Saturday 31 October 2015

ಪಪ್ಪು ಇನ್ ಹುಚ್ಚ ವೆಂಕಟ್ ಸ್ಟೈಲ್


ಹಾಗೆ ಸುಮ್ಮನೆ.... ನಮ್ ಹುಚ್ಚ ವೆಂಕಟ್ ಅವರು ಪಪ್ಪು ದೇಹದೊಳಗೆ ಪರಕಾಯ ಪ್ರವೇಶ ಮಾಡಿದ್ರೆ ಹೇಗಿದ್ದೀತು...?? ಒಂದು ವೇಳೆ ಹುಚ್ಚ ವೆಂಕಟ್ ಅವರ ವೀಡಿಯೋ ನೋಡಿಲ್ಲಾ ಅಂದ್ರೆ ಮೊದಲು ಈ ಲಿಂಕ್ ನೋಡಿಬಿಡಿ....
https://www.youtube.com/watch…
ಆಮೇಲೆ ಓದಿ...
ನಮ್ಮ ಪಾರ್ಟಿಗೆ ಯಾವ ಎಲೆಕ್ಷನ್ ನಲ್ಲೂ ಸೀಟ್ (ವಿನ್ನಿಂಗ್) ಕಲೆಕ್ಷನ್ ಇಲ್ಲ.... ಓಪನ್ ಆಗಿ ಹೇಳ್ತಾ ಇದೀನಿ... ಭಾರತೀಯರು ನನ್ನನ್ನ ತುಳಿತಾ ಇದೀರಾ.... ಭಾರತೀಯರು ತುಳೀತಾ ಇರೋದು... ಬೇರೆ ಯಾರೂ ಅಲ್ಲ.... ಅರ್ಥ ಅಯ್ತಾ... ಮನುಷ್ಯತ್ವ ಅಂತ ಇದ್ರೆ.... ನಮ್ಗೆ ಓಟ್ ಹಾಕ್ತೀರ... ನನ್ನ ನೋಡಿದಿರಾ... ನನ್ನ ಭಾಷಣ ಕೇಳಿ ಮೆಚ್ಚಿಕೊಂಡಿದೀರಾ...ಅರ್ಥ ಅಯ್ತಾ.... ನೀವ್ ವಿನ್ ಮಾಡಿಸಿಲ್ಲಾಂದ್ರೂ ನಾನೇನ್ ಬೀದಿಗೆ ಬರೋಲ್ಲ.... ನನ್ನಪ್ಪ ಕೋಟ್ಯಾಧಿಪತಿ... ಅರ್ಥ ಅಯ್ತಾ... ಊಟ ಹಾಕದೇ ಇರಲ್ಲ...ಬಟ್ ನನ್ನ ಎಕ್ಕಡ ಕೂಡಾ ಪಾಲಿಟಿಕ್ಸ್ ಗೆ ಬರಲ್ಲ...ಅರ್ಥ ಆಯ್ತಾ... ಒಳ್ಳೆ ಆಶ್ವಾಸನೆನಾ ಕೊಟ್ಟಿದೀನಿ...ಶೋಕಿಗಾಗಿ ಕೊಟ್ಟಿಲ್ಲ ಒಳ್ಳೆ ಅರ್ಥಪೂರ್ವಕವಾಗಿದೆ...ನೀವೆಲ್ಲಾ ಏನಂತೀರಾ... ಸೆಕ್ಯುಲರಿಸಂ ಅದು ಸೆಕ್ಯುಲರಿಸಂ ಇದು... ಏನ್ರೀ ನೀವು ಸೆಕ್ಯುಲರಿಸಂ ನ ಬೆಳೆಸೋದು... ಸೆಕ್ಯುಲರಿಸಂ ಗೆ ಹೋರಾಡಿದೋನು ನಾನು... ಸೆಕ್ಯುಲರಿಸಂ ನ ಬೆಳಿಸೋದೋನ್ ನಾನು... ಬೇಕಿತ್ತಾ.... ನನ್ನೆಲ್ಲಾ ಈ ಮಾತುಗಳು..... ನೀವ್ ಬಂದು ನನಗೆ ಓಟ್ ಹಾಕಬೇಕು...ಅರ್ಥ ಆಯ್ತಾ... ನೀವ್ ಒಂದು ಸಾರಿ ಓಟ್ ಹಾಕಿ... ನನ್ನನ್ನ ಕೆಲವರೆಲ್ಲಾ ತಮಾಷೆ ಮಾಡಿದ್ರು... ಆದ್ರೂ ನಾನು ನನ್ ಮಮ್ಮಿಗೋಸ್ಕಾರ ಸುಮ್ಮನಿರೋದು... ನಾನೇನು ಯಾರ್ಯಾರ ಹಣದಿಂದ ಓಟ್ ಗೆ ನಿಂತಿಲ್ಲ... ಆದರೆ ಒಂದ್ ಹೇಳ್ತೀನಿ... ನೀವ್ ನನ್ನ ಪ್ರತಿಭೆನಾ ತುಳೀತಾ ಇದೀರಾ..ನಾನು ರಾಜಕೀಯದಲ್ಲಿ ಅಷ್ಟು ಕಷ್ಟ ಪಟ್ಟಿದೀನಿ... ನನ್ನ ಭಾಷಣ ಚೆನ್ನಾಗಿಲ್ವಾ... ನನ್ನ ಸ್ಟೈಲು ಚೆನಾಗಿಲ್ವಾ... ನನ್ನ ಮಾತು ಕೇಳಿ ನಕ್ಕಿಲ್ವಾ... ಅರ್ಥ ಅಯ್ತಾ... ನೀವು... ಆ ಪಾರ್ಟಿ ಗೆ ಓಟ್ ಹಾಕ್ತೀರಾ ಈ ಪಾರ್ಟಿ ಗೆ ಓಟ್ ಹಾಕ್ತೀರಾ.... ನಾನ್ಯಾರಿಗೂ ಓಟ್ ಹಾಕ್ಬೇಡಿ ಅಂತ ಹೇಳಲ್ಲ.... ನಂಗ್ಯಾಕೆ ಓಟ್ ಹಾಕ್ತಿಲ್ಲ.... ತುಂಬಾ ನೊವ್ವಾಗುತ್ತೆ.... ನೀವ್ ಓಟ್ ಹಾಕಿದ್ರೂ ಪರವಾಗಿಲ್ಲ ಸೀಟ್ ಕೊಡಿಸದೇ ಇದ್ರೂ ಪರವಾಗಿಲ್ಲ... ನಾನು ನನ್ನಮ್ಮನಿಗೋಸ್ಕರ ಇಲ್ಲಿಗೆ ಬಂದಿದ್ದು... ಅವ್ರಿಗೆ ಖುಷಿಯಾಗಿದೆ ಅಷ್ಟು ಸಾಕ್.... ಮೊನ್ನೆ ಕೊಟ್ರಲ್ಲಾ ನಲವತ್ತನಾಲ್ಕು ಸೀಟು.... ಅವ್ರು ನನ್ನ ಪ್ರೀತಿಸೋ ಜನ.... ಅರ್ಥ ಆಯ್ತಾ..... ನನ್ ಮಗಂದು.... ಈ ಕೋಮುವಾದ ಎಲ್ಲಾ ಬ್ಯಾನ್ ಆಗ್ಬೇಕ್...ಮೊದಲೇ ಹೇಳ್ತೀನೀ.... ಬೆಂಡೆತ್ತ್ ಬಿಡ್ತೀನಿ.... ಈ ಜನಗಳನ್ನ.... ಶೋಕಿಗಾಗಿ ಓಟ್ ಹಾಕದೇ ಇರೋರನ್ನ ಬಿಡಲ್ಲ.. ಅರ್ಥ ಆಯ್ತಾ... ನನ್ನ ಕೋಪ ಗೊತ್ತಿಲ್ಲ....ಏನೇನೋ ಇದೆ...ಇಷ್ಟು ಸಾಕು... ನೀವ್ ಓಟ್ ಹಾಕ್ತೀರೋ ಬಿಡ್ತೀರೋ....... ನನ್ನ ಫ್ಯಾಮಿಲಿ ಬೀದಿಗೆ ಬರೋಲ್ಲ...ಕೋಟ್ಯಾಧಿಪತಿ... ನಾನು ರೋಡ್ ಗೆ ಬರೋಲ್ಲ... ನಾನು ಕಾಲ ಮೇಲೆ ಕಾಲ್ ಕಾರ್ಟೂನ್ ನೋಡ್ತಾನೇ ಕುತ್ಕೋಳ್ಳೋನು... ನನ್ನ ಟ್ಯಾಲೆಂಟ್ ನ ತುಳೀತಾ ಇದೀರಾ... ಅದು ನಂಗೆ ನೋವಾಗ್ತಾ ಇರೋದು...ನಾನೇಳಿಲ್ವಾ.... ನಾನು ರಾಜಕೀಯದಲ್ಲಿ ಪಟ್ಟಿರೋ ಕಷ್ಟ ಅಷ್ಟಿದೆ...ನಾನು ಚೆನ್ನಾಗಿ ಮಾಡಿಲ್ಲ ಅಂತಿಲ್ಲಾ... ಮತ್ಯಾಕೆ ನನ್ನ ಹೆಸರಲ್ಲಿ ವೋಟ್ ಹಾಕ್ತಿಲ್ಲಾ....ನನ್ನ ಭಾಷಣಗಳನ್ನ ಸರಿಯಾಗಿ ಕೇಳಿ... ಅಮೇಲೆ ಆ ಪಾಯಿಂಟ್ ಚಿನ್ನಾಗಿಲ್ಲಾ ಈ ಪಾಯಿಂಟ್ ಚೆನ್ನಾಗಿಲ್ಲ ಅಂತ ಕೇಳಿ... ಅವಾಗ ಉತ್ತರ ಕೊಡ್ತಿದ್ದೆ.... ಇಷ್ಟು ಸಾಕ್...ನೀವ್ ವೋಟ್ ಹಾಕ್ತೀರೋ ಬಿಡ್ತೀರೋ.... ಇನ್ನೊಂದು ಸಾರಿ ವೋಟಿಗೆ ನಿಲ್ಲೋಲ್ಲ.... ನಾನ್ ರೋಡಿಗೆ ಬೀಳೋಲ್ಲ...ನಿಮ್ಗೆ ವೋಟ್ ಹಾಕೋ ಯೋಗ್ಯತೇನೂ ನಿಮ್ಗಿಲ್ಲಾ....... ಮೂರು ಹೊತ್ತು ಊಟ ಅಲ್ಲ... ಒಂದು ಹೊತ್ತು ಊಟ... ರಾತ್ರಿ ಎಣ್ಣೆ ಇದ್ರೆ ಸಾಕ್... ದಿಲ್ ದಾರಾಗಿ ಬಾಳೋನ್ ನಾನ್... ಪಿಎಂ ಆಗ್ಬೇಕು ಅಂತಾ ಆಸೆ ಇಟ್ಕೊಂಡಿದ್ದೆ... ಬೇರೆಯವರ ಪಾರ್ಟಿಗೆ ವೋಟ್ ಹಾಕ್ಬೇಡಿ ಅಂತ ಹೇಳಲ್ಲ.... ನನ್ನ ಪಾರ್ಟಿಗೆ ಯಾಕೆ ವೋಟ್ ಹಾಕಲ್ಲ.... ಕೋಮುವಾದಿಗಳಿಗೆಲ್ಲಾ ವೋಟ್ ಹಾಕ್ತೀರಾ....ನನ್ ಮಗಂದ್.... ಇಡೀ ಪ್ರಪಂಚನಾ ಅಲ್ಲಾಡಿಸೋ ಶಕ್ತಿ ಇರೋನ್....ನಾನ್...... ಹೋಯ್ತ್.... ಬಟ್ ಒಂದು ಹೇಳ್ತೀನಿ...ನಾನ್ ರಾಜಕೀಯ ಬಂದಿರೋದ್ ನನ್ ಮಮ್ಮಿಗೋಸ್ಕಾರ... ಸಿಗ್ಲಿಲ್ವಾ... ನಲ್ವತ್ತನಾಲ್ಕು.... ಸಾಕ್.... ಅಯ್ಯೋ....ನಾನೇನ್ ಯಾವನ್ ನಂಬ್ಕೊಂಡ್ ಬದ್ಕೊದ್ದೋನಲ್ಲ.... ನನ್ ಅಮ್ಮನ್ ನಂಬ್ಕೊಂಡ್ ಬದ್ಕಿರೋನ್ ನಾನು...ನನ್ ಮಕ್ಕಳ್.... ಬದ್ಲಾಯ್ಸ ಬೇಕ್....ನನ್ ಮಕ್ಕಳ್ರಾ ಶೋಕಿಗಾಗಿ ವೋಟ್ ಹಾಕ್ತೀರಾ....ನಾನು ಮೀಡಿಯಾನ್ ದೂರೋಲ್ಲ.... ನಂಗ್ ಒಳ್ಳೇ ಪ್ರಚಾರ ಕೊಟ್ಟಿದೀರಾ... ಪಕ್ಷೇತರರಿಗೆಲ್ಲಾ ವೋಟ್ ಹಾಕ್ತೀರ.... ಹಾಕಿ ನಾನ್ ಬೇಡ ಅಂದಿಲ್ಲ... ನನ್ನ ಪಾರ್ಟಿಗೆ ಯಾಕ್ ವೋಟ್ ಹಾಕಲ್ಲ.... ಅರ್ಥ ಆಯ್ತಾ... ನನ್ನ ಹೊಟ್ಟೆ ಉರಿಯಲ್ವಾ....ಮುಂದಿನ ಬಾರಿ ಪಿಎಮ್ ಆಗ್ಬೇಕು ಅಂದ್ ಕೊಂಡಿದ್ದೆ... ಹೋಯ್ತ್....ಬಂದೋರಿಗೆಲ್ಲಾ ಹಣ ಕೊಡ್ತೀನಿ.... ಆಗ್ಲಾದ್ರೂ ಓಟ್ ಹಾಕ್ತೀರಾ.... ನನ್ ಮಗಂದ್... ನನ್ನ ಕುಟುಂಬದಿಂದ ಭಿಕ್ಷೆ ನಿಮ್ಗಿದು.... ಹಾಗಾದ್ರು ಓಟ್ ಹಾಕ್ತೀರಾ...ತುಳೀತೀರಾ.... ನನ್ನ ಫ್ಯಾಮಿಲಿಗೋಸ್ಕರ ಸುಮ್ಮನಿರೋದು... ನಾನು ಅನುಭವಿಸಿರೋ ನೋವ್ ಗಳನ್ನ ತೋರಿಸಿಲ್ಲ.... ಎಂತೆಂಥಾ ನೋವ್ ಗಳನ್ನ ಅನುಭವಿಸಿದ್ದೀನಿ

No comments:

Post a Comment