡಿಸೋದಷ್ಟೇ ಗೊತ್ತು ಅಂತೆಲ್ಲಾ ಹೇಳಿದ. ( ಪುಣ್ಯಕ್ಕೆ ನಿರೂಪಕಿ ಈ ವಿಚಾರವಾಗಿ ಆತನನ್ನ ತರಾಟೆಗೆ ತೆಗೆದುಕೊಂಡಿದ್ದು ಎಲ್ಲೋ ಒಂದಷ್ಟು ಸಮಾಧಾನ ಕೊಟ್ಟಿತು.)
ಇಂಥಾ ಜನಗಳೇ ಹಾಗೆ ಏನನ್ನಾದರೂ ಸಾಧಿಸಿ ಹೆಸರು ಗಳಿಸೋಕ್ಕೆ ಮನಸ್ಸು ಮಾಡೋದೇ ಇಲ್ಲ. ಅದು ಅಷ್ಟೇನು ಸುಲಭನೂ ಅಲ್ಲ ಅಲ್ವಾ...ಹಾಗಾಗೇ ಇಂಥಾ ಜನಗಳಿಗೆಲ್ಲಾ ಸುಲಭವಾಗಿ ಸಿಗೋದು ಒಂದೇ ದಾರಿ ಅಂತಂದ್ರೆ ಸನಾತನ ಧರ್ಮದ ಆಚರಣೆಯನ್ನೋ.... ದೇವರನ್ನೋ ದೂರೋದು... ಹೀಗಾದಾಗ ಒಂದಷ್ಟು ಜನ ಧರ್ಮದ ಬಗೆಗೆ ಶೃದ್ಧೆಯಿರುವವರು ವಿರೋಧಿಸುತ್ತಾರೆ. ಹೀಗೆ ವಿರೋಧಿಸಿದ ಕೂಡಲೇ ಒಂದಷ್ಟು ಜನ ಬುದ್ಧಿಜೀವಿಗಳು ಈ ಹೊಸ ಬುದ್ಧಿಜೀವಿಯ ಬೆಂಬಲಕ್ಕೆ ಬರುತ್ತಾರೆ... ಸರಿ ಅಲ್ಲಿಗೆ ಮುಗಿದೋಯ್ತು ಬಿಡಿ ಪ್ರಚಾರಾನೇ ಪ್ರಚಾರ... ಕೆಲವೊಂದು ಪೇಯ್ಡ್ ಮೀಡಿಯಾಗಳ ಪಾಲಿಗೆ ಇಂಥಾ ಪ್ರಚಾರಪ್ರಿಯರು ವಿದ್ವಾಂಸರಾಗಿ ಕಾಣಿಸಿ ಬಿಡ್ತಾರೆ. ಚರ್ಚೆ ಮಾಡ್ತಾ ಮಾಡ್ತಾ ಒಂದಷ್ಟು ಹಣಾನೂ ಮಾಡಬಹುದು... ಅಥವಾ ಟಿ. ಎನ್. ಸೀತಾರಾಂ ನಂಥವರ ಧಾರಾವಾಹಿಯಲ್ಲಿ ಒಂದು ರೋಲ್ ಕೂಡ ಸಿಗಬಹುದು... ಇಷ್ಟು ಆರಾಮದ ಹಾದಿ ಇರೋವಾಗ ಅದ್ಯಾರಿಗೆ ಬೇಕು ಅಲ್ವಾ ಸಾಧನೆಯ ಹಾದಿ.
ಆ ಚರ್ಚೆಯಲ್ಲಿ ಆ ವ್ಯಕ್ತಿ ಇನ್ನೊಂದು ವಿಚಿತ್ರ ವಾದ ಮಾಡಿದ್ದ... ಇಲ್ಲದ ದೇವರ ಹೆಸರಿನಲ್ಲಿ ತಿರುಪತಿಯಲ್ಲಿ ಧಂಧೆ ಆಗ್ತಿದೆ ಅಂತಾನೆ... ಅದೇ ದೂರು ನೀಡೋವಾಗ ತಿಮ್ಮಪ್ಪನಿಗೆ ಕಾಲು ನೋಯಬಹುದು ಅಂತಾನೆ... ಈ ದ್ವಂದ್ವ ಹೇಳಿಕೆಯನ್ನು ಸಮರ್ಥಿಕೊಳ್ಳೋಕೆ ಅವನ ಬಳಿ ಯಾವುದೇ ಬಲವಾದ ಕಾರಣಗಳಿಲ್ಲ. ಇದರ ಅರ್ಥ ಏನು... ಪ್ರಚಾರದ ದುರಾಸೆಯೇ ಅಲ್ವಾ...ಇಂಥಾ ಪ್ರಚಾರ ಪ್ರಿಯರೆಲ್ಲರೂ ಸ್ವಲ್ಪ ಬುದ್ಧಿವಂತರೇ ಕಾರಣ... ಜಾಣತನದಿಂದ ಹಿಂದೂ ಧರ್ಮದ ವಿರುದ್ಧವೇ ಮಾತಾಡುತ್ತಾರೆ... ಅಯ್ಯೋ ಅದೆಷ್ಟೋ ಸಮಯದಿಂದ ಏಸು ಕ್ರಿಸ್ತನ ಕೈಗೆ ಮೊಳೆ ಹೊಡೆಯಲಾಗಿದೆ ಅದನ್ನ ತೆಗೀರೀ ಅಂತಲೋ... ಅಥವಾ ಇನ್ನಾವುದೋ ಮಸೀದಿಯೊಂದರ ಸಮಾಧಿಯಲ್ಲಿರುವ ಸಂತರಿಗೆ ಉಸಿರುಕಟ್ಟಬಹುದು ಎಂದು ಎಬ್ಬಿಸಿ ಕೂರಿಸಿ ಅಂತಾನೋ... ಹೇಳೋದೇ ಇಲ್ಲ.... ಕಾರಣ ಪ್ರಾಣ ಭಯ... ಇನ್ನುಳಿದ ಧರ್ಮಗಳ ವಿರುದ್ಧ ಮಾತಾಡಿದರೆ ಆ ಧರ್ಮಾನುಯಾಯಿಗಳು ಸುಮ್ಮನೆ ಬಿಡೋದಿಲ್ಲ ಅಂತ ಅವರಿಗೂ ಗೊತ್ತಿದೆ. ಅದೇ ಹಿಂದೂಗಳಲ್ಲಾದರೆ.... ಒಂದಷ್ಟು ಜನ ವಿರೋಧಿಸಿ ತಣ್ಣಗಾಗಿ ಬಿಡುತ್ತಾರೆ ಅಷ್ಟೇ.. ನಿಜಕ್ಕೂ ಇಷ್ಟೊಂದು ಬುದ್ಧಿಜೀವಿಗಳ ಸೃಷ್ಟಿಗೆ ಎಲ್ಲೋ ನಮ್ಮ ಸನಾತನ ಧರ್ಮದ ಅತಿಯಾದ ಸಹನೆಯೇ ಕಾರಣ ಅಂತ ಘಂಟಾಘೋಶವಾಗಿ ಸಾರಬಹುದು.
ಅದೇನೇ ಇರಲಿ ಆ ತಿರುಪತಿ ತಿಮ್ಮಪ್ಪ ಮತ್ತು ಅವನ ಭಕ್ತಾದಿಗಳು ಇಂಥಾ ನಾಸ್ತಿಕನ ಅರಚಾಟಕ್ಕೆ ಕಿವಿಕೊಡಲಿಲ್ಲವಲ್ಲಾ ಅದೇ ಸಮಾಧಾನ.

ಆಚರಣೆಯಲ್ಲೂ ಜಾತ್ಯಾತೀತತೆಯ ಹುಚ್ಚು....ಹಾಗೇ ಕುಳಿತು ಹಳೆಯ ಪೇಪರ್ ಗಳನೆಲ್ಲ ಸರಿ ಮಾಡಿ ಅಟ್ಟಕ್ಕೆ ಹಾಕ್ತ ಇದ್ದಾಗ ಒಂದು ವಾರದ ಹಿಂದಿನ ಉದಯವಾಣಿಯಲ್ಲೊಂದು ಲೇಖನದ ಹೆಡ್ಡಿಂಗ್ ನನ್ನ ಗಮನ ಸೆಳೆಯಿತು..." ಹುಸಿ ಜಾತಿವಾದ, ಹಸಿ ಧಾರ್ಮಿಕತೆ " ಇದು ಟೈಟಲ್ಲು.. ನೋಡಿದರೆ ಅದು ವಿ.ಐ.ಪಿ ಕಾಲಂ... ಲೇಖನ ಬರೆದವರು " ರಾಹುಲ್ ಬೋಸ್ " ನಟ, ಸಾಮಾಜಿಕ ಕಾರ್ಯಕರ್ತ ( ಈ ನಟ ಅನ್ನೋದೇನೋ ಗೊತ್ತಾಯ್ತು ಸಾಮಾಜಿಕ ಕಾರ್ಯಕರ್ತ ಹೇಗೋ ಇನ್ನು ಗೊತ್ತಗ್ತಾ ಇಲ್ಲ.. ಅವರ ಸಿನಿಮಾಗಳಂತೆ ಸಂಖ್ಯೆಯಲ್ಲಿ ಇದು ಬಹಳ ಕಡಿಮೆಯೇನೋ...) ಅವರ ಲೇಖನದ ಮುಖ್ಯ ವಸ್ತು ಭಾರತದಲ್ಲಿನ ಕೆಲವು ಆಚರಣೆಗಳು... ತಮ್ಮ ಲೇಖನದಲ್ಲಿ ಅವರು ಇಲ್ಲಿನ ಕೆಲವು ಆಚರಣೆಯ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾರೆ.. ಾಅರತಿ ಎತ್ತಿ , ತಿಲಕ ಇಟ್ಟು ಅತಿಥಿಗಳನ್ನು ಸ್ವಾಗತಿಸುವುದು, ದೀಪ ಬೆಳಗಿ ಕಾರ್ಯಕ್ರಮದ ಶುಭಾರಂಭ ಮಾಡುವುದು ತೆಂಗಿನಕಾಯಿ ಒಡೆದು ಮುಹೂರ್ತ ನೆರವೇರಿಸುವುದು... ಕರ್ವಾ ಚೌತ್ ಆಚರಣೆಯನ್ನು ಜಾಹೀರಾತುಗಳಲ್ಲಿ ತೋರಿಸುವುದು... ಈ ತರ ಇದೆಲ್ಲಾ ಹುಸಿ ಜಾತೀಯತೆ ಅಂತೆ... ಭಾರತದಲ್ಲಿ ಜಾತ್ಯಾತೀತತೆ ಇಲ್ಲ ಇವೆಲ್ಲಾ ಹಿಂದೂ ಸಂಪ್ರದಾಯಗಳು ಇವನ್ನೆಲ್ಲಾ ಸರಕಾರಿ ಕಾರ್ಯಕ್ರಮದಲ್ಲಿ ಯಾಕೆ ಮಾಡುತ್ತಾರೆ ಅನ್ನೋದು ಅವರ ಆತಂಕ...ಹಿಂದೂ ಆಚರಣೆಗಳನ್ನೆ ಮುಖ್ಯವಾಗಿ ಬಳಸಿಕೊಳ್ಳುವ ಜಾಹೀರಾತುಗಳಿಂದ ೧೫ ಕೋಟಿ ಜನ ಪ್ರತಿದಿನ ಒಲ್ಲದ ಮನಸ್ಸಿನಿಂದ ಇವನ್ನೆಲ್ಲ ನೋಡುತ್ತಾರಂತೆ...
ಇವರ ಈ ಸಾಲುಗಳನ್ನು ಓದುತ್ತಾ ಹೋದಂತೆ ಮನಸ್ಸಿಗೇನೋ ಹಿಂಸೆ ಆಗತೊಡಗಿತು... ಜಾತ್ಯಾತೀತತೆಯ ಪಾಠ ಹೇಳಿಕೊಡುತ್ತಾ ಭಾರತೀಯತೆಯನ್ನು ಹಾಳುಮಾಡುತ್ತಿದ್ದಾರಲ್ಲ ಎಂದೆನಿಸಿತು... ಭಾರತ ಈಗ ಜಾತ್ಯಾತೀತ ರಾಷ್ಟ್ರ ಒಪ್ಪೋಣ .. ಆದರೆ ಈ ಆಚರಣೆಗಳೆಲ್ಲಾ ಅನಾದಿ ಕಾಲದಿಂದಲೂ ಭಾರತಕ್ಕೊಂದು ತನ್ನದೇ ಆದ ಮಹತ್ವವನ್ನು ಕೊಟ್ಟಿದೆ ಅದೆಷ್ಟೋ ಜನ ವಿದೇಶಿಯರು ಭಾರತಕ್ಕೆ ಬಂದೊಡನೆ ಹಣೆಯ ಮೇಲೆ ಹರಡಿಕೊಂಡಿರುವ ಕೂದಲನ್ನೆಲ್ಲಾ ಸರಿಸಿ ಕತ್ತನ್ನು ಮುಂದೆ ಬಾಗಿ ಹಣೆಯನ್ನು ತೋರಿಸುತ್ತಾರೆ... ಅದರೆಲ್ಲೇನೋ ಖುಷಿ ಸಿಗುತ್ತೆ ..ಅತಿಥಿಗೆ ಆರತಿ ಬೆಳಗೋದು ನಾವು ಅವರನ್ನ ದೇವರಂತೆ ಕಾಣುತ್ತೇವೆ ಅನ್ನೋದರ ಸೂಚಕ ತಾನೆ.. ಅತಿಥಿ ದೇವೋ ಭವ ಅನ್ನೋದು ಹಿಂದೂ ಧರ್ಮದ ವಾಕ್ಯವಾದರೂ ಭಾರತದಲ್ಲಿ ಅದು ಎಲ್ಲಾ ಧರ್ಮದವರು ಪರಿಪಾಲಿಸುತ್ತಿರುವ ಧ್ಯೇಯ ವಾಕ್ಯ... ಎಲ್ಲರೂ ಒಪ್ಪಿಕೊಂಡಿರುವ ಇಂತಾ ಆಚರಣೆಗಳಲ್ಲಿ ಅದು ಹಿಂದೂ ಧರ್ಮದ್ದು ಅದನ್ನು ಮಾಡಬಾರದು ಅನ್ನುತ್ತಾ ಯಾಕೆ ಇನ್ನಷ್ಟು ಧರ್ಮದ್ವೇಷ ಹರಡುತ್ತಿದ್ದಾರೆ... ಹಾಗೊಂದು ವೇಳೆ ಇವರ ಈ ವಿಕೃತ ಕಣ್ಣಿನಲ್ಲಿ ನೋಡಿ ಹುಡುಕೋದಾದ್ರೆ ಅದೆಷ್ಟೋ ಆಚರಣೆಗಳು ಕಾಣಿಸೋಲ್ಲ..ಪ್ರತಿಯೊಂದು ಹಿಂದೂ ಧರ್ಮದ ಆಚರಣೆಯನ್ನು ನಿಲ್ಲಿಸಲು ಹೇಳುತ್ತೀರಾ... ರಕ್ಷಾಬಂಧನ .. ಅದೆಷ್ಟೋ ಮುಸ್ಲಿಮ್ , ಕ್ರಿಶ್ಚಿಯನ್ರು ಅದನ್ನ ತಮ್ಮ ಆಚರಣೆಗಳನ್ನಗಿ ಮಾಡಿದ್ದಾರೆ ಅದೆಲ್ಲವೂ ನಿಲ್ಲಬೇಕೆ..?ಇದುವರೆಗೆ ಎಲ್ಲರೂ ಒಪ್ಪಿಕೊಂಡದ್ದನ್ನು ನಿಲ್ಲಿಸಿ ಧರ್ಮ ದ್ವೇಷ ಬೆಳೆಸೋದಾದರೂ ಯಾತಕ್ಕೆ...?ಹಿಂದೂ ಧರ್ಮದ ಆಚರಣೆಗಳಿಂದ ಇತರರಿಗೆ ನೋವಾಗುತ್ತೆ ಅನ್ನುತ್ತಾರಲ್ಲ .. ಹಿಂದೂ ದೇವಾಲಯದ ಮುಂದೆ ಹೂವು ಮಾರಿಕೊಂಡು... ಧಾರ್ಮಿಕ ಯಾತ್ರೆ ಗಳಲ್ಲಿ ಸಹಕರಿಸುತ್ತ ತಮ್ಮ ಉದರ ಪೋಷಣೆ ಮಾಡುವ ಅದೆಷ್ಟು ಕುಟುಂಬ ಗಳಿಲ್ಲ.ಅವೆಲ್ಲವೂ ಹಿಂದೂ ಕುಟುಂಬಗಳಲ್ಲ. ಅನ್ಯ ಕೋಮಿನವರೆಷ್ಟೋ ಜನ ಹಿಂದೂ ಆಚರಣೆಗಳಿಂದ ತಮ್ಮ ಜೀವನ ಸಾಗಿಸುತ್ತಾರೆ... ಇವೆಲ್ಲ ಅವರ ಮನಸ್ಸಿಗೆ ನೋವು ತರೋದಿಲ್ವ... ಇಂತಹಾ ದ್ವಂದ್ವ ಯಾಕೆ... ಉದರ ಪೋಷಣೆಗಾದಲ್ಲಿ ಸಹಿಸಬಹುದು ಹಾಗೆ ನೋಡೋವಾಗ ಸಹಿಸೋಕಾಗಲ್ಲ.. ಇದೆಲ್ಲಿಯ ಸಮಾನತೆ...
ಹಿಂದೂ ಧರ್ಮವೆನ್ನುವುದು ಭಾರತದ ಮೂಲಧರ್ಮ ಮತ್ತು ಉಳಿದ ಧರ್ಮಗಳೆಲ್ಲವೂ ಇಲ್ಲಿಗೆ ಮತ್ತೆ ಆಗಮಿಸಿದಂತವು ಹಾಗಿದ್ದು ಇಲ್ಲಿ ಉಳಿದವರ ಧರ್ಮಕ್ಕೆ ಅವರ ಆಚರಣೆಗೆ ಯಾವತ್ತೂ ಕಟ್ಟುಪಾಡು ಹಾಕಿಲ್ಲ. ಅವೆಲ್ಲವನ್ನೂ ಹಿಂದೂಗಳು ಗೌರವಿಸುತ್ತಾರೆ...
ಹಾಗಾಗಿ ಇಲ್ಲಿನ ಮೂಲಧರ್ಮದ ಆಚರಣೆಗಳು ಹೆಚ್ಚಗಿ ಪ್ರಚಾರವಾಗಿರುವುದು ತಪ್ಪು ಹೇಗಾದೀತು... ಇನ್ನು ಈ ಆಚರಣೆಗಳ ಹಿಂದಿರುವ ವೈಜ್ನಾನಿಕ ಮಹತ್ವದ ಬಗ್ಗೆ ಬರೆಯೋದಾದ್ರೆ ತುಂಬಾನೇ ಇದೆ... ನೀವೊಬ್ಬ ಜಾತ್ಯಾತೀತ ವ್ಯಕ್ತಿ ಅಂತ ತೋರಿಸಿಕೊಳ್ಳೋ ಹುಚ್ಚು ಆಸೆಗೆ ಭಾರತೀಯ ಜೀವನ ಶೈಲಿಯನ್ನು ಬಲಿಗೊಡಬೇಡಿ ೧೫ ಖೊತೀ ಝಾಣಾ ಒಲ್ಲದ ಮನಸ್ಸಿನಿಂದ ನೋಡುತ್ತಾರೆ ಎಂದಿರಲ್ಲಾ ಉಳಿದ ೧೦೫ ಕೋಟಿ ಜನರ ಸಂತಸಕ್ಕೆ ಬೆಲೆಯೇ ಇಲ್ಲವಾ...? ನೀವು ಹಾಕುವ ಕೋಟು, ಸೂಟು ಇವೆಲ್ಲ ಕ್ರಿಶ್ಚಿಯನ್ ಧರ್ಮದ್ದು... ಶೆರ್ವಾನಿ ಕುರ್ತಾ ಇವೆಲ್ಲಾ ಮುಸ್ಲಿಂ ಧರ್ಮದ್ದು ಅವೆಲ್ಲ ಹಾಕಿಕೊಂಡರೆ ೧೦೫ ಕೋಟಿ ಜನರಿಗೆ ನೋಡೋದು ಕಷ್ಟವಾಗುತ್ತೆ ಅಂದ್ರೆ ಅದನ್ನ ಬದಲಾಯಿಸೋಕೆ ಆಗುತ್ತದಾ... ಅಥವಾ ಇದರ ಕುರಿತು ಯಾಕೆ ಯೋಚಿಸಿ ಬರೆದಿಲ್ಲ... ಒಂದೊಂದು ಧರ್ಮದ ಆಚರಣೆಯನ್ನು ಆಚರಿಸದೇ ಇರುವುದು ಜಾತ್ಯಾತೀತತೆ ಅಲ್ಲ, ಎಲ್ಲ ಧರ್ಮಕ್ಕೂ ಬೆಲೆ ಕೊಡೋದು ಜಾತ್ಯಾತೀತತೆ...
ಇನ್ನು ಟೀವಿಯಲ್ಲಿ ಹಿಂದೂ ಆಚರಣೆಗಳನ್ನಷ್ಟೇ ತೋರಿಸುತ್ತಾರೆ ಅಂತ ಕಳವಳ ವ್ಯಕ್ತ ಪಡಿಸಿದರಲ್ಲ ... ಈ ಟೀ ವಿಯವರು ಬಿಸಿನೆಸ್ ಮ್ಯಾನ್ ಗಳು.. ನಮ್ಮ ರಾಜಕೀಯ ವ್ಯಕ್ತಿಗಳಂತಲ್ಲ ಬಹುಸಂಖ್ಯಾತರನ್ನು ಒಲಿಸಿಕೊಂಡಾಗಲೇ ನಮಗೆ ಲಾಭ ಜಾಸ್ತಿ ಅಂತ ಅವರಿಗೆ ಗೊತ್ತಿದೆ.. ಜಾತ್ಯಾತೀತತೆ ಸೋಗು ಹಾಕಿ ಅಲ್ಪ ಸಂಖ್ಯಾತರ ಓಲೈಕೆ ಮಡೋದರಿಂದ ಅವರಿಗೇ ನಷ್ಟ... ಇನ್ನಾದರೂ ಭಾರತದಲ್ಲಿನ ಆಚರಣೆ ಹಿಂದೂ ಧರ್ಮದ್ದು ಅನ್ನೋದನ್ನ ಬಿಟ್ಟು ಅದು ಭಾರತೀಯರದ್ದು ಅನ್ನಿ ಆಗಲೇ ಭಾರತ ಜಗತ್ತಿನಲ್ಲೇ ಎತ್ತರದ ಸ್ಥಾನಕ್ಕೇರಲು ಸಾಧ್ಯವಾಗೋದು.

ಇದೇನಾ....? ಆಧುನಿಕ ಗೆಳೆತನ ..... ?ಮಂಗಳೂರಿನಲ್ಲಿ ಮಾದಕ ದ್ರವ್ಯದ ಜಾಲಕ್ಕೆ ಸಿಲುಕಿ ಒಬ್ಬ ವಿದ್ಯಾರ್ಥಿನಿ ಸಾವನಪ್ಪಿದ್ದಾಳೆ. ಆ ಸಾವಿನ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಶುರು ಮಾಡಿದ್ದಾರೆ... ಪೋಲೀಸರ ವಿರುದ್ಧ ಘೋಷಣೆ ಕೂಗ್ತಾ ಇದ್ದಾರೆ, ಆದರೆ ಈಗ ಕೂಗಿ ಏನು ಪ್ರಯೋಜನ. ಸತ್ತವಳು ಮತ್ತೆ ಎದ್ದು ಬರುತ್ತಾಳೆಯೇ....? ಅವಳು ಬದುಕಿದ್ದಾಗ ಅವಳ ಆಪ್ತ ಮಿತ್ರರಿಗೆ ಅವಳು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾಳೆ ಅನ್ನೋ ಸಣ್ಣ ಸುಳಿವಾದರೂ ಸಿಕ್ಕಿರಲೇ ಇಲ್ವೇ. ಅಥವಾ ಗೊತ್ತಿದ್ದೂ ಸುಮ್ಮನಿದ್ದರೇ. ಒಂದು ವೇಳೆ ಗೊತ್ತಿದ್ದೂ ಸುಮ್ಮನಿದ್ದರು ಅಂತಾದಲ್ಲಿ ಈಗ ಅದ್ಯಾವ ಮುಖವನ್ನಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ...?
ಈಗಿನ ಗೆಳೆತನವೇ ಹಾಗೆ ಕೆಟ್ಟದರ ಕಡೆ ಹೋಗೋದನ್ನ ತಡೆಯುವ ಬದಲಾಗಿ ಕೆಟ್ಟದರ ಕಡೆ ಕೊಂಡೊಯ್ಯೊ ಗೆಳೆಯ/ತಿ ಯೇ ಪ್ರಾಣ ಸ್ನೇಹಿತರಾಗುತ್ತಾರೆ. ಶಾಲಾ ಕಾಲೇಜುಗಳಲ್ಲಿನ ತರಗತಿಯನ್ನ ತಪ್ಪಿಸಿಕೊಂಡು ಸಿನಿಮಾಗೋ ಇನ್ನೆಲ್ಲಿಗೋ ಹೋದರೆ ಅವರು ಜಿಗರಿ ದೋಸ್ತುಗಳು. ಅಪ್ರಾಪ್ತ ವಯಸ್ಸಿನಲ್ಲಿಯೇ ಕುಡಿಯೋಕೆ ಶುರು ಮಾಡೋ ಇವರಿಗೆ ತನ್ನ ಗೆಳೆಯನೊಬ್ಬ ಕುಡಿಯಲ್ಲ ಅನ್ನೋದು ಗೊತ್ತಾದರೆ ಸಾಕು ಅಪಹಾಸ್ಯ ಮಾಡಿ ಕುಡಿತದ ಚಟ ಶುರು ಮಾಡಿಸಿಯೇ ಸಿದ್ಧ... ಇಲ್ಲವಾದಲ್ಲಿ " ಅವನೋ ದೊಡ್ದ ಗಾಂಧಿ " ಅನ್ನೂ ಹಣೆಪಟ್ಟಿ ಕಟ್ಟಿ ಬಿಡುತ್ತಾರೆ. ಇವರಿಗೆಲ್ಲಾ ಗೆಳೆತನ ಅಂದರೆ ತನ್ನ ಮಿತ್ರರಿಗೆ ಪರೀಕ್ಷೆಯಲ್ಲಿ ಕಾಪಿ ಮಾಡೋಕೆ ಸಹಾಯ ಮಾಡೋನು/ಳು, ಹೋಮ್ ವರ್ಕ್ ಮಾಡದೇ ಇದ್ದಾಗ ನೀನೂ ಮಾಡಬೇಡ ಅನ್ನುತ್ತಾ ಕಾಲೇಜಿನಿಂದ ಹೊರ ಹೋಗೋದಿಕ್ಕೆ ಕಂಪೆನಿ ಕೊಡೋದು , ತಾನು ಮೆಚ್ಚಿದ ಹುಡುಗಿ/ಗನಿಗೆ ಲವ್ ಲೆಟರ್ ಕೊಡೋಕೆ ಹೆಲ್ಪ್ ಮಾಡೋದು ಇವೇ ಗೆಳೆತನದ ನಿದರ್ಶನಗಳು.
ಗೆಳೆತನ ಅಂದರೆ ಬರಿಯ ಫ್ರೆಂಡ್ ಶಿಪ್ ಡೇ ಗೆ ವಿಶ್ ಮಾಡಿ ಕೈಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟೋದಲ್ಲ, ಒಬ್ಬ ಗೆಳೆಯನ ಸುಖ ದುಃಖಗಳೆರಡರಲ್ಲೂ ಭಾಗಿಯಾಗುವವನೆ ನಿಜವಾದ ಗೆಳೆಯ/ತಿ. ಬಹುಷ ಹೆತ್ತವರಿಗೆ ಗೊತ್ತಿರದ ಅದೆಷ್ಟೋ ವಿಷಯಗಳನ್ನ ಒಬ್ಬಾತ/ಕೆ ಅವರ ಗೆಳೆಯರಲ್ಲಿ ಹಂಚಿಕೊಳ್ಳುತ್ತಾರೆ. ಒಬ್ಬಾತ ತಪ್ಪು ಹೆಜ್ಜೆಯನ್ನಿಟ್ಟಿದ್ದಾನೋ ಇಲ್ಲವೋ ಅನ್ನೋದು ಗೆಳೆಯನಿಗೆ ಮೊದಲು ಗೊತ್ತಗೋಗುತ್ತೆ. ಅಂಥಾ ಸಂಧರ್ಭದಲ್ಲಿ ಹಾದಿ ತಪ್ಪದಂತೆ ನೋಡಿಕೊಳ್ಳುದು ನಿಜವಾದ ಗೆಳೆಯನ ಕರ್ತವ್ಯ ಅಲ್ವಾ.
ಮೊನ್ನೆಯ ಘಟನೆಯ ಕುರಿತೇ ಯೋಚಿಸೋಣ, ಆಕೆ ಡ್ರಗ್ಸ್ ಜಾಲಕ್ಕೆ ಸಿಲುಕಿ ಬಿದ್ದಾಗ ಅವಳಿಗೆ ಅದೆಲ್ಲಿಂದ ಸಿಗುತ್ತೆ ಅನ್ನೋದನ್ನ ಅವಳ ಗೆಳೆಯರು ಯಾಕೆ ಪತ್ತೆ ಹಚ್ಚಲಿಲ್ಲ.ಒಬ್ಬ ಹೆಣ್ಣು ಮಗಳಿಗೆ ಡ್ರಗ್ಸ್ ಸಿಗ್ತಾ ಇತ್ತು ಅಂದರೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಅದು ಎಲ್ಲಿ ಸಿಗುತ್ತೆ ಅನ್ನೋದು ಗೊತ್ತಿರಲೇಬೇಕಲ್ವಾ . ಎಲ್ಲೋ ಅವಳ ಗೆಳೆಯರೇ ಇದನ್ನ ತಂದುಕೊಟ್ಟಿರಬೇಕಲ್ವಾ ಹಾಗಿದ್ದರೆ ಈಗ ಈ ಪ್ರತಿಭಟನೆಗಳೆಲ್ಲಾ ಯಾವ ಪುರುಷಾರ್ಥಕ್ಕೆ...? ಈ ಮೊಸಳೆ ಕಣ್ಣೀರು, ನಮಗೇನು ಗೊತ್ತಿಲ್ಲ ಅನ್ನೋದನ್ನ ತೋರಿಸುವುದಕ್ಕಾಗಿಯೇ....?
ವಿದ್ಯಾರ್ಥಿಗಳೇ ಅದೆಷ್ಟು ಕೇಳುತ್ತೀರೋ ಗೊತ್ತಿಲ್ಲ .. ಆದರೆ ನೀವು ನಡೆಯುತ್ತಿರುವ ದಾರಿ ಸರಿಯಿಲ್ಲ, ಈಗಲೇ ಎಚ್ಚೆತ್ತುಕೊಳ್ಳಿ... ಈ ಅನಾಹುತಕ್ಕೆಲ್ಲ ಮೂಲ ನಾವು ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿರುವುದು. ಈ ಪಬ್ ಸಂಸ್ಕೃತಿ ನಮ್ಮ ದೇಶಕ್ಕೆ ಸರಿಯಾಗೋದಿಲ್ಲ. ಇವೆಲ್ಲವೂ ನಮ್ಮನ್ನ ಮಾದಕ ವಸ್ತುಗಳ ದಾಸರನ್ನಾಗಿಸಿ ನಮ್ಮ ಅಂತಃ ಶಕ್ತಿಯನ್ನು ಇಲ್ಲವಾಗಿಸುವ ಹುನ್ನಾರ. ಈ ಕುಡಿತ, ಮೋಜು ಆ ಕ್ಷಣಕ್ಕಷ್ಟೇ ಸುಖವನ್ನ ಕೊಡೋದು, ಆದರೆ ಅದರ ಕೆಟ್ಟ ಪರಿಣಾಮ ಜೀವನ ಪೂರ್ತಿ ನಿಮ್ಮನ್ನ ಕಾಡುತ್ತೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಬರಿಯ ಪ್ರತಿಭಟನೆ ಮಾಡುವ ಬದಲು ಆ "ಡ್ರಗ್ಸ್" ಎಲ್ಲೆಲ್ಲಿ ಸಿಗುತ್ತೆ ಅನ್ನೋದನ್ನ ಪೋಲೀಸರಿಗೆ ಹೇಳೋ ಕೆಲಸ ಮಾಡಿ. ಒಬ್ಬಳನ್ನೆಂತೂ ಕಳೆದುಕೊಂಡಿದ್ದಾಯ್ತು ಇನ್ನು ಮುಂದಾದರೂ ಇಂಥಾ ಘಟನೆಗಳು ಮರುಕಳಿಸದಿರಲಿ, ಯಾಕೆಂದರೆ ನಿಮ್ಮೊಳಗೆ ಇದನ್ನ ಸರಬರಾಜು ಮಾಡುವವರಿರುತ್ತಾರೆ, ನೀವು ಹುಡುಕಬೇಕಷ್ಟೇ.
ನೀವುಗಳು ತಾನೆ ಭವ್ಯಭಾರತದ ಭವಿಷ್ಯ... ನೀವೇ ಮಾದಕ ದ್ರವ್ಯದ ದಾಸರಾದಲ್ಲಿ ದೇಶವನ್ನ ಕಾಪಾಡುವವರ್ಯಾರು...? ಒಮ್ಮೆ ಆತ್ಮ ಚಿಂತನೆ ಮಾಡಿಕೊಳ್ಳಿ. ಅದೆಷ್ಟೋ ಶತಮಾನಗಳಿಂದ ನಮ್ಮ ಸಂಸ್ಕೃತಿ ನಮಗೆ ಒಳ್ಳೆಯದನ್ನೇ ಮಾಡುತ್ತಾ ಬಂದಿದೆ. ಆ ಹಾದಿಯನ್ನೇ ತುಳಿಯೋಣ.
ಇನ್ನು ಪೋಷಕರೇ ನಿಮಗೆ ಕಿವಿ ಮಾತನ್ನು ಹೇಳುವಷ್ಟು ದೊಡ್ದ ವ್ಯಕ್ತಿ ನಾನಲ್ಲ, ಆದರೂ ನಿಮ್ಮ ಮಕ್ಕಳು ಬಾಳಿ ಬದುಕಿ ಈ ದೇಶದ ಹೆಸರನ್ನ ಇನ್ನಷ್ಟು ಎತ್ತರಕ್ಕೇರಿಸಬೇಕಾದವರು, ನಿಮ್ಮ ಅತಿಯಾದ ಮುದ್ದಿನಿಂದ ನಿಮ್ಮದೇ ಕಂದಮ್ಮಗಳನ್ನ ಅಳಿವಿನಂಚಿಗೆ ದೂಡದಿರಿ. ಈ ಪಬ್ ಗಳು ಬರಿಯ ಮನೋರಂಜನಾ ತಾಣವಲ್ಲ. ಅದು ಮಾದಕ ದ್ರವ್ಯಗಳ ವ್ಯಸನಿಗಳನ್ನ ತಯಾರು ಮಾಡೋ ಕೇಂದ್ರ. " ನನ್ನ , ಮಕ್ಕಳು ನಾನು ದುಡಿದ ಹಣವನ್ನ ಖರ್ಚು ಮಾಡೋದು... ನಿಮ್ಮ ಗಂಟೇನು ಹೋಗುತ್ತೆ " ಅನ್ನೋ ಮೊಂಡು ವಾದಗಳು ಬೇಡ. ಒಬ್ಬ ಉತ್ತಮ ಪ್ರಜೆಯನ್ನ ರೂಪಿಸೋದರಲ್ಲಿ ನಿಮ್ಮ ಪಾತ್ರವೂ ಮಹತ್ತರವಾದುದು. ಎಚ್ಚೆತ್ತುಕೊಳ್ಳಿ.. ಭವ್ಯ ಭಾರತದ ಸಂಸ್ಕೃತಿಯನ್ನ ಉಳಿಸೋಣ. ನಿಮ್ಮ ಮಕ್ಕಳಲ್ಲಿ ಅದನ್ನೇ ತುಂಬುವ ಮೂಲಕ ಯುಗ ಯುಗಕ್ಕೂ ಭಾರತವು ಬೆಳಗುವಂತೆ ಮಾಡೋಣ.

"ಭಾರತ"ದೊಳಗಿನ ಅರ್ಥ ಇಷ್ಟೊಂದು ಇದೆ.... ಇಂಡಿಯಾದಲ್ಲೇನಿದೆ...?ಇತ್ತೀಚಿಗೆ Proud to be INDIAN ಅನ್ನೋ ಬದಲು ನಮ್ಮತನದಿಂದ ಭಾರತೀಯ ಎನ್ನೋಣ ಅಂದಿದ್ದೆ .... ಯಾಕೆ ಭಾರತೀಯ ಅನ್ನಬೇಕು India ಅಂದರೂ ಭಾರತವೇ ತಾನೆ ಅನ್ನುವವರು ಹಲವು ಜನ ಇದ್ದಾರು... ಒಪ್ಪಿಕೊಳ್ಳೋಣ India ಅಂದರೂ ಭಾರತಾನೇ.... ಈ ರೀತಿಯ ತರ್ಕವೆತ್ತುವವರಲ್ಲಿ ನನ್ನದೊಂದು ಪ್ರಶ್ನೆ...ನಿಮನ್ನ ನಿಮ್ಮ ತಂದೆ ತಾಯಿಯರು ಇಟ್ಟ ಹೆಸರಿಗೆ ಬದಲಾಗಿ ಬೇರಾವುದೋ ಹೆಸರಿನಿಂದ ಕರೆಯ ತೊಡಗಿದರೆ ನೀವು ಸಹಿಸಿಕೊಳ್ಳುತ್ತೀರಾ...? ನಿಮ್ಮ ತಂದೆ ತಾಯಿಯರು ಯೋಚಿಸಿ ಅರ್ಥವತ್ತಾಗಿರುವ ಹೆಸರಿಟ್ಟಿರುತ್ತಾರೆ, ಅದಕ್ಕೆ ಬದಲಾಗಿ ಯಾರೋ ಅವರಿಗೆ ಕರಿಯೋಕೆ ಕಷ್ಟವಾಗುತ್ತೆ ಅನ್ನೋ ಕಾರಣಕ್ಕೆ ಅವರಿಗೆ ಬೇಕಾದಂತೆ ಇಟ್ಟ ಹೆಸರನ್ನ ಕರಿಯೋಕೆ ಬಿಡುತ್ತೀರಾ... ನಮ್ಮ ಹೆಸರಿನ ಕುರಿತಾದ ನಿಲುವಿನಲ್ಲೂ, ನಮ್ಮ ದೇಶದ ಹೆಸರಿನ ಕುರಿತಾದ ನಿಲುವಿನಲ್ಲೂ ವ್ಯತ್ಯಾಸ ಏಕೆ...? ಯೋಚಿಸಬೇಕಾದ ಅಗತ್ಯವಿದೆಯಲ್ಲವೇ...
ನಿಜವಾಗಿ " ಭಾರತ " ಅನ್ನುವ ಹೆಸರೇ , ಇದು ನಮ್ಮ ತಾಯಿ ಎಂಬುದನ್ನು ಸೂಚಿಸುತ್ತದೆ. ಭಾರತವನ್ನು ಅಜನಾಭವರ್ಷ, ಹೈಮತವರ್ಷ ಮತ್ತು ಭರತವರ್ಷ ಅಂತಲೂ ಕರೆಯುತ್ತಾರೆ. ಭರತನಿಂದಾಗಿ ಈ ನಾಡು ಭಾರತವಾಯಿತು. ಸ್ವಾಯಂಭುವ ಮನುವಿನ ಮಗ ಪ್ರಿಯವ್ರತ, ಪ್ರಿಯವ್ರತನ ಮಗ ನಾಭಿ , ನಾಭಿಯ ಮಗ ಋಷಭ, ಋಷಭನ ಜ್ಯೇಷ್ಠ ಪುತ್ರ ಭರತ. ಇವನೇ ಈ ಭೂಮಿಯ ಚಕ್ರವರ್ತಿ ಎನಿಸಿದ. ಆ ಪರಾಕ್ರಮಿಯಿಂದ ಈ ನಾಡು ಭಾರತವಾಯಿತು ಅಂತ ವಾಯುಪುರಾಣದಲ್ಲಿದೆ. ಭಾಗವತ ಮತ್ತು ಮಾರ್ಕಾಂಡೇಯ ಪುರಾಣಗಳೂ ಈ ಮಾತಿಗೆ ಪುಷ್ಟಿ ನೀಡುತ್ತದೆ.
ಮತ್ತೊಬ್ಬ ಪರಾಕ್ರಮಿ ರಾಜನಾದ, ದುಷ್ಯಂತ ಶಕುಂತಲೆಯರ ಮಗನಾದ ಭರತನಿಂದಲೂ ನಮ್ಮ ದೇಶ ಭಾರತವಾಯಿತು ಅನ್ನೋ ಪ್ರತೀತಿಯೂ ಇದೆ. ಇಬ್ಬರೂ ಮಹಾಪುರುಷರೇ...
" ಭರತ " ಎಂಬ ಪದದ ಮೂಲ ಪೋಷಿಸು, ಭರಿಸು ಎಂಬ ಅರ್ಥವುಳ್ಲ "ಭೃ" ಧಾತುವಿನಲ್ಲಿದೆ. ಇದಕ್ಕೆ ಬೆಳಕು ನೀಡು ಜ್ಞಾನ ನೀಡು, ಭಗವಂತ ಎಂಬ ಅರ್ಥಗಳೂ ಇದೆ. ಆದ್ದರಿಂದ ವಿಶ್ವವನ್ನು ಪೋಷಿಸಿದ, ವಿಶ್ವಕ್ಕೆ ಬೆಳಕು ನೀಡಿದ , ಜ್ಞಾನ ನೀಡಿದ ಭಗವಂತನ ನಾಡು ಭಾರತ ವಾಯಿತು. ಈ ಶಬ್ದದ ಅರ್ಥವ್ಯಾಪ್ತಿ ಬಹು ವಿಶಾಲವಾಗಿದೆ. ಭಾರತ ಇದು ಪ್ರಗತಿಯ ಚಿಹ್ನೆ. ಭಾರತ ನಾಟ್ಯ ಶಾಸ್ತ್ರದಲ್ಲೂ ಹೆಚ್ಚಿನ ಅರ್ಥ ಪಡೆದಿದೆ. ಭಾ-ರ-ತ ಈ ಮೂರು ಅಕ್ಷರಗಳು " ಭಾವ-ರಾಗ-ತಾಳ" ಗಳನ್ನು ಪ್ರತಿನಿಧಿಸುತ್ತದೆ. ಇವು ಪರಸ್ಪರ ಹೊಂದಿಕೊಂಡಾಗ ಸಂಗೀತದಲ್ಲಿ ಸಾಮರಸ್ಯ.
ಇಂತಹಾ ವಿಶಿಷ್ಠ ಮೂಲಾರ್ಥಗಳನ್ನು ಹೊಂದಿರುವ ನಮ್ಮ ದೇಶದ ಹೆಸರನ್ನು ಬದಿಗೊತ್ತಿ ಬ್ರಿಟಿಷರು ಇಟ್ಟಿರೋ ಇಂಡಿಯಾ ಗೆ ಜೋತು ಬಿದ್ದಿದ್ದೇವಲ್ಲಾ....??? ಯಾಕೆ ಇನ್ನು ನಾವು ಅವರ ಗುಲಾಮತನದಲ್ಲಿದ್ದೇವೆ...? ಇಂಡಿಯಾ ಅನ್ನೋ ಪದಕ್ಕೆ ಈ ರೀತಿಯ ವಿಶ್ಲೇಷಣೆ ನನಗಂತೂ ಸಿಕ್ಕಿಲ್ಲ... ಇಂಡಿಯನ್ನರು ಯಾರಾದರೂ ತಿಳಿಸಿಯಾರಾ....?

(ಈ ಮಾಹಿತಿ ಸಿಕ್ಕಿದ್ದು " ಬಿ. ವಿದ್ಯಾನಂದ ಶೆಣೈ " ಅವರ " ಭಾರತ ದರ್ಶನ " ಅನ್ನೋ ಪುಸ್ತಕದಲ್ಲಿ

ಇಂಥಾ " ಗುರಿ ಕಾರರು " ನಮ್ಮ ಪ್ರತಿಯೊಂದು ಜಾತಿಗಳಲ್ಲಿ ಏಕಿಲ್ಲ...?ಇತ್ತೀಚೆಗೆ ನನ್ನ ಗೆಳೆಯನೊಬ್ಬನ ಮದುವೆಗೆ ಹೋಗಿದ್ದೆ. ನನ್ನ ಊರಿಂದ ತುಂಬಾ ದೂರದಲ್ಲಿದ್ದ ಕಾರಣ ಮದುವೆಯ ಹಾಲ್ ಮುಟ್ಟುವಷ್ಟರಲ್ಲಿ 12.40 ಕಳೆದಿತ್ತು. ನಾವು ಹೋಗಿ ಮುಟ್ಟಿದರೂ ಮುಂಚಿನ ದಿನದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನನ್ನ ಕೆಲವು ಮಿತ್ರರು ಇನ್ನೂ ಕಾಣಿಸುತ್ತಿರಲಿಲ್ಲ. ಸರಿ ಸುಮಾರು 1.00 ಗಂಟೆಯಾಗುವಷ್ಟರಲ್ಲಿ ಬಂದರೆನ್ನಿ, " ಯಾಕಿಷ್ಟು ತಡ " ಅಂದುದಕ್ಕೆ ಒಬ್ಬನ ಉತ್ತರ, ನನ್ನ ಹಲವು ಮಿತ್ರರಿಗೆ ನಗುವನ್ನ ತರಿಸಿತ್ತು.... " ಹನ್ನೆರಡೂವರೆಗೆ ಯಾರೋ ಫೋನ್ ಮಾಡಿದಕ್ಕಾಯ್ತು, ಇಲ್ಲದಿದ್ದರೆ ಎಚ್ಚರವೇ ಆಗುತ್ತಿರಲಿಲ್ಲವೇನೋ " ಅಂದಿದ್ದ. ಅಷ್ಟೊಂದು ನಿದ್ರೆನಾ...? ಅಂತ ನಿಮಗನ್ನಿಸಿರಬಹುದು... ಬರಿಯ ನಿದ್ರೆ ಆಗಿದ್ದರೆ ಎಚ್ಚರವಾಗಿರುತಿತ್ತು... ಆದರೆ ಇದೋ " ಅಮಲಿನ" ನಿದ್ರೆ ಹೇಗೆ ಎಚ್ಚರವಾಗೋದು...? ಹೌದು ಮುನ್ನಾದಿನದ ಮೆಹಂದಿ ಕಾರ್ಯಕ್ರಮದಲ್ಲಿ ಕಂಠಪೂರ್ತಿ ಕುಡಿದ ಹೆಚ್ಚಿನವರಿಗೆ ಸೂರ್ಯ ನೆತ್ತಿ ಮೇಲೆ ಬಂದ ನಂತರವೂ ಎಚ್ಚರವಾಗಿರಲಿಲ್ಲವಂತೆ ( ಎಲ್ಲರಿಗೂ ಅಲ್ಲ...ಕೆಲವರಿಗೆ ಕೆಪಾಸಿಟಿ ಸ್ವಲ್ಪ ಜಾಸ್ತಿ ಇರುತ್ತೆ ). ನಾವೇನೋ ಇದನ್ನ ತಮಾಷೆಯಾಗಿ ಸ್ವೀಕರಿಸಿಬಿಡುತ್ತೇವೆ. ಆದರೆ ಇದೊಂದು ಬಹಳ ಕಳವಳಕಾರಿ ವಿಷಯ. ಯಾಕೆಂದರೆ ಇತ್ತೀಚೆಗೆ ನಾನು ಗಮನಿಸಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ " ಮೆಹಂದಿ ಪಾರ್ಟಿ "ಯ ಮಹತ್ವ ಅತಿಯಾಗ್ತಾ ಇದೆ.
ಏನಿದು " ಮೆಹಂದಿ " ? ಮದುವೆಯ ಮುನ್ನಾದಿನ ವಧೂ ವರರ ಕೈಗೆ ಮೆಹಂದಿ ಹಚ್ಚುವ ಸಣ್ಣ ಸಮಾರಂಭವನ್ನ ನಮ್ಮಲ್ಲಿ ಮೆಹಂದಿ ಅನ್ನುತ್ತೇವೆ. ಸರ್ವೇ ಸಾಮಾನ್ಯವಾಗಿ ಗೊತ್ತಿರುವ ವಿಚಾರವೇ... ನನಗೆ ಗೊತ್ತಿದ್ದ ಮಟ್ಟಿಗೆ ಹಿಂದೂ ಸಮಾಜದ ಹೆಚ್ಚಿನ ಎಲ್ಲಾ ಜಾತಿಗಳಲ್ಲಿ ಈ ಆಚರಣೆ ಇದೆ. ಈ ಆಚರಣೆಯು ಮನೆಮಂದಿಗಳೇ ಆಚರಿಸಿಕೊಂಡಿರುವ ಆಚರಣೆಯೇ ವಿನಹ ಶಾಸ್ತ್ರೀಯವಾಗಿ ಇದಕ್ಕೆ ಅಂತಹ ಮಹತ್ವ ಏನಿಲ್ಲ , ಅಂದರೆ ಹಿಂದೂ ಸಮಾಜದಲ್ಲಿ ಹೇಳಲ್ಪಟ್ಟಿರುವ ಷೋಡಶ ಸಂಸ್ಕಾರಗಳಲ್ಲಿ ಇದು ಸ್ಥಾನವನ್ನ ಪಡೆದಿಲ್ಲ. ಅಂದರೆ ಹಿಂದೆಲ್ಲ ಮದುವೆಯ ಮನೆಯ ಆಪ್ತರಷ್ಟೇ ಬಂದು ನಡೆಸುವ ಕಾರ್ಯಕ್ರಮ. ಇಲ್ಲಿ ಯಾವುದೇ ಪುರೋಹಿತರ ಆವಶ್ಯಕತೆ ಇಲ್ಲ. ಇಂಥಾ ಒಂದು ಸಣ್ಣ ಆಚರಣೆ ಇಂದು ಮದುವೆಗಿಂತಲೂ ಹೆಚ್ಚಿನ ಜನಪ್ರಿಯತೆ ಗಳಿಕೊಳ್ಳುತ್ತಿರುವುದೇ ನನ್ನ ಆತಂಕಕ್ಕೆ ಕಾರಣ. ಯಾಕೀ ಜನಪ್ರಿಯತೆ.... ಕಾರಣ " ಮದ್ಯ". ಮದ್ಯವಿಲ್ಲದ ಮೆಹಂದಿ ಪಾರ್ಟಿಗಳೇ ಇರೋದಿಲ್ಲ.
ಈ ಮೆಹಂದಿ ಸಮಾರಂಭಗಳಲ್ಲಿ " ಮದ್ಯ"ಕ್ಕೆ ಆತಿಥ್ಯ ಯಾರು ಕೊಟ್ಟರೋ ದೇವರೇ ಬಲ್ಲ, ಆದರೆ ಇತ್ತೀಚೆಗೆ ಮದುವೆಯಷ್ಟೇ ಖರ್ಚು ಅಥವಾ ಅದಕ್ಕಿಂತಲೂ ಜಾಸ್ತಿ ಈ ಮೆಹಂದಿಯ ಖರ್ಚಿದೆ ಅಂದರೆ ಸುಳ್ಳಾಗಲಿಕ್ಕಿಲ್ಲ. ಬರಿಯ ಕುಟುಂಬಿಕರು ಮತ್ತು ಆಪ್ತ ಸಂಬಂಧಿಗಳಷ್ಟೇ ಇರುವಂಥಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕುಡುಕ ಮಿತ್ರರ ಬಳಗವೂ ಸೇರಿಕೊಂಡು ಬಿಟ್ಟಿದೆ. ಕೆಲವೆಡೆ ಜೋರಾದ " DJ " ಗಳ ಅಬ್ಬರವಿರುತ್ತೆ, ಇನ್ನು ಕೆಲವೆಡೆ ಮನರಂಜನಾ ಕಾರ್ಯಕ್ರಮಗಳನ್ನೇರ್ಪಡಿಸುತ್ತಾರೆ, ಮಾಂಸಾಹಾರದ ಊಟ ಇರುತ್ತೆ, ಒಟ್ಟಿನಲ್ಲಿ ಕುಡಿಯೋರಿಗಂತು ಹಬ್ಬದ ವಾತಾವರಣ. ತಡರಾತ್ರಿವರೆಗೂ ಕುಣಿಯುತ್ತಲೇ ಇರುತ್ತಾರೆ, ಕುಡಿಯುತ್ತಲೇ ಇರುತ್ತಾರೆ. ಮನೆಯವರು ನೋಡುತ್ತಾರೆ, ಹೆಣ್ಣು ಮಕ್ಕಳು ನೋಡುತ್ತಾರೆ ಅನ್ನೋ ಪರಿವೆಯೇ ಇಲ್ಲದೆ ಮದ್ಯದಮಲಿನಲ್ಲಿ ತೇಲಾಡತೊಡಗುತ್ತಾರೆ... ವಿಚಿತ್ರ ಎಂಬಂತೆ ಸಂಬಂಧಿಕರು, ಹಿರಿಯರು , ಕಿರಿಯರೂ ಈ ಕುಡಿಯುವಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದು ರೀತಿಯಲ್ಲಿ ಕುಡಿತದ ಫ್ಯಾಮಿಲಿ ಪ್ರಮೋಶನ್ ಇದ್ದ ಹಾಗೆ. ಎಂತಹಾ ದುರಂತ ಅಲ್ವಾ ಸಂಪ್ರದಾಯದ ಹೆಸರಿನಲ್ಲಿ ಕುಡಿತವನ್ನ ವೈಭವೀಕರಿಸೋದು....? ನಮ್ಮ ಮುಂದಿನ ಪೀಳಿಗೆಗೆ ನಾವು ಇದನ್ನೇ ಬಳುವಳಿಯಾಗಿ ಕೊಡೋದಾ...
ಇಂಥಾ ಆಚರಣೆಗಳು ಈ ದುಶ್ಚಟಗಳಿಗೆ ಒಳಗಾಗುವ ಎಳೆಯ ಪ್ರಾಯದವರಿಗೆ ಮತ್ತಷ್ಟು ಹುಮ್ಮಸ್ಸನ್ನು ಕೊಡುತ್ತದೆ, ಕಾರಣ ತಂದೆಯೇ ಕುಡಿಯುತ್ತಿದ್ದರೆ ಮಗನಿಗೂ ಕುಡಿಯೋ ಧೈರ್ಯ ಬರೋದು ಸಹಜ ತಾನೆ. ಅಥವಾ ಕುಡಿಕ ತಂದೆ ಮಗನನ್ನು ಕುಡಿಯಬೇಡ ಅನ್ನೋದಿಕ್ಕೆ ಹೇಗೆ ಸಾಧ್ಯ...? ಒಮ್ಮೆ ಕುಡಿತದ ರುಚಿ ಕಂಡವ ಮತ್ತೆ ಮತ್ತೆ ಅದರ ಬಳಿ ಹೋಗಿಯೇ ಹೋಗುತ್ತಾನೆ. ಹೀಗಾಗಿ ಒಂದು ಸಂಪ್ರದಾಯ ಸಮಾಜಕ್ಕೆ ಕೂಡುಕನೊಬ್ಬನನ್ನ ಕೊಡುಗೆಯಾಗಿಸುತ್ತದೆ. ಕೆಲವರು ಹೇಳಿಯಾರು " ನಾನೇನೂ ಯಾವತ್ತೂ ಕುಡಿಯೋದಿಲ್ಲ , ಇಂಥಾ ಸಂಧರ್ಭಗಳಲ್ಲಿ ಮಾತ್ರ ಕುಡಿಯೋದು" ಅಂತ. ಆದ್ರೆ ಅವರಿಗೆ ಅರಿವಿಲ್ಲದಂತೆ ಆವರ ಮನಸ್ಸು ಅವಕಾಶಗಳನ್ನ ಹುಡುಕಲು ಶುರು ಮಾಡುತ್ತೆ . ಮುಂದೊಂದು ದಿನ ಅದರ ದಾಸರಾಗಲೂ ಬಹುದು. ಹಾಗಾದ ಪಕ್ಷದಲ್ಲಿ ಪೋಷಕರೇ ತಮ್ಮ ಮಕ್ಕಳನ್ನ ಹಾಳು ದಾರಿಗೆ ನೂಕಿದಂತಾಗುತ್ತದಲ್ಲವೇ... ಮದುವೆಯ ಸಮಾರಂಭಗಳಲ್ಲಿ ಮನೋರಂಜನೆಯ ಅಗತ್ಯವಿದೆ ಒಪ್ಪಿಕೊಳ್ಳೋಣ, ಹಾಗಂತ ಕುಡಿತವೇ ಮನರಂಜನೆಯೇ... ನಾವು ಸ್ವಲ್ಪ ಆಲೋಚಿಸಬೇಕಾಗಿದೆಯಲ್ವಾ...
ಇಷ್ಟು ಓದಿದ ನಿಮಗೆ ಈ ಬರಹಕ್ಕೂ ಶೀರ್ಷಿಕೆಗೂ ಏನಪ್ಪಾ ಸಂಬಂಧ ಅಂತ ಅನ್ನಿಸಿರಬೇಕು ಅಲ್ವಾ.... ಈ ಲೇಖನ ಬರೆಯೋದಿಕ್ಕೆ ಕಾರಣ ನಿನ್ನೆ ಪತ್ರಿಕೆಯಲ್ಲಿನ ಒಂದು ಸುದ್ದಿ... ಸುದ್ದಿ ಏನಪ್ಪಾ... ಅಂದ್ರೆ ನಮ್ಮ ಕಡಲತೀರದ ಮೊಗವೀರ ಸಮಾಜದ ಕೆಲವೊಂದು ಕೂಡುವಳಿಕೆಯಲ್ಲಿ ( ದಕ್ಷಿಣ ಕನ್ನಡ ಜಿಲ್ಲೆಯ ಊರುಗಳಾದ ಸಸಿಹಿತ್ಲು, ಮುಕ್ಕ, ಹೊಸಬೆಟ್ಟು, ತಣ್ನೀರುಬಾವಿ, ಪಣಂಬೂರು... ಇತ್ಯಾದಿ ಭಾಗಗಳಲ್ಲಿ ) ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೆಹಂದಿ, ಸೀಮಂತ ಇತ್ಯಾದಿ ಕಾರ್ಯಕ್ರಮಗಳಲ್ಲಿ ಮೇಲೆ ಹೇಳಿರುವಂಥಾ ಮದ್ಯದ ಪಾರ್ಟಿ ಇಟ್ಟುಕೊಳ್ಳುವಂತಿಲ್ಲ. ಇಟ್ಟವರಿಗೆ 25000 ರೂ ದಂಡ ಹಾಕಲಾಗುತ್ತದೆ. ಈ ನಿರ್ಣಯ ಕೈಗೊಂಡವರು ಆ ಸಮಾಜದ ಮುಖ್ಯಸ್ಥರಾಗಿರುವಂಥಾ " ಗುರಿಕಾರ" ಎಂಬುವವರು. ಈ ರೀತಿಯ ನಿರ್ಧಾರಕ್ಕೆ ಕಾರಣ... ಪಾನಮತ್ತರಾದ ವ್ಯಕ್ತಿಗಳಿಂದ ಉಂಟಾಗುತಿದ್ದ ಅನಾಹುತಗಳು. ಅದೆಷ್ಟೇ ಆತ್ಮೀಯ ಮಿತ್ರರಾಗಿರಲಿ ಈ ಗುಂಡು ಒಳಹೊಕ್ಕ ಮೇಲೆ ಆತ , ಆತನಾಗಿರುವುದಿಲ್ಲ . ಒಳಗಿರುವ ಗುಂಡು ಅವನಿಂದ ಮಾಡಬಾರದಂತದನ್ನೆಲ್ಲಾ ಮಾಡಿಸುತ್ತೆ. ಇಂಥಾ ಸಂದರ್ಭದಲ್ಲಿ ಅನಾಹುತಗಳು ಆಗೋದು ಸಹಜ.ನಮ್ಮ ಮನೆಯ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸೋದು, ಕುಡಿತದ ವಿಷಯವಾಗಿ ಜಗಳ ಮಾಡೋದು ಈ ರೀತಿ ಹಲವಾರು ಕೆಟ್ಟ ಘಟನೆಗಳು ನಡೆಯೋ ಸಾಧ್ಯತೆಗಳಿವೆ. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಈ ರೀತೀಯ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದಾಗ ಮನಸ್ಸಿಗೆ ಬಹಳಾನೆ ಸಂತೋಷವಾಗಿತ್ತು. ನಿರ್ಣಯದ ಹಿಂದಿರುವ ಕಾರಣ ಏನೇ ಇರಲಿ ಆದರೆ ಸಂಪ್ರದಾಯದ ಹೆಸರಿನಲ್ಲಿ ಮದ್ಯ ಬಿಕರಿಯಾಗೋದು ತಪ್ಪುತ್ತಲ್ಲ. ಅನ್ಯ ಸಮಾಜದವರು ಕೂಡ ನಮ್ಮ ಸಂಪ್ರದಾಯಗಳನ್ನು ಕಂಡು ಅಪಹಾಸ್ಯ ಮಾಡೋದು ತಪ್ಪುತ್ತಲ್ಲ. ಹಾಗಾಗಿ ಹೇಳಿದ್ದು " ಇಂಥಾ ಗುರಿಕಾರರು ಪ್ರತಿಯೊಂದು ಜಾತಿಯಲ್ಲೂ ಯಾಕಿಲ್ಲ...? " ಅಂತ. ಆ ಸಮಾಜದ ಪ್ರಮುಖರು ಮನಗಂಡ ಈ ಸೂಕ್ಷ್ಮ ವಿಷಯವನ್ನ ಇನ್ನುಳಿದ ಜಾತಿಯ ಮುಖಂಡರು ಅದ್ಯಾವಾಗ ಮನಗಾಣುತ್ತರೋ... ಹಿಂದೂ ಸಮಾಜದ ಪ್ರತಿಯೊಂದು ಜಾತಿಯವರಲ್ಲೂ ಈ ಯೋಚನೆ ಮೂಡಿದಾಗ ನಮ್ಮೊಳಗಿನ ಹಲವು ಅನಾಹುತಗಳನ್ನ ತಪ್ಪಿಸಲು ಸಾಧ್ಯ... ಇನ್ನುಳಿದ ಜಾತಿಯವರೂ ಇವರನ್ನ ಅನುಕರಿಸಲಿ ಅನ್ನೋದೆ ನನ್ನ ಆಸೆ. ಹೀಗಾದಾಗ ಮಾತ್ರ.... ನಮ್ಮ ಸಂಸ್ಕೃತಿಯ ಗೌರವ ಉಳಿಯುತ್ತೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಇದೇ ನಮ್ಮ ಸಂಪ್ರದಾಯ ಅನ್ನುವ ತಪ್ಪು ನಂಬಿಕೆಯನ್ನ ಬೆಳಿಸಿಕೊಳ್ಳುವ ಸಾಧ್ಯತೆ ಇದೆ ಅಲ್ವಾ.....

ಅಪ್ಪ ಇರದೇ ಕಳೆದ ಒಂದು ವರ್ಷ.....ಒಂದು ವರ್ಷ ಹಿಂದೆ ಇದೇ ದಿನ ನನ್ನ ಬಾಳಿನ ಅತ್ಯಂತ ಕೆಟ್ಟ ದಿನ ನನ್ನೆದುರು ಬಂದು ನಿಂತಿತ್ತು. ಕೆಟ್ಟ ದಿನ ಅನ್ನುವುದಕ್ಕಿಂತಲೂ ಕೆಟ್ಟ ಸಮಯ ಅಂತಲೇ ಹೇಳಬಹುದೇನೋ.... ಯಾಕೆಂದರೆ ಆಗ ತಾನೇ ನಾನು ನನ್ನ ಚಿಕ್ಕಪ್ಪನನ್ನ ಕಳೆದುಕೊಂಡು ಹದಿಮೂರು ದಿನಗಳಷ್ಟೇ ಆಗಿತ್ತು. ಚಿಕ್ಕಪ್ಪನ ವೈಕುಂಠ ಸಮಾರಾಧನೆಯ ದಿನವೇ ಯಮಧರ್ಮರಾಯ ನನ್ನ ತಂದೆಯನ್ನು ತನ್ನ ಬಳಿ ಕರೆಸಿಕೊಂಡು ಬಿಟ್ಟ. ಹದಿನೈದು ದಿನಗಳೊಳಗೆ ನಮ್ಮ ಮನೆಯಲ್ಲಿ ಎರಡೆರಡು ಸಾವು.. ಸೂತಕ ಮುಗಿಯಿತೆನ್ನುವಷ್ಟರಲ್ಲಿ ಮತ್ತೆ ಸೂತಕ. ಚಿಕ್ಕಪ್ಪನ ವೈಕುಂಠ ಸಮಾರಾಧನೆ ನಡೆದ ದೇವಸ್ಥಾನದ ಪಕ್ಕದ ಸಭಾಂಗಣದ ಹೊರ ಪ್ರಾಂಗಣದಲ್ಲಿ ಹಠಾತ್ ಹೃದಯಾಘಾತವಾಗಿ ಕುಸಿದು ಬಿದ್ದ ನನ್ನ ತಂದೆ ಆಸ್ಪತ್ರೆಗೆ ಹೋಗುವ ಮುನ್ನವೇ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದರು. ತುಂಬಿದ ಬಸುರಿ ನನ್ನ ಕೊನೆಯ ಅಕ್ಕ, ಅಮ್ಮ ಇವರನ್ನೆಲ್ಲಾ ಯಾವ ರೀತಿ ಸಮಾಧಾನಿಸಲಿ ಅನ್ನೋದು ನಗಾಗ ಹೊಳೆಯಲೇ ಇಲ್ಲ . ದಟ್ಟ ಕಾಡಿನ ನಡುವೆ ದಿಕ್ಕು ತಪ್ಪಿ ನಿಂತ ಪರಿಸ್ಥಿತಿ... ಎಲ್ಲವನ್ನೂ ದೇವರ ಮೇಲೆಯೇ ಬಿಟ್ಟು ಬಿಟ್ಟೆ... ಅವನಿಚ್ಛೆಯಂತೆಯೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಕಾಲದ ಪ್ರವಾಹದಲ್ಲಿ ಕೊಚ್ಚಿ ಹೋದೆ.
ಆ ಕ್ಷಣಗಳೇನೋ ಕಳೆದು ಹೋದವು ಆದರೆ ನನ್ನ ಮುಂದೆ ದೊಡ್ದದೊಂದು ಸವಾಲು ನಿಂತು ಬಿಟ್ಟಿತ್ತು. ಯಾಕೆಂದರೆ ನಮ್ಮದು ಕುಟುಂಬದ ದೇವರ ಮನೆ, ದಿನ ನಿತ್ಯ ಎರಡು ಬಾರಿ ಪೂಜೆ, ಹಬ್ಬಗಳಲ್ಲಿ ವಿಶೇಷ ಪೂಜೆ, ಚೌತಿ, ನವರಾತ್ರಿ ಹಬ್ಬ ಇನ್ನೂ ವಿಶೇಷ. ದಿನ ನಿತ್ಯದ ಪೂಜೆಯಾದರೋ ನಾನೇ ಮಾಡುತ್ತಿದ್ದದ್ದು ಆದರೆ ವಿಶೇಷ ಪೂಜೆಗಳೆಲ್ಲವನ್ನೂ ಅಪ್ಪನೇ ಮಾಡುತ್ತಿದ್ದುದು. ಅದೇನೆ ಜವಾಬ್ದಾರಿಗಳಿದ್ದರೂ ಎಲ್ಲವನ್ನೂ ತಾವೇ ಹೊರುತ್ತಿದ್ದವರು, ಈ ರೀತಿ ಎಲ್ಲವನ್ನೂ ತಾನೇ ಮಾಡುತ್ತಿದ್ದರಿಂದಲೋ ಏನೋ ನನಗೆ ಜವಾಬ್ದಾರಿ ಅನ್ನೋದು ಏನು ಅನ್ನುವುದರ ಕುರಿತು ಯೋಚನೆಯೇ ಇದ್ದಿರಲಿಲ್ಲ.... ಎಲ್ಲವನ್ನೂ ಅಪ್ಪ ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ವರ್ಷಕ್ಕೊಮ್ಮೆ ಮಾಡುವ ದೈವಾರಾಧನೆಯ ವಿಧಿ ವಿಧಾನಗಳ್ಯಾವುದೂ ಗೊತ್ತಿರಲಿಲ್ಲ.... ಹೇಗೆ ಮಾಡೋದು...? ಅಪ್ಪನ ಅನುಪಸ್ಥಿತಿ ನನ್ನನ್ನ ತುಂಬಾನೇ ಕಾಡುತ್ತಿತ್ತು. ಅದು ಹೇಗೋ ನಮ್ಮ ದೈವಗಳ ಪುನರ್ ಪ್ರತಿಷ್ಠಾಪನೆ ಮಾಡಿದವರ ಬಳಿ ಕೇಳಿ ಅದರ ಪ್ರಕಾರವೇ ಮಾಡಿ ಆಯಿತು.
ಮುಂದೆ ಇದ್ದದ್ದು ಚೌತಿ. ನಮ್ಮಲ್ಲಿ ಗಣಪತಿಯ ಮೂರ್ತಿ ಮಾಡಿ ಅದರ ಪ್ರತಿಷ್ಠಾಪನೆಯಾಗಿ ಮಧ್ಯಾಹ್ನ ಪೂಜೆ ಮತ್ತು ರಾತ್ರಿ ಪೂಜೆ ಆದ ಬಳಿಕ ರಾತ್ರಿಗೆ ವಿಸರ್ಜನೆ. ಇದು ನಡೆದು ಕೊಂಡು ಬಂದ ಪದ್ದತಿ. ಅದರಲ್ಲೂ ವಿಶೇಷ ಅಂದ್ರೆ ಅಪ್ಪ ಚೌತಿಯ ಮುಂಚಿನ ದಿನವೇ ಗಣಪತಿಯ ಮೂರ್ತಿ ಮಾಡಲು ಪ್ರಾರಂಭಿಸುತ್ತಿದ್ದರು. ಬಹಳ ಹಿಂದಿನಿಂದಲೂ ಇದೇ ಪದ್ದತಿ... ಆದರೆ ನನಗೆ ಮಣ್ಣಿನಲ್ಲಿ ಮೂರ್ತಿ ಮಾಡುವುದು ಹೇಗೆ ಅನ್ನುವ ಬಗ್ಗೆ ಸ್ವಲ್ಪವೂ ಜ್ನಾನವಿದ್ದಿರಲಿಲ್ಲ. ಅಪ್ಪ ಮಾಡುತ್ತಿದ್ದುದನ್ನ ನೋಡುತ್ತಿದ್ದೆ, ಆದರೆ ನಾನೇ ಮಾಡಬೇಕು ಅನ್ನುವಾಗ ಏನೋ ಆತಂಕ. ಅದಕ್ಕಾಗೇ ಸ್ವಲ್ಪ ದಿನಗಳ ಮುಂಚಿತವಾಗಿಯೇ ಮೂರ್ತಿ ಮಾಡೋಕೆ ಶುರು ಮಾಡಿಬಿಟ್ಟೆ. ಆದರೆ ದಿನವೂ ಸ್ವಲ್ಪ ಸ್ವಲ್ಪ ಮಾಡಿದಂತೆಲ್ಲಾ ಮರುದಿನಕ್ಕೆ ಒಣಗಿ ಜೋಡಿಸಿದ ಭಾಗವೆಲ್ಲ ಬಿರುಕು ಬಿಡೋಕೆ ಶುರುವಾಗುತ್ತಿತ್ತು... ಏನಪ್ಪಾ ಇದು ಈ ತರ ಅಗ್ತಾ ಇದೆ, ಅನ್ನುವಾಗ ಅಪ್ಪ ಮೊದಲು ಹೇಳುತ್ತಿದ್ದ ಘಟನೆಗಳೆಲ್ಲ ನೆನಪಾಯಿತು. ಅಪ್ಪನೂ ಮೊದಲು ಊರಿಗೆ ಬರುತ್ತಿದ್ದಾಗ ( ಅವರು ಮೊದಲು ಕೊಯಮುತ್ತೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ವಿಶೇಷಗಳಿದ್ದಾಗ ಊರಿಗೆ ಬರುತ್ತಿದ್ದರು.) ಚೌತಿ ಗಣಪತಿಯನ್ನು ಪುರುಸೊತ್ತಿನಲ್ಲಿ ಚೆನ್ನಾಗೆ ಮಾಡಬೇಕು ಅಂತ ಬೇಗನೆ ಬರೋಕೆ ಹಲವಾರು ಪ್ರಯತ್ನ ಮಾಡಿದ್ದರಂತೆ... ಆದರೂ ಅದ್ಯಾಕೋ ಕೊನೆಗೂ ಈಡೇರದೆ, ಕೊನೆಯಲ್ಲಿ ಚೌತಿಯ ಮುನ್ನಾ ದಿನವೇ ಮೂರ್ತಿ ಆಗುತ್ತಿದ್ದುದು. ಹೀಗೆ ಹಲವು ಪ್ರಯತ್ನ ಮಾಡಿ ಅಂತಹಾ ಯೋಜನೆಗಳನ್ನೇ ಕೈ ಬಿಟ್ಟು ಶಿಸ್ತಿನಿಂದ ಮುನ್ನಾದಿನವೇ ಮೂರ್ತಿ ಮಾಡುವ ಪರಿಪಾಠವನ್ನಿಟ್ಟುಕೊಂಡಿದ್ದರಂತೆ... ನನಗನಿಸಿತು. ಹೀಗೆ ಅಪ್ಪನೇ ಸೋತು ಕೈ ಬಿಟ್ಟ ಪ್ರಯತ್ನವನ್ನ ನಾನು ಕೈಗೆತ್ತಿಕೊಂಡರೆ ಅದು ಸಾಧ್ಯವಾದೀತೆ...? ಕೊನೆಗೆ ಮಾಡಿದ್ದಷ್ಟನ್ನೂ ಒದ್ದೆ ಬಟ್ಟೆಯಲ್ಲಿ ಸುತ್ತಿ ಸರಿಯಾಗಿ ನೀರು ಹಾಕುತ್ತಾ ಮುನ್ನಾದಿನದವರೆಗೆ ಕಾದು ಅದೇ ದಿನವೇ ಶುರು ಹಚ್ಚಿಕೊಂಡೆ... ನಮ್ಮ ಮನೆ ದೇವರ ಆಶೀರ್ವಾದವೋ ಅಥವಾ ನನ್ನ ಅಪ್ಪನ ಆಶೀರ್ವಾದವೋ ಯಾವ ರೀತಿ ಮೂರ್ತಿ ರೂಪ ಪಡೆಯುತ್ತಾ ಹೋಯಿತೆಂದರೆ ನನಗೀಗಲೂ ಆಶ್ಚರ್ಯವಾಗುತ್ತೆ.... ನನ್ನಿಂದ ಇದು ಸಾಧ್ಯವಾಯಿತಾ....? ಅಂತ ಆತ್ಮರೂಪಿಯಾಗಿರೋ ನನ್ನಪ್ಪನ ಸಹಾಯವಿಲ್ಲದೆ ಖಂಡಿತಾ ಇದು ಸಾಧ್ಯವಾಗಿರಲಿಕ್ಕಿಲ್ಲ. ಅದೇ ರೀತಿ ನವರಾತ್ರಿ. ನಮ್ಮನೆಯಲ್ಲಿ ಒಂಭತ್ತು ದಿನ ರಾತ್ರಿ ದೇವಿಯ ಆರಾಧನೆ, ಹತ್ತನೆಯ ದಿನ ಬೆಳಿಗ್ಗೆ ತೆನೆ ಕಟ್ಟೋದು, ಮಧ್ಯಾಹ್ನ ವಿಸರ್ಜನಾ ಪೂಜೆ. ಇದನ್ನೂ ನನಗೆ ತಿಳಿದಷ್ಟರ ಮಟ್ಟಿಗೆ ಅಪ್ಪ ಮಾಡಿದಂತೆಯೇ ಮಾಡಿದ್ದೆ. ಈ ರೀತಿ ಪ್ರತೀ ಹಬ್ಬಗಳು ಬಂದಾಗಲೆಲ್ಲಾ ಅಪ್ಪನ ಅನುಪಸ್ಥಿತಿ ನಮ್ಮನ್ನ ಕಾಡುತ್ತಿತ್ತು.
ನನ್ನದೂ ನನ್ನ ಅಪ್ಪನದೂ ವಿಚಿತ್ರ ರೀತಿಯ ಒಡನಾಟ.... ಅಪ್ಪ ನನಗೆ ಹೆದರುತ್ತಿದ್ದರು... ನಾನು ಅಪ್ಪನಿಗೆ. ಮೊದಲಿನಿಂದಲೂ ನಾನು ಮತ್ತು ಅಕ್ಕಂದಿರಿಗೆಲ್ಲಾ ಅಪ್ಪ ಅಂದರೆ ಅದೇನೋ ಭಯ. ಸಲುಗೆ ಅನ್ನೋದು ಬಹಳಾನೆ ಕಮ್ಮಿ. ಅದರೂ ಪ್ರೀತಿಗೇನೂ ಕಮ್ಮಿಯಿದ್ದಿರಲಿಲ್ಲ. ನಮ್ಮ ಕೆಲಸಗಳೇನಿದ್ದರೂ ಅಮ್ಮನ ಮುಖಾಂತರವೇ.... ಅದಾಗಿಯೂ ಅಪ್ಪ ಅಮ್ಮನಿಗೆ ಜಗಳಾವಾಗುತ್ತಿದ್ದರೆ ನಾವೆಲ್ಲರೂ ಅಪ್ಪನ ಪರವಾಗಿಯೇ ಮಾತಾಡಿ ಅಮ್ಮನನ್ನ ಸುಮ್ಮನಾಗಿಸುತ್ತಿದ್ದೆವು. ಅವರಿಗ್ಯಾಕೆ ನನ್ನ ಕಂಡರೆ ಭಯ ಅನ್ನೋದು ನನಗಿನ್ನೂ ಅರ್ಥವಾಗಿಲ್ಲ ಅಥವಾ ಅದು ಬೆಳೆದ ಮಗನಿಗೆ ಕೊಡುತಿದ್ದ ಬೆಲೆಯೋ ಏನೋ... ಇದನ್ನ ಭಯ ಅಂತ ಹೇಳೋಕೆ ಕಾರಣ ನಾನೇದರೂ ಕೆಲಸ ತಡಮಾಡೋದು ( ಅಪ್ಪ ಬಹಳಾನೇ ಚುರುಕು ಯಾವುದೇ ಸಮಾರಂಭಗಳಿರಲಿ ಸಮಯಕ್ಕೆ ಸರಿಯಾಗಿ ಆಗಬೇಕು ಇಲ್ಲಾಂದ್ರೆ ಸಿಡಿ ಸಿಡಿ ಅನ್ನೊರು.... ಬೇರೆಯವರ ಸಮಾರಂಭಗಳಿಗೂ ಅವರು ಬರುವುದಕ್ಕಿಂತ ಮುಂಚಿತವಾಗಿಯೇ ಸಭಾಂಗಣಕ್ಕೆಲ್ಲಾ ಹೋಗುತ್ತಿದ್ದವರು. ಒಂದು ಸಮಾರಂಭ ಅವರ ಮೇಲ್ವಿಚಾರಿಕೆಯಲ್ಲಿ ನಡೆಯುತ್ತಿತ್ತು ಅಂದರೆ ಅದು ಯಾವಾಗಲೂ ಸುಸೂತ್ರವೇ..... ಆದರೆ ಒಂದಷ್ಟು ಬೈಗುಳಗಳಂತು ಗ್ಯಾರಂಟಿ.) ಅಥವಾ ನಾನೇದರೂ ತಪ್ಪುಗಳನ್ನ ಮಾಡಿದರೆ ನಾನಿಲ್ಲದಾಗಲೇ ಅಪ್ಪ ನನ್ನ ಬೈಯುತ್ತಿದ್ದುದು. ನನ್ನೆದುರು ಏನೂ ಹೇಳುತ್ತಿರಲಿಲ್ಲ.
ಈ ಕುರಿತಾಗಿ ನೆನಪಿಗೆ ಬರೋ ಇನ್ನೊಂದು ಘಟನೆ ನಮ್ಮ ಮನೆಯ ದೇವರ ಕೋಣೆಯನ್ನ ಸರಿ ಪಡಿಸಿ ಹೊಸ ಮಂಟಪ ಮತ್ತು ದೇವರ ಪುನರ್ ಪ್ರತಿಷ್ಠೆಯ ಕೆಲಸ ಆಗುತ್ತಿದ್ದಾಗಿನ ಸಮಯ. ದೇವರ ಕೋಣೆಗೆ ಟೈಲ್ಸ್ ಹಾಕುತ್ತಿದ್ದೆವು. ತಂದಿದ್ದ ಟೈಲ್ಸ್ ಸ್ವಲ್ಪ ಕಮ್ಮಿಯಾಗಿತ್ತು, ನಾನೋ ಕೆಲಸಕ್ಕೆ ಹೋಗಿದ್ದೆ ಸೆಕೆಂಡ್ ಶಿಫ್ಟ್. ನಾನು ರಾತ್ರಿ ಹನ್ನೊಂದು ಗಂಟೆಗೆ ಬರುವಷ್ಟರಲ್ಲಿ ದೇವರ ಕೋಣೆಯ ಎದುರು ಭಾಗದಲ್ಲಿ ಬೇರೆ ಬೇರೆ ಥರದ ತುಂಡು ತುಂಡು ಟೈಲ್ಸ್ ಗಳನೆಲ್ಲಾ ಒಟ್ಟು ಮಾಡಿ ಹಾಗೆ ಫಿಕ್ಸ್ ಮಾಡಿದ್ದರು . ಒಂದು ಪೀಸ್ ಗಾಗಿ ಯಾಕೆ ಪುನಹಾ ಅಂಗಡಿಗೆ ಹೋಗೋದು ಅಂತ. ನನಗೆ ತುಂಬಾನೆ ಸಿಟ್ಟು ಬಂತು. ಛೇ ಇಷ್ಟು ಖರ್ಚು ಮಾಡಿ ಮಾಡುವಾಗ ಎಲ್ಲರಿಗೆ ಕಾಣೋ ಥರ ತುಂಡು ತುಂಡು ಟೈಲ್ಸ್ ಏನಿದು...? ಅಂತ ರಾತ್ರಿ ಬಂದವನೇ ಅಕ್ಕನ ಹತ್ತಿರ ಹೇಳಿದ್ದೆ. ಮರುದಿನ ನನಗೆ ಫಸ್ಟ್ ಶಿಫ್ಟ್ ಅಂದರೆ ಮುಂಚಿನ ದಿನ ರಾತ್ರಿ ಹನ್ನೊಂದು ಗಂಟೆಗೆ ಬಂದವ ಮರುದಿನ ನಾಲಕ್ಕೂವರೆಗೆ ಎದ್ದು ಕೆಲಸಕ್ಕೆ ಹೋಗಿದ್ದೆ. ಆ ದಿನ ನನ್ನ ಕೆಲಸ ಮುಗಿಸಿ ಬಂದು ನೋಡುವಾಗ ತುಂಡು ತುಂಡು ಟೈಲ್ಸ್ ಗೆ ಬದಲಾಗಿ ಚೆಂದದ ಒಂದೇ ಪೀಸ್ ಟೈಲ್ಸ್ ಫಿಕ್ಸ್ ಆಗಿತ್ತು. ಬೆಳಿಗ್ಗೆ ಅಕ್ಕ ಮಾತಾಡಿದ್ದನ್ನ ಕೇಳಿದವರೆ... ಅದನ್ನ ತೆಗಿಸಿ ಹೊಸ ಟೈಲ್ಸ್ ತಂದು ಕೆಲಸ ಮುಗಿಸಿ ಬಿಟ್ಟಿದ್ದರು. ಅದನ್ನ ನೋಡಿದಾಗ ಇಂಥಾ ಅಪ್ಪನನ್ನ ಪಡೆಯೋಕೆ ನಾನು ಪುಣ್ಯ ಮಾಡಿದ್ದೆನೇನೋ ಅಂತಾನೇ ಅನಿಸೋದು. ಯಾಕೆಂದರೆ ಮಗನಿಗೆ ಇಷ್ಟವಾಗಿಲ್ಲ ಅನ್ನೋ ಕಾರಣಕ್ಕೆ ಮತ್ತೆ ಅದನ್ನೆಲ್ಲಾ ತೆಗೆಸಿ ನನಗಿಷ್ಟವಾಗುವ ರೀತಿಯಲ್ಲಿ ಮಾಡಿಸಿದ್ದರಲ್ಲ..
ಅವರ ವ್ಯಕ್ತಿತ್ವವೇ ಹಾಗೆ ಸಮಾಜಕ್ಕೆ ದುಡಿಯೋದು ಅಂದರೆ ತನ್ನೆಲ್ಲವನ್ನೂ ಅರ್ಪಿಸಿಕೊಂಡು ಬಿಡುವುದು. ಅವರು ನಾನು ಕಲಿತ ಶಾಲೆಯಲ್ಲಿ ಬರೀ ಟ್ರಸ್ಟಿ ಆದರೂ ಶಾಲೆಯಲ್ಲಿ ಕ್ರೀಡಾಕೂಟವಾದರೆ ಮಾಸ್ಟರುಗಳೆಲ್ಲಾ ನೆರಳಿನಲ್ಲಿದ್ದರೂ ಇವರು ಬಿಸಿಲಲ್ಲಿರುತ್ತಿದ್ದರು. ಅದನ್ನ ಈಗಲೂ ಮಾಸ್ಟರುಗಳು ನೆನಪಿಸಿಕೊಳ್ಳುತ್ತಾರೆ. ಇನ್ನು ಶಾಲಾ ವಾರ್ಷಿಕೋತ್ಸವ ಇತ್ತೆಂದರೆ ಪೌರಾಣಿಕ ನಾಟಕಗಳ ನಿರ್ದೇಶನ ಇವುಗಳೆಲ್ಲವೂ ಇವರದ್ದೇ. ತನ್ನ ಪ್ರಾಯಕ್ಕೂ ಮೀರಿ ದುಡಿಯುತ್ತಿದ್ದ ಅವರ ಉತ್ಸಾಹ ಕೆಲವೊಮ್ಮೆ ನನ್ನ ಯೌವನದ ಶಕ್ತಿಯನ್ನೂ ಸೋಲಿಸಿ ಬಿಡುತ್ತಿತ್ತು. ನಮ್ಮ ಸಮುದಾಯದ ಸಂಘಗಳ ಕೆಲಸ ಕಾರ್ಯಗಳನ್ನ ಕಾರ್ಯದರ್ಶಿಯಾಗಿ ಮುಂದುವರೆಸಿದ ರೀತಿ ಶ್ಲಾಘನೀಯವೇ. ಬಹುಶ ಇದನ್ನ ನಾನು ನನ್ನಪ್ಪ ಅನ್ನುತ್ತಾ ಬಡಾಯಿ ಕೊಚ್ಚುವುದಕ್ಕಾಗಿ ಹೇಳುತ್ತಿಲ್ಲ. ಇವೆಲ್ಲವೂ ಕೂಡ ನನ್ನನ್ನ ಕಂಡಾಗ ಹಲವಾರು ಜನಗಳು ಹೇಳಿದುದರ ಮೇಲೆ ಬರೆಯುತ್ತಿದ್ದೇನೆ. ಅವರ ಬೆಲೆ ಈಗ ಅರ್ಥವಾಗ್ತ ಇದೆ ಅನ್ನುವಾಗ ಅವರ ಮುಖದಲ್ಲೆಲ್ಲೂ ಕಪಟತನ ಸುಳಿದಾಡುವುದೇ ಇಲ್ಲ. ಮಹಾನ್ ಸ್ವಾಭಿಮಾನಿ ನಾನು ದುಡಿಯಲು ಶುರು ಮಾಡಿದ ನಂತರ ಇದುವರೆಗೂ ಒಮ್ಮೆಯೂ ನನ್ನ ಬಳಿ ಹಣ ಕೇಳಿದ ನೆನಪಿಲ್ಲ. ಯಾಕೆ ಬಿಸಿಲಲ್ಲಿ ನಡೆದುಕೊಂಡಾದರೂ ಹೋಗುತ್ತಿದ್ದರು ಆದರೆ ನನ್ನ ಬಳಿ ಅಲ್ಲಿವರೆಗೆ ಬಿಟ್ಟು ಬಾ ಅಂತ ಹೇಳುತ್ತಿರಲಿಲ್ಲ. ನಾನೇ ಅವರು ಹೊರಟದ್ದನ್ನು ನೋಡಿ ಅವರನ್ನ ಬಿಟ್ಟು ಬರುತ್ತಿದ್ದೆ.
ಒಬ್ಬ ಮಗನಾಗಿ ನಾನು ಪ್ರೀತಿಸುತ್ತಿದ್ದುದಕ್ಕಿಂತಲೂ ನೂರು ಪಟ್ಟು ಅವರು ನನ್ನನ್ನ ಪ್ರೀತಿಸುತ್ತಿದ್ದರು. ನಾನು ಯಕ್ಷಗಾನದಲ್ಲಿ ಮಾಡಿದ ವೇಷಗಳ ಬಗ್ಗೆ ಇತರರಿಗೆ ವರ್ಣಿಸೋದಂದರೆ ಅವರಿಗೆ ಬಹಳಾನೇ ಖುಷಿ. ಅದೂ ಅಂತಲ್ಲ ನಾನೇನೇ ಬಹುಮಾನ ಪಡೆಯುವಂತ ಕೆಲಸ ಮಾಡಲಿ ಅದನ್ನ ಅವರ ಆಪ್ತರೊಂದಿಗೆ ಹಂಚಿಕೊಳ್ಳದೇ ಕುಳಿತಿರುವುದೇ ಇಲ್ಲ. ನಮ್ಮೆದುರು ತೋರ್ಪಡಿಸದಿದ್ದರೂ ಹಿಂದಿನಿಂದ ಪ್ರೀತಿಸುವ ಪರಿಯೇ ಬೇರೆ. ನಾನೇದರೂ ಇವತ್ತು ಈ ರೀತಿ ಇದ್ದೇನೆ ಅಂದರೆ ಅದು ಅವರಿತ್ತ ಸಂಸ್ಕಾರ... ಯಾವ ಕೆಟ್ಟ ಅಭ್ಯಾಸಗಳನ್ನೂ ತನ್ನ ಹತ್ತಿರ ಸುಳಿಯಗೊಡದ ಅವರ ಜೀವನ ನನ್ನನ್ನೂ ಆ ರೀತಿ ಬೆಳೆಸಿತು. ಆದರೆ ಧಾರ್ಮಿಕವಾಗಿ ಅವರು ನಡೆದುಕೊಳ್ಳುತ್ತಿದ್ದ ರೀತಿಯಲ್ಲಿ ನಡೆದುಕೊಳ್ಳಲು ನನಗೀಗಲೂ ಅಸಾಧ್ಯ. ಅವರೆಂದೂ ಟೇಬಲಿನ ಮೇಲೆ ಕುಳಿತು ಊಟ ಮಾಡಿದವರೇ ಅಲ್ಲ . ಸಮಾರಂಭಗಳಿಗೇನಾದರೂ ಹೋದರೆ ಪುರೋಹಿತರ ಜೊತೆಗೆ ಕೆಳಗೆ ಕುಳಿತುಕೊಂಡು ಸಂಸ್ಕಾರಯುತವಾಗೇ ಊಟ ಮಾಡುತ್ತಿದ್ದರು. ನನ್ನ ಕೈಲಾದ ಮಟ್ಟಿಗೆ ನಾನು ಪ್ರಯತ್ನ ಪಡುತ್ತೇನೆಯೇ ಹೊರತು ಅವರಂತಾಗಲು ಸಾಧ್ಯವೇ ಇಲ್ಲ. ಎಪ್ಪತ್ತು ದಾಟಿದ ನಂತರವೂ ತನ್ನ ದೇಹವನ್ನ ತಾನು ಹತೋಟಿಯಲ್ಲಿಟ್ಟದ್ದರೇ ಹೊರತು ಅದು ಅವರನ್ನ ಆಳಲು ಬಿಡಲಿಲ್ಲ.
ಬಹುಶ ಅವರು ಸಂಪಾದಿಸಿದ ಪುಣ್ಯದ ಫಲವಾಗಿಯೋ ಏನೋ ಅವರಿಗೆ ಇಂತಹಾ ನಿರಾಯಾಸ ಮರಣ ಸಿಕ್ಕಿತು. ಈಗ ಯಾರೇ ಸಿಗಲಿ ಪ್ರತಿಯೊಬ್ಬರೂ ಅವರು ಪುಣ್ಯಾತ್ಮರು ಅಂತಲೇ ಹೇಳುತ್ತಾರೆ. ಯಾರಿಗೂ ತನ್ನ ಹೊರೆ ಕೊಡದೇ ಭಗವಂತನಲ್ಲಿ ಲೀನವಾದರು. ವರುಷವೊಂದು ಉರುಳಿದೆ. ಆದರೂ ಅವರಿಲ್ಲ ಅನ್ನುವುದನ್ನ ಯಾಕೋ ನಂಬಲಾಗದಂತಾ ಪರಿಸ್ಥಿತಿ. ಇಲ್ಲೇ ಎಲ್ಲೋ ಇದ್ದಾರೆ ಅನ್ನುತ್ತಲೇ ಇರುತ್ತದೆ ನನ್ನ ಮನಸ್ಸು. ಆದರೆ ವಿಧಿಯ ಕಠೋರ ನಿರ್ಣಯವನ್ನ ನಾವು ತಳ್ಳಿ ಹಾಕುವಂತಿಲ್ಲ. ಅಪ್ಪನನ್ನ ಕಳೆದುಕೊಂಡ ನಂತರ ಸ್ವಲ್ಪ ಮಾನಸಿಕವಾಗಿ ಗಟ್ಟಿಯಾಗಿದ್ದೇನೆ. ಕಾರಣ ನನ್ನ ಕೈಯಲ್ಲಿ ಏನೂ ಇಲ್ಲ... ಯಾವ ಬಂಧನವನ್ನ ಭಗವಂತ ನಮ್ಮ ಪಾಲಿಗೆ ಒದಗಿಸಿದ್ದನೋ ಅವನಿಗೆ ಬೇಕಾದ ಸಮಯಕ್ಕೆ ವಾಪಾಸು ಬೇಕು ಎಂದು ಕೇಳಿದರೆ ನಾವು ಇಲ್ಲ ಅನ್ನುದಕ್ಕಾಗುತ್ತದೆಯೇ.... ಆ ರೀತಿ ಕಿತ್ತುಕೊಳ್ಳುವುದಕ್ಕಾಗಿಯೋ ಏನೋ ನೆನಪುಗಳನ್ನ ನಮ್ಮ ಪಾಲಿಗೆ ಬಿಟ್ಟು ಬಿಡುತ್ತಾನೆ. ಆದರೆ ಸಮಯ ಅದನ್ನೂ ಮರೆಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ.
ನನಗೀಗಲೂ ನನ್ನ ಬಗ್ಗೆಯೇ ಬೇಸರ ತರಿಸುವಂತಾದ್ದು ಅಂದರೆ ಅವರು ತೀರಿ ಹೋದ ನನಗೆ ಬೈದಿದ್ದು. ಆ ದಿನ ಚಿಕ್ಕಪ್ಪನ ವೈಕುಂಠ ಸಮಾರಾಧನೆಯಲ್ಲಿ ಬಂದವರಿಗೆಲ್ಲಾ ದಕ್ಷಿಣೆ ಕೊಡುತ್ತಿದ್ದರು, ಅದರ ಮುಂಚಿನ ಎರಡು ದಿನ ಅವರು ತುಂಬಾನೇ ಬಳಲಿದ್ದರು. ಹಾಗಾಗಿ ನಾನಂದೆ " ಅಪ್ಪಾ ನೀವು ಊಟ ಮಾಡಿ ಸಮಯ ಆಯ್ತು..." ಅದಕ್ಕೆ ಅವರಂದರು " ಆಯ್ತು ಇದು (ದಕ್ಷಿಣೆ) ಕೊಡಬೇಕಲ್ವಾ..." ಅದಕ್ಕೆ ನಾನಂದೆ ಅದ್ಯಾರಾದರೂ ಕೊಡ್ತಾರೆ ನೀವು ಊಟ ಮಾಡಿ...." ತನ್ನ ಕೆಲಸವನ್ನ ಮಾಡಲು ಬಿಡುತ್ತಿಲ್ಲ ಅನ್ನೋ ಸಿಟ್ಟಿನಿಂದಲೋ ಏನೋ....." ತಗೋ.... ನೀನೇ ಮಾಡು ಇನ್ನೆಲ್ಲಾ....." ಅಂತಂದರು. ನಾನು ಸುಮ್ಮನಾದೆ. ಆದರೆ ಯಾವ ಘಳಿಗೆಯಲ್ಲಿ ಈ ಮಾತನಾಡಿದರೋ ಏನೋ ಎಲ್ಲವನ್ನೂ ನನ್ನ ಹೆಗಲ ಮೇಲೆಯೇ ಹಾಕಿ ಬಿಟ್ಟರು.... ಛೇ.... ನಾನು ಅವರನ್ನ ಅಷ್ಟು ನೋಯಿಸಿಬಿಟ್ಟೆನಲ್ಲಾ ಅನ್ನೋದು ಈಗಲೂ ಕಾಡುತ್ತೆ. ಇದಕ್ಕಾಗಿ ಕ್ಷಮೆ ಕೇಳಲು ಸಮಯವೂ ಸಿಗಲಿಲ್ಲ..... ಆದರೂ ನನ್ನ ಖಂಡಿತ ಕ್ಷಮಿಸಿದ್ದಾರು ಅಂತ ನನ್ನ ಹೃದಯವನ್ನ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ.... ಮನುಷ್ಯನಾಗಿ ಅದೆಷ್ಟೇ ಜನ್ಮ ಇರಲಿ ನಾನು ನಿಮ್ಮ ಮಗನಾಗೇ ಹುಟ್ಟಬೇಕು ಅನ್ನೋದೇ ನನ್ನ ಆಸೆ.
ಇದೇ ಸಮಯದಲ್ಲಿ ನಮ್ಮನ್ನಗಲಿದ ನನ್ನ ಚಿಕ್ಕಪ್ಪನೂ ನೆನಪಾಗಿ ಕಾಡ್ತಾರೆ. ಇವರಿಬ್ಬರ ಆತ್ಮಗಳಿಗೂ ಸದ್ಗತಿ ಸಿಗಲಿ.
ವರುಷ ಉರುಳಿದೆ....
ಆದರಿನ್ನೂ ನೆನಪುಗಳಳಿಯದೆ ಉಳಿದಿದೆ.

ಯುಗಾದಿಯ ಬಗೆಗೊಂದು ವೈಜ್ಞಾನಿಕ ವಿಶ್ಲೇಷಣೆ.....ನನ್ನೆಲ್ಲಾ ಮಿತ್ರರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕೆಲವೊಂದು ಯುವ ಮಿತ್ರರಿಗೆ ಇದೇನಿದು ಹೊಸ ವರ್ಷ ಅಂತಿದಾನೆ ಅಂತ ಅನ್ನಿಸಬಹುದು, ಕಾರಣ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಅದೆಷ್ಟರ ಮಟ್ಟಿಗೆ ನಮ್ಮ ಮೇಲಿದೆ ಅಂದರೆ ನಾವು ನಮ್ಮತನವನ್ನೆಲ್ಲಾ ಕಳೆದುಕೊಳ್ಳುತ್ತಿದ್ದೇವೆ ಅಂದರೆ ತಪ್ಪಾಗಲಿಕ್ಕಿಲ್ಲ. ಹೊಸ ವರ್ಷ ಅಂತಂದರೆ ಅದು ಜನವರಿ 1 ಕ್ಕೆ ಅನ್ನೋದು ನಮ್ಮ ಮನಸ್ಸಿನಲ್ಲಿ ಬೇರೂರಿಯಾಗಿದೆ. ಆದರೆ ಯಾವತ್ತಾದರೂ ಯಾಕೆ ಭಾರತೀಯರು ಯುಗಾದಿಯಂದು ಹೊಸ ವರ್ಷ ಆಚರಿಸುತ್ತರೆ ಅನ್ನೋದನ್ನ ವಿಮರ್ಶೆ ಮಾಡಿಕೊಂಡಿದ್ದೀರಾ....? ಜಗತ್ತು ಹಿಂದೂ ಧರ್ಮದ ಆಚರಣೆಗಳಿಗೆ ಗೊಡ್ಡು ಸಂಪ್ರದಾಯಗಳ ಅಥವಾ ಮೂಢನಂಬಿಕೆಗಳ ಧರ್ಮ ಅನ್ನೋ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ನಾವುಗಳು ಕೂಡ ಆಚರಣೆಗಳ ವೈಜ್ನಾನಿಕ ಹಿನ್ನಲೆಯನ್ನು ಅರ್ಥ ಮಾಡಿಕೊಳ್ಳದೇ ಇತರರ ಮಾತಿಗೆ ತಲೆದೂಗುತ್ತೇವೆ. ಎಂಥಾ ವಿಪರ್ಯಾಸ.... ನಿಜಕ್ಕೂ ವೈಜ್ನಾನಿಕವಾಗಿ ರೂಪಿಸಿರುವ ಆಚರಣೆಗಳು ಬರಿಯ ಹಿಂದೂ ಧರ್ಮದಲ್ಲಷ್ಟೇ ಕಾಣಲು ಸಾಧ್ಯ.
ಉದಾಹರಣೆಯಾಗಿ ಹೊಸ ವರ್ಷವನ್ನೇ ತೆಗೆದುಕೊಳ್ಳಿ ಜನವರಿ 1 ರಂದು ಹೊಸ ವರ್ಷ ಆಚರಿಸುವವರಲ್ಲಿ ನನ್ನದೊಂದು ಪ್ರಶ್ನೆ... ಯಾಕೆ ಜನವರಿ ಒಂದರಂದು ಹೊಸವರ್ಷ ಆಚರಿಸುತ್ತೀರಾ ಅದಕ್ಕಿರುವ ವೈಜ್ನಾನಿಕ ಹಿನ್ನಲೆ ಏನು...? ಬಹುಶಃ ಯಾರೂ ಉತ್ತರಿಸಲಾರರು... ಅದೇ ಪ್ರಶ್ನೆಯನ್ನು ಒಂದು ವೇಳೆ ಅವರು ನನ್ನಲ್ಲಿ ಕೇಳಿದರೆ... ಖಂಡಿತಾ ನಾನು ವೈಜ್ನಾನಿಕ ಉತ್ತರ ಕೊಡಬಲ್ಲೆ...ನಾವು ಯುಗಾದಿಯನ್ನು ಚೈತ್ರ ಮಾಸದಂದು ಆಚರಿಸುತ್ತೇವೆ. ಇಲ್ಲಿ ಯಾವ ಮಾಸದಲ್ಲಿ ಆಚರಿಸೋದು ಅನ್ನೋದಕ್ಕಿಂತ ಮಹತ್ವಪೂರ್ಣವಾದದ್ದು ಯಾವ ಋತುವಿನಲ್ಲಿ ಆಚರಿಸುತ್ತೇವೆ ಅನ್ನೋದು... ಚೈತ್ರ ಮಾಸ ಬರುವುದು ವಸಂತ ಋತುವಿನಲ್ಲಿ... ಶಿಶಿರ ಋತು ಅಂದರೆ ಚಳಿಗಾಲ ಮುಗಿದು ವಸಂತ ಋತು ಆರಂಭವಾಗೋದು ಈ ಚೈತ್ರ ಮಾಸದಿಂದ... ವಸಂತ ಋತು ಅಂದರೆ ಬೇಸಿಗೆ ಕಾಲ.ಈಗೊಮ್ಮೆ... ಹಾಗೇ ಪ್ರಕೃತಿಯತ್ತ ದೃಷ್ಟಿ ಹಾಯಿಸಿ... ನಿಮಗೆ ಎಲ್ಲಾ ಕಡೆ ಹೊಸ ಚಿಗುರು ಮೂಡುತ್ತಿರುವ... ಹೂವು ಬಿಡುತ್ತಿರುವ ಸಸ್ಯ ಸಂಕುಲ ಕಾಣಿಸುತ್ತದೆ. ಚಳಿಗಾಲದಲ್ಲಿ ತನ್ನ ಎಲೆಗಳನ್ನು ಉದುರಿಸಿಕೊಂಡಿದ್ದ ಗಿಡ ಮರಗಳು ಮತ್ತೆ ಚಿಗುರಿಕೊಳ್ಳಲು ಹವಣಿಸುತ್ತದೆ. ಇದು ಹೊಸತನದೆಡೆಗಿನ ನಡೆ, ಪ್ರಕೃತಿಯೇ ಹೊಸತನಕ್ಕೆ ತುಡಿಯುವ ಕಾಲವನ್ನ ಹೊಸ ವರ್ಷ ಅಂತ ಆಚರಿಸೋಕೆ ಭಾರತೀಯರು ಮನಮಾಡಿದರು. ಇದು ಅವರಲ್ಲಿರುವ ಪ್ರಕೃತಿ ಪ್ರೇಮವನ್ನೂ ಸೂಚಿಸುತ್ತದೆ.
ಈ ರೀತಿಯ ಬದಲಾವಣೆ ಬರಿಯ ಗಿಡ ಮರಗಳಲ್ಲಿ ಮಾತ್ರವಲ್ಲ ಮನುಷ್ಯನಲ್ಲೂ ಕಾಣಿಸುತ್ತದೆ. ನೀವು ಗಮನಿಸಿರಬಹುದು ಚಳಿಗಾಲದಲ್ಲಿ ನಮ್ಮ ಶರೀರದ ಚರ್ಮವು ಸಣ್ಣ ಸಣ್ಣ ಹೊಟ್ಟುಗಳಾಗಿ ಉದುರುತ್ತಿರುತ್ತದೆ. ಇದು ಚಳಿಗಾಲದಲ್ಲಿನ ಮಾನವನ ದೇಹದಲ್ಲಾಗುವ ಬದಲಾವಣೆ. ಅದೇ ವಸಂತ ಋತು ಬರುತ್ತಿದ್ದಂತೆ ಪ್ರಕೃತಿಯಂತೆಯೇ ನಮ್ಮಲ್ಲೂ ಹೊಸ ಚರ್ಮ ಬೆಳೆಯೋಕೆ ಪ್ರಾರಂಭವಾಗುತ್ತದೆ. ಹೊಸಚೈತನ್ಯ ಮೂಡಲಾರಂಭಿಸುತ್ತದೆ. ಅಂದರೆ ಮಾನವ , ಪ್ರಾಣಿ ಸಂಕುಲ , ಸಸ್ಯ ಸಂಕುಲ ಎಲ್ಲಾ ಹೊಸತನದೆಡೆಗೆ ಹೆಜ್ಜೆ ಹಾಕೋದು ಈ ವಸಂತ ಋತುವಿನ ಚೈತ್ರಮಾಸದಿಂದ... ಹಾಗಾಗಿ ಇದನ್ನ ಹೊಸವರ್ಷ ಅಂತ ಆಚರಿಸೋಕೆ ಶುರುಮಾಡಿದರು. ಈ ರೀತಿಯ ಬದಲಾವಣೆಗಳು ಜನವರಿ ಒಂದರಂದು ಕಾಣಸಿಗುತ್ತದೆಯೇ....?
ಇನ್ನು ಆಚರಿಸುವ ರೀತಿಯನ್ನು ಅವಲೋಕಿಸೋಣ...ಜನವರಿ ಒಂದರಂದು ಯಾವ ರೀತಿ ಆಚರಿಸುತ್ತೇವೆ...? ಡಿಸೆಂಬರ್ 31 ರ ರಾತ್ರಿ ಕುಡಿಯೋದಿಕ್ಕೆ ಶುರುಮಾಡಿ ಅಪರಾತ್ರಿ ಹನ್ನೆರಡು ಘಂಟೆಗೆ ಶುಭಹಾರೈಸಿಕೊಂಡರೆ ಮುಗಿಯಿತು. ಅದೆಷ್ಟೋ ದುರ್ಘಟನೆಗಳು ನಡೆಯುತ್ತದೆ. ಹೊಸವರ್ಷಕ್ಕೆ ಕಾಲಿಡೋದು ಎಲ್ಲರೂ ನಶೆಯಲ್ಲಿಯೇ...ಇದೆಂಥಾ ದೌರ್ಭಾಗ್ಯ... ಆದರೂ ನಾವು ಪಾಶ್ಚಿಮಾತ್ಯರ ಕ್ರಮವನ್ನ ವೈಜ್ಞಾನಿಕ ತಳಹದಿ ಇರುವಂತದ್ದು ಅಂತ ಕಣ್ಣು ಮುಚ್ಚಿ ನಂಬುತ್ತೇವೆ. ಎಂಥಾ ವಿಚಿತ್ರ ಅಲ್ವಾ... ಅದೇ ಯುಗಾದಿಯ ಆಚರಣೆ ಹೇಗಿದೆ ಸೂರ್ಯೋದಯಕ್ಕೆ ಎದ್ದು ಸ್ನಾನಾದಿಗಳನ್ನ ಮುಗಿಸಿ ದೇವರ ಪೂಜಾದಿಗಳನ್ನ ಮಾಡಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತೇವೆ. ಬೇವು ಬೆಲ್ಲ ಹಂಚುತ್ತೇವೆ. ಯಾಕೆ ಬೇವು ಬೆಲ್ಲ ಹಂಚೋದು....? ಮತ್ತೊಂದು ಪ್ರಶ್ನಾರ್ಥಕ ಚಿಹ್ನೆ.... ಕೆಲವರು ವೈಜ್ನಾನಿಕ ಸತ್ಯ ಗೊತ್ತಿರದವರು ಅದು ಸುಖ ಮತ್ತು ಕಷ್ಟಗಳ ಪ್ರತೀಕ .... ಎರಡೂ ಸಮನಾಗಿರಲಿ ಅಂತ ಕೊಡುತ್ತಾರೆ ಅನ್ನುತ್ತಾರೆ. ಇರಲಿ ಸುಖ ಕಷ್ಟಗಳ ಪ್ರತೀಕ ಅನ್ನೋದನ್ನ ಒಪ್ಪಿದರೂ... ಅದರ ನಿಜವಾದ ಕಾರಣ ಬೇರೆಯೇ ಇದೆ. ಅದು ನಮ್ಮ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಲ್ಪಟ್ಟ ಆಚರಣೆ.
ಚೈತ್ರ ಮಾಸದಿಂದ ಸೆಕೆಗಾಲದ ಆರಂಭವಾಗುತ್ತದೆ. ಸೂರ್ಯನ ತಾಪ ದಿನೇದಿನೇ ಹೆಚ್ಚುತ್ತಾ ಹೋಗುತ್ತದೆ. ಈ ಕಾಲದಲ್ಲಿ ನೀವು ಗಮನಿಸಿರಬಹುದು ಹೆಚ್ಚಾಗಿ ಜನರಲ್ಲಿ ಉಷ್ಣ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಸಿಡುಬು ರೋಗ, ಪಿತ್ತಕೋಶ ಸಂಬಂಧಿತ ಖಾಯಿಲೆಗಳು... ಈಗ ಹೇಳಿ ಬೇವಿನ ಬಳಕೆಯನ್ನು ಆಚರಣೆಯಲ್ಲಿ ತುರುಕಿಸಿದ್ದು ಯಾಕೆ ....? ಬೇವು ಸಿಡುಬು ರೋಗಕ್ಕೆ ರಾಮಬಾಣ.... ನಮ್ಮ ಹಿರಿಯರು ಮುಂಜಾಗೃತಾ ಕ್ರಮವಾಗಿ ಬೇವಿನ ಬಳಕೆಯನ್ನು ಆಚರಣೆಯ ಭಾಗವಾಗಿಸಿದರು . ಇನ್ನು ಬೇವಿನ ಕಹಿ ಪಿತ್ತಕೋಶದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ಬೇಸಿಗೆಯಲ್ಲಿ ಪಿತ್ತಕೋಶ ತನ್ನ ಶಕ್ತಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಳ್ಳುತ್ತದೆ.ಇದನ್ನು ತಡೆಗಟ್ಟಿ ಪಿತ್ತಕೋಶವನ್ನು ಸುಸ್ಥಿತಿಯಲ್ಲಿಡಲು ಬೇವಿನ ಬಳಕೆಯನ್ನು ಆಚರಣೆ ಅಂಗವಾಗಿಸಿದ್ದಾರೆ.
ಈ ಬೇವನ್ನೂ ಕೂಡ ಹಾಗೆ ತಿನ್ನುವುದಲ್ಲ ಬೆಲ್ಲದ ಜೊತೆ ತಿನ್ನಬೇಕು. ಬೆಲ್ಲ ಪಿತ್ತಕಾರಕ, ಅದರಂತೆಯೇ ಬೇವೂ ಕೂಡ ಪಿತ್ತಕಾರಕ ಆದರೆ ಬೇವು ಬೆಲ್ಲ ಎರಡನ್ನೂ ಸಮನಾಗಿ ಸೇವಿಸಿದಾಗ ಬೆಲ್ಲದ ಪಿತ್ತ ಬೇವಿನ ಪಿತ್ತವನ್ನು ತೊಡೆದುಹಾಕುತ್ತದೆ. ಅಂದರೆ ಮುಳ್ಳನ್ನ ಮುಳ್ಳಿನಿಂದಲೇ ತೆಗೆದಂತೆ. ಮತ್ತು ಬೆಲ್ಲದಲ್ಲಿ ಸಿಹಿಯ ಜೊತೆ ಹಲವು ಔಷಧೀಯ ಗುಣಗಳಿವೆ. ಇದು ನಮ್ಮ ಅರೋಗ್ಯಕ್ಕೆ ಅತ್ಯುತ್ತಮ. ಹೀಗೆ ಕಾಲ ಕಾಲಕ್ಕೆ ಬರುವ ರೋಗಗಳಿಗೆ ಮುಂಜಾಗೃತವಾಗಿ ಸಿದ್ಧರಾಗಿ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವಂತೆ ನಮ್ಮ ಆಚರಣೆಗಳನ್ನು ರೂಪಿಸಿದ್ದರೆ ಇನ್ನೊಂದೆಡೆ ಕುಡಿತವನ್ನು ಪ್ರಚೋದಿಸುವ ಪದ್ಧತಿ ಇದೆ...ಎಂಥಾ ಅಜಗಜಾಂತರ ವ್ಯತ್ಯಾಸ ಅಲ್ವಾ....ಆದರೂ ನಮಗೆ ನಮ್ಮ ಆಚರಣೆಗಳ ಶ್ರೇಷ್ಠತೆಯ ಅರಿವಿಲ್ಲ, ಇದು ವಿಪರ್ಯಾಸವೇ ಸರಿ....
ವಿಜ್ಞಾನ ವಿಜ್ಞಾನ  ಅಂತ ಬೊಬ್ಬಿಡುವವರಿಗೆಲ್ಲ ಒಂದು ಸಣ್ಣ ಕಿವಿಮಾತು ನಮ್ಮ ಆಚರಣೆಯ ಹಿಂದಿರುವ ಸತ್ಯದ ಅನ್ವೇಷಣೆ ಮಾಡಿ. ಇನ್ನುಮುಂದಾದರೂ ಹೀಯಾಳಿಸುವ ಮುನ್ನ ಅದರೊಳಗಿನ ಸತ್ಯವನ್ನು ಹುಡುಕುವ ಪ್ರಯತ್ನ ಮಾಡಿ ಆಮೇಲೆ ಯಾವುದು ಒಳ್ಳೆಯದು..? ಯಾವುದು ಕೆಟ್ಟದು..? ಅನ್ನೋದನ್ನ ನಿರ್ಧರಿಸಿ. ಪಶ್ಚಿಮದ್ದು ಅಂತಾದ ಕೂಡಲೇ ಎಲ್ಲವೂ ವೈಜ್ಞಾನಿಕವಲ್ಲ, ನಮ್ಮದು ಅಂತಂದರೆ ಅದು ಮೂಢ ನಂಬಿಕೆಗಳಲ್ಲ. ಅದೆಷ್ಟೋ ಜ್ಞಾನಿಗಳ ತಪಸ್ಸಿನ ಫಲವಾಗಿ ರೂಪಿತವಾಗಿರುವ ಆಚರಣೆಗಳಿದು. ಆಚರಿಸುವ ಮನಸ್ಸಿಲ್ಲಾವಾದರೆ ಬಿಟ್ಟು ಬಿಡಿ ಆದರೆ ಮೂದಲಿಕೆ ಮತ್ತು ಅಪಪ್ರಚಾರ ಒಳ್ಳೆಯದಲ್ಲ.. ಅಲ್ವಾ....
ನನ್ನೆಲ್ಲಾ ಮಿತ್ರರಿಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು... ಈ ವಿಜಯ ನಾಮ ಸಂವತ್ಸರ ಎಲ್ಲರ ಜೀವನದಲ್ಲಿ ಯಶಸ್ಸನ್ನು ತರಲಿ....
ಅಂದ ಹಾಗೆ ಬೇವು ಬೆಲ್ಲ ತಿನ್ನೋವಾಗ ಈ ಶ್ಲೋಕವನ್ನ ಹೇಳೋದಿಕ್ಕೆ ಮರೀಬೇಡಿ...
ಶತಾಯುರ್ವಜ್ರದೇಹಾಯಾ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
( ಶರೀರವು ವಜ್ರದಂತೆ ಆಗುತ್ತದೆ. ಸರ್ವಸಂಪತ್ತು ಉಂಟಾಗುತ್ತದೆ. ಸರ್ವ ಅರಿಷ್ಟಗಳು ನಾಶವಾಗುತ್ತದೆ)

ವಾತ್ಯಲ್ಯದ ವ್ಯಾಪಾರ ಸಾಧ್ಯಾನಾ...?ಇವತ್ತು ನ್ಯೂಸ್ ಚಾನಲ್ ಒಂದರಲ್ಲಿ ನೋಡ್ತಾ ಇದ್ದೆ ಬೇಬಿ ಸ್ಕೂಲ್ ಮತ್ತು ಪ್ಲೇ ಸ್ಕೂಲ್ ಗಳಲ್ಲಿ ಪುಟ್ಟ ಮಕ್ಕಳನ್ನ ಮಲಗಿಸೋಕೆ ಅಂತ ಅವರ ಆಹಾರದಲ್ಲಿ ನಿದ್ದೆ ಮಾತ್ರೆಯನ್ನ ಹುಡಿ ಮಾಡಿ ಹಾಕಿ ಮಕ್ಕಳಿಗೆ ಕೊಡ್ತಾರಂತೆ.... ಆ ಕ್ಷಣಕ್ಕೆ ನನ್ನ ಮನಸ್ಸಿಗಾದ ಆಘಾತ ಅಷ್ಟಿಷ್ಟಲ್ಲ... ಮನಸ್ಸಿನಲ್ಲಿ ಹಲವಾರು ವಿಚಾರಗಳು ತಿರುಗಾಡತೊಡಗಿತು... ಅದನ್ನೇ ಹೇಳ ಹೊರಟದ್ದು... ಬಹುಶ ಹಲವರ ಪಾಲಿಗೆ ನಾನು ತಪ್ಪು, ಅಂತ ಅನಿಸಬಹುದು, ಇರಲಿ ಬಿಡಿ ಆದರೆ ನಾನು ಹೇಳ ಹೊರಟಿರುವುದು ನನಗನಿಸಿದ ತೀರಾ ವೈಯಕ್ತಿಕ ಅಭಿಪ್ರಾಯ. ಅವರವರಿಗೆ ಅವರ ಚಿಂತನೆಯೇ ಸರಿ ನಾನು ಅದನ್ನ ಒಪ್ಪಿಕೊಳ್ಳುತ್ತೇನೆ ಆದರೂ ಹೇಳೋಣ ಅಂತನಿಸಿದ್ದನ್ನ ಬರೆದಿದ್ದೇನೆ...
ನನ್ನ ಪ್ರಕಾರ ಒಬ್ಬ ತಾಯಿ ಮತ್ತು ಮಗುವಿನ ಸಂಬಂಧ ಅಥವಾ ತಂದೆ ಮಗುವಿನ ಸಂಬಂಧಕ್ಕೆ ಪರ್ಯಾಯ ವ್ಯವಸ್ಥೆ ಅಂತ ಮಾಡೋಕೆ ಸಾಧ್ಯವೇ ಇಲ್ಲ... ಯಾವುದೇ ತಾಯಿ ತಂದೆ ಆಗಲಿ ತಮ್ಮ ಮಕ್ಕಳನ್ನ ಅದೆಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರಮಾಣದಲ್ಲಿ ಇನ್ನೊಬ್ಬರು ಪ್ರೀತಿಸೋಕೆ ಸಾಧ್ಯವಿಲ್ಲ. ಅದೇ ರಕ್ತ ಸಂಬಂಧ ಅನ್ನೋದು... ಆದರೆ ಇಂದು ಅದೂ ವ್ಯಾಪಾರಕ್ಕಿಡಲಾಗುತ್ತಿದೆಯೇನೋ ಅಂತನಿಸತೊಡಗಿದೆ.... ಹಾಗನಿಸೋಕೆ ಕಾರಣ ಇದೆ... ತಮ್ಮ ಪುಟ್ಟ ಪುಟ್ಟ ಕಂದಮ್ಮಗಳನ್ನು ಇಂಥಾ ಯಾವುದೋ ಸಂಸ್ಥೆಗಳ ಕೈಗೆ ಒಪ್ಪಿಸುತ್ತಾರಲ್ವಾ... ಇದು ನನ್ನ ಪಾಲಿಗೆ ವಾತ್ಸಲ್ಯದ ವ್ಯಾಪಾರದಂತೆಯೇ ಅನಿಸುತ್ತದೆ.. ನಾನಿಷ್ಟು ಹಣಕೊಡುತ್ತೇವೆ... ನೀವು ಚೆನ್ನಾಗಿ ನೋಡಿಕೊಳ್ಳಿ ಅಂತ. ತಾವು ದುಡಿದುದರಲ್ಲಿ ಒಂದಿಷ್ಟು ಖರ್ಚು ಮಾಡೋದು ಯಾರಿಗೂ ತಪ್ಪು ಅನಿಸೋದಿಲ್ಲ ಯಾಕೆಂದರೆ ಖರ್ಚಾದ ಹಣ ನಮ್ಮ ಜವಾಬ್ದಾರಿಯನ್ನು ಕಮ್ಮಿ ಮಾಡುತ್ತದೆ ಮತ್ತು ನೋಡಿಕೊಳ್ಳೋರಿಗೆ ತಾವು ದುಡಿದ ಪೂರ್ತಿ ಹಣವನ್ನೇನೂ ಕೊಡೋದಿಲ್ಲ ತಾನೇ... ಅನ್ನೋ ಸಮಾಧಾನ.
ಇಂಥಾದಕ್ಕೆಲ್ಲಾ ಬುದ್ಧಿ ಮಾತು ಹೇಳೋಕೆ ಹೋದರೆ ನಾವೆಲ್ಲ ಯಾಕೆ ದುಡಿಯುತ್ತಿರೋದು...? ನಮ್ಮ ಮಕ್ಕಳ ಭವ್ಯ ಭವಿಷ್ಯತ್ತಿಗಾಗಿ ತಾನೆ...? ಅನ್ನೋ ಸಿದ್ಧ ಉತ್ತರ ಸಿಗುತ್ತದೆ... ಆದ್ರೆ ಈ ತರಹದ ಘಟನೆಗಳನ್ನ ನೋಡೋವಾಗ ಆ ಭವಿಷ್ಯದ ಸಮಯವನ್ನ ತಲುಪುವಷ್ಟರಲ್ಲಿ ಆ ಕಂದಮ್ಮಗಳೆಲ್ಲಾ ಹಾಸಿಗೆ ಹಿಡಿದಿರುತ್ತಾರೆನೋ ಅಥವಾ ಮಾನಸಿಕವಾಗಿ ಖಿನ್ನರಾಗಿರುತ್ತಾರೆನೋ ಅಥವಾ ತಪ್ಪು ಹಾದಿ ಹಿಡಿದಿರುತ್ತಾರೆನೋ... ಆಮೇಲೆ ಎಂಥಾ ಭವ್ಯ ಭವಿಷ್ಯ....? ಇಲ್ಲಿ ಭವಿಷ್ಯ ಅನ್ನೋದು ಹಲವಾರು ಜನರಿಗೆ ಹಣ ಆಸ್ತಿ ಮತ್ತು ಆಧುನಿಕ ಸೌಲಭ್ಯಗಳಷ್ಟೇ ಆಗಿರೋದು ವಿಪರ್ಯಾಸ.
ಅದೊಂದು ಮಾತಿತ್ತು ನೀವು ನಿಮ್ಮ ಮಕ್ಕಳ ಚರಿತ್ರೆ ನಿರ್ಮಾಣ ಮಾಡೋಕೆ ನೋಡಿ ಭವಿಷ್ಯ ನಿರ್ಮಾಣ ಅಲ್ಲ ಅಂತ. ಆದ್ರೆ ಒಳ್ಲೆಯ ಮಾತುಗಳೆಲ್ಲವೂ ಕೇಳಿ ಬಿಡೋದಿಕ್ಕೆ ಅಂತಾಗಿದೆ. ಇರಲಿ ಬಿಡಿ ಆದರೆ ನಮ್ಮಲ್ಲೀಗ ಹಣದ ಹಸಿವು ತೀರ ಬೆಳೆದು ಬಿಟ್ಟಿದೆ... ಕಷ್ಟ ಪಡೋಕೆ ಯಾರೂ ತಯಾರಿಲ್ಲ ಅಥವಾ ತಾವು ಕಷ್ಟ ಪಟ್ಟರೂ ತಮ್ಮ ಮಕ್ಕಳು ಕಷ್ಟಪಡಬಾರದು... ಇದಕ್ಕೆ ಪರಿಹಾರ ಗಂಡ ಹೆಂಡತಿ ಇಬ್ಬರೂ ದುಡಿಯೋದು... ಇನ್ನೂ ಕೆಲವು ಕಡೆ ಆರ್ಥಿಕ ವಾಗಿ ಸಬಲರಾಗಿದ್ದರೂ " ನನ್ನ ಕೆರೀಯರ್ " ಅನ್ನೋ ವಿಚಿತ್ರ ಗುರಿ ಆದರೆ ಇವೆಲ್ಲವುದರ ಪರಿಣಾಮ ನಮ್ಮ ಮಕ್ಕಳ ಮೇಲಾಗುತ್ತಿದೆಯೇನೋ.
ಇವತ್ತಿನ ಸುದ್ದಿಯನ್ನೇ ತೆಗೆದುಕೊಳ್ಳೋಣ ಆ ಪುಟ್ಟ ಮಕ್ಕಳಿಗೆ ಇಷ್ಟು ಸಣ್ಣ ಪ್ರಾಯದಲ್ಲಿ ನಿದ್ದೆ ಮಾತ್ರೆಯ ಅಭ್ಯಾಸವಾದರೆ ಆ ಮಗುವಿನ ಆರೋಗ್ಯ ಏನಾಗಬೇಡ... ನೀವು ನಿಮ್ಮ ಹಣವನ್ನ ಮಕ್ಕಳ ಅನಾರೋಗ್ಯಕ್ಕಾಗಿ ಖರ್ಚು ಮಾಡಲು ಇಷ್ಟ ಪಡುತ್ತೀರಾ...? ಯೋಚಿಸಿ ನಿಮ್ಮ ಮಗುವಿನ ಯೌವನಾವಸ್ಥೆಗಾಗಿ ದುಡಿಯೋ ನೀವು ಆ ಮಗು ಯೌವನದವರೆಗೂ ಬದುಕಬೇಕು ಅಂತ ನಿರೀಕ್ಷೆ ಇಡಲು ಸಾಧ್ಯವೇ...? ಹಾಗಾದರೆ ಈ ದುಡಿತ ಯಾರಿಗಾಗಿ... ?
ಎಲ್ಲೋ ನಾವು ನಮ್ಮ ಜೀವನ ವಿಧಾನವನ್ನ ನಮ್ಮ ಜೀವನದ ಉದ್ದೇಶವನ್ನ ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳಬೇಕು ಅಂತನಿಸೋದಿಲ್ವಾ... ಮೊದಲೇ ನಾವು ಅವಿಭಕ್ತ ಕುಟುಂಬ ಪದ್ದತಿಯನ್ನ ಧಿಕ್ಕರಿಸಿ ಕಾಲಿನಿಂದ ಒದ್ದಿದ್ದೇವೆ... ಅಲ್ಲಾದರೂ ನಮ್ಮ ರಕ್ತಸಂಬಂಧಿಗಳೇ ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಅನ್ನುವ ಸಮಾಧಾನವಿತ್ತು. ಆದ್ರೆ ಇಲ್ಲಿ ಹಾಗಲ್ಲ ಬರಿಯ ಹಣಕ್ಕಾಗಿ ವಾತ್ಸಲ್ಯ ತೋರಿಸುವಿಕೆ. ಮಕ್ಕಳ ಉಪಟಳ ಜಾಸ್ತಿ ಆದ್ರೆ ಕೈ ಎತ್ತೋಕೆ ಹಿಂಜರಿಯೋ ಪ್ರಶ್ನೆಯೇ ಇಲ್ಲ... ಅಂತಹ ಒಂದು ಕೂಪಕ್ಕೆ ನಮ್ಮ ಎಳೆ ಮನಸ್ಸಿನ ಮಕ್ಕಳನ್ನ ತಳ್ಳುತ್ತೇವಲ್ಲಾ.... ನಮ್ಮದೂ ವಾತ್ಸಲ್ಯವೇ ಅನ್ನೋ ಸಂಶಯ ಕಾಡುತ್ತೆ.. ಅಲ್ವಾ.
ಜಗತ್ತು ವೇಗವಾಗಿ ಓಡುತ್ತಿದೆ ರೀ... ಈ ಸ್ಪರ್ಧಾತ್ಮಕ ಜೀವನದಲ್ಲಿ ನಮ್ಮ ಮಕ್ಕಳನ್ನ ಬೆಳೆಸಬೇಕು.. ಅದಕ್ಕೆ ನಾವು ದುಡಿಯಲೇಬೇಕು ಅಂತ ವಿತಂಡವಾದ ಮಾಡೋರಿಗೆ ನನ್ನ ಪ್ರಶ್ನೆ ಇಷ್ಟೇ... ಸರಿ ನಿಮ್ಮ ಮಗುವಿನ ಆಯುಷ್ಯ ಇಷ್ಟು ಅಂತ ಹೇಳಬಲ್ಲಿರಾ...? ಮರುಕ್ಷಣದಲ್ಲಿ ನಾವಿರುತ್ತೇವೋ ಇಲ್ಲವೋ ಅನ್ನುವುದೇ ನಮಗೆ ಗೊತ್ತಿಲ್ಲದಿರುವಾಗ ಅದ್ಯಾವುದೋ ಭವಿಷ್ಯತ್ತಿಗೆ ನಮ್ಮ ಮುಗ್ಧ ಮಕ್ಕಳ ಈಗಿನ ಬಾಳನ್ನ ಹಾಳು ಮಾಡಬೇಕೇ... ದೊಡ್ದವರಾದ ಮೇಲಾದರೂ ಮಕ್ಕಳಿಗೆ ಏನು ಸರಿ ಏನು ತಪ್ಪು ಯಾವುದು ಬೇಕು ಯಾವುದು ಬೇಡ ಅನ್ನೋದು ಗೊತ್ತಾಗುತ್ತದೆ ಆದರೆ ನಾವೀಗ ಮಾಡುತ್ತಿರುವುದು ಅವುಗಳ ಬಾಲ್ಯವನ್ನೇ ಸುಖಮಯವಾಗಿಸುತ್ತಿಲ್ಲವಲ್ಲ.
ಮಕ್ಕಳು ಎಳೆಯ ಪ್ರಾಯದಲ್ಲಿ ಬರೀ ವಾತ್ಸಲ್ಯ, ಪ್ರೀತಿ ಮಮಕಾರವನ್ನಷ್ಟೇ ಬಯಸುತ್ತಾರೆ. ಅದನ್ನ ಅದರ ನಿಜವಾದ ಪೋಷಕರು ಮಾತ್ರ ಕೊಡೋಕೆ ಸಾಧ್ಯ. ಹಾಗಾಗಿ ನಾವೀಗಲೇ ಆಯ್ಕೆ ಮಾಡಬೇಕಾಗಿದೆ. ನಮ್ಮ ಮಕ್ಕಳಿಗೆ ಆಯಾಯ ಕಾಲಕ್ಕೆ ಬೇಕಾದುದನ್ನೇ ಕೊಟ್ಟು ಒಬ್ಬ ಒಳ್ಳೆಯ ನಾಗರೀಕನನ್ನಾಗಿ ಮಾಡುವುದು ಒಳ್ಳೆಯದೋ ಅಥವಾ ಕರಗಲಾರದ ಆಸ್ತಿ ಮಾಡಿಟ್ಟು ಮಕ್ಕಳ ನೈಜ ಕೋರಿಕೆಗಳನ್ನ ಬಲಿಕೊಡೋದಾ ಅಂತ. ಮಕ್ಕಳಿಗೆ ಕಷ್ಟದ ಅರಿವಾಗಲೇಬಾರದು ಅನ್ನೋದೇ ಈಗಿನ ಬಹು ದೊಡ್ದ ಸಮಸ್ಯೆ. ಎಳವೆಯಿಂದಲೂ ನಾವು ನಮ್ಮ ಕೈ ಮೀರಿ ಖರ್ಚು ಮಾಡಿ ಕಷ್ಟ ಅಂದರೇನು ಅನ್ನೋದನ್ನ ಅವರಿಗೆ ತೋರಿಸದಂತೆ ಸಾಕುತ್ತೇವೆ. ಮುಂದೆಂದಾದರೂ ಅವರಿಗೆ ಆ ಪರಿಸ್ಥಿತಿ ಎದುರಾದಾಗ ಅದನ್ನ ಎದುರಿಸೋ ಶಕ್ತಿಯೇ ಅವರಲ್ಲಿರುವುದಿಲ್ಲ. ಆಗ ಅವರು ಶರಣಾಗೋದು ಆತ್ಮಹತ್ಯೆಗೇ...
ಇರಲಿ ಬಿಡಿ ಯಾವುದು ಸರಿ ಯಾವುದು ತಪ್ಪು ಅನ್ನೋದು ಅವರವರಿಗೆ ಬಿಟ್ಟದ್ದು ಆದರೆ ಹಣವೇ ಎಲ್ಲಾ ಅನ್ನೋ ಮಾನಸಿಕತೆಯಿಂದ ಹೊರಬಂದು... ಅಕ್ಕಪಕ್ಕದವರ ಮನೆಯಲ್ಲಿದ್ದದ್ದೆಲ್ಲವೂ ನಮಗೆ ಬೇಕು... ಅಂತಹುದೇ ಜೀವನ ಶೈಲಿ ನಮಗೆ ಬೇಕು ಅನ್ನೋ ಹುಚ್ಚು ಕಲ್ಪನೆಗಳಿಂದ ಹೊರಬಂದಾಗಲಷ್ಟೇ ಒಂದೊಳ್ಳೆಯ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಾಗೋದು... ಆದರೆ ನಿಮ್ಮ ನಿರ್ಧಾರ ಮಕ್ಕಳ ಭವಿಷ್ಯಕ್ಕಿಂತಲೂ ಹೆಚ್ಚಾಗಿ ವರ್ತಮಾನವನ್ನ ಸುಂದರಗೊಳಿಸುವ ಕಡೆಗಿರಲಿ ಎನ್ನುವುದೇ ನನ್ನ ಹಾರೈಕೆ.

ರಾಮ್ ಪ್ರಸಾದ್ ಬಿಸ್ಮಿಲ್


ನಮ್ಮಲ್ಲೀಗ ಯಾರಾದರೂ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಮಾಡಿ ಅಂತ ಹೇಳಿದಲ್ಲಿ... ಆ ಪಟ್ಟಿಯ ಸಂಖ್ಯೆ ಹತ್ತು ಹನ್ನೆರಡು ದಾಟಲಿಕ್ಕಿಲ್ಲ...ಅವರ ತ್ಯಾಗ ಬಲಿದಾನ ಇವೆಲ್ಲವನ್ನೂ ಮರೆತು ಬಿಟ್ಟಿದ್ದೇವೆ...ಹೀಗೆ ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ಗುರುತಿಸಿದೆಕೊಳ್ಳುವಂತ ವ್ಯಕ್ತಿಗಳಲ್ಲಿ " ರಾಮ್ ಪ್ರಸಾದ್ ಬಿಸ್ಮಿಲ್" ಒಬ್ಬರು... ಚಂದ್ರ ಶೇಖರ್ ಆಜಾದ್ ಅವರೇ ಕ್ರಾಂತಿಕಾರಿಗಳ ಗುರು ಅನ್ನುವ ನನ್ನ ಕಲ್ಪನೆಯನ್ನು ಹೋಗಲಾಡಿಸಿದ್ದು ಅಜಾದರ ಜೀವನ ಚರಿತ್ರೆ "ಅಜೇಯ" ಇವತ್ತು ಓದುತ್ತಾ ಇದ್ದಾಗ ಬಿಸ್ಮಿಲ್ ಅವರ ಬಲಿದಾನದ ಕಥೆಯನ್ನು ಓದಿದೆ...ಆಜಾದರಿಗೆ ಗುರು ಆಗಿದ್ದವರು ಈ ರಾಮಪ್ರಸಾದ್ ಬಿಸ್ಮಿಲ್...ಬಹುಶ ಶಿಷ್ಯನಿಗೆ ಸಿಕ್ಕಷ್ಟು ಪ್ರಚಾರ ಈ ಕ್ರಾಂತಿಕಾರಿ ಗುರುವಿಗೆ ಸಿಗಲಿಲ್ಲ..ಕಾಕೋರಿ ದರೋಡೆ ಪ್ರಕರಣದಲ್ಲಿ ಬಂಧಿತರಾಗಿ ದೇಶಕ್ಕಾಗಿ ಪ್ರಾಣ ತೆತ್ತರು... ಆ ಬಲಿದಾನದ ದಿನದ ಸನ್ನಿವೇಶ ಮನ ಕಲಕುವಂತಿತ್ತು...ಬಿಸ್ಮಿಲ್ಲರನ್ನು ಅವರ ತಾಯಿ ನೋಡಲು ಬಂದಾಗ ಬಿಸ್ಮಿಲ್ಲರು ಗಳಗಳನೆ ಅತ್ತರಂತೆ... ಇದನ್ನು ಕಂಡ ಅವರ ತಾಯಿಗೆ ಬೇಸರವಾಗಿ " ಸಾವಿಗೆ ಇಷ್ಟೊಂದು ಅಂಜುವವನಾಗಿದ್ದರೆ ಈ ಮಾರ್ಗವನ್ನೇಕೆ ಆರಿಸಿದಿ" ಎಂದಾಗ ಬಿಸ್ಮಿಲ್ಲರು ಹೇಳುತ್ತಾರೆ " ಇವು ಸಾವಿನ ಬೆದರಿಕೆಯಿಂದ ತೊಟ್ಟಿಕ್ಕಿದ ಹನಿಗಳಲ್ಲಮ್ಮ.. ಒಬ್ಬ ಮಾತೃಭಕ್ತ ಪುತ್ರ ತನ್ನ ತಾಯಿಯ ದರ್ಶನವನ್ನು ಕಟ್ಟಕಡೆಯ ಸಲ ಪಡೆಯುವಾಗ ಅವನ ಪರಿಶುದ್ಧ ಪ್ರೀತಿಯ ಪ್ರತೀಕವಾದ ಕೊನೆಯ ಅಶ್ರುಬಿಂದುಗಳು"... ಅಬ್ಬಾ ಎಂಥಾ ತಾಯಿ ... ಎಂಥಾ ಮಗ ಅಲ್ವಾ...ನೇಣುಗಂಬಕ್ಕೆ ಕರಕೊಂಡು ಹೋಗುವ ಮುನ್ನ ಬಿಸ್ಮಿಲ್ಲರಿಗೆ ಒಂದು ಲೋಟ ಹಾಲು ಕೊಟ್ಟರಂತೆ ಅದನ್ನು ತಿರಸ್ಕರಿಸಿ ಅವರು ನುಡಿಯುತ್ತಾರೆ..."ಹೂಂ ಈಗ ನನಗೇಕೆ ಈ ಹಾಲು? ಇನ್ನು ಕೆಲವೇ ಗಂಟೆಗಳಲ್ಲಿ ನನ್ನ ಮಾತೃದೇವಿಯ ಎದೆಹಾಲನ್ನೇ ಕುಡಿಯಹೊರಟಿರುವೆ..."ಎಂಥಾ ದೇಶಭಕ್ತಿ ಅಲ್ವಾ...ನೇಣಿಗೆ ಕೊರಳನ್ನು ಒಡ್ಡುವಾಗ ಅವರ ಮನದಲ್ಲಿ ಈ ರೀತಿಯ ಸಾಲುಗಳು ಬಂದುವಂತೆ...
" ಮಾಲಿಕ್ ತೇರಾ ರಜ ರಹೇ ಔರ್ ತೂಹೀ ತೂ ರಹೇ
ಬಾಕೀ ನ ಮೈ ರಹೂಂ ನ ಮೇರಿ ಆರಜೂ ರಹೇ
ಜಬ್ ಕಿ ತನ್ ಮೇ ಜಾನ್, ರಗೋ ಮೇ ಲಕ್ಷ್ಯ ರಹೇ
ತೇರಾ ಹೋ ಜಿಕ್ರ್ ಯಾ ತೇರಿ ಆರಜೂ ರಹೇ "
ತಮ್ಮ ಸೆರೆವಾಸದಲ್ಲಿ ಅವರು ಬರೆದ ದೇಶಭಕ್ತಿ ಗೀತೆ ಹೀಗಿದೆ...
ಯದಿ ದೇಶಹಿತ್ ಮರ್ನಾ ಪಡೆ
ಮುಝುಕೋ ಸಹಸ್ರೋಂ ಬಾರ್ ಭೀ
ತೋ ಭೀ ನ ಮೈ ಇಸ್ ಕಷ್ಟಕೋ
ನಿಜ ಧ್ಯಾನ್ ಮೇ ಲಾವೂ ಕಭೀ
ಹೇ ಈಶ್, ಭಾರತವರ್ಷ ಮೇ
ಶತ್ ಬಾರ್ ಮೇರಾ ಜನ್ಮ ಹೋ
ಕಾರಣ್ ಸದಾ ಹೀ ಮೃತ್ಯು ಕಾ
ದೇಶೋಪಕಾರಕ್ ಕರ್ಮ ಹೋ
ಮರ್ ತೇ ಬಿಸ್ಮಿಲ್, ರೋಶನ್, ಲಾಹಿರಿ
ಅಶ್ಫಾಕ್ ಅತ್ಯಾಚಾರ್ ಸೇ
ಹೋಂಗೇ ಪೈದಾ ಸೈಕಡೋ
ಉನಕೇ ರುಧಿರ್ ಧಾರ್ ಸೇ
ಉನಕೇ ಪ್ರಬಲ್ ಉದ್ಯೋಗ್ ಸೇ
ಉದ್ಧಾರ್ ಹೋಗಾ ದೇಶ್ ಕಾ
ತಬ್ ನಾಶ್ ಹೋಗಾ ಸರ್ವದಾ
ದುಂಖ್ ಶೋಕ್ ಕೆ ಲವಲೇಶ್ ಕಾ..
ಇಂತಹಾ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸೇನಾನಿಯನ್ನು ಮರೆತು ಬಿಡುತ್ತಿದ್ದೇವಲ್ಲಾ... ನಾವು ಎಂತಾ ದೇಶದ್ರೋಹಿಗಳಲ್ವಾ..